ETV Bharat / health

ಜಸ್ಟ್​ ನಿಮ್ಮ ನಡಿಗೆ ಹೇಳುತ್ತೆ ನೀವೆಷ್ಟು ಸದೃಢವಾಗಿದ್ದೀರಿ ಅಂತಾ!; ಅದು ಹೇಗೆ ಅಂತೀರಾ? - HEALTH THROUGH WALKING

author img

By ETV Bharat Karnataka Team

Published : Aug 8, 2024, 12:19 PM IST

ನಡೆಯುವಾಗ ಕಾಲಿನ ಸ್ನಾಯು, ಕೈಗಳು, ಹೊಟ್ಟೆ, ಬೆನ್ನು ಸೇರಿದಂತೆ ದೇಹದ ಹಲವು ಭಾಗಗಳು ಮೆದುಳಿಗೆ ಒಂದು ಸೂಚನೆ​ಯನ್ನು ಪಾಸ್ ಮಾಡುತ್ತದೆ. ಇದು ಕೇವಲ ಕಾಲಿನ ಕೆಲಸವಲ್ಲ, ಮನಸಿನ ಭಾವನೆಯನ್ನೂ ಆಧರಿಸಿದೆ.

Ease of walking and walking speed are all indicators of our health
ಸಾಂದರ್ಭಿಕ ಚಿತ್ರ (Getty Images)

ಹೈದರಾಬಾದ್​: ನಡಿಗೆ ಎಂಬುದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸಬಹುದು. ಆದರೆ, ವಾಸ್ತವದಲ್ಲಿ ಇದು ಸಂಕೀರ್ಣ ಪ್ರಕ್ರಿಯೆ. ಕಾಲಿನ ಸ್ನಾಯು, ಕೈಗಳು, ಹೊಟ್ಟೆ, ಬೆನ್ನು ಸೇರಿದಂತೆ ದೇಹದ ಹಲವು ಭಾಗಗಳು ಈ ಪ್ರಕ್ರಿಯೆಯಲ್ಲಿ ಮೆದುಳಿಗೆ ಒಂದು ಸೂಚನೆ​ ಪ್ರಸರಣ ಮಾಡುತ್ತದೆ. ನಿಧಾನ ಮತ್ತು ವೇಗದ ನಡಿಗೆಗಳು ಆರೋಗ್ಯದ ಸೂಚಕವಾಗಿದೆ. ಜೊತೆಗೆ ನಡಿಗೆಯ ಗತಿ ವಯಸ್ಸಿನ ಕುರಿತು ತಿಳಿಸುತ್ತದೆ.

ಆರೋಗ್ಯದ ಗುಟ್ಟು: ವಯಸ್ಸಾದಂತೆ ನೈಸರ್ಗಿಕವಾಗಿ ದೇಹದಲ್ಲಿ ಬದಲಾವಣೆ ಆಗುತ್ತದೆ. 60ರ ಬಳಿಕ ನಡಿಗೆಯ ವೇಗ ತಗ್ಗುವುದು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಈ ಸಮಯದಲ್ಲಿ ನೀವು ಮುಂದಕ್ಕೆ ಅಥವಾ ಹಿಂದೆಕ್ಕೆ ಏಕಕಾಲದಲ್ಲಿ ಬೀಳುತ್ತಿದ್ದೀರಾ ಎಂದರೆ ಎಚ್ಚರವಹಿಸುವುದು ತೀರಾ ಎಂದರೆ ತೀರಾ ಅಗತ್ಯವಾಗಿದೆ.

Ease of walking and walking speed are all indicators of our health
ನಡಿಗೆಯಿಂದಲೇ ಕಂಡು ಹಿಡಿಯಬಹುದು ನಿಮ್ಮ ಆರೋಗ್ಯ (Getty Images)

ನಡೆಯುವಾಗ ನೀವು ತೊಂದರೆ ಅನುಭವಿಸುತ್ತಿದ್ದೀರಿ ಎಂದರೆ, ನಡೆಯಲು ಮುಂದಾಗಬೇಡಿ. ಈ ಸಂಬಂಧ ತಕ್ಷಣಕ್ಕೆ ವೈದ್ಯರ ಭೇಟಿಯಾಗಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸಮಯೋಚಿತ ನಿರ್ಧಾರ. ವಯಸ್ಸಿನ ಜೊತೆಗೆ ದೇಹದ ಗುಣಮಟ್ಟ, ಬಲ ಮತ್ತು ಸ್ನಾಯುವಿನ ಪ್ರಮಾಣ ಕೂಡ ಕುಸಿಯುತ್ತದೆ. ಇದನ್ನು ಸಾರ್ಕೊಪೆನಿಯಾ ಎಂದು ಕರೆಯಲಾಗುವುದು. ಇದು 40ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಮತ್ತೊಂದೆಡೆ ನರ ವ್ಯವಸ್ಥೆ ಕೂಡ ಕುಗ್ಗುತ್ತದೆ.

ನರಗಳ ಕಾರ್ಯಾಚರಣೆ ಮತ್ತು ದೇಹದಲ್ಲೆಡೆ ಹರಡಿರುವ ನರ ಕೋಶಗಳು ಕೂಡ ಕುಗ್ಗುತ್ತದೆ. 20 ರಿಂದ 60 ವರ್ಷದ ನಡುವೆ ನರಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ 0.1ರಷ್ಟು ಕುಗ್ಗುತ್ತದೆ. 60 ವರ್ಷಗಳ ಬಳಿಕ ಇದರ ಕುಗ್ಗುವಿಕೆ ದರ ಹೆಚ್ಚುತ್ತದೆ.

ಯಾರಾದರೂ 90 ವರ್ಷದವರೆಗೆ ಬದುಕಿದರೆ ಅವರ ಮೆದುಳಿನ ಅಂಗಾಂಶದ ತೂಕ 150 ಗ್ರಾಂ ಇರುತ್ತದೆ. ಅಂದರೆ, 50 ವರ್ಷಕ್ಕಿಂತ ಕಡಿಮೆ. ಇದೇ ಕಾರಣಕ್ಕೆ ನಡಿಗೆಯನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸೂಚಕ ಎಂದು ಗಮನಿಸಲಾಗುವುದು. ಇದನ್ನು ಅಧ್ಯಯನಗಳು ಇವುಗಳನ್ನು ಬಹಿರಂಗಪಡಿಸಿದೆ.

ನರ ಅಭಿವೃದ್ಧಿ ಸಮಸ್ಯೆ: ನಡಿಗೆಯ ವೇಗ ತಗ್ಗುವಿಕೆ ಮತ್ತು ಸರಾಗವಾದ ಚಲನೆಯ ನಷ್ಟವನ್ನು ಪಾರ್ಕಿನ್ಸನ್​ನಂತಹ ನರ ಅಭಿವೃದ್ಧಿ ಸಮಸ್ಯೆ ಆರಂಭಿಕ ಹಂತ ಎಂದು ಗುರುತಿಸಲಾಗುವುದು. ಪಾರ್ಕಿನ್ಸನ್​ ಸಮಸ್ಯೆಯಲ್ಲಿ ಮೂಳೆಗಳೊಂದಿಗೆ ಹೊಂದಿಕೆಯಾಗಿರುವ ಸ್ನಾಯುಗಳು ಮಿದುಳಿಗೆ ಸಿಗ್ನಲ್​ ನೀಡುವುದಲ್ಲೆ ಅಡ್ಡಿಯನ್ನುಂಟು ಮಾಡುತ್ತದೆ. ಇದು ನಿಧಾನಗತಿ ಚಲನೆಗೆ ಕಾರಣವಾಗುತ್ತದೆ.

ಇದರ ಹೊರತಾಗಿ, ನಡಿಗೆ ಸರಾಗತೆ ಹೊಂದುವುದಿಲ್ಲ. ಸ್ಥಿರತೆ ಕಾಣವುದಿಲ್ಲ. ಇದು ಪಾರ್ಕಿನ್ಸನ್​ ಆರಂಭಿಕ ಹಂತದ ಲಕ್ಷಣವಾಗಿದೆ. ನರಗಳ ಕುಗ್ಗುವಿಕೆಯಿಂದ ಅಂಗಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ಅಂಗಾಂಗಗಳ ಚಲನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಮುಂದಕ್ಕೆ ಬಾಗುವಿಕೆ: ಮುಂದಕ್ಕೆ ನಡೆಯಬೇಕಾದರೆ ಮೊಣಕಾಲನ್ನು ಎತ್ತಿ ಪಾದವನ್ನು ಮುಂದೆ ಇಡಬೇಕು. ಮುಂದಕ್ಕೆ ನಡೆಯುವಾಗ ಪಾದಗಳ ಬದಲಾಗಿ ಕಾಲ್ಬೆರಳುಗಳನ್ನು ಮೊದಲಿಗೆ ಕೆಳಗೆ ಇಡುತ್ತದೆ. ಮಧುಮೇಹದಿಂದಲೂ ನರ ಸಮಸ್ಯೆಗೆ ಒಳಗಾದ ಜನರಲ್ಲಿ ಇದನ್ನು ಕಾಣಬಹುದಾಗಿದೆ. ಜೊತೆಗೆ ದೀರ್ಘಕಾಲದ ಅಡ್ಡಗಾಗಲಿ ಹಾಕುವುದು ಅಥವಾ ಕೆಲವು ನಿರ್ದಿಷ್ಟ ಯೋಗದ ಭಂಗಿಗಳು ಇದಕ್ಕೆ ಕಾರಣವಾಗಬಹುದು.

ಕೆಲವರು ನಡೆಯುವಾಗ ಪೃಷ್ಟದ ಸ್ನಾಯುಗಳು ಕೂಡ ನೋವು ಅನುಭವಿಸುತ್ತದೆ. ಈ ನೋವು ಕಾಲಿನವರೆಗೆ ಹರಡುತ್ತದೆ. ಈ ನೋವು ಎದೆಗೆ ಕೂಡ ಹರಡಬಹುದು ನಡಿಗೆ ನಿಲ್ಲಿಸಿದಾಕ್ಷಣ ಈ ನೋವು ಕಡಿಮೆಯಾಗುತ್ತದೆ.

ನಡೆಯುವಾಗ ಅಥವಾ ನಡಿಗೆ ನಿಲ್ಲಿಸಿದಾಗ ಕಾಣುವ ನೋವು ಕ್ಲಾಡಿಕೇಶನ್​ ಆಗಿದೆ. ಒಳಗಿನ ರಕ್ತನಾಳಗಳು ಕಿರಿದಾದಾಗ ಕಾಲಿಗೆ ರಕ್ತದ ಪೂರೈಕೆ ಕಡಿಮೆಯಾಗಿತ್ತದೆ. ಓಡುವಾಗ ನಿಮ್ಮ ಕಾಲಿನ ಸ್ನಾಯುಗಳಿಗೆ ಹೆಚ್ಚಿವ ಆಮ್ಲಜನಕಬೇಕಿದೆ. ಸಾಕಷ್ಟು ಪ್ರಮಾಣದ ರಕ್ತದ ಪೂರೈಕೆಯಾಗದಿದ್ದಲ್ಲಿ ಆಕ್ಸಿಜನ್​ ಕೂಡ ಲಭ್ಯವಾಗುವುದಿಲ್ಲ.

ಸ್ನಾಯುಗಳಲ್ಲಿನ ಆಕ್ಸಿಜನ್​ ಕೊರತೆಯಿಂದಾಗಿ ಲ್ಯಾಕ್ಟಿಕ್​ ಆಮ್ಲ ಬಿಡುಗಡೆಯಾಗಬೇಕಾಗುತ್ತದೆ. ಇದು ಸ್ನಾಯುವನ್ನು ಮತ್ತಷ್ಟು ಬಿಗಿಗೊಳಿಸುತ್ತದೆ. ನಡಿಗೆ ನಿಲ್ಲಿಸಿದಾಗ ಈ ಆಮ್ಲಜನಕವೂ ಸಾಕಷ್ಟು ಬೇಕಾಗುವುದಿಲ್ಲ. ಇದರಿಂದ ನೋವು ನಿವಾರಣೆ ಆಗುತ್ತದೆ. ಧೂಮಪಾನ, ಅಧಿಕ ಕೊಲೆಸ್ಟ್ರಾಲ್ , ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ರಕ್ತನಾಳ ಸಮಸ್ಯೆ ಜೊತೆ ಜೊತೆಗೆ ಕುಟುಂಬದ ಇತಿಹಾಸವೂ ಕಾಲಿನ ಅಸ್ಥಿವಾತಕ್ಕೆ ಕಾರಣವಾಗಬಹುದು.

ವಿಟಮಿನ್​ ಕೊರತೆ: ವಿಟಮಿನ್​ ಬಿ12 ಕೊರತೆ ಕೂಡ ನಡಿಗೆಯ ವೇಗದ ಮೇಲೆ ಪರಿಣಾಮ ಬೀರುತ್ತದೆ. ವಯಸ್ಕರಲ್ಲಿ ವಿಟಮಿನ್​ ಬಿ 12 ಕೊರತೆ ಲಕ್ಷಣ ಕಾಣಿಸಲು ತಿಂಗಳು ಅಥವಾ ವರ್ಷವೇ ಆಗಬಹುದು. ಆದರೆ, ಬೆಳೆಯುತ್ತಿರುವ ಮಕ್ಕಳಲ್ಲಿ ಕಡಿಮೆ ಅವಧಿಯಲ್ಲಿಯೇ ಕಾರಣವಾಗುತ್ತದೆ. ಕಾರಣ ನರ ವ್ಯವಸ್ಥೆಯನ್ನು ರಕ್ಷಣೆ ಮಾಡುವಲ್ಲಿ ಬಿ 12 ಪ್ರಮುಖ ಪಾತ್ರವನ್ನು ಹೊಂದಿದೆ.

ಒಳ್ಳೆಯ ಅಂಶಗಳನ್ನು ಸುಲಭವಾಗಿ ಶಮನ ಮಾಡಬಹುದು. ಅಗತ್ಯವಿದ್ದಲ್ಲಿ ಮಾತ್ರೆಗಳ ಬದಲಾಗಿ ಇಂಜೆಕ್ಷನ್​, ಬಿ 12 ಸಮೃದ್ಧಿಯ ಮಾಂಸ, ಮೀನು, ಮೊಟ್ಟೆ, ಮೊಸಲು ಮತ್ತು ಮಜ್ಜಿಗೆಯ ಆಹಾರಗಳು ಪ್ರಯೋಜನಕಾರಿಯಾಗಿದೆ.

ಒಳಗಿನ ಕಿವಿ ಚುಚ್ಚುಮದ್ದು: ಕಿವಿ ಒಳಗಿನ ಸಮಸ್ಯೆಗಳು ಕೂಡ ಕೆಲವೊಮ್ಮೆ ತಾತ್ಕಲಿಕವಾಗಿ ಮಾತಿನ ತೊದಲುವಿಕೆ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕವೂ ತನಂತಾನೇ ಸರಿಹೋಗುತ್ತದೆ. ಕಿವಿಯೊಳಗಿನ ಈ ದ್ರವದ ಮೂಲಕವೇ ನಿಲ್ಲಬೇಕಾ ಅಥವಾ ಕುಳಿತುಕೊಳ್ಳಬೇಕಾ ಎಂಬ ಸೂಚನೆಗಳನ್ನು ರವಾನೆ ಆಗುವಂತೆ ಮಾಡುತ್ತದೆ.

ಒಂದು ವೇಳೆ ಈ ಕಿವಿ ಒಳಗಿನ ಭಾಗ ಸೋಂಕಿಗೆ ಗುರಿಯಾದರೆ, ಕಿವಿಯಲ್ಲಿ ದ್ರವದ ಚಲನೆಯು ಅಸ್ತವ್ಯಸ್ತಗೊಳ್ಳುತ್ತದೆ. ನಂತರ ಮೆದುಳು ಕಿವಿಯಿಂದ ಬರುವ ಸಂಕೇತಗಳನ್ನು ಹೋಲಿಸುವಲ್ಲಿ ಗೊಂದಲಕ್ಕೊಳಗಾಗುತ್ತದೆ. ಕಣ್ಣುಗಳಿಂದ ಬರುವ ದೃಶ್ಯ ಸಂಕೇತಗಳನ್ನು ಕಿವಿಯಿಂದ ಬರುವ ಸಂಕೇತಗಳೊಂದಿಗೆ ಹೊಂದಿಸಲು ಅಸಮರ್ಥತೆಯಿಂದಾಗಿ ಬೀಳುವ ಅಪಾಯವಿದೆ.

ಇದನ್ನೂ ಓದಿ: ಬಿಪಿ ಭಯ ಬಿಡಿ! ಡಯಟ್​ನಲ್ಲಿ ಸೇರಿಸಿ ಹಣ್ಣು, ತರಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.