ETV Bharat / health

ನಿಮ್ಮ ದೇಹದ ಈ ಐದು ಭಾಗಗಳಲ್ಲಿ ತೀವ್ರ ನೋವಿದೆಯೇ? ಹೈ ಕೊಲೆಸ್ಟ್ರಾಲ್ ಚಿಹ್ನೆಗಳಿವು: ತೂಕ ಇಳಿಸಿಕೊಳ್ಳಲು ವೈದ್ಯರ ಸಲಹೆ - HIGH CHOLESTEROL SYMPTOMS

High Cholesterol Symptoms: ದೇಹದ ಈ ಐದು ಭಾಗಗಳಲ್ಲಿ ತುಂಬಾ ನೋವು ಕಾಡುತ್ತಿದೆಯೇ? ಹಾಗಾದ್ರೆ, ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

PREVENTING HIGH CHOLESTEROL  HIGH CHOLESTEROL SYMPTOMS  HOW TO REDUCE CHOLESTEROL  CHOLESTEROL WITHOUT MEDICATION
ಹೈ ಕೊಲೆಸ್ಟ್ರಾಲ್ ಚಿಹ್ನೆಗಳಿವು- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : March 12, 2025 at 11:01 AM IST

3 Min Read

High Cholesterol Symptoms: ನಿಮ್ಮ ದೇಹದಲ್ಲಿ ಯಕೃತ್ತು ಕೊಲೆಸ್ಟ್ರಾಲ್ ತಯಾರಿಸುತ್ತದೆ. ಮುಖ್ಯವಾಗಿ ದೇಹವು ಅದರ ಕಾರ್ಯನಿರ್ವಹಣೆಗೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳಲ್ಲಿಯೂ ಹೆಚ್ಚು ಕೊಲೆಸ್ಟ್ರಾಲ್ ಕಂಡುಬರುತ್ತದೆ. ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪ್ರಕಾರ, ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ. ಒಂದು ಕೆಟ್ಟ ಕೊಲೆಸ್ಟ್ರಾಲ್, ಇನ್ನೊಂದು ಒಳ್ಳೆಯ ಕೊಲೆಸ್ಟ್ರಾಲ್.

ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಎಂದು ಕರೆಯಲ್ಪಡುವ ಕೆಟ್ಟ ಕೊಲೆಸ್ಟ್ರಾಲ್ ಪ್ರಕಾರ, ಇದು ಹೆಚ್ಚು ಇದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇಂದಿನ ಕಾಲದಲ್ಲಿ ದೇಹದಲ್ಲಿ LDL ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ಸಾಮಾನ್ಯ ಸಮಸ್ಯೆಯಾಗಿ ಪರಿಗಣಿಸಲಾಗಿದೆ. ಈ ಸಮಸ್ಯೆಯು ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ವಯೋಮಾನದ ಜನರ ಮೇಲೆ ವೇಗವಾಗಿ ಪರಿಣಾಮ ಬೀರುತ್ತಿದೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ಟ್ರಸ್ಟೆಡ್ ಸೋರ್ಸ್, ವಯಸ್ಕರು 20ನೇ ವಯಸ್ಸಿನಿಂದ ಪ್ರಾರಂಭಿಸಿ ಪ್ರತಿ 4 ರಿಂದ 6 ವರ್ಷಗಳಿಗೊಮ್ಮೆ ತಮ್ಮ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಿಕೊಳ್ಳಬೇಕು ಎಂದು ತಜ್ಞರು ತಿಳಿಸುತ್ತಾರೆ. ಈ ಸಮಯದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸಬಹುದು. ಕೊಲೆಸ್ಟ್ರಾಲ್ ಹೆಸರು ಕೇಳಿದ ತಕ್ಷಣ, ಇದು ನಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂಬ ಒಂದು ವಿಷಯ ನಮ್ಮ ಮನಸ್ಸಿಗೆ ಬರುತ್ತದೆ. ವಾಸ್ತವವಾಗಿ ಕೊಲೆಸ್ಟ್ರಾಲ್ ಆರೋಗ್ಯಕರ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ. ಅದರ ಪ್ರಮಾಣ ಹೆಚ್ಚಾದಾಗ, ಹೃದಯ ಕಾಯಿಲೆಯ ಅಪಾಯ ಕೂಡ ಹೆಚ್ಚಾಗುತ್ತದೆ. ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಗುರುತಿಸಲು ನಿಜವಾದ ಲಕ್ಷಣಗಳು ಯಾವುವು? ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣವೇನು ಗೊತ್ತಾ?

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಅನೇಕ ಅಂಶಗಳು ಕಾರಣವಾಗಿವೆ. ಉದಾಹರಣೆಗೆ... ಅಧಿಕ ಕೊಬ್ಬಿನ ಆಹಾರ, ವ್ಯಾಯಾಮದ ಕೊರತೆ, ತೂಕ ಹೆಚ್ಚಾಗುವುದು, ಧೂಮಪಾನ, ಮದ್ಯಪಾನ ಹಾಗೂ ಕೆಲವು ಜನರಲ್ಲಿ ತೂಕ ಹೆಚ್ಚಾಗುವುದು ಜೊತೆಗೆ ಜೆನೆಟಿಕ್ಸ್ ಕಾರಣಗಳು ಸಾಧ್ಯತೆಯಿರುತ್ತದೆ. ತೂಕ ಹೆಚ್ಚಾಗುವುದು ಆನುವಂಶಿಕವಾಗಿದ್ದರೆ ಅದಕ್ಕೆ ಕಾರಣವೆಂದು ಪರಿಗಣಿಸಬಹುದು.

ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳೇನು?:

  • ಒಬ್ಬ ವ್ಯಕ್ತಿಯ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಅದರ ಲಕ್ಷಣಗಳು ತಕ್ಷಣವೇ ಅವರ ಚರ್ಮದ ಮೇಲೆ ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಅವನ ಚರ್ಮದ ಮೇಲೆ ಹಳದಿ ಕಲೆಗಳು ಮತ್ತು ಗಡ್ಡೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕಣ್ಣುಗಳ ಕೆಳಗೆ, ಮೊಣಕೈ ಹಾಗೂ ಮೊಣಕಾಲುಗಳ ಸುತ್ತಲೂ ಈ ಗಡ್ಡೆಗಳು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳಾಗಿವೆ.
  • ಕೊಲೆಸ್ಟ್ರಾಲ್ ಹೆಚ್ಚಿದ ಕೆಲವು ಲಕ್ಷಣಗಳು ಕೈ ಮತ್ತು ಕಾಲುಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿ ಸಂಗ್ರಹವಾದರೆ, ದೇಹದ ರಕ್ತನಾಳಗಳು ಕುಗ್ಗುತ್ತವೆ ಹಾಗೂ ರಕ್ತದ ಹರಿವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಯಾವುದೇ ದೈಹಿಕ ಚಟುವಟಿಕೆ ಮಾಡುವಾಗ, ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ ಹಾಗೂ ಕೈಕಾಲುಗಳಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ.
  • ಅಧಿಕ ಕೊಲೆಸ್ಟ್ರಾಲ್ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ಪಿತ್ತಕೋಶದಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ. ಇದರೊಂದಿಗೆ ನೋವು ಹೊಟ್ಟೆಯ ಮೇಲಿನ ಬಲ ಭಾಗದಿಂದ ಆರಂಭವಾಗುತ್ತದೆ.
  • ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗಲು ಕಾರಣವಾಗುತ್ತದೆ. ಜೊತೆಗೆ ರಕ್ತದ ಹರಿವಿಗೆ ಅಡ್ಡಿಯಾಗಬಹುದು. ಪರಿಣಾಮ ಎದೆ ನೋವಿಗೂ ಕೂಡ ಕಾರಣವಾಗುತ್ತದೆ. ಇದರರ್ಥ ಅಧಿಕ ಕೊಲೆಸ್ಟ್ರಾಲ್‌ನ ಸಾಮಾನ್ಯ ಲಕ್ಷಣಗಳೆಂದರೆ ಎದೆ ನೋವು ಹಾಗೂ ಉಸಿರಾಟದ ತೊಂದರೆಯಾಗಿದೆ.
  • ಪ್ಲೇಕ್ ಅಪಧಮನಿಗಳು ಸಿಡಿಯಲು ಇಲ್ಲವೇ ಬ್ಲಾಕ್​ ಆಗಲು ಕಾರಣವಾಗಬಹುದು. ಇದು ಹೃದಯ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರಿ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ಪಾರ್ಶ್ವವಾಯುವಿನ ನಂತರ ದೇಹವು ಮರಗಟ್ಟಬಹುದು. ಮಾತನಾಡುವುದು ಕೂಡ ಕಷ್ಟಕರವಾಗಿರುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಿಸುವುದು ಹೇಗೆ?:

  • ನಿಮ್ಮ ಆಹಾರದಲ್ಲಿ ಕೊಬ್ಬಿನ ಪ್ರಮಾಣವನ್ನು ಮಿತಿಗೊಳಿಸಿ ಹಾಗೂ ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳಿಂದ ಆದಷ್ಟು ದೂರವಿರಿ.
  • ಅತ್ಯಂತ ಮುಖ್ಯವಾದ ವಿಷಯವೆಂದರೆ ಒಮೆಗಾ 3 ಕೊಬ್ಬಿನಾಮ್ಲಗಳನ್ನು ಆಹಾರದಲ್ಲಿ ಸೇರಿಸುವುದು. ಇದು ಆರೋಗ್ಯಕರ ಕೊಬ್ಬು. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯವಾಗುತ್ತದೆ.
  • ನಿಮ್ಮ ಆಹಾರದಲ್ಲಿ ನಾರಿನ ಪ್ರಮಾಣ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಹೆಚ್ಚು ಸಹಕಾರಿಯಾಗಿದೆ.
  • ನೀವು ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ನೀವು ಆರೋಗ್ಯಕರ ತೂಕವನ್ನು ಹೊಂದಬೇಕಾಗುತ್ತದೆ. ತೂಕ ಇಳಿಕೆ ಮಾಡಿದರೆ ಕೊಲೆಸ್ಟ್ರಾಲ್ ಮಟ್ಟ ಗಮನಾರ್ಹವಾಗಿ ಸುಧಾರಿಸುತ್ತದೆ.
  • ಧೂಮಪಾನ ಹಾಗೂ ಮದ್ಯಪಾನ ಸೇವನೆ ಮಾಡುವುದನ್ನು ತಪ್ಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಿ:

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿರುವ ಎಲ್ಲ ಆರೋಗ್ಯ ಸಂಬಂಧಿತ ವಿಚಾರಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ಆಗಿರುತ್ತದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನು ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.