ಟಾಲಿವುಡ್ ಸೂಪರ್ ಸ್ಟಾರ್, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ (Anna Lezhneva) ಕಳೆದ ರಾತ್ರಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ, ತಮ್ಮ ಮುಡಿ ಅರ್ಪಿಸಿದ್ದಾರೆ. ಕಳೆದ ಮಂಗಳವಾರ, ಮಗ ಮಾರ್ಕ್ ಶಂಕರ್ ಅಗ್ನಿ ಅವಘಡದಲ್ಲಿ ಸಿಲುಕಿ, ಕಳೆದ ದಿನ ಭಾರತಕ್ಕೆ ವಾಪಸ್ ಆಗಿದ್ದಾರೆ. ಪುಟ್ಟ ಬಾಲಕ ಚೇತರಿಸಿಕೊಂಡಿದ್ದು, ತಾಯಿ ದೇವರ ದರ್ಶನ ಪಡೆದಿದ್ದಾರೆ.
ದೇವರ ದರ್ಶನ, ಪೂಜಾ ಕಾರ್ಯಗಳಲ್ಲಿ ಭಾಗಿ: ವೆಂಕಟೇಶ್ವರ ದರ್ಶನದ ಬಳಿಕ, ದೇವಾಲಯದ ಅರ್ಚಕರು ರಂಗನಾಯಕ ಮಂಟಪದಲ್ಲಿ ವೇದ ಮಂತ್ರಗಳೊಂದಿಗೆ ಅನ್ನಾ ಲೆಜ್ನೆವಾ ಅವರಿಗೆ ಆಶೀರ್ವದಿಸಿದರು. ನಂತರ, ಅಖಿಲಾಂಡಂಗೆ ಭೇಟಿ ನೀಡಿ, ಅಲ್ಲಿ ತೆಂಗಿನಕಾಯಿ ಒಡೆದು ನಮನ ಸಲ್ಲಿಸಿದರು. ಇದಕ್ಕೂ ಮೊದಲು, ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಅಧಿಕಾರಿಗಳು ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಅವರನ್ನು ಸ್ವಾಗತಿಸಿದರು.
ಭಾನುವಾರ ಸಂಜೆ ತಿರುಪತಿಗೆ ಆಗಮಿಸಿದ ಡಿಸಿಎಂ ಕಲ್ಯಾಣ್ ಪತ್ನಿ, ಮೊದಲು ಶ್ರೀ ಭೂವರಾಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ, ಶ್ರೀ ಪದ್ಮಾವತಿ ವಿಚಾರಣಾ ಕೇಂದ್ರದಲ್ಲಿ ನಡೆದ ಆಚರಣೆಯಲ್ಲಿ ಭಾಗವಹಿಸಿದರು. ಹಿಂದೂಯೇತರ ವಿಸಿಟರ್ ಆಗಿ, ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಅತಿಥಿ ಗೃಹದಲ್ಲಿ ಅಗತ್ಯವಿರುವ ಫಾರ್ಮ್ಗೆ ಸಹಿ ಹಾಕಿದರು.
ಪವನ್ ಕಲ್ಯಾಣ್ಗೆ ಅಣ್ಣ ಚಿರಂಜೀವಿ ಸಾಥ್: ಮಂಗಳವಾರ ಸಿಂಗಾಪುರದಲ್ಲಿ ಅಗ್ನಿ ಅವಘಡ ಸಂಭವಿಸಿ, ಪುತ್ರ ಮಾರ್ಕ್ ಶಂಕರ್ ಕೈ ಕಾಲುಗಳಲ್ಲಿ ಸುಟ್ಟ ಗಾಯಗಳಾಗಿತ್ತು. ಅಂದೇ ರಾತ್ರಿ ಪವನ್ ಕಲ್ಯಾಣ್ ಮತ್ತು ಅವರ ಸಹೋದರ, ಸೂಪರ್ ಸ್ಟಾರ್ ಚಿರಂಜೀವಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದರು. ಕಳೆದ ದಿನ, ಭಾನುವಾರ ಭಾರತಕ್ಕೆ ಗಾಯಗೊಂಡ ಮಗನೊಂದಿಗೆ ವಾಪಸ್ ಆಗಿದ್ದಾರೆ.
ಇದನ್ನೂ ಓದಿ: 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ: ಹೆಚ್ಡಿಕೆ ಸೇರಿ ಗಣ್ಯರಿಂದ ಸಂತಾಪ
ಏಪ್ರಿಲ್ 10 ರಂದು, ಮೆಗಾಸ್ಟಾರ್ ಚಿರಂಜೀವಿ ಎಕ್ಸ್ (ಟ್ವಿಟರ್) ನಲ್ಲಿ ಅಪ್ಡೇಟ್ಸ್ ಹಂಚಿಕೊಂಡಿದ್ದರು. ಮಾರ್ಕ್ ಶಂಕರ್ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಇನ್ನೂ ಚೇತರಿಸಿಕೊಳ್ಳಬೇಕಾಗಿದೆ ಎಂದು ಬಹಿರಂಗಪಡಿಸಿದ್ದರು. ಜೊತೆಗೆ ಬೆಂಬಲ ಸೂಚಿಸಿದ ಸರ್ವರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದರು.
మా బిడ్డ మార్క్ శంకర్ ఇంటికొచ్చేసాడు. అయితే ఇంకా కోలుకోవాలి. మా కులదైవమైన ఆంజనేయ స్వామి దయతో, కృపతో త్వరలోనే పూర్తి ఆరోగ్యంతో, మళ్ళీ మామూలుగా ఎప్పటిలానే వుంటాడు.
— Chiranjeevi Konidela (@KChiruTweets) April 10, 2025
రేపు హనుమత్ జయంతి, ఆ స్వామి ఓ పెద్ద ప్రమాదం నుంచి, ఓ విషాదం నుంచి ఆ పసి బిడ్డని కాపాడి మాకు అండగా… pic.twitter.com/nEcWQEj92v
ಇದನ್ನೂ ಓದಿ: ಗಂಗಾ ನದಿಯಲ್ಲಿ ನಟ ಮನೋಜ್ ಕುಮಾರ್ ಚಿತಾಭಸ್ಮ ವಿಸರ್ಜಿಸಿದ ಕುಟುಂಬಸ್ಥರು
ಅವರ ಟ್ವೀಟ್ನಲ್ಲಿ, "ನಮ್ಮ ಮಗು ಮಾರ್ಕ್ ಶಂಕರ್ ಮನೆಗೆ (ಸಿಂಗಾಪುರ) ಬಂದಿದ್ದಾನೆ. ಆದರೆ ಅವನಿನ್ನೂ ಚೇತರಿಸಿಕೊಳ್ಳಬೇಕಾಗಿದೆ. ನಮ್ಮ ಕುಲದೇವರಾದ ಆಂಜನೇಯ ಸ್ವಾಮಿಯ ಕೃಪೆಯಿಂದ, ಅವನು ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಂಡು, ಸಹಜ ಸ್ಥಿತಿಗೆ ಮರಳುತ್ತಾನೆ. ಆ ಭಗವಂತ ನಮ್ಮೊಂದಿಗೆ ನಿಂತು ಈ ಪುಟ್ಟ ಮಗುವನ್ನು ದೊಡ್ಡ ದುರಂತದಿಂದ ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ, ಪ್ರತಿಯೊಬ್ಬರೂ ನಮ್ಮ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ, ಮಾರ್ಕ್ ಶಂಕರ್ ಆದಷ್ಟು ಬೇಗ ಚೇತರಿಸಿಕೊಳ್ಳಬೇಕು ಎಂದು ಹಾರೈಸಿದ್ದಾರೆ. ಅವರು ಮಗುವಿಗಾಗಿ ಪ್ರಾರ್ಥಿಸುತ್ತಿದ್ದಾರೆ ಮತ್ತು ಆಶೀರ್ವಾದಿಸುತ್ತಿದ್ದಾರೆ. ನನ್ನ ಪರವಾಗಿ, ನನ್ನ ಕಿರಿಯ ಸಹೋದರ ಕಲ್ಯಾಣ್ ಬಾಬು ಮತ್ತು ನಮ್ಮ ಇಡೀ ಕುಟುಂಬದ ಪರವಾಗಿ, ನಾವು ನಿಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದು ಬರೆದುಕೊಂಡಿದ್ದರು.