ETV Bharat / health

ಹರಳೆಣ್ಣೆಯಿಂದ ಹೊಕ್ಕುಳಿಗೆ ಮಸಾಜ್ ಮಾಡಿದರೆ ಹಲವು ಪ್ರಯೋಜನ: ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳುವಂತೆ ತಜ್ಞರ ಸಲಹೆ - CASTOR OIL BENEFITS

ಹೊಕ್ಕುಳವು ದೇಹದ ಏಳು ಪ್ರಮುಖ ಬಿಂದುಗಳಲ್ಲಿ ಒಂದಾಗಿದೆ. ಹೊಕ್ಕುಳ ಚಿಕಿತ್ಸೆಯು ಆಯುರ್ವೇದದಲ್ಲಿ ತುಂಬಾ ಜನಪ್ರಿಯವಾಗಿದೆ. ಪ್ರತಿದಿನ ಪುರುಷರು, ಮಹಿಳೆಯರು, ವೃದ್ಧರು ತಮ್ಮ ಹೊಕ್ಕುಳಿಗೆ ಹಚ್ಚುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

CASTOR OIL BENEFITS  BENEFITS OF CASTOR OIL  ಹರಳೆಣ್ಣೆ ಪ್ರಯೋಜನಗಳು  CASTOR OIL
ಹರಳೆಣ್ಣೆಯಿಂದ ಹೊಕ್ಕುಳಿಗೆ ಹಚ್ಚಿದರೆ ಹಲವು ಪ್ರಯೋಜನಗಳು - ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : June 5, 2025 at 3:00 PM IST

3 Min Read

Benefits of Applying Castor Oil In Belly Button: ನಿಮ್ಮ ಹೊಕ್ಕುಳಕ್ಕೆ ಎಣ್ಣೆ ಹಚ್ಚುವುದರಿಂದ ಅಜೀರ್ಣ, ಜೀರ್ಣಕಾರಿ ಸಮಸ್ಯೆಗಳು, ಮಲಬದ್ಧತೆ, ಚರ್ಮದ ಸಮಸ್ಯೆಗಳು, ಫಲವತ್ತತೆ ಸಮಸ್ಯೆಗಳಿದ್ದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಅನೇಕ ಸಮಸ್ಯೆಗಳಿಂದ ಮುಕ್ತಿ ಲಭಿಸುತ್ತದೆ. ಹಿಂದೆ ನಮ್ಮ ಹಿರಿಯರು ಹೊಟ್ಟೆಯಲ್ಲಿ ಉರಿಯುವ ಅಥವಾ ಉಬ್ಬುವ ಅನುಭವವಾದರೂ ಹೊಟ್ಟೆಗೆ ಎಣ್ಣೆ ಹಚ್ಚುತ್ತಿದ್ದರು. ಇದರಿಂದ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ. ಇದರಿಂದ ಕೆಲವರು ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಹಾಗೂ ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಹರಳೆಣ್ಣೆ ಹಚ್ಚುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ನೀವು ಮೊದಲು ಮಲಗಬೇಕು. ಹೊಕ್ಕುಳಿಗೆ ಮತ್ತು ಅದರ ಸುತ್ತಲೂ ಸ್ವಲ್ಪ ಎಣ್ಣೆ ಹಚ್ಚಿ ಮಸಾಜ್ ಮಾಡಿ. ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದರೆ ರಾತ್ರಿಯಿಡೀ ಹೀಗೆಯೇ ಬಿಡಬಹುದು. ಹಲವರು ಈ ರೀತಿ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತವೆ. ಇದು ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

CASTOR OIL BENEFITS  BENEFITS OF CASTOR OIL  ಹರಳೆಣ್ಣೆ ಪ್ರಯೋಜನಗಳು  CASTOR OIL
ಹರಳೆಣ್ಣೆಯಿಂದ ಹೊಕ್ಕುಳಿಗೆ ಹಚ್ಚಿದರೆ ಹಲವು ಪ್ರಯೋಜನಗಳು - ಸಾಂದರ್ಭಿಕ ಚಿತ್ರ (ETV Bharat)

ಋತುಚಕ್ರದ ತೊಂದರೆ: ಹೊಕ್ಕುಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಂಡರೆ, ಋತುಚಕ್ರದ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೊಟ್ಟೆ ನೋವು, ಸೆಳೆತ ಮತ್ತು ಇತರ ಸಮಸ್ಯೆಗಳು ಕಡಿಮೆಯಾಗುತ್ತವೆ. ಎಣ್ಣೆ ಹಚ್ಚುವುದರಿಂದ ಹೊಟ್ಟೆಯ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದರೊಂದಿಗೆ ಋತುಚಕ್ರದ ಸಮಯದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ದೇಹವು ನಿರ್ವಿಷಗೊಳ್ಳುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಒತ್ತಡ ಕಡಿಮೆಯಾಗುತ್ತದೆ: ಹೊಟ್ಟೆಯ ಮೇಲೆ ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಅನ್ನು ಮಸಾಜ್ ಮಾಡುವುದರಿಂದ ನರಮಂಡಲವು ಸಡಿಲಗೊಳ್ಳುತ್ತದೆ. ಒತ್ತಡ, ಆತಂಕ ಹಾಗೂ ಆಯಾಸ ಕಡಿಮೆಯಾಗಲು ಸಾಧ್ಯವಾಗುತ್ತದೆ. ನೀವು ಇದನ್ನು ನಿಯಮಿತವಾಗಿ ಹಚ್ಚಿದರೆ ಹೆಚ್ಚು ನಿರಾಳರಾಗುತ್ತೀರಿ. ಹೀಗಾಗಿ ನಿಯಮಿತವಾಗಿ ಎಣ್ಣೆಯಿಂದ ಮಸಾಜ್ ಮಾಡಿ.

CASTOR OIL BENEFITS  BENEFITS OF CASTOR OIL  ಹರಳೆಣ್ಣೆ ಪ್ರಯೋಜನಗಳು  CASTOR OIL
ಹರಳೆಣ್ಣೆಯಿಂದ ಹೊಕ್ಕುಳಿಗೆ ಹಚ್ಚಿದರೆ ಹಲವು ಪ್ರಯೋಜನಗಳು - ಸಾಂದರ್ಭಿಕ ಚಿತ್ರ (Getty Images)

ಹೊಟ್ಟೆ ಉಬ್ಬುವುದು, ಮಲಬದ್ಧತೆ: ಹೊಕ್ಕುಳನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಉಬ್ಬುವುದು, ಮಲಬದ್ಧತೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೊಕ್ಕುಳಿನ ಮೇಲೆ ಎಣ್ಣೆ ಮಸಾಜ್ ಮಾಡುವುದರಿಂದ ಇವೆಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯವಾಗುತ್ತದೆ. ಜೀರ್ಣಕ್ರಿಯೆಯ ತೊಂದರೆಯಿಂದ ಬಳಲುತ್ತಿರುವವರು 2 ರಿಂದ 3 ದಿನಗಳಲ್ಲಿ ನಿರಾಳರಾಗುತ್ತಾರೆ ಎಂದು ಕಂಡುಬರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಚರ್ಮದ ಸಮಸ್ಯೆ ದೂರ, ಕೂದಲಿನ ಬೆಳವಣಿಗೆ: ಕ್ಯಾಸ್ಟರ್ ಆಯಿಲ್ ಹಚ್ಚುವುದರಿಂದ ಕೂದಲು ಬೆಳೆಯುತ್ತವೆ. ಹೊಕ್ಕುಳಕ್ಕೆ ಹಚ್ಚುವುದರಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ತಲೆಯಲ್ಲಿ ರಕ್ತದ ಪರಿಚಲನೆ ಹೆಚ್ಚಾಗುತ್ತದೆ. ಕೂದಲನ್ನು ಆರೋಗ್ಯಕರವಾಗಿಸುತ್ತದೆ, ಕೂದಲು ದಪ್ಪವಾಗಿ ಬೆಳೆಯುತ್ತದೆ. ಹೊಕ್ಕುಳ ಮೇಲೆ ಕ್ಯಾಸ್ಟರ್ ಆಯಿಲ್ ಮಸಾಜ್ ಮಾಡುವುದರಿಂದ ಚರ್ಮವು ಹೈಡ್ರೇಟ್ ಆಗುತ್ತದೆ. ಜೊತೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಯಾವುದೇ ಚರ್ಮದ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ. ಚರ್ಮವನ್ನು ಪೋಷಿಸುತ್ತದೆ.

ಕ್ಯಾಸ್ಟರ್ ಆಯಿಲ್ ಹಚ್ಚುವ ಮೊದಲು ಯಾವುದೇ ಅಲರ್ಜಿ ಇದೆಯೇ ಎಂದು ಪರಿಶೀಲಿಸಿ. ಕ್ಯಾಸ್ಟರ್ ಆಯಿಲ್ ಅನ್ನು ಅತಿಯಾಗಿ ಬಳಸಬೇಡಿ. ಏಕೆಂದರೆ ಇದು ಕೆಲವು ಜನರಿಗೆ ಸಮಸ್ಯೆಗಳನ್ನು ಉಂಟಾಬಹುದು ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್‌ಗಳನ್ನು ವೀಕ್ಷಿಸಿ: (ಸಂಶೋಧನಾ ವರದಿಗಳು)

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.