ETV Bharat / health

ಖಾಲಿ ಹೊಟ್ಟೆಯಲ್ಲಿ Vs ಊಟದ ನಂತರದ ವಾಕಿಂಗ್​: ತೂಕ ಇಳಿಕೆಗೆ ಯಾವುದು ಬೆಸ್ಟ್​? ಇಲ್ಲಿ ತಿಳಿಯಿರಿ! - EMPTY STOMACH VS POST MEAL WALK

ತೂಕ ಇಳಿಸಿಕೊಳ್ಳಲು ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡಬೇಕಾ ಅಥವಾ ಊಟದ ನಂತರ ನಡೆದರೆ ಉತ್ತಮವೇ ಎಂಬುದನ್ನು ಈ ಸ್ಟೋರಿಯಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

WEIGHT LOSS  EMPTY STOMACH WALK  POST MEAL WALK  ವಾಕಿಂಗ್​ನ ಲಾಭಗಳು
ಖಾಲಿ ಹೊಟ್ಟೆಯಲ್ಲಿ Vs ಊಟದ ನಂತರದ ವಾಕಿಂಗ್​: ತೂಕ ಇಳಿಕೆಗೆ ಯಾವುದು ಬೆಸ್ಟ್​ ಗೊತ್ತೇ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : April 16, 2025 at 3:01 PM IST

3 Min Read

Empty Stomach Walk Vs Post Meal Walk: ಬದಲಾದ ಜೀವನಶೈಲಿ ಹಾಗೂ ಬಿಡುವಿಲ್ಲದ ಕೆಲಸದ ಮಧ್ಯೆ ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಚೇರಿಯಲ್ಲಿ ದಿನವಿಡೀ ಕಂಪ್ಯೂಟರ್ ಇಲ್ಲವೇ ಲ್ಯಾಪ್‌ಟಾಪ್ ಪರದೆಯ ಮುಂದೆ ಕುಳಿತುಕೊಂಡು ಕೆಲಸ ಮಾಡುವುದರಿಂದ ಹಲವು ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ.

ಅವರು ಚಿಕ್ಕ ವಯಸ್ಸಿನಲ್ಲಿಯೇ ಹೊಟ್ಟೆಯ ಸುತ್ತಲಿನ ಅಧಿಕ ಕೊಬ್ಬಿನ ಸಮಸ್ಯೆಯಿಂದ ಬಳುತ್ತಿದ್ದಾರೆ. ಬೊಜ್ಜಿನಿಂದ ಅನೇಕ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ದೇಹವು ಆರೋಗ್ಯವಾಗಿರಲು ಹಾಗೂ ಸದೃಢವಾಗಿರಲು ಆರೋಗ್ಯಕರ ತೂಕ ಕಾಯ್ದುಕೊಳ್ಳಬೇಕಾಗುತ್ತದೆ. ನಿಮ್ಮ ಆಹಾರ ಕ್ರಮದ ಜೊತೆಗೆ, ದೈಹಿಕ ಚಟುವಟಿಕೆಯ ಬಗ್ಗೆ ವಿಶೇಷ ಗಮನ ಹರಿಸಬೇಕು.

WEIGHT LOSS  EMPTY STOMACH WALK  POST MEAL WALK  ವಾಕಿಂಗ್​ನ ಲಾಭಗಳು
ತೂಕ ಇಳಿಕೆಗೆ ಯಾವಾಗ ವಾಕಿಂಗ್​ ಮಾಡುವುದು ಬೆಸ್ಟ್​ ಗೊತ್ತೇ?- ಸಾಂದರ್ಭಿಕ ಚಿತ್ರ (Getty Images)

ತೂಕ ಇಳಿಸಿಕೊಳ್ಳಲು ಅನೇಕರು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು, ಅನೇಕ ಪ್ರಕಾರ ವ್ಯಾಯಾಮ ಮಾಡಿದರೂ ಯಾವುದೇ ಫಲಿತಾಂಶವಿಲ್ಲ. ಇನ್ನು ಕೆಲವರು ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಸರಿಯಾಗಿ ವ್ಯಾಯಾಮ ಕೂಡ ಮಾಡುವುದಿಲ್ಲ. ಅನೇಕ ಜನರು ತಮ್ಮ ತೂಕ ಇಳಿಸಿಕೊಳ್ಳಲು ವಾಕಿಂಗ್​ ಅನ್ನು ಉತ್ತಮ ಆಯ್ಕೆಯಾಗಿ ಮಾಡಿಕೊಳ್ಳುತ್ತಿದ್ದಾರೆ.

ವಾಕಿಂಗ್​ ಮಾಡುವುದು ಸುಲಭವಾದ ವ್ಯಾಯಾಮ. ತೂಕ ನಷ್ಟದಲ್ಲಿ ಕೂಡ ಪರಿಣಾಮಕಾರಿ ಕೆಲಸ ಮಾಡುತ್ತದೆ. ಹಲವು ಜನರಿಗೆ ಹೇಗೆ ವಾಕಿಂಗ್​ ಮಾಡಬೇಕು ಎಂಬುದರ ಬಗ್ಗೆ ಸರಿಯಾಗಿ ತಿಳಿದಿಲ್ಲ. ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡುವುದು ಉತ್ತಮವೋ ಅಥವಾ ಊಟ, ಉಪಹಾರದ ನಂತರ ವಾಕಿಂಗ್​ ಮಾಡುವುದು ಒಳ್ಳೆಯದೇ ಎನ್ನುವ ಪ್ರಶ್ನೆ ಮೂಡುತ್ತದೆ. ಹಾಗಾದ್ರೆ ಯಾವಾಗ ವಾಕಿಂಗ್​ ಮಾಡುವುದು ಉತ್ತಮ ಎಂಬುದನ್ನು ಅರಿತುಕೊಳ್ಳೋಣ.

ವೇಟ್​ ಲಾಸ್​ - ಸಾಂದರ್ಭಿಕ ಚಿತ್ರ (Getty Images)

ಖಾಲಿ ಹೊಟ್ಟೆಯಲ್ಲಿ ವಾಕಿಂಗ್​: ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಖಾಲಿ ಹೊಟ್ಟೆಯಲ್ಲಿ, ಅಂದರೆ ಬೆಳಿಗ್ಗೆ ನಡೆಯುವುದು ತುಂಬಾ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡುವುದರಿಂದ, ಏನನ್ನೂ ತಿನ್ನದೇ ನಡೆಯುವುದರಿಂದ ಕ್ಯಾಲೊರಿಗಳು ಕರಗುತ್ತವೆ. ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಹೃದಯದ ಆರೋಗ್ಯ ಉತ್ತಮವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ನ ಲಾಭಗಳೇನು?: ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದ ಕ್ಯಾಲೊರಿಗಳು ಕರಗುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆಯು ದೂರವಾಗುತ್ತದೆ. ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡುವುದು ಹಾಗೂ ಮಧ್ಯಮ ವ್ಯಾಯಾಮ ಮಾಡಬೇಕು. ಆದರೆ, ಭಾರವಾದ ವ್ಯಾಯಾಮಗಳನ್ನು ಮಾಡಬಾರದು. ಭಾರವಾದ ವ್ಯಾಯಾಮ ಮಾಡಿದರೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.

ಉಪಹಾರ/ ಊಟದ ನಂತರ ವಾಕಿಂಗ್​: ಕೆಲವರು ಉಪಹಾರ ಅಥವಾ ಊಟದ ನಂತರ ನಂತರ ವಾಕ್ ಮಾಡಲು ಹೋಗುತ್ತಾರೆ. ಹೀಗೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಊಟದ ನಂತರ ನಡೆಯುವುದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುವುದಿಲ್ಲ. ಇದು ಹೊಟ್ಟೆ ನೋವು, ಅನಿಲ, ಆಮ್ಲೀಯತೆ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಉಪಹಾರ/ ಊಟದ ನಂತರ ವಾಕಿಂಗ್ ಪ್ರಯೋಜನಗಳೇನು?: ಊಟ ಅಥವಾ ಉಪಾಹಾರದ ನಂತರ ನಡೆಯುವುದರಿಂದ ದೇಹದಲ್ಲಿ ಬಿಡುಗಡೆಯಾಗುವ ಶಕ್ತಿ ತಕ್ಷಣವೇ ದಹಿಸಿಹೋಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಈ ರೀತಿ ವಾಕಿಂಗ್​ ಮಾಡುವುದು ಉತ್ತಮ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಏನಾದರೂ ಸೇವಿಸಿದ ನಂತರ ವಾಕಿಂಗ್​ ಮಾಡಿದರೆ ಒಳ್ಳೆಯ ಪ್ರಯೋಜನ ಪಡೆದು ಸಾಧ್ಯವಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಉಪಹಾರ/ ಊಟದ ನಂತರ ಚುರುಕಾಗಿ ವಾಕಿಂಗ್​ ಸೂಕ್ತವಲ್ಲ, ಮಧ್ಯಮ ವೇಗದಲ್ಲಿ ವಾಕಿಂಗ್​ ಮಾಡಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಇವೆರಡರಲ್ಲಿ ಯಾವುದು ಬೆಸ್ಟ್ ಗೊತ್ತೇ​?: ತೂಕ ಇಳಿಸಿಕೊಳ್ಳಲು ಬಯಸುವವರು ಖಾಲಿ ಹೊಟ್ಟೆಯಲ್ಲಿ ವಾಕಿಂಗ್​ ಮಾಡುವುದು ಒಳೆಯದು. ಇದು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಿಗಿಸುತ್ತದೆ. ಫಿಟ್‌ನೆಸ್‌ ಬಯಸುವವರು ಆಹಾರ ಸೇವಿಸಿದ ನಂತರ ವಾಕಿಂಗ್​ ಮಾಡಬೇಕು. ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ಸ್ವಲ್ಪ ವಿರಾಮ ತೆಗೆದುಕೊಂಡು ವಾಕಿಂಗ್​ ಮಾಡುವುದು ಉತ್ತಮ.

ಆದ್ರೆ, ವಾಕಿಂಗ್​ಗೂ ಮುನ್ನ ಅತಿಯಾಗಿ ಆಹಾರ ಸೇವಿಸುವುದು ಮತ್ತು ಸಕ್ಕರೆ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ. ಪ್ರತಿದಿನ ಯಾವುದಾದರೂ ಒಂದು ಹಂತದಲ್ಲಿ ವಾಕಿಂಗ್​ ಮಾಡುವುದು ಅತ್ಯಗತ್ಯ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ವಾಕಿಂಗ್​ ಕ್ರಮಗಳನ್ನು ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.