ನವದೆಹಲಿ: ದೇಹದ ಉತ್ತಮ ಕಾರ್ಯಾಚರಣೆಗೆ ಯಕೃತ್ ಆರೋಗ್ಯ ಕಾಪಾಡುವುದು ಪ್ರಮುಖವಾಗಿದೆ. ಕಾರಣ, ಯಕೃತ್ನ ರೋಗಗಳು ಅಂತಿಮ ಹಂತದವರೆಗೆ ಯಾವುದೇ ಲಕ್ಷಣಗಳು ತೋರುವುದಿಲ್ಲ. ಸದ್ದಿಲ್ಲದೇ ಯಕೃತ್ ಸಮಸ್ಯೆಗಳು ಅಭಿವೃದ್ಧಿ ಹೊಂದಿ ಅದು ಮಾರಣಾಂತಿಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ವಿಶ್ವ ಯಕೃತ್ ದಿನವನ್ನು ಏಪ್ರಿಲ್ 19ರಂದು ಆಚರಣೆ ಮಾಡುವ ಜೊತೆಗೆ ಯಕೃತ್ ಕಾಯಿಲೆ ಕುರಿತು ಜಾಗೃತಿ ಮೂಡಿಸುವ ಯತ್ನ ನಡೆಸಲಾಗುತ್ತದೆ. ಅದರಲ್ಲೂ ಫ್ಯಾಟಿ ಲಿವರ್ ಸಮಸ್ಯೆ ಯುವ ಜನತೆಯಲ್ಲಿ ಹೆಚ್ಚುತ್ತಿದೆ. ಈ ಬಗ್ಗೆ ಜನರು ಕಾಳಜಿವಹಿಸಬೇಕಿದೆ. ಆರೋಗ್ಯ ತಜ್ಞರ ಪ್ರಕಾರ, ಜಢ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ, ಕೊಬ್ಬು ಮತ್ತು ಜಂಕ್ ಆಹಾರಗಳು ಈ ರೋಗಕ್ಕೆ ಕಾರಣವಾಗುತ್ತದೆ.
ಯಕೃತ್ ಕಾಯಿಲೆಗೆ ಅನೇಕ ಕಾರಣಗಳಿರುತ್ತದೆ. ಅಶುಚಿತ್ವ ಅಥವಾ ಅನೈರ್ಮಲ್ಯದ ಆಹಾರ, ಅಧಿಕ ಆಲ್ಕೋಹಾಲ್ ಸೇವನೆ, ಅಸುರಕ್ಷಿತ ವೈದ್ಯಕೀಯ ಅಭ್ಯಾಸಗಳು ಇದಕ್ಕೆ ಕೊಡುಗೆ ನೀಡುತ್ತದೆ. ನಿಯಮಿತವಾಗಿ ಯಕೃತ್ ಪರೀಕ್ಷೆಗಳ ಮೂಲಕ ಯಕೃತ್ನ ಆರೋಗ್ಯದ ನಿರ್ವಹಣೆ ಅವಶ್ಯಕವಾಗಿದೆ. ಇದು ಯಕೃತ್ನ ಅಸಹಜತೆ ಪರಿಶೀಲನೆ ಮುಖ್ಯವಾಗಿದೆ ಎಂದು ಅಸ್ಟರ್ ಆರ್ವಿ ಆಸ್ಪತ್ರೆಯ ಹೆಪಟೊಲೊಜಿಸ್ಟ್ ಕನ್ಸಲ್ಟಂಟ್ ಡಾ ನವೀನ್ ಗಂಜೂ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ದತ್ತಾಂಶ ಹೇಳುವಂತೆ, ಭಾರತದಲ್ಲಿ ಸಾವಿಗೆ ಕಾರಣವಾಗುತ್ತಿರುವ ಅಂಶಗಳಲ್ಲಿ ಯಕೃತ್ ಕಾಯಿಲೆ 10ನೇ ಸ್ಥಾನ ಪಡೆದುಕೊಂಡಿದೆ. ಕಾಯಿಲೆ ಆರಂಭಿಕ ಪತ್ತೆ ಮುಖ್ಯವಾಗಿದೆ. ಅನೇಕ ಬಾರಿ ಈ ಕಾಯಿಲೆಗಳು ಬೆಳಕಿಗೆ ಬಾರದೇ ಅಂತಿಮ ಹಂತದಲ್ಲಿ ಗೋಚರಿಸುವುದು ಸಮಸ್ಯೆಯನ್ನು ಹೆಚ್ಚುವಂತೆ ಮಾಡುತ್ತವೆ.
ಯಕೃತ್ ಕಾಯಿಲೆಯ ಲಕ್ಷಣಗಳನ್ನು ಗುರುತಿಸಿ: ಯಕೃತ್ ಅಸಮಪರ್ಕ ಕಾರ್ಯಾಚರಣೆಗಳಲ್ಲಿ ಲಕ್ಷಣಗಳಲ್ಲಿ ಜಾಂಡೀಸ್ ಕೂಡ ಒಂದಾಗಿದ್ದು, ಕಣ್ಣು ಮತ್ತು ಚರ್ಮ ಹಳದಿಯಾಗುವ ಮೂಲಕ ಇದರ ಸೂಚನೆ ತೋರಿಸುತ್ತದೆ ಎಂದು ಶ್ರೀ ಬಾಲಾಜಿ ಆ್ಯಕ್ಷನ್ ಮೆಡಿಕಲ್ ಇನ್ಸ್ಸ್ಟಿಟ್ಯೂಟ್ ನ ಗ್ಯಾಸ್ಟ್ರೋಎಟರ್ನೊಲಾಜಿ ಮತ್ತು ಹೆಪಟೊಲಾಜಿಯ ಮುಖ್ಯಸ್ಥರಾಗಿರುವ ಡಾ ಮೋನಿಕಾ ಜೈನ್ ತಿಳಿಸುತ್ತಾರೆ
ಜೊತೆಗೆ ರೋಗಿಗಳು ತುರಿಕೆ, ಹೊಟ್ಟೆಯಲ್ಲಿ ದ್ರವ ಶೇಖರಣೆಯಂತಹ ಊತ ಕಾಣಬಹುದು. ಹಾಗೇ ಕಾಲಿನ ಊತ, ಹಸಿವಿನ ನಷ್ಟ ಕೂಡ ಯಕೃತ್ ಕಾಯಿಲೆ ಸೂಚನೆಯಾಗಿದೆ. ಇತರೆ ಲಕ್ಷಣಗಳಲ್ಲಿ, ಹೊಟ್ಟೆಯ ಬಲ ಮೇಲ್ಬಾಗದಲ್ಲಿ ನೋವು ಯಕೃತ್ ಉರಿಯೂತದ ಲಕ್ಷಣವಾಗಿದೆ. ತಲೆ ಸುತ್ತುವಿಕೆ ಮತ್ತು ವಾಂತಿಗಳು ಸಾಮಾನ್ಯ ಲಕ್ಷಣವಾಗಿದೆ.
ಯಕೃತ್ ರೋಗವೂ ಬಂಜೆತನ ಮತ್ತು ಮೂಳೆಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಇಮ್ಯುನೊಕೊಪ್ರೊಮೈಸ್ಡ್ ಹಂತದಲ್ಲಿ ಯಕೃತ್ ರೋಗಕ್ಕೆ ನೀಡುವ ಔಷಧಗಳ ಪ್ರಮಾಣವನ್ನು ಕಡಿಮೆ ಮಾಡಬೇಕು. ಈ ಎಲ್ಲ ಔಷಧಗಳನ್ನು ಗರ್ಭಾವಸ್ಥೆಯಲ್ಲಿ ಮುಂದುವರಿಸಲು ಸುರಕ್ಷಿತವಲ್ಲ. ದೀರ್ಘಕಾಲದ ಯಕೃತ್ ಕಾಯಿಲೆಗಳನ್ನು ಹೊಂದಿರುವ ರೋಗಿಗಳು ಗರ್ಭಿಣಿಯಾಗಲು ಪ್ರಯತ್ನಿಸುದಾಗ ಸಮಸ್ಯೆಗಳನ್ನು ಹೊಂದಬಹುದು. ಇಂತಹ ಪ್ರಕರಣದಲ್ಲಿ ಐವಿಎಫ್ ಚಿಕಿತ್ಸೆ ಆಯ್ಕೆಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ
ದೀರ್ಘಾವಧಿಯ ಯಕೃತ್ ಕಾಯಿಲೆಯಲ್ಲಿನ ಮೂಳೆ ರೋಗದಿಂದ ರೋಗಿಗಳು ಗಂಭೀರ ಪರಿಸ್ಥಿತಿ ಎದುರಿಸಬಹುದು. ಪೋಷಕಾಂಶ, ಹಾರ್ಮೋನ್ ಮತ್ತು ವಂಶವಾಹಿನಿ ಕೊಡುಗೆ ಮತ್ತು ಊರಿಯೂತಗಳು ದೀರ್ಘಾವಧಿಯ ಯಕೃತ್ ಕಾಯಿಲೆಯಲ್ಲಿನ ಮೂಳೆ ರೋಗಕ್ಕೆ ಕಾರಣವಾಗಬಹುದು
ತಡೆಗಟ್ಟುವಿಕೆ ಕ್ರಮ ಜೊತೆಗೆ ಪೋಷಕಾಂಶ ಮತ್ತು ಸಮತೋಲಿತ ಡಯಟ್ ಹೊಂದಿರುವ ಜೀವನಶೈಲಿ, ನಿಯಮಿತ ವ್ಯಾಯಾಮ ಮತ್ತ ಹೆಪಟೈಟಿಸ್ ಬಿ ಮತ್ತು ಸಿ ಪರೀಕ್ಷೆ ಮೂಲಕ ಯಕೃತ್ ಆರೋಗ್ಯ ಕಾಪಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಆಲ್ಕೋಹಾಲ್ ಮಾತ್ರವಲ್ಲ, ಅತಿಯಾದ ಸಕ್ಕರೆ, ಎಣ್ಣೆ ಪದಾರ್ಥ ಸೇವನೆ ಕೂಡ ಲಿವರ್ಗೆ ಅಪಾಯ