ETV Bharat / health

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಇಲ್ಲಿವೆ ಆರು ನೈಸರ್ಗಿಕ ಸೂಪರ್‌ ಫುಡ್ಸ್: ತಜ್ಞರು ಮಾತು - SUPER FOODS FOR DIABETES

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ತಜ್ಞರು ಸೂಚಿಸಿರುವ ಆರು ನೈಸರ್ಗಿಕ ಆಹಾರಗಳು ಲಿಸ್ಟ್​ ಇಲ್ಲಿದೆ ನೋಡಿ. ಈ ಆಹಾರಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

diabetes  super foods to control diabetes  Blood Sugar  ಮಧುಮೇಹ
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಇಲ್ಲಿವೆ ಆರು ನೈಸರ್ಗಿಕ ಸೂಪರ್‌ ಫುಡ್ಸ್ - ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : June 6, 2025 at 2:36 PM IST

4 Min Read

Super Foods to Control Diabetes: ಬದಲಾದ ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಹಲವು ಜನರು ಎದುರಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳವಾಗುವುದು ಒಂದು. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಪದಾರ್ಥಗಳೊಂದಿಗೆ ಈ ಮಧುಮೇಹ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮೆಂತ್ಯ, ಸಿಲೋನ್ ದಾಲ್ಚಿನ್ನಿ, ನೇರಳೆ ಹಣ್ಣು, ಹಸಿ ಬೆಂಡೆಕಾಯಿ, ಬಿಲ್ವಪತ್ರೆ, ಚಿಯಾ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಸಹಾಯ ಮಾಡುತ್ತವೆ ಎಂದು ಅನೇಕ ಅಧ್ಯಯನಗಳು ಸ್ಪಷ್ಟವಾಗಿ ತಿಳಿಸಿವೆ.

1. ನೇರಳೆ ಹಣ್ಣು: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ನೇರಳೆ ಹಣ್ಣುಗಳು ಅತ್ಯಂತ ಪ್ರಮುಖವಾದ ಪಾತ್ರವಹಿಸುತ್ತವೆ. ಅವುಗಳನ್ನು ನಿಯಮಿತವಾಗಿ ಸೇವಿಸಿದರೆ ಅವು ತುಂಬಾ ಪ್ರಯೋಜನಕಾರಿಯಾಗಿವೆ. ನೇರಳೆ ಹಣ್ಣಿನಲ್ಲಿರುವ ಜಾಂಬೋಲಿನ್ ಮತ್ತು ಜಾಂಬೋಸಿನ್ ಎಂಬ ರಾಸಾಯನಿಕ ಸಂಯುಕ್ತಗಳು ಕಾರ್ಬೋಹೈಡ್ರೇಟ್‌ಗಳನ್ನು ಸಕ್ಕರೆಯಾಗಿ ಪರಿವರ್ತಿಸುವ ದರವನ್ನು ತುಂಬಾ ನಿಧಾನಗೊಳಿಸುತ್ತವೆ ಎಂದು ಸಂಶೋಧನೆ ಹೇಳುತ್ತದೆ. ನೇರಳೆ ಹಣ್ಣು ಮತ್ತು ಅದರ ಬೀಜದ ಪುಡಿ ದೇಹದಲ್ಲಿ ಗ್ಲೂಕೋಸ್ ನಿಯಂತ್ರಿಸಲು ಪರಿಣಾಮಕಾರಿಯಾಗಿದೆ. ಪ್ರತಿದಿನ ಒಂದು ಹಿಡಿ ನೇರಳೆ ತಿನ್ನುವುದು ಉತ್ತಮ. ವಿಶೇಷವಾಗಿ ನೇರಳೆ ಹಣ್ಣಿನ ಸೀಸನ್​ನಲ್ಲಿ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಅಧ್ಯಯನ ದೃಢಪಡಿಸಿದೆ. ನೇರಳೆ ಹಣ್ಣಿನ ಸೇವಿಸುವುದರಿಂದ ಪರಿಣಾಮ ನಿಧಾನವಾಗಿದ್ದರೂ ಸ್ಪಷ್ಟ ಫಲಿತಾಂಶಗಳನ್ನು ಲಭಿಸುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

diabetes  super foods to control diabetes  Blood Sugar  ಮಧುಮೇಹ
ನೇರಳೆ ಹಣ್ಣು (Getty Images)

2. ಬೆಂಡೆಕಾಯಿ: ನಿಯಮಿತವಾಗಿ ಬೆಂಡೆಕಾಯಿ ಸೇವನೆ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಹಲವು ಲಾಭಗಳು ನೀಡುತ್ತದೆ. ಅದರಲ್ಲೂ ಹಸಿ ಬೆಂಡೆಕಾಯಿಯಲ್ಲಿರುವ ಲೋಳೆಯು ದೇಹದಲ್ಲಿರುವ ಸಕ್ಕರೆ ಮಟ್ಟವನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ತುಂಬಾ ನಿಧಾನಗೊಳಿಸುತ್ತದೆ. ಬೆಂಡೆಕಾಯಿಯು ಊಟದ ನಂತರ ಹೆಚ್ಚಾಗುವ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಂಡೆಕಾಯಿಯನ್ನು ಕತ್ತರಿಸಿದ ಅದರ ಪೀಸ್​ಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಿಗ್ಗೆ ನೀರು ಕುಡಿಯುವುದರಿಂದ ಕೆಲವು ದಿನಗಳಲ್ಲಿ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಳಿತವನ್ನು ಸ್ಥಿರಗೊಳಿಸಲು ಸಾಧ್ಯವಾಗುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.

ಬೆಂಡೆಕಾಯಿ (Getty Images)

3. ಸಿಲೋನ್ ದಾಲ್ಚಿನ್ನಿ: ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾಸಿಯಾ ವಿಧದ ದಾಲ್ಚಿನ್ನಿಗಿಂತಲೂ ಸಿಲೋನ್ ದಾಲ್ಚಿನ್ನಿಯು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಎಂದು ಸಂಶೋಧನೆಗಳು ತೋರ್ಪಡಿಸಿವೆ. ಇದು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಜೀವಕೋಶಗಳಿಗೆ ಗ್ಲೂಕೋಸ್ ಸಾಗಣೆಯನ್ನು ಹೆಚ್ಚಿಸುತ್ತದೆ. ಟೈಪ್ 2 ಮಧುಮೇಹ ಹೊಂದಿರುವ ಜನರು ದಿನಕ್ಕೆ ಕೇವಲ ಒಂದು ಗ್ರಾಂ ಸಿಲೋನ್ ದಾಲ್ಚಿನ್ನಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಅಧ್ಯಯನವು ತೋರಿಸಿದೆ. ಆದ್ರೆ, ಇದು ತಕ್ಷಣದ ಫಲಿತಾಂಶಗಳನ್ನು ನೀಡುವುದಿಲ್ಲ. ಬದಲಿಗೆ ಇದು ದೀರ್ಘಾವಧಿಯಲ್ಲಿ ಸಕ್ಕರೆ ನಿಯಂತ್ರಣಕ್ಕೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಸಿಲೋನ್ ದಾಲ್ಚಿನ್ನಿಯನ್ನು ನಿಯಮಿತವಾಗಿ ಬಳಸುವುದು ಮುಖ್ಯವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಸಿಲೋನ್ ದಾಲ್ಚಿನ್ನಿ (Getty Images)

4. ಮೆಂತ್ಯ ಬೀಜ: ಮೆಂತ್ಯ ಬೀಜ ಸೇವಿಸಿದ ಬಳಿಕ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಹಠಾತ್ ಹೆಚ್ಚಳವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಮೆಂತ್ಯ ಬೀಜದಲ್ಲಿ ಕರಗುವ ನಾರಿನಾಂಶವು ಸಮೃದ್ಧವಾಗಿದೆ. ಇದು ಕಾರ್ಬೋಹೈಡ್ರೇಟ್‌ಗಳನ್ನು ಜೀರ್ಣಿಸಿಕೊಳ್ಳುವ ಮತ್ತು ರಕ್ತಕ್ಕೆ ಸೇರುವ ಪ್ರಕ್ರಿಯೆಯನ್ನು ನಿಧಾನಗೊಳಿಸುವಂತಹ ಗುಣವನ್ನು ಹೊಂದಿದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಏಕಕಾಲದಲ್ಲಿ ಬಿಡುಗಡೆಯಾಗದಂತೆ ನಿಯಂತ್ರಿಸಲಾಗುತ್ತದೆ. ಮೆಂತ್ಯ ಬೀಜವನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಸಂವೇದನೆ ಸುಧಾರಣೆ ಮಾಡುತ್ತದೆ. ಮೆಂತ್ಯ ಬೀಜವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಮೆಂತ್ಯ ಬೀಜವನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಈ ವಿಧಾನದ ಹಲವು ಪ್ರಯೋಜನಗಳು ದೊರೆಯುತ್ತದೆ.

ಮೆಂತ್ಯ ಬೀಜ (Getty Images)

5. ಚಿಯಾ ಬೀಜ: ಚಿಯಾ ಬೀಜಗಳು ಮಧುಮೇಹವನ್ನು ನಿಯಂತ್ರಿಸಲು ಅತ್ಯಂತ ಉಪಯುಕ್ತವಾಗಿವೆ. ಇದರಲ್ಲಿ ಕರಗುವ ಫೈಬರ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇದು ನೀರಿನಲ್ಲಿ ನೆನೆಸಿದಾಗ ಜೆಲ್ ತರಹದ ವಸ್ತುವನ್ನು ರೂಪಿಸುತ್ತದೆ. ಈ ಜೆಲ್ ಆಹಾರದ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ರಕ್ತಕ್ಕೆ ಗ್ಲೂಕೋಸ್ ಬಿಡುಗಡೆಯಾಗುವ ದರವನ್ನು ಕಡಿಮೆ ಮಾಡುತ್ತದೆ. ನೆನೆಸಿದ ಚಿಯಾ ಬೀಜಗಳನ್ನು ಬೆಳಿಗ್ಗೆ ಒಂದು ಕಪ್ ಮೊಸರಿಗೆ ಸೇರಿಸಿ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳವಾಗುವುದನ್ನು ತಡೆಯುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಚಿಯಾ ಬೀಜ (Getty Images)

6. ಬಿಲ್ವಪತ್ರೆ: ಬಿಲ್ವಪತ್ರೆ ಎಲೆಗಳ ಸೇವನೆಯು ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ ಭಾರತೀಯ ಆಯುರ್ವೇದದಲ್ಲಿ ತುಂಬಾ ವಿಶೇಷವಾದ ಸ್ಥಾನವಿದೆ. ಬಿಲ್ವಪತ್ರೆ ಎಲೆಗಳಲ್ಲಿರುವ ಅಜೆಲೈನ್ ಮತ್ತು ಮಾರ್ಮೆಲೋಸಿನ್​ನಂತಹ ಸಂಯುಕ್ತಗಳು ಮೇದೋಜೀರಕ ಗ್ರಂಥಿಯಿಂದ ಹೆಚ್ಚಿನ ಇನ್ಸುಲಿನ್ ಅನ್ನು ಬಿಡುಗಡೆ ಮಾಡಲು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ವಾಣಿಜ್ಯಿಕವಾಗಿ ಜನಪ್ರಿಯವಾಗಿಲ್ಲದಿದ್ದರೂ ತಾಜಾ ಬಿಲ್ವಪತ್ರೆ ಎಲೆಯ ರಸವನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಅನೇಕ ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕ ಔಷಧವಾಗಿದೆ.

ಶುಗರ್ ಟೆಸ್ಟ್ (Getty Images)

ಈ ನೈಸರ್ಗಿಕ ಆಹಾರಗಳನ್ನು ಅನುಸರಿಸುವುದರ ಜೊತೆಗೆ ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳುವುದು, ಮುಖ್ಯವಾಗಿದೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಹಾಗೂ ಸಮತೋಲಿತ ಆಹಾರವನ್ನು ಸೇವಿಸುವುದು ಸೇರಿದಂತೆ ವಿವಿಧ ಮುನ್ನೆಚ್ಚರಿಕೆಗಳನ್ನು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್‌ಗಳನ್ನು ವೀಕ್ಷಿಸಿ: (ಸಂಶೋಧನಾ ವರದಿಗಳು)

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.