Samantha Skin Care Routine: ನಟಿಯರ ಮುಖದ ತ್ವಚೆಯು ಇಷ್ಟು ಸ್ಪಷ್ಟ ಮತ್ತು ಹೊಳೆಯುತ್ತದೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ಇದು ಕೇವಲ ಮೇಕಪ್‌ನಿಂದ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವೂ ಕೂಡ. ಮೇಕಪ್ ಮತ್ತು ತ್ವಚೆಯ ಆರೈಕೆಯಲ್ಲಿ ಬಹಳ ವ್ಯತ್ಯಾಸವಿದೆ. ನಿಮ್ಮ ಚರ್ಮವು ಆರೋಗ್ಯಕರವಾಗಿದ್ದರೆ ಮಾತ್ರ ನಿಮ್ಮ ಮುಖವು ಸ್ಪಷ್ಟವಾಗಿರುವ ಜೊತೆಗೆ ಹೊಳೆಯುತ್ತದೆ ಎಂಬುದನ್ನು ನೆನಪಿಡಿ ಅದಕ್ಕಾಗಿಯೇ ಪ್ರತಿಯೊಬ್ಬರೂ ಚರ್ಮದ ಆರೈಕೆಯನ್ನು ಅನುಸರಿಸಬೇಕು ಎಂದು ಹಲವರು ಹೇಳುತ್ತಾರೆ. ನಟಿ ಸಮಂತಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ''ಚರ್ಮದ ಆರೋಗ್ಯವು ಕೇವಲ ಸೌಂದರ್ಯವಲ್ಲ, ಇದು ನಮ್ಮ ಒಟ್ಟಾರೆ ದೇಹದ ಸ್ವಾಸ್ಥ್ಯದ ಪ್ರಮುಖ ಭಾಗವಾಗಿದೆ'' ಎಂದು ಬರೆದುಕೊಂಡಿದ್ದಾರೆ.
ನಟಿ ತನ್ನ 'ಡೇ ಇನ್ ಮೈ ಲೈಫ್' ವಿಡಿಯೋದಲ್ಲಿ ಹೊಳೆಯುವ ಮುಖದ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಹಾಗಾದರೆ, ಚರ್ಮದ ಹೊಳಪುಗಾಗಿ ರೆಡ್ ಲೈಟ್ ಥೆರಪಿಯ ಬಗ್ಗೆ ಅವರು ಏನು ಹೇಳುತ್ತಾರೆ? ಇದನ್ನು ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಯೋಣ..
ರೆಡ್ ಲೈಟ್ ಥೆರಪಿ (RTL) ಎಂದರೇನು?: ರೆಡ್ ಲೈಟ್ ಥೆರಪಿಯು ಚರ್ಮದ ಮೇಲಿನ ಕಲೆಗಳು, ಸುಕ್ಕುಗಳು, ಮೊಡವೆಗಳು ಇತ್ಯಾದಿಗಳನ್ನು ಸರಿಪಡಿಸುವ ಮೂಲಕ ಮುಖ ಮತ್ತು ದೇಹದ ಸೌಂದರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ವಿಧಾನದಲ್ಲಿ ಕಡಿಮೆ ರೆಡ್ ಲೈಟ್ ಅನ್ನು ಬಳಸುತ್ತದೆ. ರೆಡ್ ಲೈಟ್ ಥೆರಪಿಯು ಕೆಂಪು ಬೆಳಗಿನ ಕಡಿಮೆ ತರಂಗಾಂತರಗಳನ್ನು ಬಳಸುವ ಥೆರಪಿ ತಂತ್ರವಾಗಿದೆ. ಇದು ಕೇವಲ ಮುಖದ ಆರೈಕೆಗಾಗಿ ಮಾತ್ರ ಅಲ್ಲ, ಈ ಥೆರಪಿಯನ್ನು ಇಡೀ ದೇಹದ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ನಿರ್ದಿಷ್ಟ ಭಾಗಗಳನ್ನು ಗುರಿಯಾಗಿಸಲು ಹ್ಯಾಂಡ್ಹೆಲ್ಡ್ ಸಾಧನಗಳನ್ನು ಬಳಸಲಾಗುತ್ತದೆ.
ರೆಡ್ ಲೈಟ್ ಥೆರಪಿ ದೇಹಕ್ಕೆ ಹೇಗೆ ಸಹಾಯವಾಗುತ್ತೆ?
- ಸಂಧಿವಾತ ಸಮಸ್ಯೆ ನಿವಾರಿಸುತ್ತದೆ
- ರಕ್ತಪರಿಚಲನೆಗೆ ಸಹಾಯ ಮಾಡುತ್ತದೆ
- ಗಾಯ ವಾಸಿ ಮಾಡುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಥೈರಾಯ್ಡ್ ಹಾರ್ಮೋನ್ ವ್ಯತ್ಯಾಸವಾಗುವುದನ್ನು ತಡೆಯಲು ಸಹಾಯವಾಗುತ್ತದೆ
ನೀವು ಯಂಗ್ ಆಗಿ ಕಾಣಿಸುತ್ತೀರಿ: ರೆಡ್ ಲೈಟ್ ಥೆರಪಿಯಿಂದ ನಿಮ್ಮ ಚರ್ಮದ ಮೇಲಿನ ಸುಕ್ಕುಗಳು, ಕಲೆಗಳು, ಗೆರೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ನಿಮ್ಮ ಚರ್ಮಕ್ಕೆ ಉತ್ತೇಜನ ನೀಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ವಯಸ್ಸಾದ ಚರ್ಮದ ಸಮಸ್ಯೆಗಳನ್ನು ತಡೆಯುತ್ತದೆ. ನೀವು ಯಂಗ್ ಆಗಿ ಕಾಣಲು ಸಾಧ್ಯವಾಗುತ್ತದೆ.
ಕೂದಲು ಬೆಳವಣಿಗೆ: ರೆಡ್ ಲೈಟ್ ಥೆರಪಿಗೆ ಒಳಗಾಗುವುದರಿಂದ, ಬೆಳಕು ನೆತ್ತಿ ಮೇಲೆ ಬೀಳುವುದರಿಂದ ರಕ್ತದ ಪರಿಚಲನೆ ಹೆಚ್ಚಾಗುತ್ತದೆ. ಚರ್ಮದ ಕಿರುಚೀಲಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಒದಗಿಸುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆ ಸರಾಗವಾಗಿ ಆಗುತ್ತದೆ.
ಚರ್ಮದ ಸಮಸ್ಯೆಗಳು ಪರಿಹಾರವಾಗುತ್ತವೆ: ರೆಡ್ ಲೈಟ್ ಥೆರಪಿಯು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಮುಖದಲ್ಲಿ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮುಖದ ಹೊಳಪನ್ನು ಹೆಚ್ಚಿಸುತ್ತದೆ.
ನಿಮ್ಮ ಚರ್ಮದ ಕಾಂತಿ ಹೆಚ್ಚಿಸುತ್ತೆ: ಇದಲ್ಲದೇ ಕೆಲವು ಮೂಲಭೂತ ವಿಷಯಗಳನ್ನು ಅನುಸರಿಸಬೇಕು ಎಂದು ರೆಡ್ ಲೈಟ್ ಥೆರಪಿಗೆ ಒಳಗಾದ ನಟಿ ಸಮಂತಾ ತಿಳಿಸಿದ್ದಾರೆ.
- ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದು.
- ಪೌಷ್ಟಿಕ ಆಹಾರಗಳನ್ನು ಸೇವಿಸುವುದು.
- ದೇಹದ ಒಳಗೂ ಹೊರಗೂ ಹೈಡ್ರೇಟ್ ಆಗಬೇಕು ಎಂದು ಸಮಂತಾ ಅವರು, ‘ಇದೇ ನನ್ನ ತ್ವಚೆಯ ರಕ್ಷಣೆಯ ಹಿಂದಿನ ಗುಟ್ಟು ಎಂದು ತಿಳಿಸಿದ್ದಾರೆ.
ರೆಡ್ ಲೈಟ್ ಥೆರಪಿಯ ವೆಚ್ಚವೆಷ್ಟು?: ರೆಡ್ ಲೈಟ್ ಥೆರಪಿಯ ವೆಚ್ಚ ಸುಮಾರು 3,000 ರೂ.ಯಿಂದ 5000 ರೂ. ವರೆಗೆ ಆಗುತ್ತದೆ. ನೀವು ರೆಡ್ ಲೈಟ್ ಥೆರಪಿಗೆ ಒಳಗಾಗಲು ಬಯಸಿದರೆ, ಮುಂಚಿತವಾಗಿ ವೈದ್ಯರನ್ನು ಸಂಪರ್ಕಿಸಬೇಕು. ಈ ಚಿಕಿತ್ಸೆಯಲ್ಲಿ ಕಡಿಮೆ ಬೆಳಕನ್ನು ಬಳಸಲಾಗಿದೆ. ದೀರ್ಘಕಾಲದವರೆಗೆ ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡದಿರಲು ಪ್ರಯತ್ನಿಸಿ.