ETV Bharat / health

ನೀವು ಮಧುಮೇಹ, ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದೀರಾ?; 30 ನಿಮಿಷಗಳ ವಾಕಿಂಗ್​ನಿಂದ ಪರಿಹಾರ: ಈ ಟಿಪ್ಸ್​ ಪಾಲಿಸಿ ನೋಡಿ! - 30 MINUTE WALKING BENEFITS

ಮಧುಮೇಹ, ಹೃದಯ ಸಂಬಂಧಿತ ಕಾಯಿಲೆ, ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿರುವವರು, 30 ನಿಮಿಷಗಳವರೆಗೆ ವಾಕಿಂಗ್ ಮಾಡಿದರೆ ಉತ್ತಮ ಪರಿಹಾರ ಲಭಿಸುತ್ತದೆ ಎಂಬುದು ಆರೋಗ್ಯ ತಜ್ಞರು ಸಲಹೆ ಆಗಿದೆ.

30 MINUTE WALKING HEALTH BENEFITS  DIABETES  WALKING HEALTH BENEFITS  ವಾಕಿಂಗ್​ನ ಆರೋಗ್ಯದ ಲಾಭಗಳು
ವಾಕಿಂಗ್​ನ ಆರೋಗ್ಯದ ಲಾಭಗಳು- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : March 15, 2025 at 1:45 PM IST

Updated : March 15, 2025 at 2:39 PM IST

3 Min Read

30 minute walking Health benefits: ಬದಲಾಗುತ್ತಿರುವ ಜೀವನಶೈಲಿ, ಮಾಲಿನ್ಯ ಹಾಗೂ ತಪ್ಪಾದ ಆಹಾರ ಕ್ರಮಗಳಿಂದಾಗಿ ಅನೇಕರು ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಳ್ಳುವುದು ಸವಾಲಿನ ಕಾರ್ಯವಾಗಿ ಪರಿಣಮಿಸಿದೆ. ಪ್ರತಿಯೊಬ್ಬರೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಜೊತೆಗೆ ರೋಗಗಳಿಂದ ದೂರವಿರಲು ಅನೇಕ ಪ್ರಯತ್ನಗಳಿಗೆ ಮುಂದಾಗುತ್ತಾರೆ. ಕೆಲವರು ವ್ಯಾಯಾಮದತ್ತ ಮುಖ ಮಾಡಿದರೆ, ಇನ್ನು ಕೆಲವರು ವ್ಯಾಯಾಮಕ್ಕೆ ಸಮಯ ನೀಡುವುದಿಲ್ಲ. ದಿನಕ್ಕೆ ಅರ್ಧ ಗಂಟೆ ವಾಕಿಂಗ್ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

ವೇಗವಾಗಿ ವಾಕಿಂಗ್​ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಹೆಚ್ಚು ಕ್ಯಾಲೊರಿಗಳನ್ನು ತ್ವರಿತವಾಗಿ ಕರಗಿಸಲು ಸಾಧ್ಯವಾಗುತ್ತದೆ. ನಿತ್ಯ ತಪ್ಪದೇ ವಾಕಿಂಗ್​ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬಹುದು. ಮೂವತ್ತು ನಿಮಿಷಗಳ ಕಾಲ ವಾಕಿಂಗ್​ನಿಂದ ಯಾವೆಲ್ಲಾ ಆರೋಗ್ಯದ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ಅರಿತುಕೊಳ್ಳೋಣ.

30 ನಿಮಿಷದ ವಾಕಿಂಗ್​ನಿಂದ ಲಭಿಸುವ ಆರೋಗ್ಯದ ಲಾಭಗಳೇನು?:

ಮಧುಮೇಹಿಗಳಿಗೆ ಉತ್ತಮ: ಮಧುಮೇಹಿಗಳು 30 ನಿಮಿಷಗಳವರೆಗೆ ವಾಕಿಂಗ್​ ಮಾಡಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರಲು ಸಾಧ್ಯವಾಗುತ್ತದೆ. ನಿತ್ಯ ತಪ್ಪದೇ ವಾಕಿಂಗ್ ಮಾಡುವುದರಿಂದ ಟೈಪ್-2 ಮಧುಮೇಹ ಬರುವ ಅಪಾಯವು ಕಡಿಮೆಯಾಗುತ್ತದೆ. ರಕ್ತದೊತ್ತಡ ಸಾಮಾನ್ಯವಾಗಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಯಮಿತವಾಗಿ ನಡೆಯುವುದರಿಂದ ಪಾರ್ಶ್ವವಾಯು ಸೇರಿದಂತೆ ಇತರ ಕಾಯಿಲೆಗಳು ಬರದಂತೆ ತಡೆಯುತ್ತದೆ. ಮಧುಮೇಹಿಗಳಿಗೆ ಬೆಳಗ್ಗೆ ಅಥವಾ ಸಂಜೆ ವಾಕಿಂಗ್​ ಮಾಡುವುದು ತುಂಬಾ ಒಳ್ಳೆಯದು. ವಾಕಿಂಗ್​ನಿಂದ ಇನ್ಸುಲಿನ್ ಸೂಕ್ಷ್ಮತೆಯು ಹಾಗೂ ಸ್ನಾಯುಗಳಲ್ಲಿ ಗ್ಲುಕೋಸ್ ಸ್ರವಿಸುವಿಕೆ ಹೆಚ್ಚಾಗುತ್ತದೆ. ಮತ್ತು ಗ್ಲೈಸೆಮಿಕ್ ನಿಯಂತ್ರಣಕ್ಕೆ ಬಂದು ರಕ್ತದಲ್ಲಿನ ಶುಗರ್​ ಲೆವಲ್​ ನಿಯಂತ್ರಿಸಲು ವಾಕಿಂಗ್​ ಸಹಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

30 MINUTE WALKING HEALTH BENEFITS  DIABETES  WALKING HEALTH BENEFITS  ವಾಕಿಂಗ್​ನ ಆರೋಗ್ಯದ ಲಾಭಗಳು
ವಾಕಿಂಗ್​ನ ಆರೋಗ್ಯದ ಲಾಭಗಳು- ಸಾಂದರ್ಭಿಕ ಚಿತ್ರ (Getty Images)

ತೂಕ ನಷ್ಟಕ್ಕೆ ಸಹಾಯ: ತೂಕ ಇಳಿಸಿಕೊಳ್ಳಲು ವಾಕಿಂಗ್​ ಅತ್ಯುತ್ತಮ ಆಯ್ಕೆಯಾಗಿದೆ. ತೂಕ ನಷ್ಟಕ್ಕೆ ವಾಕಿಂಗ್​ ಸುಲಭ ಹಾಗೂ ಪರಿಣಾಮಕಾರಿ ಮಾರ್ಗವಾಗಿದ್ದು, 30 ನಿಮಿಷಗಳವರೆಗೆ ವಾಕಿಂಗ್​ ಮಾಡಿದರೆ, 150 ರಿಂದ 200 ಕ್ಯಾಲೊರಿಗಳನ್ನು ಬರ್ನ್​ ಮಾಡಬಹುದು. ವೇಗವಾಗಿ ನಡೆದರೆ, ಇನ್ನು ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸಬಹುದು. ನಿತ್ಯ ನಿಯಮಿತವಾಗಿ ನಡೆಯುವುದರಿಂದ ತೂಕ ಇಳಿಕೆ ಹೆಚ್ಚು ಸಹಾಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೃದಯದ ಆರೋಗ್ಯ: ಪ್ರತಿದಿನ ತಪ್ಪದೇ ಮೂವತ್ತು ನಿಮಿಷಗಳವರೆಗೆ ವಾಕಿಂಗ್​ ಮಾಡುವುದರಿಂದ ಹೃದಯ ಬಡಿತದಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗುತ್ತದೆ. ಹೃದಯದ ಬಡಿತವು ಹೆಚ್ಚಾಗಿದ್ದರೆ, ಅದನ್ನು ಕಡಿಮೆಯಾಗುತ್ತದೆ. ರಕ್ತದೊತ್ತಡ ಹಾಗೂ ಹೃದ್ರೋಗದ ಅಪಾಯವನ್ನೂ ಕಡಿಮೆ ಮಾಡುತ್ತದೆ. ವೇಗವಾಗಿ ವಾಕಿಂಗ್​ ಮಾಡುವವರಿಗೆ ಹೃದಯಾಘಾತ, ಪಾರ್ಶ್ವವಾಯು ಬರುವ ಅಪಾಯ ಶೇ.30ರಷ್ಟು ಕಡಿಮೆ ಇರುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

ಮಾನಸಿಕ ಆರೋಗ್ಯ: ಇತ್ತೀಚಿನ ದಿನಗಳಲ್ಲಿ ಜೀವನಶೈಲಿ, ಕೆಲಸದ ಒತ್ತಡದಿಂದ ಬಳಲುತ್ತಿರುವವರು ಅನೇಕ ಜನರು ಇದ್ದಾರೆ. ಅಂತಹವರಿಗೆ ವಾಕಿಂಗ್​ ಅತ್ಯುತ್ತಮ ಆಯ್ಕೆಯಾಗಿದೆ. ಪ್ರತಿದಿನ ಅರ್ಧ ಗಂಟೆ ವಾಕಿಂಗ್​ನಿಂದ ಮಾನಸಿಕ ಆರೋಗ್ಯ ಸುಧಾರಿಸಲು ಸಾಧ್ಯವಾಗುತ್ತದೆ. ನಿಯಮಿತವಾಗಿ ವಾಕಿಂಗ್​ ಮಾಡುವುದರಿಂದ ಮೆದುಳಿನಲ್ಲಿ ಎಂಡಾರ್ಫಿನ್‌ ಹಾರ್ಮೋನ್​ಗಳು ಬಿಡುಗಡೆಯಾಗುತ್ತವೆ. ಎಂಡಾರ್ಫಿನ್‌ಗಳು ಮನಸ್ಥಿತಿ ಸುಧಾರಿಸುವುದರ ಜೊತೆಗೆ ಒತ್ತಡ ದೂರವಾಗಿಸಲು ಸಹಾಯ ಮಾಡುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

ಕೀಲು ನೋವಿಗೆ ಪರಿಹಾರ: ಅರ್ಧ ಗಂಟೆ ವಾಕಿಂಗ್​ ಮಾಡುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಸಂಧಿವಾತ ಸಂಬಂಧಿತ ನೋವನ್ನು ಕಡಿಮೆ ಮಾಡುತ್ತದೆ. ವಾರದಲ್ಲಿ ನಾಲ್ಕರಿಂದ ಐದು ದಿನಗಳವರೆಗೆ ನಿಯಮಿತವಾಗಿ ನಡೆಯುವುದರಿಂದ ಸಂಧಿವಾತ ಸಮಸ್ಯೆಯನ್ನು ತಡೆಯುತ್ತದೆ ಎಂದು ಅನೇಕ ಅಧ್ಯಯನಗಳು ತೋರ್ಪಡಿಸಿವೆ. ನಡಿಗೆಯು ಕೀಲುಗಳನ್ನು ರಕ್ಷಿಸುತ್ತದೆ ಹಾಗೂ ಅವುಗಳನ್ನು ನಯಗೊಳಿಸುತ್ತದೆ. ಅವುಗಳನ್ನು ಬೆಂಬಲಿಸುವ ಸ್ನಾಯುಗಳನ್ನು ಬಲಪಡಿಸಿ ಸಂಧಿವಾತ ತಡೆಯಬಹುದು ಎಂದು ವೈದ್ಯರು ತಿಳಿಸುತ್ತಾರೆ.

ರೋಗನಿರೋಧಕ ಶಕ್ತಿ ವೃದ್ಧಿ: ಪ್ರತಿದಿನ ವಾಕಿಂಗ್​ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶೀತ, ಜ್ವರದ ಸಮಯದಲ್ಲಿ ರಕ್ಷಣೆ ಕೊಡುತ್ತದೆ. 1,000ಕ್ಕೂ ಹೆಚ್ಚು ಪುರುಷರು ಹಾಗೂ ಮಹಿಳೆಯರ ಮೇಲೆ ನಡೆಸಲಾಗಿದ್ದ ಅಧ್ಯಯನದಲ್ಲಿ, ವಾರಕ್ಕೆ 30 ನಿಮಿಷಗಳ ಕಾಲ ನಡೆದಾಡುವವರು ಹಾಗೂ ವಾರಕ್ಕೊಮ್ಮೆ ಇಲ್ಲವೆ ಅದಕ್ಕಿಂತ ಕಡಿಮೆ ಬಾರಿ ವ್ಯಾಯಾಮ ಮಾಡುವವರ ಕುರಿತಂತೆ ಸಂಶೋಧನೆ ನಡೆಸಲಾಗಿದೆ. ವಾಕಿಂಗ್​, ವ್ಯಾಯಾಮ ಮಾಡುವವರಲ್ಲಿ ಅನಾರೋಗ್ಯ ಸ್ಥಿತಿಯು ಅಲ್ಪಾವಧಿಗೆ ಇರುತ್ತದೆ. ಅವರಲ್ಲಿ ರೋಗಲಕ್ಷಣಗಳು ಕಡಿಮೆ ಇರುತ್ತದೆ ಎಂಬುದು ಅಧ್ಯಯನವು ವಿವರಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಿ:

ಇವುಗಳನ್ನೂ ಓದಿ:

Last Updated : March 15, 2025 at 2:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.