ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಆ್ಯಕ್ಷನ್ ಡ್ರಾಮಾ 'ಸಿಕಂದರ್', ಮಾರ್ಚ್ 30ರಂದು ಬಿಡುಗಡೆಯಾಗಲಿದ್ದು, ಪ್ರೇಕ್ಷಕ ಬಳಗದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳಿಗೆ ಈದ್ ಉಡುಗೊರೆಯಾಗಿ ಚಿತ್ರ ತೆರೆಗಪ್ಪಳಿಸುತ್ತಿದ್ದು, ಕಳೆದ ದಿನ, ಮಾರ್ಚ್ 25ಕ್ಕೆ ಅಡ್ವಾನ್ಸ್ ಬುಕಿಂಗ್ ಪ್ರಾರಂಭಗೊಂಡಿದೆ.
ಖ್ಯಾತ ಚಲನಚಿತ್ರ ನಿರ್ದೇಶಕ ಎ.ಆರ್.ಮುರುಗದಾಸ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ಸಹಯೋಗದೊಂದಿಗೆ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ, ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಮಾರ್ಚ್ 25ರಂದು ಶುರುವಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿಕಂದರ್‌ನ ಮೊದಲ ದಿನದ ಅಡ್ವಾನ್ಸ್ ಟಿಕೆಟ್ ಕಲೆಕ್ಷನ್ ಭಾರತದಲ್ಲಿ ಸರಿ-ಸುಮಾರು 1.93 ಕೋಟಿ ರೂಪಾಯಿ ತಲುಪಿದೆ. 9,351 ಶೋಗಳಲ್ಲಿ ಸುಮಾರು 67,533 ಟಿಕೆಟ್‌ಗಳು ಮಾರಾಟವಾಗಿವೆ.
ಬ್ಲಾಕ್ ಸೀಟುಗಳನ್ನು ಪರಿಗಣಿಸಿದರೆ, ಈವರೆಗಿನ ಒಟ್ಟು ಸಂಗ್ರಹ 6.22 ಕೋಟಿ ರೂಪಾಯಿ ಆಗಿದೆ. ಚಿತ್ರವು ಭಾರತದಾದ್ಯಂತ ಗಮನ ಸೆಳೆದಿದ್ದು, ಮಹಾರಾಷ್ಟ್ರದ ಅಡ್ವಾನ್ಸ್ ಟಿಕೆಟ್ ವ್ಯವಹಾರ 1.24 ಕೋಟಿ ರೂಪಾಯಿ. ದೆಹಲಿ - 1.11 ಕೋಟಿ ರೂ., ರಾಜಸ್ಥಾನ - 51.08 ಲಕ್ಷ ರೂ., ಗುಜರಾತ್ - 49.94 ಲಕ್ಷ ರೂ. ಮತ್ತು ಕರ್ನಾಟಕ 28.82 ಲಕ್ಷ ರೂಪಾಯಿ ಆಗಿದೆ. ಈ ಅಂಕಿಅಂಶಗಳು ಕ್ಷಣಕ್ಷಣಕ್ಕೂ ಏರುತ್ತಿವೆ.
SALMAN KHAN'S TOP 5 OPENERS – 'TIGER 3' TOPS – ALL EYES ON 'SIKANDAR'… #Tiger3 – released on #Diwali 2023 – is #SalmanKhan's biggest opener to date... The big question is: will #Sikandar emerge the biggest opener of his career?
— taran adarsh (@taran_adarsh) March 24, 2025
Interestingly, like #Tiger3, #Sikandar is also set… pic.twitter.com/GaROeMaAxk
ಇದನ್ನೂ ಓದಿ: ಡಿಸಿಎಂ ಶಿಂಧೆ ವಿರುದ್ಧ ಹೇಳಿಕೆ: ವಿಚಾರಣೆಗೆ ಸಮಯ ಕೇಳಿದ್ದ ಕುನಾಲ್ ಕಮ್ರಾ ಮನವಿ ತಿರಸ್ಕಾರ
ಸಾಗರೋತ್ತರ ಪ್ರದೇಶಗಳಲ್ಲೂ ಸಿನಿಮಾ ಸದ್ದು ಮಾಡುತ್ತಿದ್ದು, ಹಾಲೆಂಡ್ ಮತ್ತು ಜರ್ಮನಿಯಲ್ಲಿ ಅಡ್ವಾನ್ಸ್ ಟಿಕೆಟ್ಸ್ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ. ಇದು ಸಲ್ಮಾನ್ ಖಾನ್ ಅವರ ಸೂಪರ್ ಸ್ಟಾರ್ಡಮ್ ಅನ್ನು ಸಾಬೀತುಪಡಿಸಿದೆ. ಸಿಕಂದರ್ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಸಿನಿಪಂಡಿತರು ಪಾಸಿಟಿವ್ ರಿಯಾಕ್ಷನ್ಸ್ ಕೊಟ್ಟಿದ್ದಾರೆ. ವಿಮರ್ಶಕ ತರಣ್ ಆದರ್ಶ್, ಸಿಕಂದರ್ ತನ್ನ ಮೊದಲ ದಿನದಂದು 43 ಕೋಟಿ ರೂಪಾಯಿಯ ವ್ಯವಹಾರ ನಡೆಸಲಿದೆ ಎಂದು ಅಂದಾಜಿಸಿದ್ದಾರೆ.
#Sikandar Full Fledged Advance Sale Begins Across India. Initial Response is Encouraging as it has sold approx 12K tickets at PIC by 3.30 Pm today.
— Sumit Kadel (@SumitkadeI) March 25, 2025
Best Part- Trending is absolutely GENUINE.. 5 Days Still to go, Bookings should escalate big time post Friday.
Grand Release on… pic.twitter.com/z4IqWoSlRy
ಇದನ್ನೂ ಓದಿ: ಖ್ಯಾತ ನಟ, ನಿರ್ದೇಶಕ ಮನೋಜ್ ಭಾರತಿರಾಜ ಹೃದಯಾಘಾತದಿಂದ ನಿಧನ: ಗಣ್ಯರ ಸಂತಾಪ
ಮತ್ತೋರ್ವ ಚಲನಚಿತ್ರ ವಿಮರ್ಶಕ ಸುಮಿತ್ ಕಾಡೆಲ್, ಸಿಕಂದರ್ ತನ್ನ ಮೊದಲ ದಿನ 30 ರಿಂದ 35 ಕೋಟಿ ರೂ. ಗಳಿಸಲಿದೆ ಎಂದು ಅಂದಾಜಿಸಿದ್ದಾರೆ. ಅದಾಗ್ಯೂ, ಹೆಚ್ಚಿನ ಪ್ರಚಾರದ ಮೂಲಕ ಸಿಕಂದರ್ ಈ ಅಂದಾಜು ಅಂಕಿಅಂಶವನ್ನು ಮೀರಿಸುವ ಸಾಮರ್ಥ್ಯವನ್ನು ಸಿನಿಮಾ ಹೊಂದಿದೆ ಎಂದು ತಿಳಿಸಿದ್ದಾರೆ. ಸೋಮವಾರ ಈದ್ ಹಿನ್ನೆಲೆ ಕಲೆಕ್ಷನ್ನಲ್ಲಿ ಏರಿಕೆ ಆಗುವ ನಿರೀಕ್ಷೆಯಿದೆ. ಅಂದು 45 ರಿಂದ 50 ಕೋಟಿ ರೂ.ಗಳ ನಡುವೆ ಕಲೆಕ್ಷನ್ ಆಗಲಿದೆ ಎಂದು ಕಾಡೆಲ್ ಅಂದಾಜಿಸಿದ್ದಾರೆ. ಈ ಮೂಲಕ ಮೊದಲ 2 ದಿನಗಳಲ್ಲಿ ಸಿಕಂದರ್ 70 ರಿಂದ 80 ಕೋಟಿ ರೂಪಾಯಿಯ ವ್ಯವಹಾರ ನಡೆಸಬಹುದು.