ETV Bharat / health

ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು ಗೊತ್ತಾ? ಹೆಚ್ಚು ಇಲ್ಲವೇ ಕಡಿಮೆ ಮೂತ್ರ ವಿಸರ್ಜಿಸಿದರೆ ಏನಾಗುತ್ತೆ?: ವೈದ್ಯರು ತಿಳಿಸುವುದೇನು? - HOW MANY TIMES URINATE IN A DAY

ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು? ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಹಾನಿಯಾಗುತ್ತದೆಯೇ? ವೈದ್ಯರು ಹೇಳುವುದೇನು ಎಂಬುದನ್ನು ತಿಳಿಯೋಣ.

HOW MANY TIMES URINATION IS NORMAL  HOW MANY TIMES URINATE PER DAY  ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು  HOW MANY TIMES TOILET URINATION
ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು ಗೊತ್ತಾ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : April 16, 2025 at 8:20 PM IST

3 Min Read

What are the causes of frequent urination: ಎಷ್ಟು ಪ್ರಮಾಣದ ದ್ರವ ಸೇವಿಸುತ್ತೀರಿ ಎಂಬುದರ ಮೇಲೆ ಅವಲಂಬಿಸಿ ನೀವು ಮೂತ್ರ ವಿಸರ್ಜನೆ ಮಾಡುತ್ತೀರಿ. ಜೊತೆಗೆ ಹಲವು ಬಾರಿ ಮೂತ್ರ ವಿಸರ್ಜಿಸುವುದು ದೇಹದ ಗಾತ್ರ, ಹೈಡ್ರೇಷನ್ ಮಟ್ಟ, ವ್ಯಾಯಾಮ, ದಿನನಿತ್ಯದ ಚಟುವಟಿಕೆ ಹಾಗೂ ವೈದ್ಯಕೀಯ ಸ್ಥಿತಿಯನ್ನು ಅವಲಂಬಿಸಿದೆ. ದಿನಕ್ಕೆ ಆರೋಗ್ಯವಂತ ವ್ಯಕ್ತಿ 6 ರಿಂದ 10 ಬಾರಿ ಮೂತ್ರ ವಿಸರ್ಜಿಸಿದರೆ ಅದು ಸಾಮಾನ್ಯ.

ನೀವು ದಿನಕ್ಕೆ ಇದಕ್ಕಿಂತಲೂ ಹೆಚ್ಚು ಅಥವಾ ಕಡಿಮೆ ಬಾರಿ ಮೂತ್ರ ವಿಸರ್ಜಿಸಿದರೆ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ದಿನದಲ್ಲಿ ನೀವು ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕಾಗುತ್ತದೆ. ಯಾವ ಸಂದರ್ಭಗಳಲ್ಲಿ ನೀವು ಬಹಳ ಕಡಿಮೆ ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುಬಹುದು ಎಂಬುದರ ಬಗ್ಗೆ ವೈದ್ಯರು ವಿವರವಾಗಿ ಇಲ್ಲಿ ತಿಳಿಸಿದ್ದಾರೆ.

HOW MANY TIMES URINATION IS NORMAL  HOW MANY TIMES URINATE PER DAY  ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು  HOW MANY TIMES TOILET URINATION
ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜಿಸಬೇಕು ಗೊತ್ತಾ?- ಸಾಂದರ್ಭಿಕ ಚಿತ್ರ (Getty Images)

ಪದೇ ಪದೇ ಮೂತ್ರ ವಿಸರ್ಜಿಸಲು ಕಾರಣಗಳೇನು? ಆರೋಗ್ಯವಂತ ವ್ಯಕ್ತಿ ದಿನಕ್ಕೆ 6 ರಿಂದ 10 ಬಾರಿ ಯಾವಾಗ ಬೇಕಾದರೂ ಮೂತ್ರ ವಿಸರ್ಜಿಸಬಹುದು. ಒಂದು ದಿನದಲ್ಲಿ ಹೆಚ್ಚು ಅಥವಾ ಕಡಿಮೆ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ಲಕ್ಷಣವಲ್ಲ. ನೀವು ಎಷ್ಟು ಮೂತ್ರ ವಿಸರ್ಜಿಸುತ್ತೀರಿ ಎಂಬುದು ನಿಮ್ಮ ವಯಸ್ಸು, ಮೂತ್ರಕೋಶದ ಗಾತ್ರ, ಔಷಧ, ಮಧುಮೇಹ ಇತರೆ ಅಂಶಗಳನ್ನು ಅವಲಂಬಿಸಿರುತ್ತದೆ. ಗರ್ಭಧಾರಣೆ ಮತ್ತು ಹೆರಿಗೆಯ ನಂತರದ ವಾರಗಳಲ್ಲಿ ಮೂತ್ರ ವಿಸರ್ಜನೆಯ ಮೇಲೆ ಪರಿಣಾಮ ಬೀರುತ್ತವೆ. ಗರ್ಭಾವಸ್ಥೆಯಲ್ಲಿ ಮಹಿಳೆಯು ಬೆಳೆಯುತ್ತಿರುವ ಭ್ರೂಣದಿಂದ ಮೂತ್ರಕೋಶದ ಒತ್ತಡ ಮತ್ತು ದ್ರವದ ಬದಲಾವಣೆಗಳಿಂದಾಗಿ ಹಲವು ಬಾರಿ ಮೂತ್ರ ಮಾಡುತ್ತಾರೆ ಎಂದು ವೈದ್ಯರು ತಿಳಿಸುತ್ತಾರೆ.

ಮಧುಮೇಹ: ನಿಮಗೆ ಮಧುಮೇಹ (ಸಕ್ಕರೆ ಕಾಯಿಲೆ) ಇದ್ದರೆ ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯು ದ್ರವದ ಶೇಖರಣೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮನ್ನು ಪದೇ ಪದೇ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ.

ಹೈಪರ್ ಕ್ಯಾಲ್ಸೆಮಿಯಾ: ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟ ಅಸಮತೋಲನಗೊಂಡಾಗ, ಅದು ನಿಮ್ಮ ದೇಹದಲ್ಲಿನ ಮೂತ್ರದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅಗತ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ.

ಸಿಕಲ್​ ಸೆಲ್​ ಸನಿಮಿಯಾ: ಈ ರೋಗದಿಂದ ಬಳಲುತ್ತಿರುವವರಿಗೆ, ಮೂತ್ರಪಿಂಡದ ಕಾರ್ಯ ಹಾಗೂ ಮೂತ್ರದ ಸಾಂದ್ರತೆಯು ಪರಿಣಾಮ ಬೀರುತ್ತದೆ. ಇದರಿಂದಾಗಿ ಈ ಕಾಯಿಲೆಯಿಂದ ಬಳಲುತ್ತಿರುವ ಜನರು ಪದೇ ಪದೇ ಮೂತ್ರ ವಿಸರ್ಜಿಸುತ್ತಾರೆ.

ಮೂತ್ರನಾಳದ ಸೋಂಕು: ಮೂತ್ರನಾಳದ ಸೋಂಕು (ಯುಟಿಐ) ಎಂಬುದು ನಿಮ್ಮ ಮೂತ್ರ ವಿಸರ್ಜನೆಯ ಆವರ್ತನ ಕಡಿಮೆ ಮಾಡುವ ಸಮಸ್ಯೆ ಇದಾಗಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಯುಟಿಐ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ನಿಮಗೆ ಮೂತ್ರ ಬರದೆ ಇದ್ದರೂ ಸಹ, ಮೂತ್ರ ವಿಸರ್ಜನೆ ಮಾಡಬೇಕೆಂಬ ಭಾವನೆ ಬರಬಹುದು. ಮೂತ್ರದ ಸೋಂಕಿನ ಸಮಯದಲ್ಲಿ ದಿನಕ್ಕೆ 9ಕ್ಕೂ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗಬಹುದು. ಆದರೆ, ಸ್ವಲ್ಪ ಪ್ರಮಾಣದಲ್ಲಿ ಮೂತ್ರ ವಿಸರ್ಜಿಸಿದರೆ ನಿಮಗೆ ಸುಡುವ ಸಂವೇದನೆ ಉಂಟಾಗುವ ಸಾಧ್ಯತೆಯಿದೆ ಎಂದು ವೈದ್ಯರು ವಿವರಿಸುತ್ತಾರೆ.

ಪ್ರಾಸ್ಟೇಟ್: ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಯಿಂದ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ. ಪ್ರಾಸ್ಟೇಟ್ ಗ್ರಂಥಿಯು ದೊಡ್ಡದಾದಾಗ ನಿಮ್ಮ ಮೂತ್ರಕೋಶದಿಂದ ಮೂತ್ರದ ಹರಿವನ್ನು ತಡೆಯಬಹುದು. ಇದರಿಂದಾಗಿ ಮೂತ್ರ ವಿಸರ್ಜನೆಯ ನಂತರವೂ ನಿಮಗೆ ಖಾಲಿ ಅನಿಸುವುದಿಲ್ಲ. ಇದರ ಜೊತೆಗೆ ಹೃದಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ ಅಥವಾ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ತೆಗೆದುಕೊಳ್ಳುವ ಔಷಧಿಗಳು ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಕಾರಣವಾಗುತ್ತವೆ.

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು? ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡುತ್ತೀರಿ ಎಂಬುದನ್ನು ಆಧರಿಸಿ ನೀವು ಆರೋಗ್ಯವಾಗಿದ್ದೀರಾ ಅಥವಾ ಇಲ್ಲವೇ ತಿಳಿಯಬಹುದು. ಅತಿಯಾದ ಮೂತ್ರ ವಿಸರ್ಜನೆಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡುವುದನ್ನು ವಿಳಂಬ ಮಾಡಬೇಡಿ. ಮೂತ್ರದಲ್ಲಿ ರಕ್ತ, ಮೂತ್ರದ ಬಣ್ಣದಲ್ಲಿ ಬದಲಾವಣೆ, ಮೂತ್ರದಲ್ಲಿ ಅಸಾಮಾನ್ಯ ವಾಸನೆ ಬಂದರೆ, ನೀವು ನಿರ್ಲಕ್ಷಿಸಬಾರದು ಹಾಗೂ ನೇರವಾಗಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.