ETV Bharat / health

ಮನೆ & ಸಾರ್ವಜನಿಕ ಸ್ಥಳಗಳಲ್ಲಿ ವೆಸ್ಟರ್ನ್ ಟಾಯ್ಲೆಟ್ ಬಳಸುತ್ತಿದ್ದರೆ ಜಾಗರೂಕರಾಗಿರಿ: ನಿರ್ಲಕ್ಷಿಸಿದರೆ ಗಂಭೀರ ಅಡ್ಡಪರಿಣಾಮ! - WESTERN TOILET SIDE EFFECTS

Western Toilet Side Effects: ನೀವು ಮನೆ & ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ವೆಸ್ಟರ್ನ್ ಟಾಯ್ಲೆಟ್ ಬಳಸುತ್ತಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ತಜ್ಞರು ನೀಡಿರುವ ಟಿಪ್ಸ್​ ಇಲ್ಲಿದೆ ನೋಡಿ.

WESTERN TOILET SIDE EFFECTS  IS IT SAFE TO USE WESTERN TOILET  WESTERN TOILET HEALTH ISSUE  INDIAN VS WESTERN TOILET
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : April 10, 2025 at 4:44 PM IST

3 Min Read

Western Toilet Side Effects: ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿ ಎಲ್ಲೆಡೆ ಭಾರತೀಯ ಶೌಚಾಲಯಗಳಿಗಿಂತ ಪಾಶ್ಚಿಮಾತ್ಯ ಶೌಚಾಲಯಗಳು ಹೆಚ್ಚು ಕಾಣಿಸುತ್ತಿವೆ. ಬಹುತೇಕ ಎಲ್ಲಾ ಮನೆಗಳಲ್ಲಿ ಪಾಶ್ಚಿಮಾತ್ಯ ಶೌಚಾಲಯಗಳನ್ನು ಬಳಸಲಾಗುತ್ತಿದೆ. ಪಾಶ್ಚಿಮಾತ್ಯ ಶೌಚಾಲಯಗಳು ಭಾರತೀಯ ಶೌಚಾಲಯಗಳಿಗಿಂತ ಹೆಚ್ಚು ಆರಾಮದಾಯಕವಾಗಿವೆ. ಈ ಶೌಚಾಲಯಗಳು ಅಂಗವೈಕಲ್ಯ ಅಥವಾ ಕೀಲು ಸಮಸ್ಯೆ ಇರುವ ರೋಗಿಗಳಿಗೆ ಸೂಕ್ತವಾಗಿವೆ. ವೆಸ್ಟರ್ನ್ ಟಾಯ್ಲೆಟ್​ನಿಂದಾಗುವ ಪ್ರಯೋಜನಗಳ ಜೊತೆಗೆ ಕೆಲವು ಅಡ್ಡಪರಿಣಾಮಗಳು ಇವೆ. ಈ ಸ್ಟೋರಿಯಲ್ಲಿ ವೆಸ್ಟರ್ನ್ ಟಾಯ್ಲೆಟ್​ ಬಳಕೆಯಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ.

ಸಂಶೋಧನೆ ತಿಳಿಸುವುದೇನು?: ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ವರದಿಯ ಪ್ರಕಾರ, ಶೌಚಾಲಯದ ಸೀಟುಗಳನ್ನು ಬದಲಾಯಿಸುವುದರಿಂದ 19ನೇ ಶತಮಾನದಿಂದ ವಿವಿಧ ಕಾಯಿಲೆಗಳು ವೇಗವಾಗಿ ಹೆಚ್ಚಾಗುತ್ತಿವೆ. ಮೂಲವ್ಯಾಧಿ, ಮಲಬದ್ಧತೆ ಮತ್ತು ಫಿಶರ್ ಸೇರಿದಂತೆ ಎಲ್ಲವೂ ಗುದದ್ವಾರಕ್ಕೆ ಸಂಬಂಧಿಸಿದ ಕಾಯಿಲೆಗೆ ಸಂಬಂಧಿಸಿವೆ.

ಮಲಬದ್ಧತೆ: ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿ ಭಾರತೀಯ ಪ್ರತಿ ಕುಟುಂಬಗಳಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ಮಲಬದ್ಧತೆ ಪ್ರಮಾಣ ಹೆಚ್ಚಾಗಲು ಪಾಶ್ಚಿಮಾತ್ಯ ಶೌಚಾಲಯಗಳು ಕಾರಣವಾಗಿರಬಹುದು. ಭಾರತೀಯ ಶೌಚಾಲಯದ ಆಸನವನ್ನು ಬಳಸುವುದರಿಂದ ನಿಮ್ಮ ಸಂಪೂರ್ಣ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತದೆ. ಇದು ಹೊಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಆದರೆ, ವೆಸ್ಟರ್ನ್ ಟಾಯ್ಲೆಟ್​ನ ಮೇಲೆ ಕುಳಿತುಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಯಾವುದೇ ವಿಶೇಷ ಒತ್ತಡ ಬೀಳುವುದಿಲ್ಲ. ಪರಿಣಾಮವಾಗಿ ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ಇದು ಕ್ರಮೇಣ ಮಲಬದ್ಧತೆಯ ಸಮಸ್ಯೆಗೆ ಕಾರಣವಾಗುತ್ತದೆ.

ಸೋಂಕಿನ ಸಾಧ್ಯತೆ: ಪಾಶ್ಚಿಮಾತ್ಯ ಶೌಚಾಲಯಗಳನ್ನು ಹೆಚ್ಚು ಜನರು ಬಳಸುತ್ತಾರೆ. ಆದ್ದರಿಂದ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಅಲ್ಲದೆ, ವೆಸ್ಟರ್ನ್ ಟಾಯ್ಲೆಟ್‌ನ ಆಸನವು ದೇಹವನ್ನು ನೇರವಾಗಿ ಮುಟ್ಟುತ್ತದೆ. ಬೇಗನೇ ಸೋಂಕುಗಳು ತಗಲುವ ಸಾಧ್ಯತೆಗಳು ಹೆಚ್ಚು. ಇದಕ್ಕಾಗಿಯೇ ತಜ್ಞರು ಪಾಶ್ಚಾತ್ಯ ಶೌಚಾಲಯ ಬಳಸುವಾಗ ಟಿಶ್ಯೂ ಪೇಪರ್ ಅಥವಾ ಟಾಯ್ಲೆಟ್ ಪೇಪರ್ ಬಳಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.

ಪೈಲ್ಸ್​ ಅಪಾಯ: ವೆಸ್ಟರ್ನ್ ಟಾಯ್ಲೆಟ್ ದೀರ್ಘಕಾಲದವರೆಗೆ ಬಳಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಇದು ಪೈಲ್ಸ್ ಅಪಾಯವನ್ನು ಹೆಚ್ಚಿಸುತ್ತದೆ. ಹೊಟ್ಟೆಯನ್ನು ಖಾಲಿ ಮಾಡಲು ಗುದ ಸ್ನಾಯುಗಳ ಮೇಲೆ ಒತ್ತಡ ಹೇರುವುದರಿಂದ ಇದು ಸಂಭವಿಸುತ್ತದೆ. ಹೊಟ್ಟೆಯನ್ನು ಖಾಲಿ ಮಾಡುವಾಗ ಆಯಾಸಗೊಳಿಸುವುದರಿಂದ ಗುದನಾಳ ಮತ್ತು ಗುದದ್ವಾರದ ರಕ್ತನಾಳಗಳು ಊದಿಕೊಳ್ಳುತ್ತವೆ. ಇದು ಮೂಲವ್ಯಾಧಿಗೆ ಕಾರಣವಾಗುತ್ತದೆ. ನಿಮ್ಮ ಹೊಟ್ಟೆಯನ್ನು ಖಾಲಿ ಮಾಡಲು ನೀವು ಪ್ರಯಾಸಪಟ್ಟರೆ, ಗುದದ್ವಾರದಿಂದ ರಕ್ತಸ್ರಾವವಾಗಬಹುದು. ಇದು ಕೂಡ ಮೂಲವ್ಯಾಧಿಯ ಲಕ್ಷಣವಾಗಿದೆ. ಹೆಚ್ಚುವರಿಯಾಗಿ ನೀರಿನ ಜೆಟ್‌ಗಳು ಮೂಲವ್ಯಾಧಿಗಳಿಗೆ ಕಾರಣವಾಗಬಹುದು. ಏಕೆಂದರೆ ಗುದದ್ವಾರದ ನರಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ನೀರಿನ ಜೆಟ್‌ಗಳ ಒತ್ತಡವು ಈ ನರಗಳನ್ನು ಹಾನಿಗೊಳಿಸುತ್ತದೆ.

ಬಿರುಕು ಸಮಸ್ಯೆ: ಊದಿಕೊಂಡ ಗುದನಾಳದ ಮೇಲೆ ಒತ್ತಡ ಹೇರಿದಾಗ, ಗುದನಾಳದ ಅಂಗಾಂಶಗಳು ಹರಿದು ಹೋಗುವ ಸಾಧ್ಯತೆ ಇರುತ್ತದೆ. ಇದು ಬಿರುಕುಗಳ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ನೀರು ಅಗತ್ಯವಿದೆ: ಪಾಶ್ಚಿಮಾತ್ಯ ಶೌಚಾಲಯಗಳಿಗೆ ಭಾರತೀಯ ಶೌಚಾಲಯಗಳಿಗಿಂತ ಹೆಚ್ಚಿನ ನೀರು ಬೇಕಾಗುತ್ತದೆ. ಇದರಿಂದಾಗಿ ಹಲವು ಲೀಟರ್ ನೀರು ವ್ಯರ್ಥವಾಗುತ್ತಿದೆ. ಟಾಯ್ಲೆಟ್ ಪೇಪರ್ ಅನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.

ಹೆಚ್ಚು ಸಮಯ: ಭಾರತೀಯ ಶೌಚಾಲಯಗಳಿಗೆ ಹೋಲಿಸಿದರೆ ಪಾಶ್ಚಿಮಾತ್ಯ ಶೌಚಾಲಯಗಳು ಫ್ರೆಶ್​ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ನೀವು ಭಾರತೀಯ ಶೌಚಾಲಯದಲ್ಲಿ ಕೇವಲ 2 ರಿಂದ 3 ನಿಮಿಷಗಳಲ್ಲಿ ಫ್ರೆಶ್ ಆಗಬಹುದು. ಆದರೆ, ವೆಸ್ಟರ್ನ್ ಟಾಯ್ಲೆಟ್‌ನಲ್ಲಿ ನೀವು ಫ್ರೆಶ್ ಆಗಲು 5 ​​ರಿಂದ 10 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು. ಪರಿಣಾಮವಾಗಿ ಅನೇಕ ಸಮಸ್ಯೆಗಳು ಕಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.