ಸೌತ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಗುಡ್ ಬ್ಯಾಡ್ ಅಗ್ಲಿ' ಇಂದು ಭಾರತದಾದ್ಯಂತ ಬಹಳ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳ ಬಳಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿಯೇ ಇದೆ.
ಅಧಿಕ್ ರವಿಚಂದ್ರನ್ ನಿರ್ದೇಶನದ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಅಡಿ ಸುಬಾಸ್ಕರನ್ ಅಲ್ಲಿರಾಜ ನಿರ್ಮಿಸಿದ್ದು, ಅಜಿತ್ ವೃತ್ತಿಜೀವನದ ಮತ್ತೊಂದು ಹೈ-ವೋಲ್ಟೇಜ್ ಚಿತ್ರವಾಗಿ ಇಂದು ತೆರೆಗಪ್ಪಳಿಸಿದೆ. ಚಿತ್ರದಲ್ಲಿ ಅಜಿತ್ ಜೊತೆ ತ್ರಿಶಾ ಕೃಷ್ಣನ್, ಅರ್ಜುನ್ ದಾಸ್, ರೆಜಿನಾ ಕ್ಯಾಸಂದ್ರ ಮತ್ತು ಅರ್ಜುನ್ ಸರ್ಜಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಮಾಸ್-ಆ್ಯಕ್ಷನ್ ಎಂಟರ್ಟೈನರ್ಗೆ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಎಕ್ಸ್ (ಟ್ವಿಟರ್) ಬಳಕೆದಾರರೋರ್ವರು ಪ್ರತಿಕ್ರಿಯಿಸಿ "ಗುಡ್ ಬ್ಯಾಡ್ ಅಗ್ಲಿ - ಬಹಳ ಸಮಯದ ನಂತರ, ಅಜಿತ್ ಕುಮಾರ್ ಅವರ ಎನರ್ಜೆಟಿಕ್ ಫನ್, ಪ್ಯೂರ್ ಒನ್ ಮ್ಯಾನ್ ಶೋ ನೋಡುತ್ತಿದ್ದೇನೆ. ಅರ್ಜುನ್ ದಾಸ್ ಒಳ್ಳೆ ಸ್ಕ್ರೀನ್ ಸ್ಪೇಸ್ ಪಡೆದಿದ್ದಾರೆ. ಬಿಜಿಎಂ ಜೋರಾಗಿದ್ದರೂ, ಮಾಸ್ ಅನುಭವವನ್ನು ನೀಡುತ್ತದೆ. ಯಾವುದೇ ಸ್ಟ್ರಾಂಗ್ ಸ್ಟೋರಿ ಅಥವಾ ಭಾವನೆಗಳಿಲ್ಲ. ಬಿಲ್ಡಪ್ ಮತ್ತು ಸ್ಲೋಮೊಷನ್ನಿಂದ ತುಂಬಿದೆ. ಮಿತಿ ಮೀರಿದ ರೆಟ್ರೋ ಸಾಂಗ್ಸ್, ಮೀಡಿಯಮ್ ಸಿನಿಮಾ, ಅಭಿಮಾನಿಗಳಿಗಾಗಿ ಮಾತ್ರ!" ಎಂದು ಬರೆದುಕೊಂಡಿದ್ದಾರೆ.
#GoodBadUgly - After a long gap, Seeing this Energetic Fun AK, Pure One Man Show. Arjun Das gets gud screen space. Though BGM is loud, it compliments d mass. No Strong Story or Emotions. Full of Buildup & Slow Motion. Overdose of Retro songs. MEDIOCRE film Strictly made for Fans!
— Christopher Kanagaraj (@Chrissuccess) April 10, 2025
ಮತ್ತೋರ್ವರು ಪ್ರತಿಕ್ರಿಯಿಸಿ, "ಗುಡ್ ಬ್ಯಾಡ್ ಅಗ್ಲಿ ಆಲ್ರೈಟ್ ಔಟ್ ಅಂಡ್ ಔಟ್ ಮಾಸ್ ಎಂಟರ್‌ಟೈನರ್ ಆಗಿದ್ದು, ಇದು ಭಾಗಶಃ ವರ್ಕ್ ಆಗುತ್ತದೆ ಮತ್ತು ಅಜಿತ್‌ಗೆ ಪ್ಯೂರ್ ಫ್ಯಾನ್ ಸರ್ವೀಸ್ ಎನ್ನಬಹುದು. ಸಾಲಿಡ್ ಫಸ್ಟ್ ಹಾಫ್ ನಂತರ, ದ್ವಿತೀಯಾರ್ಧವು ಫ್ಲ್ಯಾಷ್ಬ್ಯಾಕ್ನೊಂದಿಗೆ ಬಹಳ ಚೆನ್ನಾಗಿ ಪ್ರಾರಂಭವಾಗುತ್ತದೆ. ಆದರೆ ನಂತರ ಹೆಚ್ಚಿನದೇನೂ ಇಲ್ಲ, ಕೊನೆಯವರೆಗೂ ಕಥೆ ಮತ್ತು ನಿರೂಪಣೆಯನ್ನು ಎಳೆಯಲಾಗಿದೆ. ನಿರೀಕ್ಷೆಗಳನ್ನು ಸಂಪೂರ್ಣವಾಗಿ ಪೂರೈಸದಿರಬಹುದು. ಆದ್ರೆ ಇತ್ತೀಚಿನ ದಿನಗಳಲ್ಲಿ ಅಜಿತ್ ಅವರಿಂದ ಬಂದ ಉತ್ತಮ ಚಿತ್ರವಿದು. ಕೆಲ ಆನಂದದಾಯಕ ಮಾಸ್ ಕ್ಷಣಗಳಿಗಾಗಿ ನೀವೂ ಸಿನಿಮಾ ನೋಡುವ ಪ್ರಯತ್ನ ಮಾಡಬಹುದು. ರೇಟಿಂಗ್: 2.5-2.75/5" ಎಂದು ತಿಳಿಸಿದ್ದಾರೆ.
#GoodBadUgly is an Alright Out and Out Mass Entertainer that works in parts and is a pure fan service to Ajith.
— Venky Reviews (@venkyreviews) April 10, 2025
After a Solid 1st half, the second half starts well with a flashback episode but has nothing much to offer after that and feels dragged till the end. A few mass…
ಸಿನಿಮಾ ಟೈಟಲ್ ಉಲ್ಲೇಖಿಸಿ ಪ್ರತಿಕ್ರಿಯಿಸಿದ ಫ್ಯಾನ್, "ಗುಡ್ - ಅಭಿಮಾನಿಗಳಿಗೆ, ಬ್ಯಾಡ್ - ತಟಸ್ಥರಿಗೆ, ಅಗ್ಲಿ - ದ್ವೇಷಿಗರಿಗೆ. ಸಿನಿಮಾ ಅಜಿತ್ ಅಭಿಮಾನಿಗಳಿಗೆ ಮಾತ್ರ!" ಎಂದು ತಿಳಿಸಿದ್ದಾರೆ.
GOOD - For Fans 💥
— Christopher Kanagaraj (@Chrissuccess) April 10, 2025
BAD - For Neutrals😐
UGLY - For Haters😭
Strictly & Only for AK Fans!#GoodBadUgly
ಮತ್ತೋರ್ವ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, "ಗುಡ್ ಬ್ಯಾಡ್ ಅಗ್ಲಿ ವಿಮರ್ಷೆ. ಪಾಸಿಟಿವ್ ಅಂಶಗಳೆಂದರೆ ಅಜಿತ್ ಅವರ ಸ್ವ್ಯಾಗ್ ಮತ್ತು ಸ್ಟೈಲ್ - ಕಂಪ್ಲೀಟ್ ಫೈರ್ ಮ್ಯಾಕ್ಸ್, ಕೆಲ ಮಾಸ್ ಮೂಮೆಂಟ್ಸ್ ಮತ್ತು ವಿಸಲ್ ವರ್ಥಿ ಡೈಲಾಗ್ಸ್. ನೆಗೆಟಿವ್ ಅಂಶಗಳೆಂದರೆ ಎಲ್ಲಾ ಸ್ಟೈಲ್ ಮತ್ತು ಉಲ್ಲೇಖಗಳು, ಹಾಡುಗಳು ಮತ್ತು ಬಿಜಿಎಂ ಕಿವಿಯ ಮೇಲೆ ದಾಳಿ ನಡೆಸುವಂತಿದೆ, ಕಂಪ್ಲೀಟ್ ಆರ್ಟಿಫಿಶಿಯಲ್ ಎನಿಸಿತು. ಡಬ್ ಮಾಡಿದ ಚಿತ್ರವನ್ನು ವೀಕ್ಷಿಸಿದ ಅನುಭವ, ಕಥೆ? ಚಿತ್ರಕಥೆ?, ಮಿತಿ ಮೀರಿದ ವಿಂಟೇಜ್ ಸಾಂಗ್ಸ್, ಅಭಿಮಾನಿ ಸೇವೆಯ ಹೆಸರಿನಲ್ಲಿ ಅತಿಥಿ ಪಾತ್ರಗಳು?'' ಎಂದಿದ್ದಾರೆ.
#GoodBadUglyreview
— Harish N S (@Harish_NS149) April 10, 2025
Positives:
•AK’s swag & style - absolute Fire Maxx 🔥🔥🔥
•A few massy moments & whistle-worthy dialogues
Negatives:
•All the style & references… wasted potential
•Songs & BGM = ear assault
•Felt totally artificial – like watching a dubbed film
•Story?… pic.twitter.com/nhVNrFrVD5
ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, "ಇದು ಅಜಿತ್ ಕುಮಾರ್ ಸರ್ ಅವರ 30+ ವರ್ಷಗಳ ಚಲನಚಿತ್ರ ವೃತ್ತಿಜೀವನದ ಆಚರಣೆಯಷ್ಟೇ. ಮಾಸ್ ಮಾಸ್. ಜಸ್ಟ್ ಪ್ಯೂರ್ ಫ್ಯಾನ್ಬಾಯ್ ಪ್ರೆಸೆಂಟೇಶನ್. ಮೆಗಾ ಬ್ಲಾಕ್‌ಬಸ್ಟರ್. ಟಿಕೆಟ್ ಬುಕ್ ಮಾಡಿ, ನಿರಾಶರಾಗುವುದಿಲ್ಲ'' ಎಂದು ತಿಳಿಸಿದ್ದಾರೆ.
#GoodBadUgly #GoodBadUglyreview
— Karthik (@meet_tk) April 10, 2025
This is just celebration of #Ajithkumar𓃵 sir 30+ years film career. Mass Mass. just a pure fanboy presentation. Mega Blockbuster 🔥🔥🔥❤️❤️❤️❤️. Book your ticket. You will not be disappointed . Loved it 😍
ವಿದೇಶದಲ್ಲಿ ಚಿತ್ರವನ್ನು ವೀಕ್ಷಿಸಿದ ಅಭಿಮಾನಿಯೋರ್ವರು, "ಗುಡ್ ಬ್ಯಾಡ್ ಅಗ್ಲಿ ವಿಮರ್ಷೆ. ಹಾಯ್ ಗಾಯ್ಸ್. ಈಗಷ್ಟೇ ಸ್ವೀಡನ್‌ನಲ್ಲಿ ಮೊದಲಾರ್ಧ ಮುಗಿದಿದೆ. ಚಿತ್ರ ಅದ್ಭುತವಾಗಿದೆ. ಅದಿಕ್ ಅವರಿಂದ ಪಕ್ಕಾ ಫ್ಯಾನ್ ಬಾಯ್ ಸಂಭವಂ. ಜೊತೆಗೆ, ಥಾಲಾ ಸ್ವಾಗ್ ಮತ್ತು ಸ್ಕ್ರೀನ್ ಪ್ರೆಸೆನ್ಸ್, ಬಿಜಿಎಂ, ಆದಿಕ್ ಡೈಲಾಗ್ಸ್ ಮತ್ತು ಸ್ಕ್ರೀನ್ ಪ್ಲೇ. ನೆಗೆಟಿವ್ ಅಂಶ - ಕಥೆ ವಿಳಂಬವಾಗಿದೆ. ಉಳಿದಂತೆ ಬ್ಲಾಕ್‌ಬಸ್ಟರ್" ಎಂದು ತಿಳಿಸಿದ್ದಾರೆ.
#GoodBadUglyReview
— The Shelby Sena (@Shelbyboyzz) April 10, 2025
Hi guys. Just now 1st half over in Sweden. The movie is amazing. Pakka fan boy sambavam from adhik.
Plus:-
a) Thala swag and screen presence
b) bgm
C) adhik dialogues and screenplay
Cons;-
a) story takes a backseat and a bit lags at times
Blockbuster!! pic.twitter.com/qJVkaF4wut
ಇದನ್ನೂ ಓದಿ: ಬಿಜೆಪಿ ಸಂಸದೆ ಕಂಗನಾ ರಣಾವತ್ ಮನೆಗೆ 1 ಲಕ್ಷ ಕರೆಂಟ್ ಬಿಲ್: ಅಸಲಿ ವಿಚಾರವೇನು?
As a AK expected more , some part worked some part didn't worked for me, but my wife throughly enjoyed the whole movie , pakka movie for 2kids but no content no story , overall decent watch #GoodBadUgly #GoodBadUglyreview #GoodBadUglyFromApril10th #AjithKumar #tris
— Bala_469 (@bala_469) April 10, 2025
ಮೊದಲ ದಿನದ ಮೊದಲ ಪ್ರದರ್ಶನವನ್ನು ವೀಕ್ಷಿಸುತ್ತಾ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು, "ಅಜಿತ್ ಅಭಿಮಾನಿಯಾಗಿ, ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿತ್ತು. ಕೆಲ ಭಾಗಗಳು ವರ್ಕ್ ಆದ್ರೆ, ಕೆಲವು ಆಗಲಿಲ್ಲ. ಆದ್ರೆ ನನ್ನ ಪತ್ನಿ ಇಡೀ ಚಿತ್ರವನ್ನು ಕಂಪ್ಲಿಟ್ ಎಂಜಾಯ್ ಮಾಡಿದ್ದಾಳೆ. 2,000ದಾಚೆಗಿನ ಮಕ್ಕಳಿಗೆ ಹೇಳಿಮಾಡಿಸಿದ ಪಕ್ಕಾ ಚಿತ್ರ. ಆದ್ರೆ ಯಾವುದೇ ಕಂಟೆಂಟ್ ಇಲ್ಲ. ಡೀಸೆಂಟ್ ವಾಚ್" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಕೊನೆ ಉಸಿರಿರುವವರೆಗೂ ಕನ್ನಡ ಸಿನಿಮಾ ಮಾತ್ರ': ಗೆಳೆಯ ಧನ್ವೀರ್ ಚಿತ್ರ ವೀಕ್ಷಿಸಿ ದರ್ಶನ್ ಹೇಳಿದ್ದಿಷ್ಟು