ETV Bharat / health

ನಿಮ್ಮ ತೂಕ ನಷ್ಟದೊಂದಿಗೆ ಹೊಟ್ಟೆ ಸುತ್ತಲಿನ ಬೊಜ್ಜು ಕರಗಿಸಬೇಕೇ? ನಿಮಗಾಗಿ ಇಲ್ಲಿವೆ ಐದು ಆರೋಗ್ಯಕರ ಸೂಪರ್​ ಚಹಾಗಳು - LOSE WEIGHT TIPS

Lose Weight Tips: ನೀವು ಅಧಿಕ ತೂಕ ಮತ್ತು ಹೊಟ್ಟೆಯ ಸುತ್ತಲಿನ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಆರೋಗ್ಯ ತಜ್ಞರು ಸೂಚಿಸಿದ ಐದು ಆರೋಗ್ಯಕರ ಸೂಪರ್​ ಚಹಾಗಳ ಕುರಿತು ವಿವರವಾಗಿ ತಿಳಿದುಕೊಳ್ಳೋಣ.

five healthy super teas  belly fat loss tips  Green Tea Benefits  Black Tea Benefits
ಆರೋಗ್ಯಕರ ಸೂಪರ್​ ಚಹಾಗಳು (Getty Images)
author img

By ETV Bharat Health Team

Published : March 13, 2025 at 12:58 PM IST

4 Min Read
  • ಹುಚ್ಚೇಶ್ವರ ಅಣ್ಣಿಗೇರಿ

Five Healthy And Super Teas: ಇಂದಿನ ಆಧುನಿಕ ಯುಗದಲ್ಲಿ ವ್ಯಾಯಾಮದ ಕೊರತೆ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಕೊರತೆಯಿಂದ ಬಹುತೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಬೆಳಗ್ಗೆ ಇಲ್ಲವೇ ಸಂಜೆ ಸಮಯದಲ್ಲಿ ವಾಕಿಂಗ್​ ಸೇರಿದಂತೆ ವಿವಿಧ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಇದರೊಂದಿಗೆ ತಮ್ಮ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ನಿಮ್ಮ ದೇಹವನ್ನು ಹೈಡ್ರೇಟ್​ ಆಗಿರಿಸಲು ಸಾಕಷ್ಟು ನೀರು ಕುಡಿಯುವುದರೊಂದಿಗೆ ಆರೋಗ್ಯಕರವಾದ ಕೆಲವು ಚಹಾಗಳನ್ನು ಸೇವಿಸಬಹುದು. ಈ ಚಹಾಗಳಿಂದ ಚಯಾಪಚಯ ಕ್ರಿಯೆ ಸುಧಾರಿಸುವ ಜೊತೆಗೆ ಕೊಬ್ಬಿನ ಆಕ್ಸಿಡೀಕರಣವನ್ನು ಉತ್ತೇಜಿಸುತ್ತದೆ. ಮುಖ್ಯವಾಗಿ ಹಸಿವು ಕಡಿಮೆ ಮಾಡುವ ಮೂಲಕ ತೂಕ ಇಳಿಕೆಗೆ ಸಹಾಯವಾಗುತ್ತದೆ. ಕೆಲವು ಟೀಗಳಲ್ಲಿ ಕ್ಯಾಟೆಚಿನ್‌ಗಳು ಹಾಗೂ ಪಾಲಿಫಿನಾಲ್‌ಗಳಂತಹ ಸಂಯುಕ್ತಗಳು ಇರತ್ತವೆ. ಇವು ಕೊಬ್ಬನ್ನು ಕರಗಿಸುವುದರೊಂದಿಗೆ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ದೇಹದ ತೂಕ ನಷ್ಟದೊಂದಿಗೆ ಕೊಬ್ಬು ಕರಗಿಸಲು ಉತ್ತಮ ಫಲಿತಾಂಶಗಳನ್ನು ನೀಡುವ ಆರೋಗ್ಯಕರ ಐದು ಚಹಾಗಳು ಕುರಿತಂತೆ ಇಲ್ಲಿ ತಿಳಿಯೋಣ.

five healthy super teas  belly fat loss tips  Green Tea Benefits  Black Tea Benefits
ಗ್ರೀನ್​ ಟೀ (Getty Images)

ಗ್ರೀನ್​ ಟೀ: ಬೊಜ್ಜಿನ ಸಮಸ್ಯೆ ಹಾಗೂ ಒಟ್ಟಾರೆ ತೂಕ ನಷ್ಟಕ್ಕೆ ಗ್ರೀನ್​ ಟೀ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಹದ ತೂಕ, ಬಾಡಿ ಮಾಸ್ ಇಂಡೆಕ್ಸ್ (BMI) ಹಾಗೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಹಲವು ಸಂಶೋಧನೆಗಳ ಸ್ಪಷ್ಟಪಡಿಸಿವೆ. ಪ್ರಮುಖವಾಗಿ ಟೈಪ್-2 ಡಯಾಬಿಟಿಸ್ ಸಮಸ್ಯೆ ಹೊಂದಿರುವರು ದಿನಕ್ಕೆ 800 ಮಿಲಿಗ್ರಾಂಗಿಂತ ಕಡಿಮೆ ಪ್ರಮಾಣದಲ್ಲಿ, 8 ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಗ್ರೀನ್​ ಟೀ ಸೇವಿಸಿದರೆ ಒಳ್ಳೆಯದು ಎಂದು ಅಧ್ಯಯನ ತಿಳಿಸಿದೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿ ಪ್ರಕಟವಾದ ಅಧ್ಯಯನ ವರದಿಯು, ಗ್ರೀನ್​ ಟೀನಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾದ ಕ್ಯಾಟೆಚಿನ್‌ಗಳು ಚಯಾಪಚಯ ಕ್ರಿಯೆ ಹೆಚ್ಚಿಸುತ್ತವೆ. ಕೊಬ್ಬನ್ನು ಕರಗಿಸಲು ಹೆಚ್ಚು ಸಹಾಯ ಮಾಡುತ್ತವೆ. ಗ್ರೀನ್​ ಟೀ ಒಟ್ಟಾರೆ ತೂಕ ನಷ್ಟಕ್ಕೆ ಹೇಳಿ ಮಾಡಿಸಿದ ಪಾನೀಯ.

ವೈಟ್​ ಟೀ (Getty Images)

ವೈಟ್​ ಟೀ: ಚಹಾ ಸಸ್ಯವು ಚಿಕ್ಕದಿರುವಾಗ ಸಂಸ್ಕರಿಸಿ ಕೊಯ್ಲು ಮಾಡಿದ ಎಲೆಗಳಿಂದ ಮಾಡುವಂತಹ ವೈಟ್​ ಚಹಾವು ಹೆಚ್ಚಿನ ಮಟ್ಟದ ಕ್ಯಾಟೆಚಿನ್‌ಗಳನ್ನು ಹೊಂದಿರುತ್ತದೆ. ವೈಟ್ ಟೀ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಕೊಬ್ಬು ಕರಗುತ್ತದೆ, ತೂಕವೂ ಕಡಿಮೆಯಾಗುತ್ತದೆ. 2018ರಲ್ಲಿ ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವೈಟ್​ ಟೀ ಸೇವನೆಯು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ. ಅಧಿಕ ತೂಕ ಹೊಂದಿರುವವರಲ್ಲಿ ಚಯಾಪಚಯ ಅಪಾಯಕಾರಿ ಅಂಶಗಳನ್ನು ಕಡಿಮೆಗೊಳಿಸುತ್ತದೆ. ಪೋರ್ಟೊ ವಿಶ್ವವಿದ್ಯಾನಿಲಯದ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನಗಳ ಫ್ಯಾಕಲ್ಟಿ ಡಾ.ಅನಾ ಸೌಸಾ ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ವೈಟ್​ ಟೀ ಕೊಬ್ಬಿನ ಕೋಶ ರಚನೆಯನ್ನು ತಡೆಯಲು ಹಾಗೂ ಕೊಬ್ಬಿನ ವಿಭಜನೆ ಹೆಚ್ಚಿಸಲು ಸಹಾಯವಾಗುತ್ತದೆ ಎಂಬುದು ತಿಳಿದಿದೆ.

ಬ್ಲಾಕ್​ ಟೀ (Getty Images)

ಬ್ಲಾಕ್​ ಟೀ: ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದ ಪುರ್ಹ್ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಎಲೆಗಳನ್ನು ಸಾಕಷ್ಟು ಸಮಯದವರೆಗೆ ಹುದುಗಿಸಲಾಗುತ್ತದೆ. ಹುದುಗಿಸಿದ ಪುರ್ಹ್ ಚಹಾ ಅಥವಾ ಬ್ಲಾಕ್​ ಟೀ ತೂಕ ನಷ್ಟಕ್ಕೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಪ್ರತಿದಿನ ಒಂದು ಇಲ್ಲವೇ ಎರಡು ಕಪ್ ಬ್ಲಾಕ್​ ಟೀ ಸೇವಿಸುವುದರಿಂದ ಟೈಪ್ ಟು ಡಯಾಬಿಟಿಸ್ ಅಪಾಯವನ್ನು ಶೇಕಡಾ 72ರಷ್ಟು ಕಡಿಮೆಯಾಗುತ್ತದೆ. ಆರಂಭಿಕ ಪ್ರೀ ಡಯಾಬಿಟಿಸ್ ಸಮಸ್ಯೆ ಹೊಂದಿದ್ದರೆ ಅದನ್ನು ದೂರವಾಗುತ್ತದೆ. ಅಧಿಕ ಕೊಲೆಸ್ಟ್ರಾಲ್, ಮೂತ್ರಪಿಂಡದ ಕಲ್ಲು, ಆಸ್ಟಿಯೋಪೊರೊಸಿಸ್ ಅಪಾಯ ಕೂಡ ಕಡಿಮೆಯಾಗುತ್ತದೆ. ಪ್ರಮುಖವಾಗಿ ರಕ್ತದಲ್ಲಿನ ಸಕ್ಕರೆ ಹಾಗೂ ಕೊಬ್ಬಿನಾಮ್ಲ ಚಯಾಪಚಯ ಕ್ರಿಯೆ ವೃದ್ಧಿಸುತ್ತದೆ. ಮೂರು ತಿಂಗಳ ಕಾಲದವರೆಗೆ ನಿಯಮಿತವಾಗಿ ಪುರ್ಹ್ ಟೀ ಸೇವಿಸಿದವರಲ್ಲಿ ಸುಮಾರು 2.2 ಪೌಂಡ್‌ಗಳಷ್ಟು ಹೆಚ್ಚು ತೂಕ ಕಳೆದುಕೊಂಡಿದ್ದಾರೆ ಎಂದು ಸಂಶೋಧನೆಯಿಂದ ಕಂಡುಹಿಡಿಯಲಾಗಿದೆ.

ಇತರ ಪಾನೀಯಗಳಿಂತ ಹೆಚ್ಚು ಆಕ್ಸಿಡೀಕರಣಕ್ಕೆ ಕಾರಣವಾಗುವ ಬ್ಲಾಕ್​ ಟೀ ಗಮನಾರ್ಹ ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ. 111 ಜನರು ಮೂರು ತಿಂಗಳ ಕಾಲ ಪ್ರತಿದಿನ ಮೂರು ಕಪ್ ಬ್ಲಾಕ್ ಟೀ ಸೇವಿಸುವುದರಿಂದ ತೂಕ ನಷ್ಟವಾಗಿದೆ ಹಾಗೂ ಸೊಂಟದ ಸುತ್ತಲಿನ ಬೊಜ್ಜು ಕಡಿಮೆಯಾಗುತ್ತದೆ ಎಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸ್ ನಡೆಸಿದ ಅಧ್ಯಯನದಿಂದ ತಿಳಿದಿದೆ.

ಬ್ಲಾಕ್​ ಟೀನಲ್ಲಿರುವ ಹೆಚ್ಚಿನ ಪಾಲಿಫಿನಾಲ್ ಮತ್ತು ಫ್ಲೇವೋನ್ ಅಂಶಗಳು ತೂಕ ನಷ್ಟಕ್ಕೆ ಕಾರಣವಾಗಿವೆ. ಈ ಸಂಯುಕ್ತಗಳು ಕ್ಯಾಲೋರಿ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಿ, ಕೊಬ್ಬಿನ ಚಯಾಪಚಯ ಉತ್ತೇಜಿಸುವ ಜೊತೆಗೆ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವಂತಹ ಕೆಲಸ ಮಾಡುತ್ತವೆ ಎಂದು ಸಂಶೋಧಕರು ತಿಳಿಸುತ್ತಾರೆ.

ದಾಸವಾಳ ಚಹಾ (Getty Images)

ದಾಸವಾಳ ಚಹಾ: ದಾಸವಾಳ ಚಹಾವು ಬೊಜ್ಜು ಸಮಸ್ಯೆಯನ್ನು ಕಡಿಮೆ ಮಾಡುವಂತ ಗುಣಗಳನ್ನು ಹೊಂದಿದೆ. ದಾಸವಾಳ ಚಹಾವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ರಮೇಣವಾಗಿ ದೇಹದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ದೇಹದ ಉರಿಯೂತ ಸಮಸ್ಯೆ ಕಡಿಮೆಗೊಳಿಸುತ್ತದೆ. ದೇಹದಲ್ಲಿ ಹೆಚ್ಚು ನೀರು ತುಂಬಿಕೊಂಡಿರುವ ಅಂಗಾಂಗಗಳನ್ನು ಮತ್ತೆ ಸಹಜಸ್ಥಿತಿಗೆ ಮರಳಲು ಸಹಾಯವಾಗುತ್ತದೆ. ಆರೋಗ್ಯಕರವಾದ ದೇಹ ತೂಕ ಹೊಂದಲು ಕೂಡ ಸಾಧ್ಯವಾಗುತ್ತದೆ. ಕೊಬ್ಬಿನ ಚಯಾಪಚಯವನ್ನು ಹೆಚ್ಚಿಸುವ ಮತ್ತು ಕೊಬ್ಬಿನ ಕೋಶ ರಚನೆಯನ್ನು ತಡೆಯುವ ಸಾಮರ್ಥ್ಯವನ್ನು ದಾಸವಾಳ ಟೀ ಹೊಂದಿದೆ ಎಂದು ಸಂಶೋಧನೆ ತಿಳಿಸಿದೆ.

ಓಲಾಂಗ್ ಚಹಾ (Getty Images)

ಓಲಾಂಗ್ ಚಹಾ: ಊಲಾಂಗ್ ಚಹಾವು ಕೊಬ್ಬು ಕರಗಿಸಲು ಹಾಗೂ ಚಯಾಪಚಯ ಕ್ರಿಯೆ ವೇಗಗೊಳಿಸುತ್ತದೆ. 102 ಹೆಚ್ಚಿನ ತೂಕ ಹೊಂದಿರುವವರ ಮೇಲೆ ಸಂಶೋಧನೆ ನಡೆಯಿತು. ಈ ವ್ಯಕ್ತಿಗಳು ಆರು ವಾರಗಳ ಕಾಲ ದೈನಂದಿನ ಊಲಾಂಗ್ ಚಹಾ ಸೇವನೆ ಮಾಡಿದ್ದರಿಂದ ದೇಹದ ತೂಕ, ಬೊಜ್ಜು ಎರಡನ್ನೂ ಕಡಿಮೆ ಮಾಡಲು ಉತ್ತಮ ಕೊಡುಗೆ ನೀಡಿದೆ ಎಂದು ಸಂಶೋಧನೆಯಿಂದ ಕಂಡುಹಿಡಿಯಲಾಗಿದೆ. ಓಲಾಂಗ್ ಟೀಯು ಜನರ ನಿದ್ರೆಯ ಮೇಲೆ ಯಾವುದೇ ರೀತಿ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂಬುದು ತಿಳಿದಿದೆ.

ಈ ಐದು ಚಹಾಗಳು ತೂಕ ನಷ್ಟದ ಜೊತೆಗೆ ವಿವಿಧ ಆರೋಗ್ಯದ ಲಾಭಗಳನ್ನು ಹೊಂದಿವೆ. ಹೆಚ್ಚು ಸಕ್ಕರೆ ಇರುವಂತಹ ಪಾನೀಯಗಳಿಗೆ ಹೋಲಿಸಿದರೆ, ಈ ಆರೋಗ್ಯಕರ ಚಹಾಗಳು ಕ್ಯಾಲೋರಿಗಳಿಂದ ಮುಕ್ತವಾಗಿವೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಈ ಚಹಾಗಳನ್ನು ಸೇವನೆ ಮಾಡಿದರೆ ತೂಕದ ನಿರ್ವಹಣೆಯೊಂದಿಗೆ ಹಾನಿಕಾರಕ ಹೊಟ್ಟೆಯ ಸುತ್ತಲಿನ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಿ:

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿರುವ ಎಲ್ಲ ಆರೋಗ್ಯ ಸಂಬಂಧಿತ ವಿಚಾರಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ಆಗಿರುತ್ತದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ನಿಮ್ಮ ದೇಹದ ಈ ಐದು ಭಾಗಗಳಲ್ಲಿ ತೀವ್ರ ನೋವಿದೆಯೇ? ಹೈ ಕೊಲೆಸ್ಟ್ರಾಲ್ ಚಿಹ್ನೆಗಳಿವು: ತೂಕ ಇಳಿಸಿಕೊಳ್ಳಲು ವೈದ್ಯರ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.