ETV Bharat / health

ಕಿಡ್ನಿ ಕ್ಯಾನ್ಸರ್​ನ ಲಕ್ಷಣಗಳೇನು ನಿಮಗೆ ಗೊತ್ತೇ? ನಿರ್ಲಕ್ಷಿಸಿದರೆ ಅಪಾಯ, ಯಾರಿಗೆ ಬರುತ್ತೆ ಈ ಕಾಯಿಲೆ?: ವೈದ್ಯರ ಮಾತು - KIDNEY CANCER SYMPTOMS

ಕಿಡ್ನಿ ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿದ್ದು, ಈ ರೋಗವನ್ನು ಮೊದಲೇ ಪತ್ತೆ ಹಚ್ಚಲಾಗುವುದಿಲ್ಲ. ದೇಹದಲ್ಲಿ ಕಂಡುಬರುವ ಲಕ್ಷಣಗಳನ್ನು ಆಧರಿಸಿ ರೋಗ ನಿರ್ಣಯ ಮಾಡಲಾಗುತ್ತದೆ. ಕಿಡ್ನಿ ಕ್ಯಾನ್ಸರ್ ಬಗ್ಗೆ ತಜ್ಞ ವೈದ್ಯರು ವಿವರವಾಗಿ ತಿಳಿಸಿದ್ದಾರೆ.

WHAT IS KIDNEY CANCER  EARLY SIGNS OF KIDNEY CANCER  SYMPTOMS OF KIDNEY CANCER  HOW KIDNEY CANCER OCCURS
ಕಿಡ್ನಿ ಕ್ಯಾನ್ಸರ್​ನ ಲಕ್ಷಣಗಳೇನು?- ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : April 15, 2025 at 5:21 PM IST

3 Min Read

Kidney Cancer Symptoms: ಜೀವನಶೈಲಿಯ ಬದಲಾವಣೆ ಹಾಗೂ ಆಹಾರದ ಕ್ರಮದ ಬಗ್ಗೆ ನಿರ್ಲಕ್ಷ್ಯದಿಂದ ಜನರು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜನರು ರಕ್ತದೊತ್ತಡ ಮತ್ತು ಮಧುಮೇಹದಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಿಡ್ನಿ ಸ್ಟೋನ್​, ಕಿಡ್ನಿ ಫೇಲ್​ ಹಾಗೂ ಕಿಡ್ನಿ ಕ್ಯಾನ್ಸರ್‌ನಂತಹ ಸಮಸ್ಯೆಗಳಿಂದ ಅನೇಕರು ಬಳಲುತ್ತಿದ್ದಾರೆ.

ಸಮಯೋಚಿತ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯು ಮೂತ್ರಪಿಂಡ ವೈಫಲ್ಯದ ಅಪಾಯ ಕಡಿಮೆ ಮಾಡುತ್ತದೆ. ಐಎಂಎ ಪ್ರಧಾನ ಕಾರ್ಯದರ್ಶಿ ಡಾ. ಜಯೇಶ್ ಎಂ. ಲೆಲೆ ಅವರು ತಿಳಿಸುವ ಪ್ರಕಾರ, ಮೂತ್ರಪಿಂಡದ ಕ್ಯಾನ್ಸರ್ ಎಂದರೇನು? ಅದು ಹೇಗೆ ಸಂಭವಿಸುತ್ತದೆ? ಕಿಡ್ನಿ ಲಕ್ಷಣಗಳೇನು ಎಂಬುದನ್ನು ತಿಳಿಯೋಣ.

WHAT IS KIDNEY CANCER  EARLY SIGNS OF KIDNEY CANCER  SYMPTOMS OF KIDNEY CANCER  HOW KIDNEY CANCER OCCURS
ಕಿಡ್ನಿ ಕ್ಯಾನ್ಸರ್​ನ ಲಕ್ಷಣಗಳೇನು?- ಸಾಂದರ್ಭಿಕ ಚಿತ್ರ (Getty Images)

ಕಿಡ್ನಿಯ ಕಾರ್ಯವೇನು?: ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಕಿಡ್ನಿಯು ಮಾನವ ದೇಹದಲ್ಲಿ ಪಕ್ಕೆಲುಬುಗಳ ಕೆಳಗೆ, ಹೊಟ್ಟೆಯ ಹಿಂಭಾಗದಲ್ಲಿ ಇರುತ್ತವೆ. ಇದರ ಕಾರ್ಯವೆಂದರೆ ರಕ್ತವನ್ನು ಶುದ್ಧೀಕರಿಸುವುದು. ಮೂತ್ರವನ್ನು ಉತ್ಪಾದಿಸುವುದು. ಇದಲ್ಲದೆ, ಮೂತ್ರಪಿಂಡಗಳು ಎಲ್ಲಾ ಆಹಾರ ಮತ್ತು ಪಾನೀಯಗಳಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತವೆ.

ಜೊತೆಗೆ ಮೂತ್ರಪಿಂಡಗಳು ರಕ್ತದೊತ್ತಡವನ್ನು ನಿಯಂತ್ರಿಸಲು, ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಮೂತ್ರಪಿಂಡದಲ್ಲಿ ಯಾವುದೇ ಸಮಸ್ಯೆ ಇದ್ದರೆ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಲ್ಲಿ ಯಾರಿಗಾದರೂ ಮೂತ್ರಪಿಂಡದ ಕ್ಯಾನ್ಸರ್ ಇರಬಹುದು. ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಪತ್ತೆ ಮಾಡದಿದ್ದರೆ ಅಥವಾ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಗಂಭೀರ ಸಮಸ್ಯೆಯಾಗಿ ಪರಿಣಿಮಿಸುತ್ತದೆ.

ಏನಿದು ಕಿಡ್ನಿ ಕ್ಯಾನ್ಸರ್? ನ್ಯಾಷನಲ್​ ಕಿಡ್ನಿ ಫೌಂಡೇಷನ್​ ಪ್ರಕಾರ, ಮೂತ್ರಪಿಂಡದ ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿದೆ. ಮೂತ್ರಪಿಂಡದ ಕ್ಯಾನ್ಸರ್ ಎಂದರೆ ಮೂತ್ರಪಿಂಡದ ಜೀವಕೋಶಗಳ ಕ್ಯಾನ್ಸರ್ ಆಗಿದ್ದು, ಆರೋಗ್ಯಕರ ಮೂತ್ರಪಿಂಡದ ಕೋಶಗಳು ಅನಿಯಂತ್ರಿತವಾಗಿ ಬೆಳೆದು ಒಂದು ಗಡ್ಡೆಯಾಗಿ ರೂಪಗೊಳ್ಳುತ್ತದೆ. ಮೂತ್ರಪಿಂಡದ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ವಿಧವನ್ನು ಮೂತ್ರಪಿಂಡ ಕೋಶ ಕಾರ್ಸಿನೋಮ (RCC) ಎಂದು ಕರೆಯಲಾಗುತ್ತದೆ. ಮೂತ್ರಪಿಂಡದ ಕ್ಯಾನ್ಸರ್​ನಿಂದಾಗಿ ಮೂತ್ರದಲ್ಲಿ ರಕ್ತ, ಪಕ್ಕೆಲುಬುಗಳಲ್ಲಿ ನೋವು ಅಥವಾ ಜ್ವರ ಇರಬಹುದು.

ಯಾರಿಗೆ ಬರುತ್ತೆ ಕಿಡ್ನಿ ಕ್ಯಾನ್ಸರ್? ಮೂತ್ರಪಿಂಡದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಬರಬಹುದು. ಆದರೆ, ಕೆಲವು ಜನರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ವಿಶೇಷವಾಗಿ ಧೂಮಪಾನ ಮಾಡುವವರು, ಹೆಚ್ಚು ಮದ್ಯಪಾನ ಮಾಡುವವರು, ಬೊಜ್ಜು ಹೊಂದಿರುವವರು, ಅಧಿಕ ರಕ್ತದೊತ್ತಡ ಹೊಂದಿರುವವರು ಅಥವಾ ಈ ರೋಗದ ಕುಟುಂಬದ ಇತಿಹಾಸ ಹೊಂದಿರುವವರು.

ಸಾಂದರ್ಭಿಕ ಚಿತ್ರ (Getty Images)

ವಯಸ್ಸಾದಂತೆ ಮೂತ್ರಪಿಂಡದ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ದೀರ್ಘ ಕಾಲದವರೆಗೆ ಡಯಾಲಿಸಿಸ್ ಅಗತ್ಯವಿರುವ ಜನರಿಗೆ ಮೂತ್ರಪಿಂಡದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಕೆಲವು ಕೈಗಾರಿಕಾ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ಮೂತ್ರಪಿಂಡದ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ.

ಕಿಡ್ನಿ ಕ್ಯಾನ್ಸರ್‌ನ ಲಕ್ಷಣಗಳೇನು? ಕಿಡ್ನಿ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಯಾವುದೇ ನಿರ್ದಿಷ್ಟ ಲಕ್ಷಣಗಳಿರುವುದಿಲ್ಲ. ಗೆಡ್ಡೆ ಬೆಳೆದಂತೆ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಕಾರಣಕ್ಕಾಗಿ ಮೂತ್ರಪಿಂಡದ ಕ್ಯಾನ್ಸರ್ ಹರಡಲು ಪ್ರಾರಂಭವಾಗುವವರೆಗೂ ಪತ್ತೆಯಾಗುವುದಿಲ್ಲ.

ನ್ಯಾಷನಲ್​ ಕಿಡ್ನಿ ಫೌಂಡೇಷನ್ ಪ್ರಕಾರ, ಮೂತ್ರಪಿಂಡದ ಕ್ಯಾನ್ಸರ್‌ನ ಲಕ್ಷಣಗಳು ಇಲ್ಲಿವೆ ನೋಡಿ.

  • ನಿಮ್ಮ ಮೂತ್ರದಲ್ಲಿ ರಕ್ತ (ಹೆಮಟುರಿಯಾ)
  • ಮೂತ್ರಪಿಂಡದ ಪ್ರದೇಶದಲ್ಲಿ ಗಡ್ಡೆ ಬೆಳೆಯುವುದು
  • ತೀವ್ರ ಬೆನ್ನು ನೋವು
  • ಆಯಾಸ
  • ಸಾಮಾನ್ಯವಾಗಿ ಅಸ್ವಸ್ಥ ಭಾವನೆ
  • ಹಸಿವಿನ ಕೊರತೆ
  • ತೂಕ ಇಳಿಕೆ
  • ಸೌಮ್ಯ ಜ್ವರ
  • ಮೂಳೆಗಳಲ್ಲಿ ನೋವು
  • ಅಧಿಕ ರಕ್ತದೊತ್ತಡ
  • ರಕ್ತಹೀನತೆ ಇರುವುದು
  • ಹೆಚ್ಚಿನ ಕ್ಯಾಲ್ಸಿಯಂ ಮಟ್ಟ

ನ್ಯಾಷನಲ್​ ಕಿಡ್ನಿ ಫೌಂಡೇಷನ್ ಪ್ರಕಾರ, ಕೆಲವು ಪರೀಕ್ಷೆಗಳ ಮೂಲಕ ನೀವು ಮೂತ್ರಪಿಂಡದ ಕ್ಯಾನ್ಸರ್ ಪತ್ತೆಹಚ್ಚಬಹುದು.

ಮೂತ್ರ ಪರೀಕ್ಷೆ: ನಿಮ್ಮ ಮೂತ್ರದ ಮಾದರಿಯನ್ನು ತೆಗೆದುಕೊಂಡು ಅದರಲ್ಲಿ ರಕ್ತವಿದೆಯೇ ಎಂದು ಪರಿಶೀಲಿಸಲಾಗುತ್ತದೆ.

ರಕ್ತ ಪರೀಕ್ಷೆಗಳು: ನಿಮ್ಮಲ್ಲಿ ತುಂಬಾ ಕಡಿಮೆ ಕೆಂಪು ರಕ್ತ ಕಣಗಳಿವೆಯೇ (ರಕ್ತಹೀನತೆ), ಅಥವಾ ನಿಮಗೆ ಮೂತ್ರಪಿಂಡದ ಕಾರ್ಯವು ದುರ್ಬಲವಾಗಿದೆಯೇ ಎಂಬುದನ್ನು ರಕ್ತ ಪರೀಕ್ಷೆಯಿಂದ ತೋರಿಸಬಹುದು.

ಸಿಟಿ ಸ್ಕ್ಯಾನ್: ಇದು ವಿಶೇಷ ಎಕ್ಸ್-ರೇ ಆಗಿದ್ದು, ಇದು ನಿಮ್ಮ ದೇಹದ ಒಳಭಾಗದ ಚಿತ್ರಗಳ ಸರಣಿಗಳನ್ನು ಕಂಪ್ಯೂಟರ್ ಸಹಾಯದಿಂದ ತಿಳಿದುಕೊಳ್ಳಲು CT ಸ್ಕ್ಯಾನ್ ಸಹಾಯವಾಗುತ್ತದೆ.

ಎಂಆರ್​ಐ: ಇದು ದೊಡ್ಡ ಮ್ಯಾಗ್ನೆಟ್, ರೇಡಿಯೋ ತರಂಗಗಳು ಮತ್ತು ಕಂಪ್ಯೂಟರ್ ಬಳಸಿ ನಿಮ್ಮ ದೇಹದ ಒಳಭಾಗದ ಚಿತ್ರಗಳನ್ನು ಮಾಡುವ ಪರೀಕ್ಷೆಯಾಗಿದೆ.

ಅಲ್ಟ್ರಾಸೌಂಡ್: ಈ ಪರೀಕ್ಷೆಯು ದೇಹದ ಅಂಗಾಂಶಗಳ ಮೂಲಕ ಹರಡುವ ಹೆಚ್ಚಿನ ಆವರ್ತನದ ಧ್ವನಿ ತರಂಗಗಳನ್ನು ಬಳಸುತ್ತದೆ. ಮಾನಿಟರ್‌ನಲ್ಲಿ ಪ್ರದರ್ಶಿಸಲಾದ ಚಿತ್ರಗಳನ್ನು ರಚಿಸುತ್ತದೆ. ಈ ಪರೀಕ್ಷೆಯು ಗಡ್ಡೆಗಳನ್ನು ಪತ್ತೆಹಚ್ಚಲು ಸಹಾಯಕವಾಗಿದೆ.

ರೀನಲ್​ ಮಾಸ್​ ಬಯಾಪ್ಸಿ: ಈ ಕಾರ್ಯವಿಧಾನದ ಸಮಯದಲ್ಲಿ ತೆಳುವಾದ ಸೂಜಿಯನ್ನು ಗಡ್ಡೆಯೊಳಗೆ ಸೇರಿಸಲಾಗುತ್ತದೆ. ಮತ್ತು ನಿಮ್ಮ ಅಂಗಾಂಶದ ಸಣ್ಣ ಮಾದರಿಯನ್ನು ತೆಗೆದುಹಾಕಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.