ಹೈದರಾಬಾದ್: ನಡುಗುವ ಕಾಯಿಲೆ ಎಂದು ಕರೆಯುವ ಈ ಪಾರ್ಕಿನ್ಸನ್ ಕಾಯಿಲೆ ನರರೋಗದ ಸಮಸ್ಯೆಯಾಗಿದೆ. ಇದು ನಮ್ಮ ಜೀವನದ ಗುಣಮಟ್ಟದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಚಲನೆ, ಸಮನ್ವಯತೆ ಹಾಗೂ ಮಾತನಾಡುವ ಮತ್ತು ದೈನಂದಿನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಕೆಲವು ಅನುವಂಶಿಕವೂ ಆಗಿದ್ದು, ಆರಂಭದಲ್ಲೇ ಇದು ಕಾಣಿಸಿಕೊಳ್ಳುತ್ತದೆ.
ಏರಿಕೆಯಾಗುತ್ತಿರುವ ಜೀವಿತಾವಧಿ ಮತ್ತು ಹಿರಿಯ ನಾಗರಿಕರ ಸಂಖ್ಯೆಯಿಂದ ಈ ಪಾರ್ಕಿನ್ಸನ್ ಪ್ರಕರಣಗಳು ಏರಿಕೆಯಾಗಲಿದೆ. ಆಧುನಿಕ ಔಷಧಗಳು ಇದಕ್ಕೆ ಹೊಸ ಭರವಸೆ ನೀಡಲಿದೆ.
ಪಾರ್ಕಿನ್ಸ್ನ್ ಮತ್ತು ಮಿದುಳು: ಚಲನೆಗಳನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖವಾಗಿರುವ ರಾಸಾಯನಿಕ ಡೊಪಮೈನ್ ಆಗಿದೆ. ಈ ಡೊಪಮೈನ್ ಉತ್ಪಾದಿಸುವ ಜವಾಬ್ದಾರಿ ಮಿದುಳಿಗಿದೆ. ಈ ಮಿದುಳಿನ ನರಗಳ ಕೋಶ ಕುಗ್ಗುವಿಕೆ ಈ ರೋಗಕ್ಕೆ ಕಾರಣವಾಗಿದೆ. ಡೊಪಮೈನ್ ಮಟ್ಟ ಕಡಿಮೆಯಾದಂತೆ, ದೇಹದ ಚಲನೆ ಮಾಡುವ ಮಿದುಳಿನ ಸಾಮರ್ಥ್ಯ ಕುಗ್ಗುತ್ತದೆ. ಆದ ಸ್ನಾಯು ಹಿಡಿತ, ನಿಧಾನದ ಚಲನೆಯಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ.
ಪಾರ್ಕಿನ್ಸನ್ ರೋಗದ ಸಾಮಾನ್ಯ ಲಕ್ಷಣ:
- ಕೈ, ತಲೆ ಮತ್ತು ಕಾಲು ಅಲುಗಾಡುವುದು
- ಚಲನೆಯಲ್ಲಿ ನಿಧಾನಗತಿ
- ಸ್ನಾಯು ಬಿಗಿತ ಮತ್ತು ದುರ್ಬಲತೆ
- ನಡಿಗೆ ಅಭ್ಯಾಸದಲ್ಲಿ ಬದಲಾವಣೆ
- ಮಾತು ಮತ್ತು ಬರವಣಿಗೆಯಲ್ಲಿ ಬದಲಾವಣೆ
- ಮಲಬದ್ದತೆ ಮತ್ತು ಮೂತ್ರ ವಿಸರ್ಜನೆಯಲ್ಲಿ ಕಷ್ಟ
- ವಾಸನೆ ನಷ್ಟ
- ರಕ್ತದೊತ್ತಡದಲ್ಲಿ ಏರಿಳಿತ
- ಸ್ಮರಣೆ ನಷ್ಟ
ಡಿಬಿಎಸ್ ಎಂಬ ಭರವಸೆಯ ಕಿರಣ: ಡೀಪ್ ಬ್ರೈನ್ ಸ್ಟಿಮ್ಯೂಲೇಷನ್ (ಡಿಬಿಎಸ್) ಇದಕ್ಕೆ ಇಂದು ಇರುವ ಅತ್ಯಂತ ಪರಿಣಾಕಾರಿ ಚಿಕಿತ್ಸೆಯಾಗಿದೆ. ಇದು ರೋಗಿಗಳಿಗೆ ಉತ್ತಮ ಚಿಕಿತ್ಸೆಯ ವಿಧಾನವಾಗಿದೆ ಎಂದು ನಿಮ್ಸ್ನ ಹಿರಿಯ ನರರೋಗ ತಜ್ಞರಾದ ಡಾ ವೊರ್ಮಾಪ್ ಬೊರ್ಗೊಹೈನ್ ತಿಳಿಸಿದ್ದಾರೆ.
ಚಲನೆಯ ನಿಯಂತ್ರಣದಲ್ಲಿ ಒಳಗೊಂಡಿರುವ ನಿರ್ದಿಷ್ಟ ಪ್ರದೇಶಗಳಿಗೆ ವಿದ್ಯುತ್ ಪ್ರಚೋದನೆಗಳನ್ನು ಕಳುಹಿಸುವ ಸಣ್ಣ ಪಲ್ಸ್ ಜನರೇಟರ್ ಸಾಧನ ಮೆದುಳಿನಲ್ಲಿ ಅಳವಡಿಸುವ ಚಿಕಿತ್ಸೆ ಇದಾಗಿದೆ. ಇದು ನಡುಕ, ಬಿಗಿತ ಮತ್ತು ನಿಧಾನತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ರೋಗಿಗಳಿಗೆ ಅವರ ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಾಣುತ್ತದೆ.
ನಿಮ್ಸ್ನಲ್ಲಿ ಪಾರ್ಕಿನ್ಸ್ನ ಆರೈಕೆ: ಕಳೆದ ವರ್ಷ ಆಗಸ್ಟ್ನಲ್ಲಿ, ನಿಮ್ಸ್ 93 ಪಾರ್ಕಿನ್ಸನ್ ರೋಗಿಗಳಿಗೆ ಆರೋಗ್ಯ ಶ್ರೀ ಮತ್ತು ಎಂಪ್ಲಾಯಿ ಹೆಲ್ತ್ ಸ್ಕೀಮ್ ಅಡಿಯಲ್ಲಿ ಡಿಬಿಎಸ್ ಚಿಕಿತ್ಸೆ ನೀಡಿತ್ತು. ಇದರ ಅಡಿ ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳು ಕೂಡ ಇದೇ ಮಾದರಿಯ ಚಿಕಿತ್ಸೆ ನೀಡುತ್ತಿದ್ದಾರೆ.
ಪಾರ್ಕಿನ್ಸ್ನಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆರಂಭದಲ್ಲೇ ಇದನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡುವುದರಿಂದ ಇದರ ಪ್ರಗತಿಯನ್ನು ನಿಧಾನವಾಗಿಸಿ, ರೋಗಿಗಳಿಗೆ ಆರಾಮದಾಯಕ ಜೀವನ ನೀಡಬಹುದು.
ಪಾರ್ಕಿನ್ಸನ್ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಪ್ರೀತಿ ಪಾತ್ರರು ಈ ರೀತಿಯ ನಡುಕ, ನಿಧಾನಗತಿ ಅಥವಾ ಪ್ರತಿದಿನದ ಚಲನೆಯಲ್ಲಿ ಕಷ್ಟಪಡುತ್ತಿದ್ದರೆ, ಶೀಘ್ರವೇ ನರರೋಗ ತಜ್ಞರನ್ನು ಭೇಟಿ ಮಾಡಿ. ಡಿಬಿಎಸ್ನಂತಹ ಚಿಕಿತ್ಸೆಗಳು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ದೇಶದ 70 ಲಕ್ಷ ಮಂದಿ!!
ಇದನ್ನೂ ಓದಿ: ಎಚ್ಚರ! ಪಾರ್ಕಿನ್ಸನ್ ರೋಗ ಅಪಾಯ ಹೆಚ್ಚಿಸುತ್ತದೆ ವಾಯು ಮಾಲಿನ್ಯ - ವಾಯು ಮಾಲಿನ್ಯದ ಪ್ರದೇಶದಲ್ಲಿ