ETV Bharat / health

ಪೇರಲ Vs ಡ್ರ್ಯಾಗನ್ ಫ್ರೂಟ್: ಯಾವ ಹಣ್ಣು ಆರೋಗ್ಯಕ್ಕೆ ಉತ್ತಮ.. ಏನೇನೆಲ್ಲ ವಿಟಮಿನ್​ ಇವೆ ಗೊತ್ತೇ?, ಇದರಲ್ಲಿ ಯಾರು ವಿನ್ನರ್​? - GUAVA VS DRAGON FRUIT

ನಾವು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿರುವ ಹಣ್ಣುಗಳು ಆರೋಗ್ಯಕ್ಕೆ ಉತ್ತಮವೆಂದೇ ಭಾವಿಸಿ ಖರೀದಿ ಮಾಡುತ್ತೇವೆ. ಹಾಗಾದರೆ ಯಾವ ಹಣ್ಣು ಉತ್ತಮ, ಹಣ್ಣುಗಳ ಮೌಲ್ಯವನ್ನು ಬೆಲೆಯಿಂದ ಮಾತ್ರ ಅಲೆದರೆ ಸಾಕೇ? ಈ ಲೇಖನ ಓದಿ

author img

By ETV Bharat Karnataka Team

Published : Aug 9, 2024, 2:06 PM IST

Guava Vs Dragon Fruit
ಪೇರಲ Vs ಡ್ರ್ಯಾಗನ್ ಫ್ರೂಟ್ (ETV Bharat)

ನಮ್ಮ ಆರೋಗ್ಯಕ್ಕೆ ದಿನನಿತ್ಯದ ಆಹಾರದ ಜೊತೆಗೆ ಹಣ್ಣುಗಳನ್ನೂ ತಿನ್ನಬೇಕಾಗುತ್ತದೆ. ಸೀಸನಲ್​ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನವುದು ವೈದ್ಯರ ಸಲಹೆ. ಅದರಂತೆ ಯಾವ ಹಣ್ಣುಗಳು ಉತ್ತಮ ಎನ್ನುವುದನ್ನು ಅವುಗಳ ಬೆಲೆಯ ಹೊರತಾಗಿ, ಅವುಗಳು ಒದಗಿಸುವ ಪೋಷಕಾಂಶಗಳು, ಜೀವಸತ್ವಗಳು ಮತ್ತು ಆರೋಗ್ಯ ಪ್ರಯೋಜನಗಳ ಆಧಾರದ ಮೇಲೆ ನಾವು ಲೆಕ್ಕ ಹಾಕುತ್ತೇವೆ. ಪೇರಲ ಹಾಗೂ ಡ್ರ್ಯಾಗನ್​ ಹಣ್ಣುಗಳು ಎರಡರಲ್ಲೂ ಒಳ್ಳೆಯ ಪೋಷಕಾಂಶಗಳಿವೆ.

ನಮ್ಮ ಮನೆಗಳಲ್ಲಿ ಧಾರಾಳವಾಗಿ ಸಿಗುವ ಪೇರಲಕ್ಕೆ ಹೋಲಿಸಿದರೆ, ಮಾರುಕಟ್ಟೆಯಲ್ಲಿ ಸಿಗುವ ಡ್ರ್ಯಾಗನ್ ಫ್ರೂಟ್​ನ ರುಚಿ ಬಹುತೇಕ ಒಂದೇ. ಆದರೆ ಎರಡು ಹಣ್ಣುಗಳನ್ನು ಹೋಲಿಸಿದಾಗ ಪೇರಲ ಅಗ್ಗವಾಗಿದೆ. ಒಂದು ಡ್ರ್ಯಾಗನ್ ಫ್ರೂಟ್ ಖರೀದಿಸುವ ಬದಲು, ನೀವು ಒಂದು ಕಿಲೋ ಪೇರಲವನ್ನು ಖರೀದಿಸಬಹುದು. ಜೀವಸತ್ವಗಳು, ಖನಿಜಾಂಶಗಳು, ಕ್ಯಾಲೋರಿಗಳು ಮತ್ತು ಇತರ ಪ್ರಯೋಜನಗಳ ವಿಷಯದಲ್ಲಿ ಈ ಎರಡು ಹಣ್ಣುಗಳನ್ನು ಹೋಲಿಸಿದರೆ ಯಾವುದು ಉತ್ತಮ ಎಂಬುದು ನಿಮಗೆ ತಿಳಿದಿದೆಯೇ?

ಪೇರಲ: ಆರೋಗ್ಯದ ದೃಷ್ಟಿಯಿಂದ, ಪೇರಲ ಹಣ್ಣು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆಂಟಿಡಿಯರ್ಹೀಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಮಲಬದ್ಧತೆ ಪೀಡಿತರಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಪೇರಲ ಹಣ್ಣು ಸ್ಕರ್ವಿ ಚಿಕಿತ್ಸೆಗೆ ಸಹಾಯ ಮಾಡುವುದರ ಜೊತೆಗೆ ಭೇದಿಯಿಂದ ಬಳಲುತ್ತಿರುವ ಜನರಿಗೆ ಒಳ್ಳೆಯದು. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕೆಮ್ಮನ್ನು ಗುಣಪಡಿಸುತ್ತದೆ. ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟಗಳ ಜೊತೆಗೆ ಶೀತ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ತ್ವಚೆಯನ್ನು ಕಾಂತಿಯುತವಾಗಿರುಸುತ್ತದೆ. ಚರ್ಮದ ಕಾಯಿಲೆಗಳಿಗೆ ಚಿಕಿತ್ಸಾಕಾರಿಯಾಗಿ ಇದು ತುಂಬಾ ಉಪಯುಕ್ತವಾಗಿದೆ. ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಉಸಿರಾಟದ ತೊಂದರೆ ನಿವಾರಿಸುತ್ತದೆ. ಕೆಮ್ಮು, ಶೀತ, ಸೀನುವಿಕೆ, ಬಾಯಿ, ನಾಲಿಗೆ ಅಥವಾ ತುಟಿಗಳ ಊತ ಮತ್ತು ಗೊರಕೆ ಸಮಸ್ಯೆ ಇರುವವರಿಗೆ ಪೇರಲ ಒಳ್ಳೆಯದು.

ಡ್ರ್ಯಾಗನ್ ಹಣ್ಣು: ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ, ಡ್ರ್ಯಾಗನ್ ಹಣ್ಣು ಆಂಟಿ - ಆಕ್ಸಿಡೆಂಟ್, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಸಂಧಿವಾತವನ್ನು ನಿಗ್ರಹಿಸುತ್ತದೆ, ಸನ್​ ಬರ್ನ್ ಅನ್ನು ಗುಣಪಡಿಸುವುದರ ಜೊತೆಗೆ ಮೊಡವೆಗಳನ್ನು ತಡೆಯುತ್ತದೆ.

ಕಾರ್ಬೋಹೈಡ್ರೇಟ್‌ಗಳ ಶೇಕಡಾವಾರು:

  • ಪೇರಲ 14.30 ಗ್ರಾಂ
  • ಡ್ರ್ಯಾಗನ್ ಹಣ್ಣು 14.30 ಗ್ರಾಂ

ಫೈಬರ್ ಶೇಕಡಾವಾರು:

  • ಪೇರಲ 5.40 ಗ್ರಾಂ
  • ಡ್ರ್ಯಾಗನ್ ಹಣ್ಣು 1.00 ಗ್ರಾಂ

ಸಕ್ಕರೆ ಅಂಶ ಶೇಕಡಾವಾರು:

  • ಪೇರಲ 8.90 ಗ್ರಾಂ
  • ಡ್ರ್ಯಾಗನ್ ಹಣ್ಣು 9.00 ಗ್ರಾಂ

ಪ್ರೋಟೀನ್ ಶೇಕಡಾವಾರು:

  • ಪೇರಲ 2.50 ಗ್ರಾಂ
  • ಡ್ರ್ಯಾಗನ್ ಹಣ್ಣು 2.00 ಗ್ರಾಂ

ಕ್ಯಾಲ್ಸಿಯಂ ಶೇಕಡಾವಾರು:

  • ಪೇರಲ 18.00 ಮಿ.ಗ್ರಾಂ
  • ಡ್ರ್ಯಾಗನ್ ಹಣ್ಣು 8.80 ಗ್ರಾಂ

ಮೆಗ್ನೀಸಿಯಮ್ ಶೇಕಡಾವಾರು:

  • ಪೇರಲ 22.00 ಮಿ.ಗ್ರಾಂ.
  • ಡ್ರ್ಯಾಗನ್ ಹಣ್ಣು 0 ಗ್ರಾಂ

100 ಗ್ರಾಂ ಪೇರಲದಲ್ಲಿ 1.08 ಮಿಗ್ರಾಂ ವಿಟಮಿನ್ ಬಿ3 ಇರುತ್ತದೆ. ಆದರೆ, ಡ್ರ್ಯಾಗನ್ ಹಣ್ಣಿನಲ್ಲಿ ಕೇವಲ 0.16 ಮಿಗ್ರಾಂ ಮಾತ್ರ ಇರುತ್ತದೆ. ಪೇರಲದಲ್ಲಿ ವಿಟಮಿನ್ ಬಿ6, ಬಿ9, ಇ ಮತ್ತು ಕೆ ಹೆಚ್ಚಿನ ಪ್ರಮಾಣದಲ್ಲಿವೆ. ಪೇರಲದಲ್ಲಿರುವ ವಿಟಮಿನ್ ಸಿ 228 ಮಿಗ್ರಾಂ. ಡ್ರ್ಯಾಗನ್ ಹಣ್ಣಿನಲ್ಲಿ 9 ಮಿ.ಗ್ರಾಂ ಮಾತ್ರ. ಪೇರಲದಲ್ಲಿ ಖನಿಜಗಳು ಮತ್ತು ಪೊಟ್ಯಾಸಿಯಮ್ 417ಮಿ.ಗ್ರಾಂ ಆಗಿದೆ. ಅಂದರೆ ಡ್ರಾಗನ್ ಫ್ರೂಟ್‌ನಲ್ಲಿ ಆ ಸಂಖ್ಯೆ ಶೂನ್ಯ.

ಇದನ್ನೂ ಓದಿ: ಪ್ರೋಟೀನ್​ನ​ ಅಧಿಕ ಸೇವನೆಯಿಂದ ಕಿಡ್ನಿಗೆ ಹಾನಿಯೇ: ಹಾಗಾದರೆ ವೈದ್ಯರು ಹೇಳುವುದೇನು? - eating protein

ETV Bharat Logo

Copyright © 2024 Ushodaya Enterprises Pvt. Ltd., All Rights Reserved.