ETV Bharat / health

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯದ ಆರೋಗ್ಯಕ್ಕೆ ಅಪಾಯ: ಉತ್ತಮ ಆಹಾರ ಕ್ರಮ ಅನುಸರಿಸಲು ವೈದ್ಯರ ಸಲಹೆ - HIGH CHOLESTEROL AFFECTS THE HEART

ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಹೃದಯದ ಆರೋಗ್ಯಕ್ಕೆ ಅಪಾಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಉತ್ತಮ ಆಹಾರ ಕ್ರಮ ಅನುಸರಿಸಲು ವೈದ್ಯರ ಸಲಹೆ ನೀಡುತ್ತಾರೆ.

HIGH CHOLESTEROL  HIGH CHOLESTEROL REDUCE TIPS  HEALTHY DIET  ಕೆಟ್ಟ ಕೊಲೆಸ್ಟ್ರಾಲ್
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : March 14, 2025 at 4:30 PM IST

4 Min Read

High cholesterol affects the heart: ಬಹುತೇಕರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಈ ಸಮಸ್ಯೆಯು ವಿಶ್ವಾದ್ಯಂತ ಎಲ್ಲಾ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತಿದೆ. ದೈನಂದಿನ ಆಹಾರ ಕ್ರಮ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಕೆಟ್ಟ ಅಭ್ಯಾಸಗಳಿಂದ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್​ಗೆ ಕಾರಣವಾಗುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ಸೈಲೆಂಟ್​ ಕಿಲ್ಲರ್ ಆಗಿರುವ ಅಧಿಕ ಕೆಟ್ಟ ಕೊಲೆಸ್ಟ್ರಾಲ್​ನಿಂದ ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತವೆ. ಜೊತೆಗೆ ದೇಹದ ತೂಕವೂ ಹೆಚ್ಚಾಗುತ್ತದೆ. ಪರಿಣಾಮ ಒಟ್ಟಾರೆ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬೇಕಾದರೆ ಆರೋಗ್ಯಕರ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಅನುಸರಿಸಲು ವೈದ್ಯರು ಸೂಚಿಸಿದ ಉತ್ತಮ ಆಹಾರ ಕ್ರಮಗಳ ಪಟ್ಟಿ ಇಲ್ಲಿದೆ ನೋಡಿ.

ಏನಿದು ಕೊಲೆಸ್ಟ್ರಾಲ್?: ಕೊಲೆಸ್ಟ್ರಾಲ್ ಎಂದರೆ, ಜೀವಕೋಶದ ಪೊರೆಗಳಲ್ಲಿರುವ ಕೊಬ್ಬಿನ ಹಾಗೂ ಎಣ್ಣೆಯುಕ್ತ ಸ್ಟೀರಾಯ್ಡ್. ಈ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಪ್ಲೇಕ್ ನಿರ್ಮಿಸುತ್ತವೆ. ಇದರಿಂದಾಗಿ ರಕ್ತ ಪೂರೈಕೆಯಲ್ಲಿ ತುಂಬಾ ತೊಂದರೆಯಾಗುತ್ತದೆ. ಹೃದಯಾಘಾತ, ಅಧಿಕ ರಕ್ತದೊತ್ತಡ, ಮೆದುಳಿನ ಪಾರ್ಶ್ವವಾಯು ಸೇರಿದಂತೆ ಅನೇಕ ಸಮಸ್ಯೆಗಳಿಗೂ ಎದುರಾಗಬಹುದು ಎಂಬುದು ವೈದ್ಯರು ಸಲಹೆ ಆಗಿದೆ.

ನಮ್ಮ ದೇಹದಲ್ಲಿ ಎರಡು ಪ್ರಕಾರದ ಕೊಲೆಸ್ಟ್ರಾಲ್ ಇರುತ್ತದೆ. ಒಂದು ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್. ಒಳ್ಳೆಯ ಕೊಲೆಸ್ಟ್ರಾಲ್ ದೇಹಕ್ಕೆ ಉತ್ತಮ ಕೆಲಸ ಮಾಡುತ್ತದೆ. ಆದರೆ, ಕೆಟ್ಟ ಕೊಲೆಸ್ಟ್ರಾಲ್ ಹೃದಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಹೀಗಾಗಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಪ್ರಮುಖ ಆದ್ಯತೆ ನೀಡಬೇಕಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಅನೇಕ ಕಾರಣಗಳಿದ್ದು, ಅನಾರೋಗ್ಯಕರ ಜೀವನಶೈಲಿ ಹಾಗೂ ಪೋಷಕಾಂಶಗಳಿಲ್ಲದ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಈ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯಲು ವೈದ್ಯರು ತಿಳಿಸಿರುವಂತಹ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ.

HIGH CHOLESTEROL  HIGH CHOLESTEROL REDUCE TIPS  HEALTHY DIET  ಕೆಟ್ಟ ಕೊಲೆಸ್ಟ್ರಾಲ್
ಸರಳವಾಗಿ ಕರಗುವ ಫೈಬರ್ ಇರುವ ಹಣ್ಣು ಮತ್ತು ತರಕಾರಿ (Getty Images)

ಸರಳವಾಗಿ ಕರಗುವ ಫೈಬರ್ ಸೇವಿಸಿ: ಕರಗುವ ನಾರಿನಂಶವಿರುವಂತಹ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತಹರಿವಿಕೆಯಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ. ಈ ಕರಗುವ ನಾರಿನ ಪದಾರ್ಥಗಳಾದ ಓಟ್ಸ್, ಮಸೂರ, ಕಡಲೆ, ಬೀನ್ಸ್, ಮೊಳಕೆ ಕಾಳುಗಳು, ಸೇಬು, ಕಿತ್ತಳೆ, ಸ್ಟ್ರಾಬೆರಿಗಳು ಮತ್ತು ಬೆರಿಹಣ್ಣುಗಳಂತಹ ಬೆರ್ರಿಗಳು ಸೇರಿದಂತೆ ಮುಂತಾದ ಆಹಾರಗಳಲ್ಲಿ ಕಂಡುಬರುತ್ತದೆ. ಇವುಗಳನ್ನು ಸೇವಿಸುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಈ ದ್ವಿದಳ ಧಾನ್ಯಗಳು ಕರಗುವ ಫೈಬರ್ ಒದಗಿಸುತ್ತದೆ, ಇವು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

ಸ್ಯಾಚುರೇಟೆಡ್ ಕೊಬ್ಬು (Getty Images)

ಸ್ಯಾಚುರೇಟೆಡ್ ಕೊಬ್ಬು: ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವಾಗುತ್ತದೆ. ಹೀಗಾಗಿ ಕುರಿ ಮಾಂಸ, ಕೋಳಿ ಮಾಂಸ, ಹಕ್ಕಿಗಳ ಮಾಂಸ, ಕೆಂಪು ಮಾಂಸ ಹಾಗೂ ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಇವುಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ದೇಹದಲ್ಲಿ ವಿವಿಧ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು.

ಅಪರ್ಯಾಪ್ತ ಕೊಬ್ಬಿನಾಂಶವಿರುವ ಆಹಾರಗಳು (Getty Images)

ಅಪರ್ಯಾಪ್ತ ಕೊಬ್ಬು: ಟ್ರಾನ್ಸ್ ಫ್ಯಾಟ್​ ಆಹಾರಗಳಲ್ಲಿ ಕಂಡುಬರುವ ಒಂದು ರೀತಿಯ ಅಪರ್ಯಾಪ್ತ ಕೊಬ್ಬು ಆಗಿದೆ. ಸಣ್ಣ ಪ್ರಮಾಣದಲ್ಲಿ ಅಪರ್ಯಾಪ್ತ ಕೊಬ್ಬುಗಳು ನೈಸರ್ಗಿಕವಾಗಿ ಕಂಡುಬರುತ್ತವೆ. ಭಾಗಶಃ ಹೈಡ್ರೋಜನೀಕರಿಸಿದ ಎಣ್ಣೆಗಳಿಂದ ತಯಾರಿಸಿದ ಕೆಲವು ಸಂಸ್ಕರಿಸಿದ ಆಹಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಅಪರ್ಯಾಪ್ತ ಕೊಬ್ಬು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇವು ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಯ ರೂಪದಲ್ಲಿರುತ್ತವೆ. ಈ ಎಣ್ಣೆಯನ್ನು ಹೆಚ್ಚಾಗಿ ಹೊರಗೆ ಸಿಗುವ ಕುಕೀಸ್ ಮತ್ತು ಕೇಕ್‌ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹೊರಗೆ ಲಭಿಸುವ ಜಂಕ್ ಫುಡ್ ತಿನ್ನಬಾರದು.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು:

ಒಮೆಗಾ 3 ಫ್ಯಾಟ್: ಒಮೆಗಾ 3 ಕೊಬ್ಬಿನಾಮ್ಲಗಳಿರುವ ಆಹಾರ ಪದಾರ್ಥಗಳು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವುದಿಲ್ಲ. ಜೊತೆಗೆ ಇವು ಹೃದಯಕ್ಕೆ ತುಂಬಾ ಒಳ್ಳೆಯದು. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಬಹಳಷ್ಟು ಸಹಾಯವಾಗುತ್ತದೆ. ಇದಲ್ಲದೇ, ಇವು ರಕ್ತದೊತ್ತಡ ಕಡಿಮೆ ಮಾಡುತ್ತವೆ. ಒಮೆಗಾ 3 ಸಾಲ್ಮನ್, ಮ್ಯಾಕೆರೆಲ್ ಮತ್ತು ಹೆರಿಂಗ್​ನಂತಹ ಮೀನುಗಳಲ್ಲಿ ಮತ್ತು ವಾಲ್ನಟ್ಸ್ ಹಾಗೂ ಅಗಸೆಬೀಜಗಳಲ್ಲಿ ಕಂಡುಬರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಮತ್ತಷ್ಟು ಸಲಹೆಗಳು ಇಲ್ಲಿವೆ ನೋಡಿ:

  • ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮದ್ಯಪಾನ ಹಾಗೂ ಧೂಮಪಾನ ಕಡಿಮೆ ಮಾಡಬೇಕು.
  • ಊಟ ಮಾಡಿದ ನಂತರ ತಪ್ಪದೇ ವಾಕಿಂಗ್​ ಮಾಡಬೇಕು. ಊಟ ಮಾಡಿದ ಬಳಿಕ ಕನಿಷ್ಠ 15 ನಿಮಿಷಗಳವರೆಗೆ ವಾಕಿಂಗ್​ ಮಾಡಬೇಕಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾಗುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಾಧ್ಯವಾಗುತ್ತದೆ.
  • ಬಹುತೇಕ ಸಾಂಬಾರ್ ಮಾಡಲು ದಾಲ್ ಬಳಸುತ್ತಾರೆ. ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕಂದು ಅಕ್ಕಿಯಿಂದ ತಯಾರಿಸುವ ಅನ್ನ ಕೂಡ ನಮ್ಮ ಹೃದಯದ ಕಾಯಿಲೆಯನ್ನು ಸಾಕಷ್ಟು ನಿಯಂತ್ರಣ ಮಾಡುತ್ತದೆ.
  • ಅರಿಶಿನ ಪ್ರತಿನಿತ್ಯದ ಅಡುಗೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದು ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ.
  • ಬಾದಾಮಿ ಬೀಜಗಳನ್ನು ನೆನೆಸಿ ಬೆಳಗಿನ ಸಮಯದಲ್ಲಿ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
  • ಪ್ರೊಬಯೋಟಿಕ್ ಆಹಾರವಾದ ಮೊಸರು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ದೇಹದ ಉರಿಯುತ ನಿಯಂತ್ರಿಸುತ್ತದೆ. ಉತ್ತಮ ಪೌಷ್ಟಿಕಾಂಶಗಳನ್ನು ನೀಡುವ ಮೊಸರು ಕೆಟ್ಟ ಕೊಲೆಸ್ಟ್ರಾಲ್ ಇಳಿಕೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.
  • ಆ್ಯಂಟಿಆಕ್ಸಿಡೆಂಟ್ ಅಂಶಗಳಿರುವ ಗ್ರೀನ್ ಟೀ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ವಿಷಕಾರಿ ಅಂಶಗಳನ್ನು ನಮ್ಮ ದೇಹದಿಂದ ಹೊರಹಾಕುತ್ತದೆ.
  • ನಿಂಬೆ ರಸವು ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಸಂಸ್ಥೆ ಪ್ರಕಟಿಸಿದ ಸಂಶೋಧನಾ ವರದಿ ತಿಳಿಸುತ್ತದೆ.
  • ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭಿಸುತ್ತವೆ. ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಿ:

ಓದುಗರಿಗೆ ಸೂಚನೆ: ಈ ವರದಿಯಲ್ಲಿರುವ ಎಲ್ಲ ಆರೋಗ್ಯ ಸಂಬಂಧಿತ ವಿಚಾರಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ಆಗಿರುತ್ತದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.