ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ಮುಖ್ಯಭೂಮಿಕೆಯ ಕೊನೆ ಚಿತ್ರ ಮ್ಯಾಕ್ಸ್ ಕಳೆದ ವರ್ಷಾಂತ್ಯ ತೆರೆಕಂಡು ಯಶಸ್ವಿಯಾಗಿದೆ. 2024ರ ಡಿಸೆಂಬರ್ 25ರಂದು ತೆರೆಕಂಡ ಚಿತ್ರ ಫ್ಯಾನ್ಸ್ ನಿರೀಕ್ಷೆ ತಲುಪುವಲ್ಲಿ ಯಶಸ್ವಿಯಾಗಿದೆ. ಕಿಚ್ಚನ ಮುಂದಿನ ಚಿತ್ರದ ಸುತ್ತಲಿನ ಕುತೂಹಲ ಜೋರಾಗಿದೆ. ಈ ಹೊತ್ತಲ್ಲಿ ಸ್ವತಃ ಸುದೀಪ್ ಪೂರೈಸಿರುವ ಮಾಹಿತಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಟ್ಟುಮಸ್ತಾದ ಮೈಕಟ್ಟಿನ ಫೋಟೋ ಹಂಚಿಕೊಂಡಿದ್ದರು. ಸ್ಯಾಂಡಲ್ವುಡ್ನ ಫಿಟ್ನೆಸ್ ಐಕಾನ್ ಎಂದೇ ಜನಪ್ರಿಯರಾಗಿರುವ ಬಾದ್ಷಾನ ಮೈಕಟ್ಟನ್ನು ಕಂಡ ಫ್ಯಾನ್ಸ್ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಟ ತಮ್ಮ ಪೋಸ್ಟ್ಗೆ ಏಪ್ರಿಲ್ 16 ಎಂದಷ್ಟೇ ಕ್ಯಾಪ್ಷನ್ ಕೊಟ್ಟಿದ್ದರು. ಇದು ಅಭಿಮಾನಿಗಳ ಕುತೂಹಲ ಕೆರಳಿಸಿತ್ತು. ಏಪ್ರಿಲ್ 16ರಂದು ಏನಾಗಲಿದೆ? ನಟ ತಮ್ಮ ಸಿನಿಮಾಗೆ ಸಂಬಂಧಿಸಿದ ಮಾಹಿತಿ ಒದಗಿಸಲಿದ್ದಾರಾ? ಮುಂದಿನ ಚಿತ್ರ ಅನೌನ್ಸ್ ಆಗಲಿದೆಯೇ? ಅಥವಾ ಸಿನಿಮಾ ಸೆಟ್ಟೇರಲಿದೆಯೇ? ಎಂದೆಲ್ಲಾ ಅಂದಾಜಿಸಿದ್ದರು. ಏಪ್ರಿಲ್ 16ಕ್ಕೆ ಏನಾಗಲಿದೆ ಎಂಬುದನ್ನು ಇಂದೇ ಬಿಟ್ಟುಕೊಟ್ಟಿದ್ದಾರೆ ಕಿಚ್ಚ ಸುದೀಪ್.
To all those who were keen to know what's happening on April 16th! ... #BRB goes on the floor.
— Kichcha Sudeepa (@KicchaSudeep) April 9, 2025
More info about the sets,cast, and team will follow.
🤗❤️
K
ಎಕ್ಸ್ ಖಾತೆಯಲ್ಲಿ ವ್ಯಕ್ತವಾಗುತ್ತಿದ್ದ ಕುತೂಹಲವನ್ನುದ್ದೇಶಿಸಿ ರಿಪ್ಲೇ ಮಾಡಿರುವ ನಾಯಕ ನಟ ಸುದೀಪ್, ಏಪ್ರಿಲ್ 16 ರಂದು ಏನಾಗಲಿದೆ ಎಂಬುದನ್ನು ತಿಳಿಯಲು ಉತ್ಸುಕರಾಗಿರುವ ಎಲ್ಲರಿಗೂ! ಬಿಲ್ಲ ರಂಗ ಭಾಷಾ ಸೆಟ್ಟೇರುತ್ತಿದೆ. ಸೆಟ್ಸ್, ಪಾತ್ರವರ್ಗ ಮತ್ತು ತಂಡದ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವೇ ಸೃಷ್ಟಿಸಿದ್ದ ಕುತೂಹಲಕ್ಕೆ ಈಗಲೇ ಉತ್ತರ ಕೊಟ್ಟು, ತಮ್ಮ ಕಟ್ಟಾಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ಬೆಂಬಲಿಸಿದ ಧನ್ವೀರ್ 'ವಾಮನ' ಸಿನಿಮಾ ಹೇಗಿದೆ? ಫ್ಯಾನ್ಸ್ ಸೆಲೆಬ್ರೇಶನ್ ಜೋರು
ಬಿಲ್ಲ ರಂಗ ಭಾಷಾ (ಬಿಆರ್ಬಿ) ಸಿನಿಮಾಗೆ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ಸುದೀಪ್ ಅವರ ಸೂಪರ್ ಹಿಟ್ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ದೇಶಿಸಿದ್ದರು. ಇದೀಗ ಮತ್ತೊಮ್ಮೆ ಬಿಗ್ ಪ್ರಾಜೆಕ್ಟ್ನಲ್ಲಿ ಕೈ ಜೋಡಿಸಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಫ್ಯಾನ್ಸ್ ನಿರೀಕ್ಷೆಗಳನ್ನು ತಲುಪುವ ಸಲುವಾಗಿ ಸುದೀಪ್ ಕೂಡಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ತಮ್ಮ ಫಿಟ್ನೆಸ್ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಬಹುಬೇಡಿಕೆ ತಾರೆಯ ಫೋಟೋ ನೋಡಿದವರು, ಸಿನಿಮಾ ಹೇಗೆ ಮೂಡಿಬರಬಹುದೆಂಬ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
April 16th .... 🕰 pic.twitter.com/BP6RJg9Bhc
— Kichcha Sudeepa (@KicchaSudeep) April 2, 2025
ಇದನ್ನೂ ಓದಿ: 'ಕೊನೆ ಉಸಿರಿರುವವರೆಗೂ ಕನ್ನಡ ಸಿನಿಮಾ ಮಾತ್ರ': ಗೆಳೆಯ ಧನ್ವೀರ್ ಚಿತ್ರ ವೀಕ್ಷಿಸಿ ದರ್ಶನ್ ಹೇಳಿದ್ದಿಷ್ಟು
ಕಿಚ್ಚನ ಕೊನೆ ಚಿತ್ರ 'ಮ್ಯಾಕ್ಸ್' 2024ರ ಡಿಸೆಂಬರ್ 25ರಂದು ತೆರೆಕಂಡು ಸೂಪರ್ ಹಿಟ್ ಆಗಿದೆ. ಎರಡೂವರೆ ವರ್ಷಗಳ ನಂತರ ಬಂದ ಸುದೀಪ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತ್ತು. ಇದೀಗ ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.