ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ಸಿನಿಪಯಣಕ್ಕೆ 40ದ ಸಂಭ್ರಮ. ನಟ ಬಣ್ಣ ಹಚ್ಚಿದ ಚೊಚ್ಚಲ ಚಿತ್ರ 'ಆನಂದ್' ಬಿಡುಗಡೆಯಾಗಿ ಇದೇ ಜೂನ್ 19ಕ್ಕೆ 40 ವರ್ಷಗಳಾಗಲಿವೆ. ಈ ಹಿನ್ನೆಲೆ, ದಕ್ಷಿಣ ಸೇರಿ ಭಾರತೀಯ ಚಿತ್ರರಂಗದಲ್ಲೇ ತಮ್ಮದೇಯಾದ ವಿಶಿಷ್ಟ ಸ್ಟಾರ್ಡಮ್ ಹೊಂದಿರುವ ನಟನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.
ಅಭಿಮಾನಿಗಳು ಮಾತ್ರವಲ್ಲದೇ, ಖ್ಯಾತ ಕಲಾವಿದರಾದ ಸುದೀಪ್, ಚಿರಂಜೀವಿ, ನಾನಿ, ಧ್ರುವ ಸರ್ಜಾ, ಓಂ ಪ್ರಕಾಶ್, ನಾಗಾರ್ಜುನ ಅಕ್ಕಿನೇನಿ, ಡಾಲಿ ಧನಂಜಯ್, ವಿಜಯ್ ದೇವರಕೊಂಡ, ಕಮಲ್ ಹಾಸನ್, ಸಂಗೀತ ನಿರ್ದೇಶಕ ದೇವಿಪ್ರಸಾದ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸೆಲೆಬ್ರಿಟಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ.
On behalf of #Shivanna and with immense gratitude from his fans. 🎊💥
— 𝘛𝘩𝘪𝘴 𝘬𝘢𝘳𝘵𝘩𝘪'𝘴 𝙓 (@AMkarthik63) June 11, 2025
we thank all the actors and directors for their heartfelt wishes on his 40 incredible years of his cinematic artistry.🙏
Your well wishes are cherished!" 🥰🙌#KingShivanna 👑 | #40YearsOfShivAURAjkumar 🛐 pic.twitter.com/Lx0fhT57Ql
ಸುದೀಪ್ ಎಕ್ಸ್ ಪೋಸ್ಟ್: ಕನ್ನಡದ ಖ್ಯಾತ ನಟ ಸುದೀಪ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹೃದಯಸ್ಪರ್ಶಿ ಬರಹ ಹಂಚಿಕೊಂಡಿದ್ದಾರೆ. ''ಶಿವಣ್ಣ, ನಿಮ್ಮ 40 ವರ್ಷಗಳ ಚಲನಚಿತ್ರ ಪ್ರಯಾಣದ ಒಂದು ಭಾಗವನ್ನು ಹತ್ತಿರದಿಂದ ನೋಡಿ, ಅನುಭವಿಸೋ ಅವಕಾಶ ಪಡೆದಿರುವುದು ನನಗೆ ಅತ್ಯಂತ ಗೌರವದ ವಿಷಯ. ನೀವು ಈ ಚಿತ್ರರರಂಗಕ್ಕೆ ಕುಗ್ಗದ ಆಸಕ್ತಿ. ಅಪಾರ ಶ್ರಮ ಮತ್ತು ಘನತೆಯಿಂದ ಸೇವೆ ಸಲ್ಲಿಸಿದ್ದೀರಿ. ನೀವು ಸ್ಥಾಪಿಸಿದ ಮಾದರಿ ಭವಿಷ್ಯದಲ್ಲಿ ಹಲವು ಪೀಳಿಗೆಗಳಿಗೆ ಪ್ರೇರಣೆಯಾಗಲಿದೆ. ನೀವು ಯಶಸ್ಸನ್ನು ಸದಾ ಸರಳವಾಗಿ ನಿಭಾಯಿಸಿದ್ದೀರಿ. ಆದರೆ ಎಲ್ಲದಕ್ಕಿಂತ ಮಿಗಿಲಾಗಿ, ನೀವು ಸದಾ ಒಬ್ಬ ಉತ್ತಮ ಮನುಷ್ಯರಾಗಿ ಬಾಳಿದ್ದೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರಲಿ ಮತ್ತು ಇನ್ನೂ ಹಲವಾರು ವರ್ಷಗಳ ಕಾಲ ನಿಮ್ಮ ಅಭಿನಯದಿಂದ ನಮಗೆ ಮನರಂಜನೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ತಿಳಿಸಿದ್ದಾರೆ.
A Brilliant Actor,, a great CoStar,, a Brother,, a Friend above all,,a Fabulous human , loved by all...
— Kichcha Sudeepa (@KicchaSudeep) June 10, 2025
Shivanna... ♥️🤗⭐️ pic.twitter.com/wd8AoWVgPz
ಚಿರಂಜೀವಿ ಮೆಚ್ಚುಗೆ: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮಾತನಾಡಿ, ನನ್ನ ಅಚ್ಚುಮೆಚ್ಚಿನ ಸ್ಟಾರ್ ಡಾ.ರಾಜ್ಕುಮಾರ್ ಮಕ್ಕಳಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ತಂದೆಯ ಹಾದಿಯಲ್ಲಿ ನಡೆದವರು. ಶಿವಣ್ಣ ಕೂಡಾ ತಂದೆಯ ಆದರ್ಶದ ದಾರಿಯಲ್ಲಿ ನಡೆಯುತ್ತಾ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿರೋದು ಹೆಮ್ಮೆಯ ವಿಷಯ ಎಂದು ಕೊಂಡಾಡಿದ್ದಾರೆ.
#MegaStarChiranjeevi Sir Wishing #Shivanna 40 Year's Glorious Journey In Film Industry ❤
— ShivaSainya (@ShivaSainya) June 10, 2025
Thank you @KChiruTweets Sir❤#DrShivarajkumar #Shivanna40 #ShivaSainya @NimmaShivanna ❤❤❤ @ShivaSainya pic.twitter.com/AOd4GQOncX
ನ್ಯಾಚುರಲ್ ಸ್ಟಾರ್ ನಾನಿ: ''ಚಿತ್ರರಂಗದಲ್ಲಿ ಶಿವಣ್ಣ 40 ವರ್ಷಗಳನ್ನು ಪೂರೈಸಿರೋದು ಒಂದು ಮೈಲಿಗಲ್ಲು. ನಾವೆಲ್ಲರೂ ಸೆಲೆಬ್ರೇಟ್ ಮಾಡಬೇಕಾದ ಸಂಗತಿ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ವಿಶೇಷವಾಗಿ, ನನ್ನನ್ನು ಬಹಳ ಆತ್ಮೀಯರಾಗಿ ಕಂಡಿದ್ದಾರೆ. ನಾನು ಬೆಂಗಳೂರಿಗೆ ಭೇಟಿ ಕೊಟ್ಟಾಗಲೆಲ್ಲಾ ಅವರನ್ನು ಭೇಟಿಯಾಗುತ್ತೇನೆ. ಶಿವಣ್ಣ ಮತ್ತು ಅವರ ಕುಟುಂಬ ತೋರಿಸುವ ಪ್ರೀತಿ, ಕಾಳಜಿ ಬಹಳ ವಿಶೇಷವಾದದ್ದು. ಅದ್ಭುತ ಸಿನಿಮಾ, ಪಾತ್ರಗಳಿಂದ ಹಿಡಿದು ಎಲ್ಲದಕ್ಕೂ ಧನ್ಯವಾದಗಳು ಶಿವಣ್ಣ. ವಿ ಲವ್ ಯೂ'' ಎಂದು ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಗುಣಗಾನ ಮಾಡಿದ್ದಾರೆ.
Celebrating an unparalleled legacy! Natural Star #Nani, director Buchi Babu Sana, and Puri Jagannadh extend their heartfelt wishes to #Shivanna on completing an incredible 40 years in the film industry. A true icon!#KingShivanna 👑 | #GeethaPictures#DrShivarajkumar | #Peddi 🏏 pic.twitter.com/lmSSCuZTWN
— 𝘛𝘩𝘪𝘴 𝘬𝘢𝘳𝘵𝘩𝘪'𝘴 𝙓 (@AMkarthik63) June 10, 2025
ಧ್ರುವ ಸರ್ಜಾ: ''ಶಿವಣ್ಣ ನನಗೆ 35 ವರ್ಷ. ನೀವು ಸಿನಿಮಾ ಇಂಡಸ್ಟ್ರಿಯಲ್ಲಿ 40 ವರ್ಷಗಳನ್ನು ಪೂರೈಸಿದ್ದೀರ. ನಿಮಗೆ ವಿಶ್ ಮಾಡುವಷ್ಟು ದೊಡ್ಡವನಲ್ಲ. ಆದ್ರೂ, ಅಣ್ಣ ನಾನು ನಿಮ್ಮ ಅಭಿಮಾನಿಯಾಗಿ ನನ್ನ ಕಡೆಯಿಂದ ಹಾಗೂ ನನ್ನ ಕುಟುಂಬ ಮತ್ತು ಅಭಿಮಾನಿಗಳಿಂದ ವಿ ಲವ್ ಯೂ. ಆಲ್ ದಿ ವೆರಿ ಬೆಸ್ಟ್. ಅದೆಷ್ಟೋ ಜನರಿಗೆ ನೀವು ಸ್ಫೂರ್ತಿ. ವಿಶೇಷವಾಗಿ ಯುವ ಪೀಳಿಗೆಗೆ. ಇನ್ನೂ ಸಾಕಷ್ಟು ಜನರಿಗೆ ಮೋಟಿವೆಶನ್ ಮಾಡಿ'' ಎಂದು ನಟ ಧ್ರುವ ಸರ್ಜಾ ತಿಳಿಸಿದ್ದಾರೆ.
From behalf of all #DSBoss VIP's, Many Congratulations to our beloved Dr, #Shivanna for Completing 40 Years in #KFI 😍❤️🎉
— Dhruva Sarja Trends™ (@DhruvaTrends1) June 10, 2025
ಕನ್ನಡ ಸಿನಿಮಾ ಮೇಲಿನ ನಿಮ್ಮ ಪ್ರೀತಿಗೆ ನಾವು ಸದಾ ಚಿರಋಣಿ 🙏😍#KingShivanna #Shivanna40 #DrShivarajKumar #KDTheDevil #DhruvaSarja @DhruvaSarja @NimmaShivanna pic.twitter.com/XcR4gBmyUW
ನಾಗರ್ಜುನ ಅಕ್ಕಿನೇನಿ: ಟಾಲಿವುಡ್ ನಟ ನಾಗರ್ಜುನ ಅಕ್ಕಿನೇನಿ ಮಾತನಾಡಿ, ''ನೀವು ಸಿನಿಮಾ ಇಂಡಸ್ಟ್ರಿಯಲ್ಲಿ 40ವರ್ಷಗಳನ್ನು ಪೂರೈಸಿರೋದು ಸುಲಭದ ವಿಷಯವಲ್ಲ. ಒಂದು ಮೈಲಿಗಲ್ಲು. ನಿಮ್ಮ ನಗು, ಸರಳತೆಗೆ ನಾವೆಲ್ಲರೂ ಫಿದಾ. ಒಂದೊಳ್ಳೆ ವ್ಯಕ್ತಿತ್ವ. ಇದರ ಜೊತೆಗೆ ಅಪ್ಪ, ಪುನೀತ್ ಅವರನ್ನು ಮರೆಯೋದಕ್ಕೆ ಆಗೋಲ್ಲ. ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದ್ರೆ ಜಾಹೀರಾತುಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೇವೆ. ಒಳ್ಳೆ ನೆನಪುಗಳಿವೆ. ಮುಂದಿನ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡೋಣ. ಆ ಭಗವಂತ ಆರೋಗ್ಯ, ಸಂತೋಷ, ಯಶಸ್ಸು ಕೊಟ್ಟು ಕಾಪಾಡಲಿ'' ಎಂದು ಹಾರೈಸಿದರು.
#King .@iamnagarjuna garu Wishing #Shivanna 40 Year's Of Journey In Film Industry 😍
— NagaKiran Akkineni (@NagaKiran60) June 10, 2025
.@NimmaShivanna pic.twitter.com/CFEVYQfiNR
ಕಮಲ್ ಹಾಸನ್: ಇತ್ತೀಚೆಗೆ 'ತಮಿಳಿನಿಂದ ಕನ್ನಡ ಹುಟ್ಟಿದ್ದು' ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ತಮಿಳು ನಟ ಕಮಲ್ ಹಾಸನ್ ಕೂಡಾ ಶಿವರಾಜ್ಕುಮಾರ್ ಸಿನಿ ಪಯಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೇಡರ ಕಣ್ಣಪ್ಪ ಸಿನಿಮಾ ಸಂದರ್ಭ ನಾನು ರಾಜ್ ಅವರನ್ನು ಸ್ಟುಡಿಯೋದಲ್ಲಿ ನೋಡಿದೆ. ಆಗ ಶಿವಣ್ಣ ಚಿಕ್ಕ ಹುಡುಗ. ಇಂದು ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಿರಿ. 50 ವರ್ಷಕ್ಕೆ ಇಬ್ಬರೂ ಕುಳಿತು ಸೆಲೆಬ್ರೇಟ್ ಮಾಡೋಣ ಎಂದು ವಿಶ್ ಮಾಡಿದ್ದಾರೆ. ತಮಿಳು, ಇಂಗ್ಲಿಷ್ ನಡುವೆ ಕನ್ನಡ ಮಾತನಾಡಿ ಗಮನ ಸೆಳೆದಿದ್ದಾರೆ.
ವಿಜಯ್ ದೇವರಕೊಂಡ: ''ಶಿವಣ್ಣ ಚಿತ್ರರಂಗದಲ್ಲಿ 40 ವರ್ಷಗಳಾಗಿವೆ. ನಾನು ನಿಮ್ಮನ್ನು 7 ವರ್ಷಗಳ ಹಿಂದೆ ಭೇಟಿಯಾದೆ. ಆ ಕ್ಷಣ ನನಗಿನ್ನೂ ನೆನಪಿದೆ. ಇತ್ತೀಚೆಗೆ ಹೈದರಾಬಾದ್ನ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಆಗಲೂ ಅದೇ ಆತ್ಮೀಯತೆ. 40 ವರ್ಷ ಪೂರೈಸಿರುವುದಕ್ಕೆ ಅಭಿನಂದನೆಗಳು. ನನ್ನಲ್ಲೀಗ ಪದಗಳ ಕೊರತೆಯಿದೆ. ಆದ್ರೆ ನಿವು ಚಿತ್ರರಂಗಕ್ಕೆ ಕೊಟ್ಟ ಕೊಡುಗೆಗೆ ಅಪಾರ ಧನ್ಯವಾದಗಳು. ನನ್ನಂತ ಯಂಗ್ ಕಲಾವಿದರಿಗೆ ಸ್ಪೂರ್ತಿ. ಹೀಗೆ ಮುಂದುವರಿಯಿಸಿ. ಭಗವಂತ ಆರೋಗ್ಯ ಕೊಟ್ಟು ಕಾಪಾಡಲಿ'' ಎಂದು ಟಾಲಿವುಡ್ನ ಯಂಗ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ತಿಳಿಸಿದ್ದಾರೆ.
Rowdy Boy #VijayDevarakonda Sending his Sweet wishes to #Shivanna for his Glorious 40 Year's In Film Industry ❤
— ShivaSainya (@ShivaSainya) June 10, 2025
Thank You @TheDeverakonda Sir😍 #DrShivarajkumar #Shivanna40 #ShivaSainya @NimmaShivanna ❤❤❤ @ShivaSainya pic.twitter.com/WvQGEkQiBK
ಓಂ ಪ್ರಕಾಶ್: ಕನ್ನಡ ಚಿತ್ರರಂಗದ ಕಲಾಭಿಮಾನಿ ದೇವರುಗಳಿಗೆ ನಮಸ್ಕಾರ. ಈ ಮಾತನ್ನು ಕೂಗಿ ಹೇಳಿದ ಮನೆಯಿಂದ ಬಂದಂತಹ ಮಗನೇ ಡಾ.ಶಿವರಾಜ್ಕುಮಾರ್. ಅವರ ಸಾಧನೆ, ಸಾಹಸ ಬೆಲೆ ಕಟ್ಟೋಕ್ಕಾಗದೇ ಇರೋದು. ಇವರು ಅದೆಷ್ಟೋ ಕಲಾವಿದರಿಗೆ ಸ್ಫೂರ್ತಿಯಾದಂತಹ ವ್ಯಕ್ತಿ. ಇವರ ಜೊತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಇವರ ಜೊತೆ ಕೆಲಸ ಮತ್ತು ವಿಷಯಗಳನ್ನು ಇಂದಿಗೂ ನನ್ನ ಮನಸ್ಸಲ್ಲಿಟ್ಟು ಪ್ರೀತಿಸುತ್ತಾ ಇರುತ್ತೇನೆ. ಗ್ರೇಟ್ ಲೆಜೆಂಡರಿ ಆ್ಯಕ್ಟರ್. ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಲೇ ಹ್ಯಾಟ್ರಿಕ್ ಅನ್ನೋ ಬಿರುದನ್ನು ತಲೆ ಮೇಲೆ ಇಟ್ಟುಕೊಂಡ ಬಂದಂತಹ ವ್ಯಕ್ತಿ. ಸದ್ಯದ 40 ವರ್ಷಗಳ ಸಂಭ್ರವನ್ನು ಅಭಿಮಾನಿಗಳು ತುಂಬುಹೃದಯದಿಂದ ಆಚರಿಸುತ್ತಾ ಇದ್ದಾರೆ. ಹೀಗೆ ಮುಂದುವರಿಯಲಿ ಎಂದು ತಿಳಿಸಿದ್ದಾರೆ.
Mass Director #OmPrakash Sir Wishing #Shivanna 40years Journey In Film Industry ❤
— ShivaSainya (@ShivaSainya) June 11, 2025
Thank You #OmPrakash Sir😍 Thanks For #Simhadamari and #AK47 🔥🔥#DrShivarajkumar #Shivanna40 #ShivaSainya @NimmaShivanna ❤❤❤ @ShivaSainya pic.twitter.com/PgP8uvxxcB
ಡಾಲಿ ಧನಂಜಯ್: ''ಚಿತ್ರರಂಗದಲ್ಲಿ 40 ವರ್ಷಗಳು ತುಂಬಿದೆ. ಬಹಳ ದೊಡ್ಡ ಜರ್ನಿ. ಬಹಳಷ್ಟು ಪಾತ್ರಗಳನ್ನು ನಿಭಾಯಿಸಿದ್ದೀರ. ಕಲಾವಿದರಾಗಿ ಅನೇಕ ಪಾತ್ರಗಳನ್ನು ನಿಭಾಯಿಸಬೇಕು, ಸಾಧನೆಗೈಯಬೇಕು, ಮನರಂಜಿಸಬೇಕು ಅನ್ನೋ ಆಸೆ ಇರುತ್ತದೆ. ಆ ವಿಷಯದಲ್ಲಿ ದೊಡ್ಡ ರೆಕಾರ್ಡ್ ಮಾಡಿದ್ದೀರ. ವಿಭಿನ್ನ ಪಾತ್ರಗಳನ್ನು ನಿಭಾಯಿಸಿಕೊಂಡು, ಬ್ಲಾಕ್ಬಸ್ಟರ್ಗಳನ್ನು ಕೊಟ್ಟು ದೊಡ್ಡ ಮೈಲಿಗಲ್ಲು ಸೃಷ್ಟಿಸಿದ್ದೀರ. ಹೊಸಬರೊಂದಿಗೆ ಕೆಲಸ ಮಾಡಿದ್ದೀರ. ನಿಮ್ಮ ಕೊಡುಗೆ ಬಹಳ ದೊಡ್ಡದಿದೆ. ಧನ್ಯವಾದಗಳು. ಆ ವಿಷಯದಲ್ಲಿ ದೊಡ್ಡ ಸ್ಫೂರ್ತಿ. 40 ವರ್ಷಗಳ ಪಯಣ ಬಹಳ ಅದ್ಭುತವಾಗಿದೆ. ಒಂದಷ್ಟು ವರ್ಷಗಳ ಕಾಲ ನಿಮ್ಮೊಂದಿಗೆ ಪಯಣಿಸುವ ಅವಕಾಶ ನನಗೆ ಸಿಕ್ಕಿದೆ. ಒಳ್ಳೆ ನೆನಪುಗಳಿವೆ. 50ನೇ ವರ್ಷದ ಸೆಲೆಬ್ರೇಷನ್ ಅನ್ನೂ ಬಹಳ ಅದ್ಧೂರಿಯಾಗಿ ಮಾಡೋಣ'' ಎಂದು ತಿಳಿಸಿದ್ದಾರೆ.
" ಕರುನಾಡ ಚಕ್ರವರ್ತಿ" ಶಿವರಾಜ್ ಕುಮಾರ್ ಅವರ 40 ವರ್ಷಗಳ ಸಿನಿಮಾ ಜರ್ನಿಗೆ ಶುಭಾಶಯಗಳು.❤️
— Team Daali Dhananjaya (@Team_Dhananjaya) June 10, 2025
ಕರುನಾಡ ಚಕ್ರವರ್ತಿ ಡಾ || @NimmaShivanna
ನಟ ರಾಕ್ಷಸ ಡಾಲಿ @Dhananjayaka#DrShivarajkumar #Shivanna40 #Shivanna #Dhananjaya #Daali #Natarakshasa #Dhananjayafans #DaaliDhananjaya pic.twitter.com/VIEiCjAN6U
ಇದನ್ನೂ ಓದಿ: ಭಾಷಾ ವಿವಾದದ ನಡುವೆ ಕನ್ನಡದಲ್ಲೇ ಶಿವರಾಜ್ಕುಮಾರ್ ಗುಣಗಾನ ಮಾಡಿದ ಕಮಲ್ ಹಾಸನ್
40 ವರ್ಷಗಳ ಸಂಭ್ರಮದಲ್ಲಿರುವ 'ಆನಂದ್' ಚಿತ್ರದಲ್ಲಿ ಅದ್ಭುತ ಹಾಡುಗಳೇ ಇದ್ದವು. ಈ ಸಿನಿಮಾ ಬಗ್ಗೆ ಮಾತನಾಡುವಾಗ ಬಹುತೇಕರಿಗೆ ಟುವ್ವಿ ಟುವ್ವಿ ಸಾಂಗ್ ಕಣ್ಮುಂದೆ ಬರುತ್ತದೆ. 40 ವರ್ಷದ ಹಿಂದೆಯೇ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಚಿತ್ರವನ್ನು ಸಿಂಗೀತಮ್ ಶ್ರೀನಿವಾಸ ರಾವ್ ನಿರ್ದೇಶಿಸಿದ್ದರು. ಶಿವರಾಜ್ಕುಮಾರ್, ಸುಧಾರಾಣಿ ಪ್ರೇಕ್ಷಕರಿಗೆ ಪರಿಚಯವಾಗಿ ಮೊದಲ ಚಿತ್ರದಲ್ಲೇ ಯಶಸ್ಸು ಕಂಡಿದ್ದರು. ಶಂಕರ್ ಗಣೇಶ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು.
ಇದನ್ನೂ ಓದಿ: ದರ್ಶನ್ ಅರೆಸ್ಟ್ ಆಗಿ 1 ವರ್ಷ: ಇಲ್ಲಿದೆ ಪ್ರಕರಣದ ಇಂಚಿಂಚು ಮಾಹಿತಿ; ಮುಂದಿನ ಸಿನಿಮಾ ನೋಡಲು ಫ್ಯಾನ್ಸ್ ಕಾತರ
ಆನಂದ್ ಸಿನಿಮಾ ದೊಡ್ಡ ಹಿಟ್ ನಂತರ ರಥಸಪ್ತಮಿ ಚಿತ್ರ ಬಂದು ಯಶಸ್ವಿಯಾಯಿತು. ಮನಮೆಚ್ಚಿದ ಹುಡುಗಿ ಚಿತ್ರವೂ ಸೂಪರ್ ಹಿಟ್ ಆಗಿ ಹ್ಯಾಟ್ರಿಕ್ ಹೀರೋ ಎಂಬ ಬಿರುದು ಬಂತು. ಅಲ್ಲಿಂದ ಈವರೆಗೆ ಶಿವರಾಜ್ಕುಮಾರ್ 140ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ ಮುಕ್ತರಾಗಿರುವ ಅವರು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದು, ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರಿಕ್ಷೆಗಳಿವೆ.