ETV Bharat / health

'ಈ ಆಯುರ್ವೇದದ ಆಹಾರ ಸೇವಿಸಿದರೆ ಕಫ ದೂರ': ವೈದ್ಯರು ಸೂಚಿಸಿದ ಮನೆಮದ್ದು ಇಲ್ಲಿದೆ ನೋಡಿ! - Home Remedy for Reduce Phlegm

Home Remedy for Reduce Phlegm: ಮಳೆಗಾಲದಲ್ಲಿ ನೆಗಡಿ, ಕೆಮ್ಮು ಮತ್ತು ಕಫದ ಸಮಸ್ಯೆಯಿಂದ ಹಲವರು ಬಳಲುತ್ತಾರೆ. ಆದರೆ, ಕಫದಿಂದ ಬಳಲುತ್ತಿರುವವರು ಈ ಆಹಾರವನ್ನು ದಿನವೂ ಸ್ವಲ್ಪ ಸೇವಿಸಿದರೆ, ಈ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಕಫ ಕಡಿಮೆ ಮಾಡಲು ಆಯುರ್ವೇದದಲ್ಲಿರುವ ಪರಿಹಾರದ ಬಗ್ಗೆ ತಿಳಿಯೋಣ.

author img

By ETV Bharat Health Team

Published : Sep 13, 2024, 5:35 PM IST

Updated : Sep 14, 2024, 12:23 PM IST

PHLEGM REDUCE HOME REMEDY  AYURVEDIC REMEDY TO REDUCE PHLEGM  NATURAL REMEDY TO REDUCE PHLEGM  HOW TO REDUCE PHLEGM
ಸಾಂದರ್ಭಿಕ ಚಿತ್ರ (ETV Bharat)

Home Remedy for Reduce Phlegm: ಮಳೆಗಾಲದಲ್ಲಿ ಅನೇಕ ಜನರು ಕಾಲೋಚಿತ ಕಾಯಿಲೆಗಳ ಜೊತೆಗೆ ನೋಯುತ್ತಿರುವ ಗಂಟಲು ಮತ್ತು ಕಫದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ವಿಶೇಷವಾಗಿ ದೇಹದಲ್ಲಿ ಕಫ ಸಂಗ್ರಹವಾಗುವುದರಿಂದ ಉಸಿರಾಟದ ತೊಂದರೆ, ಆಹಾರವನ್ನು ನುಂಗಲು ಮತ್ತು ಆಗಾಗ್ಗೆ ಕೆಮ್ಮು ಮುಂತಾದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದರೆ, ಮೆಂತ್ಯದಿಂದ ತಯಾರಿಸಿದ ಈ ಊಟ ಸೇವಿಸಿದರೆ ಕಫ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ.ಗಾಯತ್ರಿದೇವಿ.

ಇದಕ್ಕಾಗಿ ಕಷ್ಟಪಡುವ ಅಗತ್ಯವಿಲ್ಲ. ಈ ಉಪಾಯ ತುಂಬಾ ಸರಳವಾಗಿದೆ. ಮತ್ತು ನಿಮಿಷಗಳಲ್ಲಿ ಈ ಆಹಾರವನ್ನು ತಯಾರಿಸಬಹುದು. ಇದು ರುಚಿಕರವಾಗಿರುವುದರ ಜೊತೆಗೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳುತ್ತಾರೆ ತಜ್ಞರು. ಹಾಗಾದರೆ, ಇದಕ್ಕೆ ಬೇಕಾದ ಪದಾರ್ಥಗಳು ಯಾವುವು? ಈ ಮನೆಮದ್ದು ತಯಾರಿಸುವುದು ಹೇಗೆ? ಅದನ್ನು ಯಾವ ಪ್ರಮಾಣದಲ್ಲಿ, ಹೇಗೆ ತೆಗೆದುಕೊಳ್ಳಬೇಕು? ಎಂಬುದನ್ನು ಆಯುರ್ವೇದ ವೈದ್ಯರು ನೀಡುವ ವಿವರಗಳು ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

  • ಮೆಂತ್ಯ ಪುಡಿ - 2 ಚಮಚ
  • ಹಿಪ್ಪಲಿ - 1 ಸಣ್ಣ ಚಮಚ
  • ಕಲ್ಲು ಸಕ್ಕರೆ - 1 ಚಮಚ
  • ಎಣ್ಣೆ - 1 ಚಮಚ

ತಯಾರಿಸುವ ವಿಧಾನ:

  • ಇದಕ್ಕಾಗಿ ಮೊದಲು ಮೆಂತ್ಯ ಪುಡಿ ತಯಾರಿಸಿ ಪಕ್ಕಕ್ಕೆ ಇಡಿ. ಅದೇ ರೀತಿ.. ಹಿಪ್ಪಲಿಯನ್ನು ಒಂದು ಚಮಚ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಹುರಿದು ಪುಡಿ ಮಾಡಿ ರೆಡಿ ಇಟ್ಟುಕೊಳ್ಳಬೇಕು. ಹಾಗೆಯೇ.. ಕಲ್ಲು ಸಕ್ಕರೆ ಪುಡಿ ಮಾಡಿ ಇಟ್ಟುಕೊಳ್ಳಬೇಕು.
  • ಆದರೆ, ಇಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಮೆಂತ್ಯ ತೆಗೆದುಕೊಳ್ಳುತ್ತೇವೆ. ಅಷ್ಟೇ.. ಹಿಪ್ಪಲಿಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಯಾಕೆಂದರೆ.. ಹಿಪ್ಪಲಿ ಕಾಳು ಒಂದು ಆಹಾರ. ಆದರೆ.. ಹಿಪ್ಪಲಿ ನಾವು ಸ್ವಲ್ಪ ಪ್ರಮಾಣದಲ್ಲಿ ಔಷಧ ರೂಪದಲ್ಲಿ ಸೇವಿಸಬೇಕು.
  • ಈಗ ಒಲೆಯ ಮೇಲೆ ಬಾಣಲೆ ಇಟ್ಟು ಸುಮಾರು 2 ಕಪ್ ನೀರು ಹಾಕಿ ಕುದಿಸಿ. ನಂತರ ನೀರು ಕುದಿಯುತ್ತಿರುವಾಗ ಮೆಂತ್ಯ ಪುಡಿ ಹಾಕಿ ಕಲಸಿ. ನಂತರ ಜ್ವಾಲೆಯನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಮಿಶ್ರಣವನ್ನು ಸ್ವಲ್ಪ ಸಮಯದವರೆಗೆ ಬೇಯಿಸಿ.
  • ಮೆಂತ್ಯ ಪುಡಿ ಮಿಶ್ರಣವು ಚೆನ್ನಾಗಿ ಬೆಂದಾಗ ಅದಕ್ಕೆ ಹಿಪ್ಪಲಿ ಪುಡಿ, ಕಲ್ಲು ಸಕ್ಕರೆ ಪುಡಿ ಹಾಕಿ ಒಮ್ಮೆ ಚೆನ್ನಾಗಿ ಕಲಸಿ. ನಂತರ ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಇಟ್ಟು ನಂತರ ಸ್ಟವ್ ಆಫ್ ಮಾಡಿ ಬಾಣಲೆಯನ್ನು ಒಲೆಯಿಂದ ಕೆಳಗೆ ಇಳಿಸಿ.
  • ನಂತರ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದು ಇಟ್ಟುಕೊಳ್ಳಿ. ಅಷ್ಟೇ.. ಕಫ ಕಡಿಮೆ ಮಾಡಲು 'ಉಳವ ಜಾವ' ಆಯುರ್ವೇದದ ಮನೆಮದ್ದು ರೆಡಿ!

ತೆಗೆದುಕೊಳ್ಳುವುದು ಹೇಗೆ?: ಕಫದಿಂದ ಬಳಲುತ್ತಿರುವವರು ದಿನನಿತ್ಯದ ಆಹಾರದಲ್ಲಿ ಈ ಆಯುರ್ವೇದದ ಆಹಾರ ಪದಾರ್ಥ ಸೇವಿಸಬೇಕು. ಕಫದ ಸಮಸ್ಯೆ ಕಡಿಮೆಯಾದ ನಂತರ ಇದನ್ನು ನಿಲ್ಲಿಸಬಹುದು. ಇಲ್ಲವಾದರೆ.. ಕಡಿಮೆ ಪ್ರಮಾಣದಲ್ಲಿ ತಿಂದರೂ ಆರೋಗ್ಯಕ್ಕೆ ಹಾನಿ ಇಲ್ಲ. ಇದನ್ನು ಸೇವಿಸುವುದರಿಂದ ಕಫದ ಸಮಸ್ಯೆ ಕಡಿಮೆಯಾಗುವುದಲ್ಲದೇ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಡಾ.ಗಾಯತ್ರಿದೇವಿ ತಿಳಿಸುತ್ತಾರೆ.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

Last Updated : Sep 14, 2024, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.