ETV Bharat / health

ತ್ವಚೆಯ ಸೌಂದರ್ಯ, ತೂಕ ನಷ್ಟ, ಮಧುಮೇಹಕ್ಕೆ ರಾಗಿ ಬೆಸ್ಟ್​ ಆಹಾರ: ತಜ್ಞರ ಸಲಹೆ - RAGI BEST FOOD FOR DIABETES

ರಾಗಿಯು ಆರೋಗ್ಯಕರ ಧಾನ್ಯಗಳಲ್ಲಿ ಒಂದಾಗಿದೆ. ರಾಗಿಯಲ್ಲಿ ಹಲವು ಪೋಷಕಾಂಶಗಳಿವೆ. ಚರ್ಮದ ಸೌಂದರ್ಯ, ತೂಕ ನಷ್ಟ, ಮಧುಮೇಹಕ್ಕೆ ಉತ್ತಮ ಆಹಾರ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

Finger millet for diabetes  diabetes  Finger millet benefits  ರಾಗಿಯ ಲಾಭಗಳು
ತ್ವಚೆಯ ಸೌಂದರ್ಯ, ತೂಕ ನಷ್ಟ, ಮಧುಮೇಹಕ್ಕೆ ರಾಗಿ ಬೆಸ್ಟ್​ ಆಹಾರ- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : March 28, 2025 at 1:47 PM IST

3 Min Read

Ragi Best Food for Diabetes: ರಾಗಿ ಗಂಜಿ ಹಾಗೂ ರಾಗಿಯಿಂದ ಮಾಡಿದ ವಿವಿಧ ಆಹಾರಗಳಲ್ಲಿ ಹಲವು ಪೋಷಕಾಂಶಗಳು ದೊರೆಯುತ್ತವೆ. ನಿತ್ಯ ಬೆಳಿಗ್ಗೆ ಒಂದು ಗ್ಲಾಸ್​ ಗಂಜಿ ಸೇವಿಸಿದರೆ, ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭಿಸುತ್ತವೆ. ನಿಮ್ಮನ್ನು ಆರೋಗ್ಯವಾಗಿ ಹಾಗೂ ಚೈತನ್ಯಶೀಲವಾಗಿಡುತ್ತದೆ. ಬೇಸಿಗೆಯಲ್ಲಿ ರಾಗಿಯಿಂದ ಮಾಡಿದ ಗಂಜಿ ಹಾಗೂ ವಿವಿಧ ಪಾನೀಯಗಳನ್ನು ಸೇವಿಸುವುದರಿಂದ ಬಿಸಿಲಿನ ತಾಪಮಾನದಿಂದ ಪರಿಹಾರ ಲಭಿಸುತ್ತದೆ. ರಾಗಿಯನ್ನು ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟದಲ್ಲಿ ಸೇಸಿದರೆ, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ರಾಗಿಯಿಂದ ಪಾನೀಯಗಳನ್ನು ಮಾತ್ರ ತಯಾರಿಸಿ ತಿನ್ನುವುದಲ್ಲದೆ, ದೋಸೆ, ಇಡ್ಲಿ, ಲಡ್ಡು, ಹಲ್ವಾ, ಪರೋಟ ಇತ್ಯಾದಿಗಳನ್ನು ರಾಗಿ ಹಿಟ್ಟಿನಿಂದ ತಯಾರಿಸಿ ತಿನ್ನಬಹುದು. ಜನರು ತಮ್ಮ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ರಾಗಿಯನ್ನು ಸೇವನೆ ಮಾಡಿದರೆ ಉತ್ತಮ. ಇದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

Finger millet for diabetes  diabetes  Finger millet benefits  ರಾಗಿಯ ಲಾಭಗಳು
ರಾಗಿ ಬೆಳೆ- ಸಾಂದರ್ಭಿಕ ಚಿತ್ರ (Getty Images)

ದೇಹದ ತೂಕ ನಿಯಂತ್ರಣ: ಅಧಿಕ ತೂಕದಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ರಾಗಿಯನ್ನು ಸೇರಿಸಿಕೊಳ್ಳುವ ಮೂಲಕ ತಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. 100 ಗ್ರಾಂ ರಾಗಿಯಲ್ಲಿ ಕೇವಲ 1.9 ಗ್ರಾಂ ಕೊಬ್ಬು ಇರುತ್ತದೆ. ಇದರಲ್ಲಿ ನಾರಿನಂಶವೂ ಹೇರಳವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಇದರಿಂದ ಹೊಟ್ಟೆ ತುಂಬಿದ ಭಾವನೆ ಲಭಿಸುತ್ತದೆ. ನೀವು ಅತಿಯಾಗಿ ತಿನ್ನುವ ಬಯಕೆಯನ್ನು ತಡೆಯುತ್ತದೆ.

ಮೂಳೆಗಳು ಸದೃಢ: ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. 100 ಗ್ರಾಂ ರಾಗಿಯಲ್ಲಿ 364 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ರಾಗಿಯನ್ನು ಸೇರಿಸುವುದರಿಂದ ಅದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಬಲಪಡಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

೨೦೧೮ರಲ್ಲಿ ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಾಗಿಯಿಂದ ಮಾಡಿದ ರೊಟ್ಟಿಗಳು ಮೂಳೆ ಸಾಂದ್ರತೆಯನ್ನು ಹೆಚ್ಚಿಸುವಲ್ಲಿ ಹಾಗೂ ಅವುಗಳನ್ನು ಬಲಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂಬುದು ತಿಳಿದಿದೆ. ಈ ಸಂಶೋಧನೆಯನ್ನು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಪ್ರಸಿದ್ಧ ಪೌಷ್ಟಿಕತಜ್ಞ ಡಾ.ಎಸ್.ವೆಂಕಟೇಶ್ ಬಾಬು ಪಾಲ್ಗೊಂಡಿದ್ದರು. ರಾಗಿಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಹೆಚ್ಚು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಹೇಳುತ್ತದೆ.

ಮಧುಮೇಹಿಗಳಿಗೆ ದಿವ್ಯ ಔಷಧ: ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ರಾಗಿಯನ್ನು ಮಧುಮೇಹಿಗಳಿಗೆ ಉತ್ತಮ ಔಷಧದಂತೆ ಕಾರ್ಯ ಮಾಡುತ್ತದೆ. ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ರಾಗಿ ತುಂಬಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮಟ್ಟ ಹೊಂದಿದೆ. ಮಧುಮೇಹಿಗಳು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ರಾಗಿಯನ್ನು ಸೇರಿಸಿದರೆ ಉತ್ತಮ ಲಾಭಗಳಿಸಲು ಸಾಧ್ಯವಾಗುತ್ತದೆ. ಪ್ರಮುಖವಾಗಿ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ರಾಗಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಆತಂಕ ಹಾಗೂ ಖಿನ್ನತೆ ತಡೆಯಲು ಸಹಾಯವಾಗುತ್ತದೆ.

ಮಧುಮೇಹಕ್ಕೆ ರಾಗಿ ಬೆಸ್ಟ್​ ಆಹಾರ - ಸಾಂದರ್ಭಿಕ ಚಿತ್ರ (Getty Images)

ಚರ್ಮದ ಸೌಂದರ್ಯ ಕಾಪಾಡುತ್ತೆ: ರಾಗಿ ಆಂತರಿಕ ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದೆ. ಇವುಗಳಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೀನಾಲಿಕ್ ಆಮ್ಲಗಳು ಬೇಗ ವಯಸ್ಸಾಗುವುದನ್ನು ತಡೆಯುತ್ತದೆ. ರಾಗಿಯಲ್ಲಿರುವ ವಿಟಮಿನ್ ಬಿ3 ಮತ್ತು ಅಮೈನೋ ಆಮ್ಲಗಳು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಚರ್ಮದ ಮೇಲಿನ ಸುಕ್ಕುಗಳನ್ನು ತಡೆಯುತ್ತವೆ ಎಂದು ವೈದ್ಯಕೀಯ ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

https://pmc.ncbi.nlm.nih.gov/articles/PMC10560538/

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.