ETV Bharat / entertainment

'ಎಂಥಾ ಚೆಂದಾನೆ ಇವಳು': ಮುದ್ದು ಮಗಳ ವಿಡಿಯೋ ಹಂಚಿಕೊಂಡ ಕಾಂತಾರ ಸ್ಟಾರ್​​; ರಿಷಬ್​ ಹೇಳಿದ್ದಿಷ್ಟು - Rishab Shetty Daughter Video

ಕಾಂತಾರ ಸ್ಟಾರ್​​ ರಿಷಬ್​ ಶೆಟ್ಟಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಮಗಳು ರಾಧ್ಯಾ ಅವಳನ್ನೊಳಗೊಂಡ ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ. ದೃಶ್ಯದ ಹಿನ್ನೆಲೆಯಲ್ಲಿ 'ಎಂಥಾ ಚೆಂದಾನೆ ಇವಳು' ಹಾಡು ಕೇಳಿಬರುತ್ತಿದೆ. ಇದು ರಿಷಬ್​ ನಿರ್ಮಾಣದ ಮುಂದಿನ ಬಹುನಿರೀಕ್ಷಿತ ಲಾಫಿಂಗ್​​ ಬುದ್ಧ ಚಿತ್ರದ ಹಾಡಾಗಿದ್ದು, ಕ್ಯೂಟ್​ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

author img

By ETV Bharat Karnataka Team

Published : Aug 13, 2024, 2:33 PM IST

Rishab Shetty Family
ನಟ ರಿಷಬ್ ಶೆಟ್ಟಿ ಕುಟುಂಬ (ANI)

ಡಿವೈನ್​​ ಸ್ಟಾರ್​​ ಖ್ಯಾತಿಯ ರಿಷಬ್​ ಶೆಟ್ಟಿ ಓರ್ವ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ ಪಕ್ಕಾ ಫ್ಯಾಮಿಲಿ ಮ್ಯಾನ್​ ಕೂಡಾ ಹೌದು. ಸದಾ ಸಿನಿಮಾ ಜಪ ಮಾಡುವ ಕಿರಿಕ್​ ಪಾರ್ಟಿ ನಿರ್ದೇಶಕರು ತಮ್ಮ ಕುಟುಂಬಕ್ಕೂ ಸಮಯ ಮೀಸಲಿಡುತ್ತಾರೆ. ಪ್ರೀತಿಯ ಪತ್ನಿ ಪ್ರಗತಿ, ಮುದ್ದಿನ ಮಕ್ಕಳಾದ ರಾಧ್ಯ ಹಾಗೂ ರನ್ವಿತ್​​ ಮೇಲಿನ ಪ್ರೀತಿಯನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಶೇರ್ ಮಾಡಿರುವ ಸ್ಪೆಷಲ್​ ವಿಡಿಯೋ ಅವರ ಅಭಿಮಾನಿಗಳ ಗಮನ ಸೆಳೆದಿದೆ.

'ಎಂಥಾ ಚೆಂದಾನೆ ಇವಳು'..... ರಿಷಬ್​ ಶೆಟ್ಟಿ ನಿರ್ಮಾಣದ ಮುಂದಿನ ಬಹುನಿರೀಕ್ಷಿತ ಚಿತ್ರ ಲಾಫಿಂಗ್​​ ಬುದ್ಧ. ಮನರಂಜನೆಯ ಮಹಾಪೂರವೇ ಇರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರ ಜೋರಾಗೇ ನಡೆಯುತ್ತಿದೆ. ಇತ್ತೀಚೆಗಷ್ಟೇ 'ಎಂಥಾ ಚೆಂದಾನೆ ಇವಳು' ಶೀರ್ಷಿಕೆಯ ಹಾಡು ಅನಾವರಣಗೊಂಡಿತ್ತು. ಇದೀಗ ಈ ಹಾಡಿನ ಪ್ರಮೋಶನ್​ನಲ್ಲಿ ನಿರ್ಮಾಪಕರು ಬ್ಯಸಿಯಾಗಿದ್ದಾರೆ.

ಡಿವೈನ್​ ಸ್ಟಾರ್ ಇನ್​ಸ್ಟಾಗ್ರಾಮ್​ ಪೋಸ್ಟ್: ಹೌದು, ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಮಗಳು ರಾಧ್ಯಾ ಅವಳನ್ನೊಳಗೊಂಡ ಸುಂದರ ವಿಡಿಯೋ ಹಂಚಿಕೊಳ್ಳಲಾಗಿದೆ. ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಅನಾವರಣಗೊಂಡಿರುವ 'ಎಂಥಾ ಚೆಂದಾನೆ ಇವಳು' ಹಾಡು ಕೇಳಿಬರುತ್ತಿದೆ. ಮುದ್ದು ರಾಧ್ಯಾಳ ಮುದ್ದಾದ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ. ಬ್ಯೂಟಿಫುಲ್​ ವಿಡಿಯೋ ಶೇರ್ ಮಾಡಿದ ಡಿವೈನ್​ ಸ್ಟಾರ್, ''ಎಂಥಾ ಚೆಂದನೇ ಇವಳು, ಸಾವಿರ ಹಬ್ಬಗಳ ಮಗಳು'' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ: 'ನಿಮ್ಮ ಮನೆಮನಗಳಿಗೆ ಬರುತ್ತಿರುವ ಅಣ್ಣಯ್ಯನಿಗೆ ಶುಭವಾಗಲಿ': ಪ್ರಮೋದ್​​​ ನಿರ್ಮಾಣದ ಧಾರವಾಹಿಗೆ ರಿಷಬ್​ ಶೆಟ್ಟಿ ಸಾಥ್ - Annayya Serial

ಟ್ರೇಲರ್​ ಬಿಡುಗಡೆಗೆ ಮುಹೂರ್ತ ಫಿಕ್ಸ್: ಇದೇ ಆಗಸ್ಟ್​ 7ರಂದು 'ಲಾಫಿಂಗ್ ಬುದ್ಧ' ಚಿತ್ರದ ಮೊದಲ ಗೀತೆ ಅನಾವರನಗೊಂಡಿತ್ತು. ಆಗಸ್ಟ್​​ 30ರಂದು ಸಿನಿಮಾ ಬಿಡುಗಡೆ ಆಗಲಿದೆ. ಬಹುನಿರೀಕ್ಷಿತ ಟ್ರೇಲರ್​ ಅನಾವರಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಳೆದ ದಿನವಷ್ಟೇ ಪೋಸ್ಟರ್ ಹಂಚಿಕೊಂಡ ನಿರ್ಮಾಪಕರು, 'ಲಾಫಿಂಗ್​​ ಬುದ್ಧ 14ರ ಮಿಡ್​ನೈಟ್​​ ಡ್ಯೂಟಿಗೆ ಬರಲಿದ್ದಾನೆ' ಎಂದು ತಿಳಿಸಿದ್ದರು.

ಇದನ್ನೂ ಓದಿ: 'ಲಾಫಿಂಗ್​​ ಬುದ್ಧ' ಟ್ರೇಲರ್​ ರಿಲೀಸ್​ಗೆ ದಿನ ನಿಗದಿ: ರಿಷಬ್​ ನಿರ್ಮಾಣದ ಚಿತ್ರದಲ್ಲಿ ಮೋಡಿ ಮಾಡಲು ರೆಡಿಯಾದ ಪ್ರಮೋದ್​ - Laughing Buddha Trailer

ಭರತ್ ರಾಜ್ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಪೊಲೀಸರ ಕುಟುಂಬದ ಸುತ್ತ ಸಾಗುತ್ತದೆ. ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟ ಪ್ರಮೋದ್ ಶೆಟ್ಟಿ ಅವರು ಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಿದು. ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಕಾನ್ಸ್​ಟೇಬಲ್​​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತೇಜು ಬೆಳವಾಡಿ ಸತ್ಯವತಿ ಪಾತ್ರ ನಿರ್ವಹಿಸಿದ್ದಾರೆ. ದಿಗಂತ್ ಮಂಚಾಲೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭದ್ರಾವತಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕೆ.ಎಂ.ಪ್ರಕಾಶ್ ಅವರು ಸಂಕಲನ‌ದ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್​​ 30ರಂದು ಸಿನಿಮಾ ಬಿಡುಗಡೆ ಆಗಲಿದೆ. ನಾಳೆ ಟ್ರೇಲರ್​ ರಿವೀಲ್​​ ಆಗಲಿದ್ದು, ಪ್ರೇಕ್ಷಕರು ಕಾತರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.