ETV Bharat / entertainment

ಸೂಪರ್​ಸ್ಟಾರ್ ಸೂರ್ಯ ನಟನೆಯ 'ಕಂಗುವ' ವಿಮರ್ಶೆ : ಮೊದಲ ದಿನದ ಕಲೆಕ್ಷನ್​ ಹೇಗಿರಲಿದೆ?

ಸೌತ್​ ಸೂಪರ್ ಸ್ಟಾರ್ ಸೂರ್ಯ ಮುಖ್ಯಭೂಮಿಕೆಯ 'ಕಂಗುವ' ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

Suriya Starrer Kanguva
ಸೂರ್ಯ ನಟನೆಯ 'ಕಂಗುವ' (Photo: Film Poster)
author img

By ETV Bharat Entertainment Team

Published : Nov 14, 2024, 4:10 PM IST

ಸೌತ್​ ಸೂಪರ್ ಸ್ಟಾರ್ ಸೂರ್ಯ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ 'ಕಂಗುವ' ಇಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಮಾರ್ನಿಂಗ್​ ಶೋಗಳು ನಡೆದಿವೆ. ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

'ಕಂಗುವ' ಸಿನಿಮಾ ಬಾಲಿವುಡ್ ತಾರೆಯರಾದ ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದೆ. ಅಲ್ಲದೇ ಬಹುನಿರೀಕ್ಷಿತ ಚಿತ್ರ ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ ಮತ್ತು ಕೆಎಸ್ ರವಿಕುಮಾರ್ ಅವರಂತಹ ಪ್ರತಿಭಾನ್ವಿತರನ್ನು ಒಳಗೊಂಡಿದ್ದು ಸ್ಟ್ಯಾಂಡರ್ಡ್, 3ಡಿ ಮತ್ತು ಐಮ್ಯಾಕ್ಸ್​​ ಸ್ವರೂಪಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೇಗಿರಲಿದೆ?: ಮೊದಲ ದಿನದ ಪ್ರದರ್ಶನಗಳು ಅದ್ಭುತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್​​ ಆರಂಭಿಕ ಮಾಹಿತಿಯ ಪ್ರಕಾರ, ಅಡ್ವಾನ್ಸ್​ ಬುಕ್ಕಿಂಗ್​ನಲ್ಲಿ 17.61 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಸಿನಿಮಾ ವಿಶ್ವಾದ್ಯಂತ 10,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಕಾಲಿವುಡ್‌ ಇತಿಹಾಸದಲ್ಲೇ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರುವ ಸಿನಿಮಾ ಇದು. ಟ್ರೇಡ್‌ ಬಝ್ ಪ್ರಕಾರ, ಕಂಗುವ ಮೊದಲ ದಿನ 15 ರಿಂದ 20 ಕೋಟಿ ರೂ. ಕಲೆಕ್ಷನ್​ ಮಾಡಲಿದೆ. ಭಾರಿ ನಿರೀಕ್ಷೆಗಳೊಂದಿಗೆ ಬಂದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಜಾಕ್‌ಪಾಟ್‌ ಹೊಡೆಯಲಿದೆಯೇ ಎಂಬುದನ್ನು ತಿಳಿಯಲು ನಾಳೆ ಮುಂಜಾನೆವರೆಗೂ ಕಾಯಬೇಕಿದೆ.

ಸೋಷಿಯಲ್​ ಮೀಡಿಯಾ ಪ್ಲ್ಯಾಟ್‌ಫಾರ್ಮ್ ಎಕ್ಸ್​​ನಲ್ಲಿನ ಆರಂಭಿಕ ಪ್ರತಿಕ್ರಿಯೆಗಳು ಪ್ರಶಂಸೆ ಮತ್ತು ಟೀಕೆಗಳೆರಡನ್ನೂ ಒಳಗೊಂಡಿದೆ. ಕೆಲ ಅಭಿಮಾನಿಗಳು ನಾಯಕ ನಟ ಸೂರ್ಯ ಚಿತ್ರಣ ಮತ್ತು ಪಾತ್ರಕ್ಕೆ ಅವರ ಸಮರ್ಪಣೆ ಕೊಂಡಾಡಿದ್ದಾರೆ. ಅಲ್ಲದೇ ಅವರ ಅಭಿನಯವೇ ಚಿತ್ರದ ಹೈಲೈಟ್ ಎಂದು ತಿಳಿಸಿದ್ದಾರೆ.

"ಸೂರ್ಯ 200 ಪರ್ಸೆಂಟ್​​ ರಷ್ಟು ನಟನೆ ನೀಡಿದ್ದಾರೆ. ಸಾಧಾರಣ ಇಂಟರ್​ವಲ್​. ಸಂಗೀತ ಬಹಳ ಗದ್ದಲವಾಗಿದೆ'' ಎಂದು ಓರ್ವರು ತಿಳಿಸಿದ್ದಾರೆ. ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯಿಸಿ, "ಪವರ್​ಫುಲ್​ ದ್ವಿತೀಯಾರ್ಧ ಹೊಂದಿದ್ದು, ನೋಡಲೇಬೇಕಾದ ಸಿನಿಮಾ, ದಿ ಶೋಮ್ಯಾನ್ ಸೂರ್ಯ, ದಿ ಬ್ಯಾಂಗರ್ ಕ್ಲೈಮ್ಯಾಕ್ಸ್, ರೇಟಿಂಗ್ಸ್​​: 3.5/5" ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವರು ಪ್ರತಿಕ್ರಿಯಿಸಿ, "ಕಂಗುವ - ಆ್ಯವ್​ರೇಜ್​​ (6/10) ನಿರೀಕ್ಷಿಸಿದಷ್ಟಿಲ್ಲ. ಸೂರ್ಯ ಅವರ ನಟನೆ ಈ ಮೊದಲಿನಂತೇ ಇದೆ, ಕಠಿಣವಾಗಿಲ್ಲ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'A for Apple' ಅಲ್ಲ 'A for ಆನಂದ್​​': ಶಿಕ್ಷಕನಾದ ಹ್ಯಾಟ್ರಿಕ್​ ಹೀರೋ; ಶಿವರಾಜ್​ಕುಮಾರ್​​ ಹೊಸ ಸಿನಿಮಾ ಅನೌನ್ಸ್

ಕೆಲ ಟೀಕೆಗಳು, ವಿಶೇಷವಾಗಿ ದೇವಿ ಶ್ರೀ ಪ್ರಸಾದ್ (ಡಿಎಸ್ಪಿ) ಅವರ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಸಂಬಂಧಿಸಿದೆ. ವೀಕ್ಷಕರೋರ್ವರು ಟ್ವೀಟ್​ ಮಾಡಿ, "ಸೂರ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರಕಥೆ ತುಂಬಾನೇ ಚೆನ್ನಾಗಿದೆ. ಆದರೆ ಚಿತ್ರದ ಪ್ರತೀ ಪಾತ್ರಗಳು ಮಾತನಾಡುವುದಿಲ್ಲ, ಬದಲಾಗಿ ಕೂಗುತ್ತವೆ. ಡಿಎಸ್​ಪಿ ಸಂಗೀತ ಗದ್ದಲದಂತಿದೆ. ಕಥೆ ಚೆನ್ನಾಗಿದೆ, ಆದರೆ ಮ್ಯೂಸಿಕ್​ನಿಂದಾಗಿ ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ, ರೇಟಿಂಗ್​: 2/5'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ಮಿಶ್ರ ಅಭಿಪ್ರಾಯಗಳ ಹೊರತಾಗಿಯೂ, ಅನೇಕರು ಚಿತ್ರದ ದ್ವಿತೀಯಾರ್ಧವನ್ನು ವಿಶೇಷವಾಗಿ ಕ್ಲೈಮ್ಯಾಕ್ಸ್ ಅನ್ನು ಹೊಗಳಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, "ಒಂದು ಉತ್ತಮ ಅನುಭವ, ವಿಶೇಷವಾಗಿ ದ್ವಿತೀಯಾರ್ಧ ಅಬ್ಬರವಾಗಿದೆ ಮತ್ತು ಕ್ಲೈಮ್ಯಾಕ್ಸ್ ಬ್ಲಾಸ್ಟ್ಟ್ ಆಎನ್ನಬಹುದು. ಒಟ್ಟಾರೆ ವಾವ್ಹ್​​'' ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.