Cucumber Juice Health Benefits: ಸೌತೆಕಾಯಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿಡುತ್ತದೆ. ಸೌತೆಕಾಯಿಯಲ್ಲಿರುವ ಹೇರಳವಾದ ಪೋಷಕಾಂಶಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಕಾರಣ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರವಾಗಿದೆ.
ಪ್ರತಿದಿನ ಒಂದು ಕಪ್ ಸೌತೆಕಾಯಿ ಜ್ಯೂಸ್ನ್ನು ಕುಡಿಯುವುದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಎ ಮತ್ತು ಸಿ ಹೇಳವಾಗಿದೆ. ಆಹಾರ ತಜ್ಞೆ ಡಾ.ಶ್ರೀಲತಾ ಅವರು ತಿಳಿಸುವ ಪ್ರಕಾರ, ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದ ಯಾವೆಲ್ಲಾ ಲಾಭಗಳು ದೊರೆಯುತ್ತವೆ ಎಂಬುದನ್ನು ತಿಳಿಯೋಣ.

ಬೇಸಿಗೆಯಲ್ಲಿ ಸೌತೆಕಾಯಿ ಜ್ಯೂಸ್ನ ಪ್ರಯೋಜನಗಳು:
ಉತ್ತಮ ಡಿಟಾಕ್ಸ್ ಪಾನೀಯ: ಸೌತೆಕಾಯಿ ರಸವು ಉತ್ತಮ ಡಿಟಾಕ್ಸ್ ಪಾನೀಯವಾಗಿಯೂ ಕೆಲಸ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಈ ಜ್ಯೂಸ್ ಕುಡಿದರೆ ದೇಹದಲ್ಲಿರುವ ಎಲ್ಲಾ ತ್ಯಾಜ್ಯಗಳು ಸುಲಭವಾಗಿ ಹೊರಹೋಗುತ್ತವೆ. ಇದು ದೇಹವನ್ನು ಶುದ್ಧೀಕರಿಸುತ್ತದೆ. ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಪ್ರತಿದಿನ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುತ್ತದೆ. ತೂಕ ಕೂಡ ವೇಗವಾಗಿ ಕಡಿಮೆಯಾಗುತ್ತದೆ. ಇದು ಹೊಟ್ಟೆಯ ಕೊಬ್ಬನ್ನೂ ಸುಲಭವಾಗಿ ಕರಗಿಸುತ್ತದೆ. ಅಧಿಕ ತೂಕ ಹೊಂದಿರುವವರಿಗೆ ಸೌತೆಕಾಯಿ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಪ್ರತಿದಿನ ಸೇವಿಸುವುದು ಉತ್ತಮ ಎಂದು ಆಹಾರ ತಜ್ಞೆ ಡಾ.ಶ್ರೀಲತಾ ತಿಳಿಸುತ್ತಾರೆ.
ರೋಗನಿರೋಧಕ ಶಕ್ತಿ: ಈ ಪಾನೀಯವು ಹೈಡ್ರೇಟಿಂಗ್ ಆಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಕೆ ಮತ್ತು ಸಿ ಸೇರಿದಂತೆ ವಿಟಮಿನ್‌ಗಳು ಅಧಿಕವಾಗಿವೆ. ಇದು ಆರೋಗ್ಯಕರ ಚರ್ಮ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಉರಿಯೂತದ ಗುಣಗಳನ್ನು ಸೌತೆಕಾಯಿ ಜ್ಯೂಸ್ ಉತ್ಕರ್ಷಣ ನಿರೋಧಕಗಳಾದ ಬೀಟಾ-ಕ್ಯಾರೋಟಿನ್ ಹಾಗೂ ಫ್ಲೇವನಾಯ್ಡ್‌ಗಳು ಸೇರಿವೆ. ಜೊತೆಗೆ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

ಶಾಖ ಕಡಿಮೆ ಮಾಡುತ್ತೆ: ಸೌತೆಕಾಯಿ ಸನ್ ಬರ್ನ್ನಿಂದ ರಕ್ಷಣೆ ನೀಡುತ್ತದೆ. ಸೌತೆಕಾಯಿಯಲ್ಲಿ ಸುಮಾರು 96 ಪ್ರತಿಶತದಷ್ಟು ನೀರು ಇರುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಸೌತೆಕಾಯಿಯಲ್ಲಿರುವ ಮೆಗ್ನೀಸಿಯಮ್ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ದೇಹಕ್ಕೆ ಸಾಕಷ್ಟು ರಿಲೀಫ್ ದೊರೆಯುತ್ತದೆ. ಇದರೊಂದಿಗೆ ನಿದ್ರಾಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ದೇಹದಲ್ಲಿನ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ನಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಸೌತೆಕಾಯಿ ಜ್ಯೂಸ್ ಕೂಡ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ ಎನ್ನುತ್ತಾರೆ ಡಾ.ಶ್ರೀಲತಾ.
ಕ್ಯಾನ್ಸರ್ ತಡೆಗಟ್ಟುತ್ತೆ: ಸೌತೆಕಾಯಿಗಳಲ್ಲಿ ಕುಕುರ್ಬಿಟಾಸಿನ್ ಬಿ (CUB) ಎಂಬ ಫೈಟೊಕೆಮಿಕಲ್‌ಗಳು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರಿಂದಾಗಿ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಸೌತೆಕಾಯಿಯಲ್ಲಿ ಸಾಕಷ್ಟು ವಿಟಮಿನ್ ಮತ್ತು ಕ್ಯಾಲ್ಸಿಯಂ ಇದೆ. ಇದರ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. ಇದು ಮೂಳೆ ಮುರಿತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಜೀರ್ಣಕ್ರಿಯೆ ಸುಧಾರಿಸುತ್ತೆ: ಮೊದಲೇ ಹೇಳಿದಂತೆ, ಇದು ಬಹಳಷ್ಟು ನೀರನ್ನು ಹೊಂದಿರುತ್ತದೆ. ಇದರಲ್ಲಿ ಫೈಬರ್ ಕೂಡ (Cucumber Juice Health Benefits) ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗುತ್ತದೆ. ಇದಲ್ಲದೆ, ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಚರ್ಮದ ಆರೋಗ್ಯ: ಸೌತೆಕಾಯಿ ಜ್ಯೂಸ್ನಲ್ಲಿ ಕಂಡುಬರುವ ವಿಟಮಿನ್ ಸಿ ಮತ್ತು ಎ, ಕಾಲಜನ್ ಹಾಗೂ ಗಾಯವನ್ನು ಗುಣಪಡಿಸುವ ಸಾಮರ್ಥವನ್ನು ಹೊಂದಿದೆ. ಯುವಿ ಕಿರಣಗಳಿಂದ ರಕ್ಷಣೆ ಸೇರಿದಂತೆ ಒಟ್ಟಾರೆ ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತೆ: ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಸೌತೆಕಾಯಿ ಸೇವಿಸುವುದರಿಂದ 21 ದಿನಗಳ ನಂತರ ಒಟ್ಟು ಕೊಲೆಸ್ಟ್ರಾಲ್ ಮಟ್ಟಗಳು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ. ಸೌತೆಕಾಯಿಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಇದನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ಈ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.