ETV Bharat / health

ನಿರಂತರವಾಗಿ ಕಂಪ್ಯೂಟರ್ ವೀಕ್ಷಿಸಿದರೆ ನಿಮ್ಮ ಕಣ್ಣುಗಳಿಗೆ ಆಯಾಸವಾಗುತ್ತಿದೆಯೇ?: ಈ ಸಮಸ್ಯೆ ತಡೆಯಲು ತಜ್ಞರ ಟಿಪ್ಸ್​ ಹೀಗಿವೆ! - EYE STRAIN FROM COMPUTER VIEWING

Eye strain: ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ ಸೇರಿದಂತೆ ವಿವಿಧ ಡಿಜಿಟಲ್ ಸಾಧನಗಳ ಸ್ಕ್ರೀನ್​ಗಳನ್ನು ದೀರ್ಘಕಾಲ ನೋಡುವುದರಿಂದ ಕಣ್ಣುಗಳಿಗೆ ಹೆಚ್ಚು ಆಯಾಸವಾಗುತ್ತದೆ. ಕಣ್ಣಿನ ಈ ಸಮಸ್ಯೆಯನ್ನು ತಡೆಯಲು ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ...

Eye strain  ಕಣ್ಣುಗಳಿಗೆ ಆಯಾಸ  computer screen  Preventing eye fatigue
ನಿಮ್ಮ ಕಣ್ಣುಗಳಿಗೆ ಆಯಾಸವಾಗುತ್ತಿದೆಯೇ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : March 20, 2025 at 4:38 PM IST

3 Min Read

Eye strain from computer viewing: ಇಂದು ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳು ಜೀವನದ ಒಂದು ಭಾಗವಾಗಿಬಿಟ್ಟಿವೆ. ಕೆಲವು ಜನರ ಉದ್ಯೋಗಗಳು ಕಂಪ್ಯೂಟರ್​ಗಳ ಮೇಲೆ ಅವಲಂಬಿತವಾಗಿವೆ. ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವವರು ಪಿಸಿಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಡಿಜಿಟಲ್ ಸ್ಕ್ರೀನ್​ಗಳನ್ನು ದೀರ್ಘಕಾಲ ನೋಡುವುದರಿಂದ ಕಣ್ಣುಗಳಿಗೆ ಹೆಚ್ಚು ಆಯಾಸವಾಗುತ್ತದೆ. ಕೆಲವೊಮ್ಮೆ ಇವುಗಳನ್ನು ನೋಡುವುದರಿಂದಲೂ ನೋವಾಗಬಹುದು.

ಪಿಸಿಯೊಂದಿಗೆ ಕೆಲಸ ಮಾಡಲೇಬೇಕಾದವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ತುಂಬಾ ಪ್ರಕಾಶಮಾನವಾದ ಬೆಳಕಿನಲ್ಲಿ ಕೆಲಸ ಮಾಡುವುದರಿಂದ ನೋಡಲು ಕಷ್ಟವಾಗಬಹುದು. ಇದರಿಂದ ಕಣ್ಣುಗಳು ಬೇಗನೆ ಹಾಗೂ ತೀವ್ರವಾಗಿ ದಣಿಯುತ್ತವೆ. ಆದ್ದರಿಂದ ಅಗತ್ಯವಿರುಷ್ಟು ಬೆಳಕಿನ ಸೆಟ್ಟಿಂಗ್​ ಮಾಡಿ ಡಿಜಿಟಲ್ ಸಾಧನಗಳ ಬಳಕೆ ಮಾಡಬೇಕಾಗುತ್ತದೆ.

EYE STRAIN  ಕಣ್ಣುಗಳಿಗೆ ಆಯಾಸ  COMPUTER SCREEN  PREVENTING EYE FATIGUE
ನಿಮ್ಮ ಕಣ್ಣುಗಳಿಗೆ ಆಯಾಸವಾಗುತ್ತಿದೆಯೇ?- ಸಾಂದರ್ಭಿಕ ಚಿತ್ರ (Getty Images)

ನಿಮ್ಮ ತಲೆಯ ಮೇಲೆ ಬೀಳುವ ನೇರ ಬೆಳಕಾಗಿರಲಿ ಅಥವಾ ಕಿಟಕಿಯಿಂದ ಬೀಳುವ ಪ್ರಕಾಶಮಾನವಾದ ಸೂರ್ಯನ ಬೆಳಕಿಗೆ ಇರಲಿ, ಪರದೆಯನ್ನು ನೋಡುವಾಗ ನಿಮ್ಮ ಕಣ್ಣುಗಳು ಆಯಾಸಗೊಳ್ಳಬಹುದು. ಆದ್ದರಿಂದ ಇವುಗಳನ್ನು ತಪ್ಪಿಸಬೇಕು. ನಿಮಗಾಗಿ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ.

ಬೆಳಕಿನ ಅಗತ್ಯವಿದ್ದರೆ, ನೇರವಾಗಿರುವ ಕಿಟಕಿಯ ಬದಲು ಪಕ್ಕದಲ್ಲಿರುವ ಕಿಟಕಿಯಿಂದ ಬೆಳಕು ಬರುವಂತೆ ನೋಡಿಕೊಳ್ಳಿ. ಕಿಟಕಿಗೆ ಎದುರಾಗಿ ಅಥವಾ ಕಿಟಕಿಗೆ ಬೆನ್ನು ಹಾಕಿ ಕುಳಿತುಕೊಳ್ಳಬೇಡಿ. ಪರದೆಗಳನ್ನು ಹಾಕುವ ಮೂಲಕ ನೀವು ಹೊರಗಿನ ಬೆಳಕನ್ನು ಕಡಿಮೆ ಮಾಡಬಹುದು.

ಆ್ಯಂಟಿ-ಗ್ಲೇರ್ ಸ್ಕ್ರೀನ್​: ಡಿಸ್​ಪ್ಲೇನಲ್ಲಿರುವ ಆ್ಯಂಟಿ-ಗ್ಲೇರ್ ಸ್ಕ್ರೀನ್​ ಪರದೆಯು ಕಣ್ಣಿಗೆ ಆರಾಮದಾಯಕವಾಗಿದೆ. ನೀವು ಕನ್ನಡಕವನ್ನು ಧರಿಸಿದರೆ, ಪ್ರತಿಫಲಿತ ವಿರೋಧಿ ಲೇಪನವಿರುವ ಕನ್ನಡಕವನ್ನು ಆಯ್ಕೆ ಮಾಡಿಕೊಳ್ಳಿ. ಇದು ಪರದೆಯಿಂದ ಪ್ರತಿಫಲಿಸುವ ಬೆಳಕು ಕಣ್ಣಿಗೆ ಹೆಚ್ಚು ತಲುಪುವುದನ್ನು ತಡೆಯುತ್ತದೆ.

ನೀವು ಕಂಪ್ಯೂಟರ್ ಪರದೆಯಲ್ಲಿ ಮುದ್ರಿತ ಪುಟವನ್ನು ವೀಕ್ಷಿಸಬೇಕಾದರೆ, ಪುಟವನ್ನು ಪರದೆಯ ಪಕ್ಕದಲ್ಲಿರುವ ಸ್ಟ್ಯಾಂಡ್‌ನಲ್ಲಿ ಇರಿಸಿ. ಸ್ಟ್ಯಾಂಡ್ ಮೇಲೆ ಸಾಕಷ್ಟು ಬೆಳಕು ಇದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಮೇಜಿನ ದೀಪವನ್ನು ಬಳಸುತ್ತಿದ್ದರೆ, ಅದರಿಂದ ಬರುವ ಬೆಳಕು ನಿಮ್ಮ ಕಣ್ಣುಗಳ ಮೇಲೆ ಅಥವಾ ಕಂಪ್ಯೂಟರ್ ಪರದೆಯ ಮೇಲೆ ಬೀಳದಂತೆ ನೋಡಿಕೊಳ್ಳಿ.

ಅಂತಹ ಪರದೆಗಳನ್ನು ದಿಟ್ಟಿಸಿ ನೋಡುವುದು ಸೂಕ್ತವಲ್ಲ. ಪ್ರತಿ 20 ನಿಮಿಷಗಳಿಗೊಮ್ಮೆ, ದೂರ ನೋಡಿ ಮತ್ತು ಕನಿಷ್ಠ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ವಸ್ತುಗಳನ್ನು ನೋಡಿ. ಇದು ಕಣ್ಣಿನಲ್ಲಿರುವ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಆಯಾಸ ಕಡಿಮೆಯಾಗುತ್ತದೆ.

ವಿರಾಮ ತೆಗೆದುಕೊಳ್ಳಲು ಸಲಹೆ: ಕೆಲಸದಿಂದ ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ. ಪ್ರತಿ ಗಂಟೆಗೆ ಕನಿಷ್ಠ 10 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು. ಇದು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಕುತ್ತಿಗೆ, ಬೆನ್ನು ಮತ್ತು ಭುಜದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಡಿಸ್​ಪ್ಲೇ ಸೆಟ್ಟಿಂಗ್‌: ಡಿಸ್​ಪ್ಲೇ ಸೆಟ್ಟಿಂಗ್‌ಗಳನ್ನು ಮಾಡಿಕೊಳ್ಳುವುದು ಸಹ ಉಪಯುಕ್ತವಾಗಿದೆ. ಸುತ್ತಮುತ್ತಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಡಿಸ್​ಪ್ಲೇ ಲೈಟ್​ನ್ನು ಸೆಟ್​ ಮಾಡಬೇಕಾಗುತ್ತದೆ. ವೆಬ್ ಪುಟದಲ್ಲಿ ಬಿಳಿ ಪ್ರದೇಶವು ಪ್ರಕಾಶಮಾನವಾಗಿ ಕಂಡುಬಂದರೆ, ಅದನ್ನು ಮಂದ ಮತ್ತು ಬೂದು ಬಣ್ಣದಲ್ಲಿರುವಂತೆ ಸೆಟ್​ ಮಾಡಹುದು. ಇದನ್ನು ಡಾರ್ಕ್​ ಮೋಡ್​ ಇಡಬೇಕಾಗುತ್ತದೆ. ಪಠ್ಯದ ಗಾತ್ರ ಮತ್ತು ಕಾಂಟ್ರಾಸ್ಟ್ ಅನ್ನು ಆರಾಮದಾಯಕವಾಗುವಂತೆ ಸೆಟ್ಟಿಂಗ್​ ಮಾಡಬೇಕಾಗುತ್ತದೆ.

ದೂರ- ಸಮೀಪದ ವಸ್ತಗಳನ್ನು ವೀಕ್ಷಿಸಿ: 10ರಿಂದ 15 ಸೆಕೆಂಡುಗಳ ಕಾಲ ದೂರದ ವಸ್ತುಗಳನ್ನು ನೋಡಿ, ನಂತರ ತಕ್ಷಣ 10 ರಿಂದ 15 ಸೆಕೆಂಡುಗಳ ಕಾಲ ಹತ್ತಿರದ ವಸ್ತುಗಳ ಮೇಲೆ ಗಮನಹರಿಸಿ. ಇದನ್ನು ಹತ್ತು ಬಾರಿ ಮಾಡಿ. ಇದು ಪರದೆಗಳನ್ನು ನೋಡುವಾಗ ಬಿಗಿಯಾಗುವ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಕಣ್ಣುಗಳನ್ನು ಮಿಟುಕಿಸುವುದು ಉತ್ತಮ: ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮಿಟುಕಿಸಿ. ನಿಮ್ಮ ಕಣ್ಣುಗಳು ಒಣಗದಂತೆ ಮತ್ತು ಕಿರಿಕಿರಿಗೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ನಿಮ್ಮ ಕಣ್ಣುಗಳು ಕಿರಿಕಿರಿಗೊಂಡರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಕೃತಕ ಕಣ್ಣೀರಿನ ಹನಿಗಳು ಪರಿಹಾರ ನೀಡುತ್ತವೆ. ಪ್ರತಿ 20 ನಿಮಿಷಗಳಿಗೊಮ್ಮೆ ನಿಮ್ಮ ಕಣ್ಣುರೆಪ್ಪೆಗಳನ್ನು ನಿಧಾನವಾಗಿ 10 ಬಾರಿ ಮಿಟಿಕಿಸಬೇಕು. ನೀವು ಮಲಗಿರುವಾಗ ನಿಮ್ಮ ಕಣ್ಣುಗಳನ್ನು ಮಿಟಿಕಿಸಿದರೆ ಉತ್ತಮ.

ಪಿಸಿ ಸ್ಕೀನ್​- ಕಣ್ಣುಗಳ ನಡುವೆ ಅಂತರ: ಪಿಸಿ ಸ್ಕೀನ್​ ಹಾಗೂ ಕಣ್ಣುಗಳ ನಡುವಿನ ಅಂತರ 20 ರಿಂದ 24 ಇಂಚುಗಳಾಗಿರಬೇಕು. ಪರದೆಯ ಮಧ್ಯಭಾಗವು ಕಣ್ಣುಗಳಿಗಿಂತ ಸುಮಾರು 10 ರಿಂದ 15 ಡಿಗ್ರಿ ಕೆಳಗೆ ಇರಬೇಕು. ಇದು ನಿಮ್ಮ ತಲೆ ಮತ್ತು ಕುತ್ತಿಗೆಯನ್ನು ತುಂಬಾ ಕೆಳಕ್ಕೆ ಅಥವಾ ತುಂಬಾ ಎತ್ತರಕ್ಕೆ ಓರೆಯಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಕಣ್ಣುಗಳನ್ನು ಅತಿಯಾದ ಒತ್ತಡದಿಂದ ರಕ್ಷಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

https://www.aao.org/eye-health/tips-prevention/computer-usage

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಇದನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ಈ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.