ETV Bharat / health

ಎಷ್ಟೇ ಪ್ರಯತ್ನ ಮಾಡಿದರೂ ಶುಗರ್​ ಕಂಟ್ರೋಲ್​​​​​ಗೇ ಬರ್ತಿಲ್ಲವೇ?: ಹಾಗಾದ್ರೆ ಈ ಜ್ಯೂಸ್​ ಸೇವಿಸಿ ನೋಡಿ - HERBAL DRINKS TO CONTROL SUGAR

ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿ ಕೆಲವು ಜ್ಯೂಸ್​ಗಳು ಪರಿಣಾಮಕಾರಿ ಪ್ರಭಾವ ಹೊಂದಿವೆ. ಈ ಕುರಿತ ಮಾಹಿತಿ ಇಲ್ಲಿದೆ.

author img

By ETV Bharat Karnataka Team

Published : Jul 13, 2024, 12:52 PM IST

these Herbal Drinks helps to keep blood sugar level
ಮಧುಮೇಹ ನಿಯಂತ್ರಣಕ್ಕೆ ಜ್ಯೂಸ್​ (ಈಟಿವಿ ಭಾರತ್​)

ಹೈದರಾಬಾದ್​: ಇಂದಿನ ಜೀವನಶೈಲಿಯಲ್ಲಿ ಇಬ್ಬರಲ್ಲಿ ಓರ್ವರು ಮಧುಮೇಹದಿಂದ ಬಳಲುತ್ತಿರುತ್ತಾರೆ. ಈ ಮಧುಮೇಹ ಸಮಸ್ಯೆಗೆ ಸೂಕ್ತ ನಿರ್ವಹಣೆ ಅತ್ಯಗತ್ಯವಾಗಿದೆ. ಮಧುಮೇಹ ನಿರ್ವಹಣೆಗೆ ವೈದ್ಯರ ಬಳಿ ಹೋಗಿ ಉತ್ತಮ ಔಷಧ ತೆಗೆದು ಕೊಂಡರೂ ಅನೇಕ ಬಾರಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದಿಲ್ಲ. ಈ ರೀತಿ ಸಮಸ್ಯೆ ಏನಾದರೂ ನೀವು ಅನುಭವಿಸುತ್ತಿದ್ದರೆ, ಅದಕ್ಕೆ ಈ ಜ್ಯೂಸ್​ಗಳು ಪರಿಹಾರವಾಗಬಲ್ಲದು.

ನೆಲ್ಲಿಕಾಯಿ: ನೆಲ್ಲಿ ಕಾಯಿ ಮಧುಮೇಹಿಗಳಿಗೆ ಅಮೃತದಂತೆ ಕೆಲಸ ಮಾಡುತ್ತದೆ ಎಂದರೂ ತಪ್ಪಲ್ಲ. ತಜ್ಞರು ಹೇಳುವಂತೆ ನಿಯಮಿತವಾಗಿ ನೆಲ್ಲಿಕಾಯಿ ರಸ ಸೇವಿಸುವುದರಿಂದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಈ ನೆಲ್ಲಿ ಕಾಯಿ ಜ್ಯೂಸ್​ ಮಾಡಲು 2 ನೆಲ್ಲಿಕಾಯಿ ಅನ್ನು ಚೆನ್ನಾಗಿ ಪೇಸ್​​ ಮಾಡಿ. ಬಳಿಕ ಒಂದು ಲೋಟ ನೀರಿಗೆ ಇದನ್ನು ಸೇರಿಸಿ. ಈ ಜ್ಯೂಸ್​​ ಅನ್ನು ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.

Herbal Drinks To Control Sugar
ನೆಲ್ಲಿಕಾಯಿ Photo Source IANS

ಚಕ್ಕೆ: ಚಕ್ಕೆ ಪುಡಿ ಕೂಡ ಮಧುಮೇಹ ನಿಯಂತ್ರಣ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪ್ರತಿ ನಿತ್ಯ ಇದನ್ನು ಸೇವಿಸುವುದರಿಂದ ಇದು ಆರೋಗ್ಯ ಪ್ರಯೋಜನ ನೀಡುತ್ತದೆ. ಒಂದು ನೀರಿನ ಲೋಟಕ್ಕೆ ಮೂರು ಅಥವಾ ನಾಲ್ಕು ಸಣ್ಣ ಚಕ್ಕೆ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ತಣ್ಣಗೆ ಮಾಡಿ ಕುಡಿಯಿರಿ. ಪ್ರತಿನಿತ್ಯ ಊಟವಾದ ಬಳಿಕ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಗ್ಲುಕೋಸ್​ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

ಮೆಂತೆ ಬೀಜ: ಒಂದು ಸ್ಪೂನ್​ ಮೆಂತೆ ಬೀಜವನ್ನು ನೀರಿನಲ್ಲಿ ನೆನೆಸಿ, ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಕೂಡ ಪ್ರಯೋಜನವಿದೆ, ಇದರಿಂದ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

Herbal Drinks To Control Sugar
ಮೆಂತೆಕಾಳು - Photo Source IANS

2014ರಲ್ಲಿ ಪ್ರಕಟವಾದ 'ಪಿಟೊಥೆರಪಿ ರಿಸರ್ಚ್​' ಅಧ್ಯಯನ ಪ್ರಕಾರ, ಟೈಪ್​ 2 ಮಧುಮೇಹಗಳು ಪ್ರತಿನಿತ್ಯ 1 ಗ್ರಾಂ ಮೆಂತೆ ಬೆರಸಿದ ನೀರನ್ನು 8 ವಾರಗಳ ಕಾಲ ದಿನಕ್ಕೆ ಎರಡು ಸಮಯ ಕುಡಿಯುವುದರಿಂದ ಸಾಕಷ್ಟು ಪ್ರಯೋಜನವಿದೆ. ಇದು ಸಕ್ಕರೆ ಮಟ್ಟ ಕಡಿಮೆ ಮಾಡುವ ಜೊತೆಗೆ ಹಿಮೋಗ್ಲೋಬಿನ್​ ಎ1ಸಿ ಮಟ್ಟವನ್ನು ನಿಯಂತ್ರಿಸುತ್ತದೆ. ಈ ಅಧ್ಯಯನದಲ್ಲಿ ಇರಾನ್​ನ ಮೆಡಿಕಲ್​ ಸೈನ್ಸ್​​ ಯುನಿವರ್ಸಿಟಿಯ ಡಾ ಮೊಹಮ್ಮದ್​ ಆಲಿ ಶಾ ಕೂಡ ಭಾಗಿಯಾಗಿದ್ದರು.

ಸೂಚನೆ: ಈ ವರದಿಯಲ್ಲಿ ನೀಡಲಾದ ಎಲ್ಲ ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಮುನ್ನ ನೀವು ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಕಾಫಿ ಇಷ್ಟ ಸರಿ ಆದರೆ, ಇದನ್ನು ಕುಡಿಯಲು ಯಾವ ಸಮಯ ಬೆಸ್ಟ್​?: ಈ ಪ್ರಶ್ನೆಗೆ ಇಲ್ಲಿದೆ ಉತ್ತರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.