ETV Bharat / health

ಕೀಲು ನೋವು ಕಾಡುತ್ತಿದೆಯೇ? ನಿಮಗೆ, ಈ ಆಹಾರಗಳು ಉತ್ತಮ ಅಂತಾರೆ ವೈದ್ಯರು - HOW TO GET RELIEF FROM JOINT PAIN

Joint Pain: ಕೀಲು ನೋವು ಅಥವಾ ಸಂಧಿವಾತವು ದೈನಂದಿನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಂಧಿವಾತದಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಕೊಳ್ಳಬೇಕಿದೆ.

FOODS THAT REDUCE ARTHRITIS PAIN  ARTHRITIS PAIN  Joint Pain  ಕೀಲು ನೋವು
ಕೀಲು ನೋವು ಈ ಆಹಾರಗಳು ಉತ್ತಮ- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : June 13, 2025 at 5:15 PM IST

3 Min Read

How To Get Relief From Joint Pain: ಕೀಲು ನೋವು ಪ್ರಪಂಚದಾದ್ಯಂತ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಸಂಧಿವಾತ ಎಂದು ಕರೆಯಲ್ಪಡುವ ಈ ಕಾಯಿಲೆಯಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ಇದು ಕೀಲುಗಳಲ್ಲಿ ಅಸಹನೀಯ ನೋವು ಉಂಟುಮಾಡುತ್ತದೆ. ಇದಕ್ಕೆ ಯಾವುದೇ ಔಷಧಿ ಅಥವಾ ಎಣ್ಣೆ ಪರಿಣಾಮಕಾರಿಯಲ್ಲ. ಕೀಲು ನೋವು ಕೈಗಳು, ಮೊಣಕಾಲುಗಳು, ಬೆನ್ನುಮೂಳೆ ಮತ್ತು ಪಾದಗಳಲ್ಲಿ ನೋವು ಉಂಟುಮಾಡುತ್ತದೆ. ಕೀಲು ನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೀಲು ನೋವಿನಿಂದ ಬಳಲುತ್ತಿದ್ದಾರೆ. ನಿಯಮಿತ ವ್ಯಾಯಾಮ ಮತ್ತು ಪೌಷ್ಟಿಕ ಆಹಾರವು ಕೀಲು ನೋವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ಕೀಲು ಉರಿಯೂತ ಹಾಗೂ ಕೀಲು ನೋವನ್ನು ಕಡಿಮೆ ಮಾಡಲು ನಿಯಮಿತವಾಗಿ ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ತಿಳಿಯೋಣ.

FOODS THAT REDUCE ARTHRITIS PAIN  ARTHRITIS PAIN  Joint Pain  ಕೀಲು ನೋವು
ಮೀನು- ಸಾಂದರ್ಭಿಕ ಚಿತ್ರ (Getty Images)

ಫ್ಯಾಟಿ ಫಿಶ್: ಫ್ಯಾಟಿ ಫಿಶ್ ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇವುಗಳ ನಿಯಮಿತ ಸೇವನೆಯು ಉರಿಯೂತ ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಒಮೆಗಾ-3 ಅಧಿಕವಾಗಿರುವ ಆಹಾರವನ್ನು ಸೇವಿಸುವ ಜನರು ಸಿ-ರಿಯಾಕ್ಟಿವ್ ಪ್ರೋಟೀನ್ (CRP) ಮತ್ತು ಇಂಟರ್ಲ್ಯೂಕಿನ್-6 ನಂತಹ ಉರಿಯೂತದ ಪ್ರೋಟೀನ್‌ಗಳನ್ನು ಕಡಿಮೆ ಮಟ್ಟದಲ್ಲಿ ಹೊಂದಿರುತ್ತಾರೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇದು ಸಂಧಿವಾತ ರೋಗಿಗಳಲ್ಲಿ ಕೀಲು ಊತ ಹಾಗೂ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳನ್ನು ಸೇರಿಸಬೇಕಾಗುತ್ತದೆ.

ಬ್ಲೂಬೆರ್ರಿ, ಸ್ಟ್ರಾಬೆರಿ ಹಣ್ಣುಗಳು: ಬ್ಲೂಬೆರ್ರಿಗಳು ಮತ್ತು ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕಗಳು, ಉರಿಯೂತದ ಗುಣಲಕ್ಷಣಗಳು ಮತ್ತು ಪಾಲಿಫಿನಾಲ್‌ಗಳ ಅತ್ಯುತ್ತಮ ಮೂಲಗಳಾಗಿವೆ. ಇವು ಉರಿಯೂತ ಹಾಗೂ ಕೀಲು ಅಂಗಾಂಶ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿರುವ ಆಂಥೋಸಯಾನಿನ್‌ಗಳು ಸಂಧಿವಾತದಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ವೈದ್ಯರು ಸಂಧಿವಾತದಿಂದ ಬಳಲುತ್ತಿರುವ ಜನರು ನಿಯಮಿತವಾಗಿ ಬೆರಿಹಣ್ಣುಗಳು ಹಾಗೂ ಸ್ಟ್ರಾಬೆರಿಗಳನ್ನು ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಬೆಳ್ಳುಳ್ಳಿ- ಸಾಂದರ್ಭಿಕ ಚಿತ್ರ (Getty Images)

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಕಂಡುಬರುವ ಡಯಾಲಿಲ್ ಡೈಸಲ್ಫೈಡ್ ಸಂಧಿವಾತ ಸೇರಿದಂತೆ ವಿವಿಧ ಕಾಯಿಲೆಗಳಿಂದ ಉಂಟಾಗುವ ನೋವನ್ನು ಕಡಿಮೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವುದರಿಂದ ಕೀಲು ನೋವಿನಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.

ನಟ್ಸ್: ನಟ್ಸ್​ನಲ್ಲಿ ಮೆಗ್ನೀಸಿಯಮ್, ಸತು, ಕ್ಯಾಲ್ಸಿಯಂ, ವಿಟಮಿನ್ ಇ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಅವು ಉತ್ಕರ್ಷಣ ನಿರೋಧಕಗಳಲ್ಲಿಯೂ ಸಮೃದ್ಧವಾಗಿವೆ. ಅವು ಉರಿಯೂತ ಹಾಗೂ ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಸಂಧಿವಾತ ರೋಗಿಗಳು ತಮ್ಮ ಆಹಾರದಲ್ಲಿ ಬಾದಾಮಿ, ವಾಲ್ನಟ್ಸ್ ಮತ್ತು ಶೇಂಗಾ ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ.

ಸೊಪ್ಪು- ಸಾಂದರ್ಭಿಕ ಚಿತ್ರ (Getty Images)

ಸೊಪ್ಪು, ತರಕಾರಿಗಳು: ಸೊಪ್ಪು, ತರಕಾರಿಗಳಲ್ಲಿ ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿವೆ. ಸೊಪ್ಪು, ತರಕಾರಿಗಳು ಕೀಲು ಉರಿಯೂತ ಹಾಗೂ ಕೀಲು ನೋವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ. ಇವುಗಳಲ್ಲಿ ಕಡಿಮೆ ಕೊಬ್ಬಿನಾಂಶವಿದ್ದು ಜೀವಸತ್ವಗಳು, ಪ್ರೋಟೀನ್ ಮತ್ತು ಖನಿಜಗಳು ಸಮೃದ್ಧವಾಗಿವೆ ಎಂದು ತಜ್ಞರು ತಿಳಿಸುತ್ತಾರೆ.

ಅಗಸೆ ಬೀಜ- ಸಾಂದರ್ಭಿಕ ಚಿತ್ರ (Getty Images)

ಅಗಸೆಬೀಜ: ಕೀಲು ಉರಿಯೂತವನ್ನು ತಡೆಗಟ್ಟುವಲ್ಲಿ ಹಾಗೂ ಕೀಲು ಆರೋಗ್ಯವನ್ನು ಬೆಂಬಲಿಸುವಲ್ಲಿ ಇದು ಹೆಚ್ಚು ಉಪಯುಕ್ತವಾಗಿವೆ. ಸಂಧಿವಾತದ ಲಕ್ಷಣಗಳನ್ನು ನಿಯಂತ್ರಿಸಲು ಅಗಸೆಬೀಜ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೆಳುತ್ತಾರೆ.

ಅರಿಶಿನ- ಸಾಂದರ್ಭಿಕ ಚಿತ್ರ (Getty Images)

ಅರಿಶಿನ: ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್, ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ನೋವು ಹಾಗೂ ಊತದಂತಹ ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅಸ್ಥಿಸಂಧಿವಾತ ಇರುವವರು ತಮ್ಮ ದೈನಂದಿನ ಆಹಾರದಲ್ಲಿ ಅರಿಶಿನ ಸೇರಿಸಿಕೊಳ್ಳಬೇಕು. ಮೊಣಕಾಲು ನೋವು ಹಾಗೂ ಕೀಲು ನೋವನ್ನು ಕಡಿಮೆ ಮಾಡುವಲ್ಲಿ ಅತ್ಯಂತ ಉಪಯುಕ್ತ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್‌ ವೀಕ್ಷಿಸಿ: (ಸಂಶೋಧನಾ ವರದಿ)

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.