ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ 'ಬುದ್ದಿವಂತ' ನಟ-ನಿರ್ದೇಶಕರೆಂದೇ ಹೆಸರಾಗಿರುವವರು ಉಪೇಂದ್ರ. ರಿಯಲ್ ಸ್ಟಾರ್ ತಮ್ಮ ನಟನೆಯ ಜೊತೆಗೆ ನಿರ್ದೇಶನದಲ್ಲೂ ವಿಶೇಷ ಛಾಪು ಮೂಡಿಸಿದ್ದಾರೆ. ಈಗ ಇವರ ಪುತ್ರ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಹೌದು, ಸ್ಯಾಂಡಲ್ವುಡ್ನ ಮತ್ತೊಂದು ಸ್ಟಾರ್ ಕುಟುಂಬದ ಕುಡಿಯೀಗ ಬೆಳ್ಳಿತೆರೆ ಮೇಲೆ ಮಿಂಚಲು ಅಣಿಯಾಗಿದ್ದಾರೆ.
ಬಣ್ಣ ಹಚ್ಚಲು ರೆಡಿ ಆಯುಷ್ ಉಪೇಂದ್ರ: ಗ್ಲ್ಯಾಮರ್ನಿಂದ ತುಂಬಿರುವ ಸಿನಿಮಾ ಇಂಡಸ್ಟ್ರಿಗೆ ಸ್ಟಾರ್ ಕಿಡ್ಸ್ ಎಂಟ್ರಿ ಕೊಡೋದು ಹೊಸತೇನಲ್ಲ. ಈ ಪೈಕಿ ಕೆಲವರು ನಿರೀಕ್ಷೆಯಂತೆ ಯಶಸ್ಸು ಕಾಣುತ್ತಾರೆ. ಇತ್ತೀಚೆಗಷ್ಟೇ ದುನಿಯಾ ವಿಜಯ್ ಕುಮಾರ್ ಅವರ ಇಬ್ಬರು ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ.
ಮಂತ್ರಾಲಯದಲ್ಲಿ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ: ಉಪ್ಪಿ ಆಪ್ತರೊಬ್ಬರು ಹೇಳುವ ಹಾಗೆ, ಆಯುಷ್ ಹುಟ್ಟುಹಬ್ಬದ ಅಂಗವಾಗಿ ಇತ್ತೀಚೆಗಷ್ಟೇ ಇಡೀ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ.

ಪುರುಷೋತ್ತಮ್ ನಿರ್ದೇಶನದ ಸಿನಿಮಾ?: ಆಯುಷ್ ಉಪೇಂದ್ರ ಸಿನಿಮಾದೆಡೆಗೆ ಒಲವು ಹೊಂದಿದ್ದಾರೆ. ಅಪ್ಪ ಅಮ್ಮ ಇಬ್ಬರೂ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಹೀಗಾಗಿ ಅವರಿಗೆ ರಕ್ತಗತವಾಗಿ ಕಲೆ ಒಲಿದಿದೆ ಅಂದ್ರೆ ತಪ್ಪಾಗಲ್ಲ. ಆಯುಷ್ ಉಪೇಂದ್ರ ಅವರನ್ನು ಇಂಡಸ್ಟ್ರಿಗೆ ನಿರ್ದೇಶಕ ಪುರುಷೋತ್ತಮ್ ಪರಿಚಯಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ವಿಡಿಯೋ: ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ಭೇಟಿಯಾದ ವಿರಾಟ್, ಅನುಷ್ಕಾ ದಂಪತಿ
ಯಶ್ ಅವರಿಗೆ ಮೊದಲಾಸಲ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಪುರುಷೋತ್ತಮ್ ಈಗ ಉಪ್ಪಿ ಮಗನನ್ನು ಇಂಡಸ್ಟ್ರಿಗೆ ಲಾಂಚ್ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ತಾರಾ ಪತಿ ವೇಣು ಈ ಚಿತ್ರಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಕೆಲ ದಿನಗಳಲ್ಲೇ ಆಯುಷ್ ಫೋಟೋ ಶೂಟ್ ಮಾಡಲು ಸಿದ್ಧತೆ ನಡೆದಿದೆ. ಈ ಫೋಟೋಶೂಟ್ ಬಳಿಕ ಅಧಿಕೃತವಾಗಿ ಉಪೇಂದ್ರ ಕುಟುಂಬ ಮಗನ ಸಿನಿಮಾ ಎಂಟ್ರಿ ಬಗ್ಗೆ ತಿಳಿಸಲಿದೆ. ಉಪೇಂದ್ರ ಹೋಂ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ ಅನ್ನೋ ಮಾಹಿತಿ ಇದೆ. ಆದಾಗ್ಯೂ, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಕಾಂತಾರದಲ್ಲಿನ ನಿನ್ನ ಪಾತ್ರ ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ: ರಾಕೇಶ್ ಪೂಜಾರಿ ಬಗ್ಗೆ ರಿಷಬ್ ಶೆಟ್ಟಿ ಮನದಾಳ
ಅಪ್ಪ ಅಮ್ಮನ ಸಿನಿಮಾಗಳನ್ನು ನೋಡುತ್ತಾ ಬಂದಿರೋ ಆಯುಷ್ ಸಿನಿಮಾ ಹೀರೋ ಆಗಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಓರ್ವ ನಟನಿಗೆ ಬೇಕಾಗುವ ಡ್ಯಾನ್ಸ್, ಫೈಟ್ ಹಾಗೂ ರಂಗಭೂಮಿಯಲ್ಲಿ ಅಭಿನಯ ತರಬೇತಿ ಪಡೆದುಕೊಂಡು ಆಯುಷ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾ ಇದ್ದಾರೆ. ಈಗಾಗಲೇ ತಂಗಿ ಐಶ್ವರ್ಯಾ ಅವರು ತಾಯಿ ಪ್ರಿಯಾಂಕಾ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಈಗ ಆಯುಷ್ ಸರದಿ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟರ ಮಟ್ಟಿಗೆ ಮೋಡಿ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.