ETV Bharat / health

ಗರ್ಭಾವಸ್ಥೆಯಲ್ಲಿ ಮಧುಮೇಹ ತಡೆಯಲು ಗರ್ಭಿಣಿಯರು ಯಾವ ಆಹಾರಗಳನ್ನು ಸೇವಿಸಬೇಕು ಗೊತ್ತೇ? ಸಂಶೋಧನೆ ಹೇಳುವುದೇನು? - GESTATIONAL DIABETES FOODS

ಗರ್ಭಾವಸ್ಥೆಯಲ್ಲಿ ಮಧುಮೇಹ ತಪ್ಪಿಸಲು ಗರ್ಭಿಣಿಯರು ಹೆಚ್ಚು ತರಕಾರಿಗಳನ್ನು ಸೇವಿಸಲು ಸೂಚಿಸಲಾಗುತ್ತದೆ. ವಿಶೇಷವಾಗಿ ಪಿಷ್ಟ ಕಡಿಮೆ ಇರುವ ತರಕಾರಿಗಳನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

DIABETES  GESTATIONAL DIABETES  CONTROL DIABETES DURING PREGNANCY  ಗರ್ಭಾವಸ್ಥೆಯಲ್ಲಿ ಮಧುಮೇಹ
ಗರ್ಭಾವಸ್ಥೆಯಲ್ಲಿ ಮಧುಮೇಹ ತಡೆಯಲು ಗರ್ಭಿಣಿಯರು ಯಾವ ಆಹಾರಗಳನ್ನು ಸೇವಿಸಬೇಕು? (Getty Images)
author img

By ETV Bharat Health Team

Published : May 20, 2025 at 5:37 PM IST

3 Min Read

Gestational Diabetes Foods: ಗರ್ಭಾವಸ್ಥೆಯು ಮಹಿಳೆಯರಿಗೆ ತುಂಬಾ ಕಷ್ಟಕರ ಹಾಗೂ ಒತ್ತಡದ ಸಮಯವಾಗಿದೆ. ಈ ಸಮಯದಲ್ಲಿ ಮಹಿಳೆಯರು ಅನೇಕ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ವಿವಿಧ ಆರೋಗ್ಯ ಸಮಸ್ಯೆಗಳು ಗರ್ಭಧಾರಣೆಯನ್ನು ಸವಾಲಿನಂತೆ ಮಾಡುತ್ತವೆ. ಇದರಲ್ಲೊಂದು ಗರ್ಭಾವಸ್ಥೆಯ ಮಧುಮೇಹ. ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವನ್ನು ಬೆಳೆಸುವ ಅಪಾಯವಿರುತ್ತದೆ. ಇದನ್ನೇ ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯಲಾಗುತ್ತದೆ.

ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಹಾರ್ಮೋನುಗಳ ಬದಲಾವಣೆಗಳು ಹಾಗೂ ಅಧಿಕ ತೂಕದಿಂದ ಉಂಟಾಗುತ್ತದೆ. ಸರಿಯಾದ ಆಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಈ ಮಧುಮೇಹವನ್ನು ನಿಯಂತ್ರಿಸಬಹುದು. ಅದಕ್ಕೆ ಅನುಗುಣವಾಗಿ ಗರ್ಭಾವಸ್ಥೆಯ ಮಧುಮೇಹವನ್ನು ನಿಯಂತ್ರಿಸಲು ಹಾಗೂ ಅದರ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ತಿಳಿಯೋಣ.

DIABETES  GESTATIONAL DIABETES  CONTROL DIABETES DURING PREGNANCY  ಗರ್ಭಾವಸ್ಥೆಯಲ್ಲಿ ಮಧುಮೇಹ
ಗರ್ಭಾವಸ್ಥೆಯಲ್ಲಿ ಮಧುಮೇಹ ತಡೆಯಲು ಗರ್ಭಿಣಿಯರು ಯಾವ ಆಹಾರಗಳನ್ನು ಸೇವಿಸಬೇಕು? (Getty Images)

ಪಿಷ್ಟ ರಹಿತ ತರಕಾರಿಗಳು: ಫೈಬರ್, ವಿಟಮಿನ್ಸ್​ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಪಿಷ್ಟ ತರಕಾರಿಗಳ ಬದಲಿಗೆ ಪಿಷ್ಟರಹಿತ ತರಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಆಹಾರದಲ್ಲಿ ಬ್ರೊಕೊಲಿ, ಹೂಕೋಸು, ಕ್ಯಾರೆಟ್ ಮತ್ತು ಬೆಲ್ ಪೆಪ್ಪರ್‌ನಂತಹ ತರಕಾರಿಗಳನ್ನು ಸೇರಿಸಿಕೊಳ್ಳಬಹುದು. ಅವುಗಳು ಕೇವಲ ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ಸಹ ಹೊಂದಿರುತ್ತವೆ. ಈ ತರಕಾರಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಪಿಷ್ಟಯುಕ್ತ ತರಕಾರಿಗಳಲ್ಲಿ ಸಕ್ಕರೆ ಬೀಟ್ ಗಡ್ಡೆಗಳು, ಬಟಾಣಿಗಳು ಮತ್ತು ಆಲೂಗಡ್ಡೆ ಸೇರಿವೆ.

ಧಾನ್ಯಗಳು: ಗರ್ಭಿಣಿಯರು ಕಂದು ಅಕ್ಕಿ, ಕ್ವಿನೋವಾ ಮತ್ತು ಗೋಧಿಯಂತಹ ಧಾನ್ಯಗಳನ್ನು ಮಿತವಾಗಿ ಸೇವಿಸುವುದು ಸುರಕ್ಷಿತವಾಗಿದೆ. ಸಂಸ್ಕರಿಸಿದ ಧಾನ್ಯಗಳ ಬದಲಿಗೆ ಧಾನ್ಯಗಳನ್ನು ತಿನ್ನುವುದರಿಂದ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸಲು ಹಾಗೂ ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವುಗಳು ನಾರಿನ ಸಮೃದ್ಧ ಮೂಲವಾಗಿದ್ದು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹ ಪ್ರಯೋಜನಕಾರಿಯಾಗಿದೆ.

ಪ್ರೋಟೀನ್ ಭರಿತ ಆಹಾರ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದು ಒಳ್ಳೆಯದು. ನೀವು ನಿಮ್ಮ ಆಹಾರದಲ್ಲಿ ಕೋಳಿ, ಮೀನು, ಮೊಟ್ಟೆ, ಬೀನ್ಸ್ ಮತ್ತು ಬೇಳೆಗಳನ್ನು ಸೇರಿಸಿಕೊಳ್ಳಬಹುದು. ಇದು ಮಗುವಿನ ಬೆಳವಣಿಗೆಗೆ ಸಹ ಅತ್ಯಗತ್ಯ.

ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು: ನೀವು ಹಾಲು, ಮೊಸರು ಮತ್ತು ಚೀಸ್‌ನಂತಹ ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸಲು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ಇದು ತಾಯಿಯ ಮೂಳೆಗಳ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಗೆ ಅತ್ಯಗತ್ಯವಾಗಿದೆ.

ಹಣ್ಣುಗಳು: ಹಣ್ಣುಗಳಲ್ಲಿ ಅಗತ್ಯವಾದ ಪೋಷಕಾಂಶಗಳು ಸಮೃದ್ಧವಾಗಿವೆ. ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಮತ್ತು ಫೈಬರ್, ವಿಟಮಿನ್ಸ್ ಮತ್ತು ಖನಿಜಗಳು ಸಮೃದ್ಧವಾಗಿರುವ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ನೀವು ಸ್ಟ್ರಾಬೆರಿ, ಬೆರಿಹಣ್ಣುಗಳು, ರಾಸ್​​ಬೆರ್ರಿಸ್, ಸೇಬು, ಪೇರಳೆ ಮತ್ತು ಪೀಚ್​ ಹಣ್ಣುಗಳನ್ನು ತಿನ್ನಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಆರೋಗ್ಯಕರ ಕೊಬ್ಬು: ದೇಹದಲ್ಲಿ ಎರಡು ರೀತಿಯ ಕೊಬ್ಬುಗಳಿವೆ. ಒಳ್ಳೆಯ ಕೊಬ್ಬು ಮತ್ತು ಕೆಟ್ಟ ಕೊಬ್ಬು. ಕೆಲವು ಆಹಾರಗಳು ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ. ಕೆಲವು ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಂಗ್ರಹಿಸಲು ಸಹಾಯ ಮಾಡುತ್ತವೆ.

ಸಾಂದರ್ಭಿಕ ಚಿತ್ರ (Getty Images)

ಆವಕಾಡೊಗಳು, ಬಾದಾಮಿ, ವಾಲ್ನಟ್ಸ್ ಮತ್ತು ಆಲಿವ್ ಎಣ್ಣೆಯಂತಹ ಉತ್ತಮ ಕೊಬ್ಬನ್ನು ಹೊಂದಿರುವ ಆಹಾರಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುವಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.

ನಟ್ಸ್​: ಕೆಲವು ಡ್ರೈ ಫ್ರೂಟ್ಸ್​ ಹಾಗೂ ನಟ್ಸ್​ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ನಾರಿನ ಸಮೃದ್ಧ ಮೂಲವಾಗಿವೆ. ಇದರಿಂದ ಗರ್ಭಾವಸ್ಥೆಯಲ್ಲಿ ನಿಮ್ಮ ಆಹಾರದಲ್ಲಿ ಬಾದಾಮಿ, ವಾಲ್ನಟ್ಸ್, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳನ್ನು ಸೇರಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್‌ನ್ನು ವೀಕ್ಷಿಸಬಹುದು: ಸಂಶೋಧನಾ ವರದಿ- http://pmc.ncbi.nlm.nih.gov/articles/PMC7599681/

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.