ETV Bharat / health

ನಿಮ್ಮ ಮನೆಯಲ್ಲಿ ಜಿರಳೆಗಳ ಕಾಟವಿದೆಯೇ?: ನೀವು ಹೀಗೆ ಮಾಡಿ ಸಾಕು, ಅಲ್ಲಿಂದ ದೂರ ಓಡುತ್ತವೆ! - How to Get Rid of Cockroaches

How to Get Rid of Cockroaches: ನಿಮ್ಮ ಮನೆಯು ಜಿರಳೆಗಳಿಂದ ಮುತ್ತಿಕೊಂಡಿವೆಯೇ? ಅವುಗಳನ್ನು ಹಿಮ್ಮೆಟ್ಟಿಸಲು ಎಷ್ಟು ವಿವಿಧ ಸ್ಪ್ರೇಗಳನ್ನು ಬಳಸಿದರೂ ಕಾಟ ಮಾತ್ರ ಕಡಿಮೆಯಾಗುತ್ತಿವೆ? ಹಾಗಾದರೆ, ಒಮ್ಮೆ ಈ ಟಿಪ್ಸ್ ಟ್ರೈ ಮಾಡಿ ನೋಡಿ. ಜಿರಳೆಗಳನ್ನು ಮನೆಯಿಂದ ಸುಲಭವಾಗಿ ಓಡಿಸಬಹುದು ಎನ್ನುತ್ತಾರೆ ತಜ್ಞರು. ಇದೀಗ ಈ ಸಲಹೆಗಳು ಯಾವುವು ಎಂಬುದನ್ನು ತಿಳಿಯಲು ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

author img

By ETV Bharat Health Team

Published : Sep 18, 2024, 6:59 PM IST

EASY TIPS TO AVOID COCKROACHES  HOW TO AVOID COCKROACHES  COCKROACH NATURAL REPELLENTS  NATURAL WAYS TO KILL COCKROACHES
ಸಾಂದರ್ಭಿಕ ಚಿತ್ರ (ETV Bharat)

Easy Tips to Avoid Cockroaches at Home: ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಮೂಲೆಗಳಲ್ಲಿ ಅಡಗಿ ಕುಳಿತಿರುತ್ತವೆ. ರಾತ್ರಿ ವೇಳೆಯಲ್ಲಿ ಜಿರಳೆಗಳು ಅಡುಗೆ ಮನೆಗೆ ನುಗ್ಗುತ್ತವೆ. ಇವುಗಳೊಂದಿಗೆ ನೇರ ಅಪಾಯ ಇಲ್ಲದಿದ್ದರೂ, ಅವು ಹಾನಿಕಾರಕ ಸೂಕ್ಷ್ಮಜೀವಿಗಳ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಸಂಖ್ಯೆಯ ಜಿರಳೆಗಳು ಮನೆ ಸುತ್ತಲೂ ತಿರುಗಾಡುವುದು ಕಿರಿಕಿರಿಯುಂಟು ಮಾಡುತ್ತದೆ.

ನಾವು ತಿನ್ನುವ ಆಹಾರದಲ್ಲಿ ಆಕಸ್ಮಿಕವಾಗಿ ಬಿದ್ದರೆ, ನಾವು ಅದನ್ನು ತಿನ್ನಲು ಆಗುವುದಿಲ್ಲ. ಗೊತ್ತಿಲ್ಲದೇ ತಿಂದರೆ ಮಾತ್ರ ಕಾಯಿಲೆ ಬರುವುದು ಖಚಿತ. ಅದಕ್ಕಾಗಿಯೇ ಅನೇಕರು ಸ್ಪ್ರೇಗಳನ್ನು ಬಳಸಿ ಜಿರಳೆಗಳನ್ನು ಸಾಯಿಸುತ್ತಾರೆ. ಆದರೆ, ಈ ಸ್ಪ್ರೇಗಳಲ್ಲಿರುವ ಕೆಮಿಕಲ್ಸ್​ ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ಜಿರಳೆಗಳನ್ನು ಹಿಮ್ಮೆಟ್ಟಿಸಲು ಕೆಲವು ನೈಸರ್ಗಿಕ ಟಿಪ್ಸ್​​ ಸೂಚಿಸಲಾಗುತ್ತದೆ.

ಮನೆಯ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ: ಜಿರಳೆಗಳು ಹೆಚ್ಚು ಬಳಸದ ಮತ್ತು ಹೆಚ್ಚಿನ ಆರ್ದ್ರತೆ ಹೊಂದಿರುವ ಸ್ಥಳಗಳಲ್ಲಿ ಗೂಡುಕಟ್ಟುತ್ತವೆ. ಹಾಗಾಗಿ.. ಬೀರುಗಳು ಮತ್ತು ಅಡುಗೆಮನೆಯ ಸಿಂಕ್ ಪ್ರದೇಶಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಹಾಗೆಯೇ.. ಮನೆಯಲ್ಲಿ ಎಲ್ಲಿಯಾದರೂ ರಂಧ್ರಗಳು, ಬಿರುಕುಗಳು, ಒಡೆದ ಪೈಪ್‌ಗಳನ್ನು ಮೊದಲು ಮುಚ್ಚಬೇಕು. ಇದರಿಂದಾಗಿ ಜಿರಳೆಗಳು ಅಲ್ಲಿ ನೆಲೆ ಸ್ಥಾಪಿಸುವುದಿಲ್ಲ ಎನ್ನುತ್ತಾರೆ ತಜ್ಞರು.

ಬೇವು: ಜಿರಳೆ ಮತ್ತು ಇತರ ಕೀಟಗಳನ್ನು ಮನೆಯಿಂದ ಹೊರಹಾಕಲು ಬೇವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜಿರಳೆಗಳು ಹೆಚ್ಚು ಓಡಾಡುವ ಪ್ರದೇಶದಲ್ಲಿ ಈ ಬೇವಿನ ಎಲೆಗಳನ್ನು ನಿತ್ಯ ಹಾಕಿ ಹಾಗೂ ಅವುಗಳನ್ನು ಆಗಾಗ ಬದಲಾಯಿಸಿ. ಮೂರು ದಿನಗಳಲ್ಲಿ ಉತ್ತಮ ಫಲಿತಾಂಶ ನೋಡಬಹುದು. ಇಲ್ಲವಾದರೆ ರಾತ್ರಿ ಮಲಗುವ ಮುನ್ನ ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಬೇವಿನ ಪುಡಿ ಅಥವಾ ಬೇವಿನ ಎಣ್ಣೆಯನ್ನು ಹಚ್ಚಬೇಕು. ಇವುಗಳಿಗೆ ಜಿರಳೆ ಮೊಟ್ಟೆಗಳನ್ನು ಕೊಲ್ಲುವ ಶಕ್ತಿಯಿದೆ. ಬೇವಿನ ಎಣ್ಣೆಗೆ ಸ್ವಲ್ಪ ಬಿಸಿ ನೀರು ಸೇರಿಸಿ ಸಿಂಪಡಿಸಿ.

ವೈಟ್​ ವಿನೆಗರ್: ಜಿರಳೆಗಳನ್ನು ಓಡಿಸುವಲ್ಲಿ ವೈಟ್ ​ವಿನೆಗರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ, ಒಂದು ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದ ನೀರು ಮತ್ತು ವೈಟ್​ ವಿನೆಗರ್ ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಜಿರಳೆಗಳು ಓಡಾಡುವ ಸ್ಥಳದಲ್ಲಿ ಮಿಶ್ರಣವನ್ನು ಸಿಂಪಡಿಸಿ.

ಅಡುಗೆ ಸೋಡಾ: ಜಿರಳೆಗಳನ್ನು ತಡೆಯಲು ಇದು ತುಂಬಾ ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಸಣ್ಣ ಬಟ್ಟಲಿನಲ್ಲಿ ಅಡುಗೆ ಸೋಡಾ ಮತ್ತು ಸಕ್ಕರೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಮಿಶ್ರಣ ಮಾಡಿ. ನಂತರ ಜಿರಳೆ ಸಮಸ್ಯೆ ಇರುವಲ್ಲಿ ಸಿಂಪಡಿಸಿ. ಇದರಲ್ಲಿರುವ ಸಕ್ಕರೆ ಜಿರಳೆಗಳನ್ನು ಆಕರ್ಷಿಸುತ್ತದೆ. ಈ ಮಿಶ್ರಣವನ್ನು ತಿಂದ ಜಿರಳೆಗಳು ಸಾಯುತ್ತವೆ ಎನ್ನುತ್ತಾರೆ ತಜ್ಞರು.

ಲವಂಗ: ಜಿರಳೆಗಳನ್ನು ತೊಡೆದುಹಾಕಲು ಲವಂಗವು ಅತ್ಯುತ್ತಮ ಮನೆಮದ್ದು ಎಂದು ಹೇಳಬಹುದು. ಇದು ಯಾವುದೇ ಹೆಚ್ಚುವರಿ ಪ್ರಯತ್ನದ ಅಗತ್ಯ ಇರುವುದಿಲ್ಲ. ಲವಂಗವನ್ನು ಓಡಾಡುವ ಜಾಗದಲ್ಲಿ ಇಡಿ ಸಾಕು ಎನ್ನುತ್ತಾರೆ ತಜ್ಞರು.

ಬೇ ಎಲೆ/ಬಿರಿಯಾನಿ ಎಲೆ: ಬೇ ಎಲೆಗಳನ್ನು ಒಣ ಅಥವಾ ಪ್ರತ್ಯೇಕ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ. ನಂತರ ಆ ನೀರನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ಜಿರಳೆಗಳು ತಿರುಗುವ ಸ್ಥಳದಲ್ಲಿ ಸಿಂಪಡಿಸಿ. ಜಿರಳೆಗಳು ಆ ವಾಸನೆ ಇಷ್ಟಪಡುವುದಿಲ್ಲ. ಹಾಗಾಗಿ ಅವು ಮನೆಯಿಂದ ಹೊರ ಹೋಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಇತರ ಉಪಾಯಗಳು: ಅದೇ ರೀತಿ.. ಕರಿಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಜಿರಳೆಗಳಿಗೆ ಓಡಾಡುವ ಪ್ರದೇಶದಲ್ಲಿ ಹಚ್ಚುವುದರಿಂದ ಅವುಗಳು ಮನೆ ಬಿಟ್ಟು ಹೊರಗೆ ಹೋಗುತ್ತವೆ. ಇಲ್ಲವಾದರೆ ಹೆಚ್ಚು ಜಿರಳೆ ಇರುವ ಕಡೆ ಹೇರ್ ಸ್ಪ್ರೇ ಮಾಡಿದರೂ ಒಳ್ಳೆಯ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ತಜ್ಞರು.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.