ETV Bharat / health

ನಿಮಗೆ ಯೂರಿಕ್ ಆ್ಯಸಿಡ್​ ಸಮಸ್ಯೆ ಕಡಿಮೆಯಾಗಬೇಕೇ? ಈ ಆಹಾರಗಳನ್ನು ಸೇವಿಸದಿರಲು ವೈದ್ಯರ ಸಲಹೆ - PREVENTING URIC ACID PROBLEM

ನಿಮ್ಮ ದೇಹದಲ್ಲಿ ಯೂರಿಕ್ ಆ್ಯಸಿಡ್ ಮಟ್ಟ ಕಡಿಮೆಯಾಗಬೇಕಾದರೆ ಈ ಆಹಾರಗಳನ್ನು ಸೇವಿಸಬಾರದು. ಹಾಗಾದ್ರೆ, ವೈದ್ಯರು ಸೂಚಿಸಿರುವ 'ಬಿಳಿ' ಆಹಾರಗಳ ಲಿಸ್ಟ್​ ಇಲ್ಲಿದೆ ನೋಡಿ.

URIC ACID  ಯೂರಿಕ್ ಆ್ಯಸಿಡ್​ ಸಮಸ್ಯೆ  URIC ACID PROBLEM  AVOID EATING WHITE FOODS
ಯೂರಿಕ್ ಆ್ಯಸಿಡ್​ ಸಮಸ್ಯೆ- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : April 15, 2025 at 3:59 PM IST

4 Min Read

Preventing Uric Acid Problem: ದೇಹದಲ್ಲಿ ಯೂರಿಕ್ ಆ್ಯಸಿಡ್ ಸಮಸ್ಯೆಯ ಹೆಚ್ಚಳವು ಹಲವು ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗುತ್ತದೆ. ಈ ರೋಗದ ಪ್ರಮುಖ ಲಕ್ಷಣಗಳಲ್ಲಿ ಕೀಲು ನೋವು ಪ್ರಮುಖವಾಗಿ ಕಾಡುತ್ತದೆ. ಯೂರಿಕ್ ಆ್ಯಸಿಡ್ ಮಟ್ಟವು 7.0 mg/dlಗಿಂತ ಹೆಚ್ಚಾದರೆ, ಕೀಲುಗಳಲ್ಲಿ ಹರಳುಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಇದರ ಪರಿಣಾಮವಾಗಿ ಕೀಲುಗಳಲ್ಲಿ ನೋವು ಹಾಗೂ ಊತ ಉಂಟಾಗುತ್ತದೆ. ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿ ಯೂರಿಕ್ ಆ್ಯಸಿಡ್ ಸಮಸ್ಯೆ ಕೂಡ ಅನೇಕ ಜನರಲ್ಲಿ ಕಂಡುಬರುತ್ತದೆ.

ಆಹಾರ, ಪಾನೀಯಗಳಲ್ಲಿ ಕಂಡುಬರುವ ಪ್ಯೂರಿನ್‌ಗಳು ಎಂಬ ರಾಸಾಯನಿಕಗಳನ್ನು ದೇಹವು ಒಡೆಯುವಾಗ ಯೂರಿಕ್ ಆ್ಯಸಿಡ್ ರೂಪುಗೊಳ್ಳುತ್ತದೆ. ಬಿಡುವಿಲ್ಲದ ಜೀವನಶೈಲಿ ಹಾಗೂ ನಿಮಗೆ ಏನು ಬೇಕೋ ಅದನ್ನು ತಿನ್ನುವುದು, ಹೆಚ್ಚು ಜಂಕ್ ಫುಡ್ ತಿನ್ನುವುದು ಈ ಅಭ್ಯಾಸಗಳಿಂದ ರಕ್ತದಲ್ಲಿನ ಯೂರಿಕ್ ಆ್ಯಸಿಡ್ ಮಟ್ಟವನ್ನು ಏರಿಕೆಯಾಗುತ್ತದೆ.

ಯೂರಿಕ್ ಆ್ಯಸಿಡ್ ಕಡಿಮೆ ಮಾಡಲು ನೀವು ಸೇವಿಸುವ ಆಹಾರದ ಮೇಲೆ ವಿಶೇಷವಾದ ಗಮನ ಹರಿಸಬೇಕಾಗುತ್ತದೆ. ಕೆಲವು ಬಿಳಿ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಕೆಲವು ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆ್ಯಸಿಡ್ ಮಟ್ಟ ಏರಿಕೆಯಾಗುತ್ತದೆ. ಜೊತೆಗೆ ಇದು ಕಿಡ್ನಿಗಳಿಗೆ ಅಪಾಯಕಾರಿಯಾಗಿದೆ. ಯೂರಿಕ್ ಆ್ಯಸಿಡ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ಅರಿತುಕೊಳ್ಳೋಣ.

ಯೂರಿಕ್ ಆ್ಯಸಿಡ್ ಸಮಸ್ಯೆಯ ಲಕ್ಷಣಗಳೇನು?:

  • ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಾದರೆ ಕೀಲುಗಳಲ್ಲಿ ನೋವು ಅಥವಾ ಊತ
  • ಕೀಲುಗಳ ಸುತ್ತಲಿನ ಚರ್ಮದ ಬಣ್ಣ ಮಾಸುವುದು
  • ಸ್ಪರ್ಶಕ್ಕೆ ಬೆಚ್ಚಗಿರುವಂತೆ ಭಾಸವಾಗುವ ಕೀಲುಗಳು
  • ಆಗಾಗ್ಗೆ ಮೂತ್ರ ವಿಸರ್ಜನೆ
  • ಪಾದಗಳ ಅಡಿಭಾಗ ಕೆಂಪಾಗುವುದು
  • ಹೆಬ್ಬೆರಳಿನಲ್ಲಿ ನೋವು

ಬಿಳಿ ಬ್ರೆಡ್: ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ನಿಮ್ಮ ಆಹಾರದಿಂದ ಬಿಳಿ ಬ್ರೆಡ್ ಅನ್ನು ಸಂಪೂರ್ಣವಾಗಿ ದೂರವಿಡಬೇಕಾಗುತ್ತದೆ. ಬಿಳಿ ಬ್ರೆಡ್​ನಲ್ಲಿ ಫೈಬರ್ ಇರುವುದಿಲ್ಲ. ಇದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಇದನ್ನು ಹೆಚ್ಚು ತಿನ್ನುವುದರಿಂದ ಉಬ್ಬುವುದು, ಅಜೀರ್ಣ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

URIC ACID  ಯೂರಿಕ್ ಆ್ಯಸಿಡ್​ ಸಮಸ್ಯೆ  URIC ACID PROBLEM  AVOID EATING WHITE FOODS
ಬಿಳಿ ಬ್ರೆಡ್​ (Getty Images)

ಅತಿಯಾಗಿ ಬಿಳಿ ಬ್ರೆಡ್ ಸೇವಿಸುವುದರಿಂದ ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಾಗುವ ಅಪಾಯವಿದೆ. ಇದನ್ನು ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಸಂಸ್ಕರಿಸಿದ ಬಿಳಿ ಬ್ರೆಡ್‌ನಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ಉರಿಯೂತ ಹಾಗೂ ಊತ ಉಂಟಾಗುತ್ತದೆ. ಕೀಲುಗಳಲ್ಲಿ ಯೂರಿಕ್ ಆ್ಯಸಿಡ್ ಸಂಗ್ರಹವಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ.

ಅಣಬೆ (ETV Bharat)

ಅಣಬೆ: ಇತ್ತೀಚೆಗೆ ಅಣಬೆ ತಿನ್ನುವ ಪ್ರವೃತ್ತಿ ಗಮನಾರ್ಹವಾಗಿ ಬೆಳೆದಿದೆ. ಅನೇಕ ಜನರು ಅಣಬೆಗಳನ್ನು ಸೇವಿಸಲು ಆನಂದಿಸುತ್ತಾರೆ. ಮಶ್ರೂಮ್ ಕರಿ, ಮಶ್ರೂಮ್ ಪೆಪ್ಪರ್ ಫ್ರೈ, ಬಿರಿಯಾನಿ ಹಾಗೂ ಮಶ್ರೂಮ್ ಮಂಚೂರಿಯನ್‌ನಂತಹ ವೈವಿಧ್ಯಮಯ ಭಕ್ಷ್ಯಗಳು ಲಭ್ಯವಿದೆ. ಇದರಿಂದ ಹಲವು ಜನರು ತಮ್ಮ ನೆಚ್ಚಿನ ಆಹಾರಗಳ ಪಟ್ಟಿಯಲ್ಲಿ ಅಣಬೆಗಳನ್ನು ಸೇರಿಸಿಕೊಳ್ಳುತ್ತಾರೆ. ಅಣಬೆಗಳು ಸಾಮಾನ್ಯವಾಗಿ ಆರೋಗ್ಯಕ್ಕೆ ಒಳ್ಳೆಯದು. ಅಣಬೆಗಳಲ್ಲಿ ಪ್ಯೂರಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವವರು ಅಣಬೆಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಅತಿಯಾಗಿ ಸೇವಿಸುವುದರಿಂದ ಯೂರಿಕ್ ಆ್ಯಸಿಡ್​ ಮಟ್ಟ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಎಲೆ ಕೋಸು (ETV Bharat)

ಎಲೆಕೋಸು, ಹೂಕೋಸು: ಎನ್​ಐಎಚ್​ ವರದಿಯ ಪ್ರಕಾರ, ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಎಲೆಕೋಸು ಮತ್ತು ಹೂಕೋಸು ಸೇವಿಸಬಾರದು. ಈ ತರಕಾರಿಗಳಲ್ಲಿ ಪ್ಯೂರಿನ್‌ಗಳು ಅಧಿಕವಾಗಿವೆ. ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಪ್ಯೂರಿನ್‌ ಹೆಚ್ಚಿನ ಆಹಾರವನ್ನು ಸೇವಿಸಿದರೆ ಅವರ ಸ್ಥಿತಿ ಹದಗೆಡುವ ಅಪಾಯವಿದೆ. ಅದಕ್ಕಾಗಿಯೇ ತಜ್ಞರು ಇವುಗಳನ್ನು ಹೆಚ್ಚು ತಿನ್ನದಂತೆ ಎಚ್ಚರಿಕೆ ನೀಡುತ್ತಾರೆ.

ಉಪ್ಪು (Getty Images)

ಉಪ್ಪು: ಬಿಳಿ ಉಪ್ಪನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಹೆಚ್ಚು ಉಪ್ಪು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾಗಬಹುದು. ಇದು ನಿಮಗೆ ಹೆಚ್ಚು ಬಾಯಾರಿಕೆಯಾಗುತ್ತದೆ. ಇದರಿಂದ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಹೆಚ್ಚು ಉಪ್ಪು ಸೇವಿಸುವ ಜನರ ದೇಹದಲ್ಲಿ ಊತ ಬರುವ ಅಪಾಯವಿರುತ್ತದೆ. ಅತಿಯಾದ ಉಪ್ಪು ಸೇವನೆಯು ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಾಗುತ್ತದೆ. ಇದು ಕೀಲು ನೋವಿನ ಅಪಾಯ ಕೂಡ ಹೆಚ್ಚಾಗುತ್ತದೆ. ಇದರಿಂದ ಬಿಳಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಲು ತಜ್ಞರು ತಿಳಿಸುತ್ತಾರೆ.

ಸಕ್ಕರೆ ಪಾನೀಯ (Getty Images)

ಸಕ್ಕರೆ: ಹೆಚ್ಚು ಸಕ್ಕರೆ ಸೇವಿಸಬಾರದು, ಜೊತೆಗೆ ಸಕ್ಕರೆ ಪಾನೀಯಗಳು ಮತ್ತು ಸಕ್ಕರೆ ಆಹಾರಗಳನ್ನು ಸೇವಿಸಬಾರದು. ಹೆಚ್ಚು ಸಕ್ಕರೆ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯವಿದೆ. ಹೆಚ್ಚು ಸಕ್ಕರೆ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆ್ಯಸಿಡ್​ ಮಟ್ಟ ಹೆಚ್ಚಾಗುವ ಅಪಾಯವಿದೆ. ಸಕ್ಕರೆ ತಿನ್ನುವುದರಿಂದ ನಿಮಗೆ ತಾತ್ಕಾಲಿಕ ಶಕ್ತಿ ದೊರೆಯುತ್ತದೆ. ಆದರೆ, ಕೆಲವು ಪ್ರತಿಕೂಲ ಪರಿಣಾಮಗಳಿಂದ ಶಕ್ತಿಯನ್ನು ಕಳೆದುಕೊಂಡು ಆಲಸ್ಯ ಬರುತ್ತದೆ ಎಂದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.