Best Foods For Heart Health: ಆರೋಗ್ಯಕರ ಜೀವನ ನಡೆಸಲು ಹೃದಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ. ಆದರೆ, ಬಿಡುವಿಲ್ಲದ ಕೆಲಸದ ಜೀವನದ ಮಧ್ಯೆ ಅನೇಕ ಜನರು ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ನಿದ್ದೆಯ ಕೊರತೆ ಮತ್ತು ಬೊಜ್ಜು ಮುಂತಾದ ಅಪಾಯಕಾರಿ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸಿವೆ. ಈ ಎಲ್ಲ ಸಮಸ್ಯೆಗಳು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಆದರೆ, ನಾವು ಸೇವಿಸುವ ಆಹಾರವು ಹೃದಯಕ್ಕೆ ಸಂಬಂಧಿಸಿದ ಅನೇಕ ಅಪಾಯಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಕೆಲವು ಕೆಂಪು ಬಣ್ಣದ ಆಹಾರಗಳ ಬಗ್ಗೆ ತಿಳಿಯೋಣ.
ಕೆಂಪು ಬಣ್ಣದ ಆಹಾರಗಳು ಯಾವುವು?:

ಟೊಮೆಟೊ: ಲೈಕೋಪೀನ್ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಟೊಮೆಟೊದಲ್ಲಿ ಹೇರಳವಾಗಿ ಕಂಡುಬರುತ್ತದೆ. ಲೈಕೋಪೀನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಮತ್ತು ಪ್ಲೇಕ್ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಕಡಿಮೆ ಮಾಡುವಲ್ಲಿಯೂ ಸಹ ಪ್ರಯೋಜನಕಾರಿಯಾಗಿದೆ. ಇದು ಹೃದಯದ ಆರೋಗ್ಯ ಬೆಂಬಲಿಸಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಹೆಚ್ಚು ಟೊಮೆಟೊ ಸೇರಿಸುವುದು ಅವಶ್ಯವಾಗಿದೆ.

ಬೀಟ್ರೂಟ್: ಬೀಟ್ರೂಟ್‌ನಲ್ಲಿ ನೈಟ್ರೇಟ್ ಅಧಿಕವಾಗಿರುತ್ತದೆ. ದೇಹವನ್ನು ಪ್ರವೇಶಿಸಿದ ನಂತರ ಇದು ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ. ಇದು ನೈಸರ್ಗಿಕ ಸಂಯುಕ್ತವಾಗಿದ್ದು, ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಹಾಗೂ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸಲು ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಬೀಟ್ರೂಟ್‌ನಲ್ಲಿ ಫೋಲೇಟ್, ಫೈಬರ್, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿವೆ. ಈ ಘಟಕಗಳು ಹೃದಯ ಆರೋಗ್ಯವಾಗುತ್ತದೆ.

ಆ್ಯಪಲ್: ಕೆಂಪು ಸೇಬಿನಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಕ್ವೆರ್ಸೆಟಿನ್ ಉರಿಯೂತ ಕಡಿಮೆ ಮಾಡಲು ಹಾಗೂ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಕರಗುವ ಫೈಬರ್‌ನಲ್ಲಿಯೂ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಸೇಬುಗಳನ್ನು ನಿಯಮಿತವಾಗಿ ತಿನ್ನುವುದು ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಆ್ಯಪಲ್ ಸಿಪ್ಪೆಗಳು ಹೆಚ್ಚು ಪ್ರಯೋಜನಕಾರಿ. ಆದ್ದರಿಂದ ಸೇಬನ್ನು ಸಿಪ್ಪಿಯೊಂದಿಗೆ ಸೇವಿಸುವುದು ಅತ್ಯುತ್ತಮ ಎಂದು ತಜ್ಞರು ತಿಳಿಸುತ್ತಾರೆ.

ಕೆಂಪು ದ್ರಾಕ್ಷಿ: ಕೆಂಪು ದ್ರಾಕ್ಷಿಯಲ್ಲಿ ರೆಸ್ವೆರಾಟ್ರೋಲ್ ಎಂಬ ಸಂಯುಕ್ತ ಸಮೃದ್ಧವಾಗಿದೆ. ಇದು ಹೃದಯದ ಕಾರ್ಯ ಸುಧಾರಿಸಲು ಹಾಗೂ ಉರಿಯೂತ ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ವಾರದಲ್ಲಿ ಮೂರರಿಂದ ನಾಲ್ಕು ದಿನ ಹಣ್ಣುಗಳನ್ನು ತಿನ್ನುವುದು ಹೃದಯದ ಆರೋಗ್ಯ ಸುಧಾರಿಸಲು ಒಳ್ಳೆಯದು ಎಂದು ಆರೋಗ್ಯ ತಿಳಿಸುತ್ತಾರೆ.

ಸ್ಟ್ರಾಬೆರಿ ಹಣ್ಣುಗಳು: ಸ್ಟ್ರಾಬೆರಿ ಹಣ್ಣುಗಳು ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ. ಸ್ಟ್ರಾಬೆರಿ ಹಣ್ಣುಗಳು ವಿಟಮಿನ್ ಸಿ, ಪಾಲಿಫಿನಾಲ್‌ಗಳು ಮತ್ತು ಆ್ಯಂಥೋಸಯಾನಿನ್‌ಗಳು ಸಮೃದ್ಧವಾಗಿವೆ. ಸ್ಟ್ರಾಬೆರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಜೊತೆಗೆ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಸ್ಟ್ರಾಬೆರಿಗಳು ರಕ್ತದೊತ್ತಡ ಕಡಿಮೆ ಮಾಡಲು ಸಹ ಒಳ್ಳೆಯದು. ಹಾರ್ವರ್ಡ್ ಅಧ್ಯಯನದಲ್ಲಿ ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ದಿನ ಸ್ಟ್ರಾಬೆರಿಗಳನ್ನು ತಿನ್ನುವ ಜನರು ಹೃದಯ ಕಾಯಿಲೆಯ ಅಪಾಯ ಶೇಕಡಾ 32 ರಷ್ಟು ಕಡಿಮೆ ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಿ: (ಸಂಶೋಧನಾ ವರದಿ)
https://www.health.harvard.edu/heart-health/eat-blueberries-and-strawberries-three-times-per-week
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ಗಿಡಮೂಲಿಕೆಗಳ ರಾಜ 'ಅಶ್ವಗಂಧ'ದಿಂದ Diabetes ನಿಯಂತ್ರಿಸಬಹುದೇ? ತಜ್ಞರು ಹೇಳುವುದೇನು?
ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆಯೇ?; ಮನೆಯಿಂದ ನೈಸರ್ಗಿಕವಾಗಿ ಸೊಳ್ಳೆಗಳನ್ನು ಓಡಿಸಲು ಇಲ್ಲಿವೆ ಟಿಪ್ಸ್