ETV Bharat / entertainment

'ಶಿವ' ಹೆಸರಿನ ಜೊತೆಗಿನ ನಂಟಿನ ಬಗ್ಗೆ ಬಿಚ್ಚಿಟ್ಟ ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್ - 45 MOVIE PROMOTION

ಬಹುನಿರೀಕ್ಷಿತ '45' ಚಿತ್ರದ ಪ್ರಚಾರ ಜೋರಾಗೇ ನಡೆಯುತ್ತಿದೆ. ಬಹುತಾರಾಗಣದ ಸಿನಿಮಾದ ಮೊದಲ ಹಾಡು 'ಶಿವಂ ಶಿವಂ ಸನಾತನಂ' ಅನಾವರಣಗೊಂಡಿದೆ.

45 movie promotion
45 ಸಿನಿಮಾ ಪ್ರಮೋಶನ್​ (Photo: ETV Bharat)
author img

By ETV Bharat Entertainment Team

Published : May 23, 2025 at 12:23 PM IST

2 Min Read

ಕೋಟ್ಯಂತರ ಅಭಿಮಾನಿಗಳು ಮಾತ್ರವಲ್ಲದೇ, ನಿರ್ಮಾಪಕ, ನಿರ್ದೇಶಕರ ಅಚ್ಚುಮೆಚ್ಚಿನ ಕನ್ನಡದ ನಟ‌‌ ಶಿವರಾಜ್​ಕಮಾರ್. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹ್ಯಾಟ್ರಿಕ್​ ಹೀರೋ ಶಿವಣ್ಣನ ಮುಂದಿನ ಬಹುನಿರೀಕ್ಷಿತ ಚಿತ್ರ '45'. ಶಿವರಾಜ್​​ಕುಮಾರ್ ಜೊತೆ ರಿಯಲ್​ ಸ್ಟಾರ್ ಉಪೇಂದ್ರ ಹಾಗೂ ಪ್ರತಿಭಾನ್ವಿತ ನಟ ರಾಜ್ ಬಿ. ಶೆಟ್ಟಿ ಅಭಿನಯಿಸಿರುವ ಈ ಚಿತ್ರದ ಮೊದಲ ಹಾಡು ಅನಾವರಣವಾಗಿದೆ.

ಆನಂದ ಪೀಠಾಧಿಪತಿ ಶ್ರೀ ಮಹಾರಾಜ್ ಸ್ವಾಮಿಗಳು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ 'ಶಿವಂ ಶಿವಂ ಸನಾತನಂ' ಹಾಡನ್ನು ಬಿಡುಗಡೆಗೊಳಿಸಿದರು. ಈವೆಂಟ್​​​ನಲ್ಲಿ ಶಿವರಾಜ್​​ಕುಮಾರ್​ಗೂ ಶಿವ ಎಂಬ ಹೆಸರಿಗೂ ಏನು ಸಂಬಂಧ ಎಂಬುದರ ಬಗ್ಗೆ ಹಂಚಿಕೊಳ್ಳಲಾಯಿತು.

45 ಸಿನಿಮಾ ಪ್ರಮೋಶನ್​ (Video: ETV Bharat)

ಡ್ಯಾನ್ಸ್ ಆರ್ಟಿಸ್ಟ್​​ಗಳು ಈಶ್ವರನ ಅವತಾರದಲ್ಲಿ ಈ 'ಶಿವಂ ಶಿವಂ ಸನಾತನಂ' ಹಾಡಿಗೆ ಅದ್ಭುತವಾಗಿ ನೃತ್ಯ ಪ್ರದರ್ಶಿಸುವ ಮೂಲಕ ಕಾರ್ಯಕ್ರಮದಲ್ಲಿದ್ದವರನ್ನು ರಂಜಿಸಿದರು. ಈ ಹಾಡು ಪೂರ್ಣಗೊಳ್ಳುವ ಹೊತ್ತಿಗೆ ನಾಯಕ ನಟ ಶಿವರಾಜ್​ಕುಮಾರ್ ವೈಟ್ ಅಂಡ್ ವೈಟ್ ರೇಷ್ಮೆ ಪಂಚೆ ಹಾಗೂ ಶರ್ಟ್​ನಲ್ಲಿ ಸಂಪೂರ್ಣ ಸಾಂಪ್ರದಾಯಿಕ ನೋಟದಲ್ಲಿ ವೇದಿಕೆಗೆ ಸರ್​ಪ್ರೈಸ್ ಎಂಟ್ರಿ‌ ಕೊಟ್ಟರು.

45 ಸಿನಿಮಾ ಪ್ರಮೋಶನ್​ (Video: ETV Bharat)

ಶಿವರಾಜ್​ಕುಮಾರ್ ಮೂಲ ಹೆಸರು 'ನಾಗರಾಜ ಶಿವ ಪುಟ್ಟಸ್ವಾಮಿ'. ಶಿವನ ಜೊತೆಗೆ ತಂದೆ ರಾಜ್​​ಕುಮಾರ್ ಎಂಬ ಹೆಸರನ್ನು ಸೇರಿಸಿಕೊಂಡು ಭಾರತೀಯ ಚಿತ್ರರಂಗದಲ್ಲಿ ಶಿವರಾಜ್​ಕುಮಾರ್ ಎಂದೇ ಬ್ರ್ಯಾಂಡ್​ ಆಗಿದ್ದಾರೆ. ವಿಶೇಷವಾಗಿ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮೋಘ ಅಭಿನಯ ಮಾತ್ರವಲ್ಲದೇ ಸಿಂಪ್ಲಿಸಿಟಿಗೆ ಹೆಸರುವಾಸಿಯಾಗಿದ್ದಾರೆ‌.

ಓಂ ಹಾಗೂ ಶಿವ ಎಂಬ ಹೆಸರು ಶಿವರಾಜ್​​ಕುಮಾರ್ ಸಿನಿಪಯಣದಲ್ಲಿ ದೊಡ್ಡ ಮಹತ್ವವನ್ನೊಳಗೊಂಡಿದೆ. ಓಂ ಅನ್ನೋದು ಶಿವರಾಜ್​ಕುಮಾರ್ ಅಭಿನಯದ ಉಪೇಂದ್ರ ನಿರ್ದೇಶನದ ಬ್ಲಾಕ್​​ಬಸ್ಟರ್ ಸಿನಿಮಾ. ಇನ್ನೂ, ಶಿವ ಅನ್ನೋದು ಹ್ಯಾಟ್ರಿಕ್ ಹೀರೋಗೆ ದೊಡ್ಡ ಶಕ್ತಿ. ಈ ಶಕ್ತಿಯಿಂದಲೇ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳನ್ನು ಉತ್ತಮವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆಯಂದ್ರೆ ಇತ್ತೀಚೆಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸಂಪೂರ್ಣ ಚೇತರಿಸಿಕೊಂಡು, ಇದೀಗ ಡಬಲ್​ ಎನರ್ಜಿಯೊಂದಿಗೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: 'ದಯವಿಟ್ಟು ವದಂತಿ ಹರಡಬೇಡಿ': ವಿಘ್ನಗಳ ಬೆನ್ನಲ್ಲೇ ಕಾಂತಾರ ರಿಲೀಸ್​ ಡೇಟ್ ಮುಂದೂಡಿಕೆ?; ರಿಷಬ್​ ಶೆಟ್ಟಿ ಸ್ಪಷ್ಟನೆ ಏನು?

''ಈ ಸಿನಿಮಾ ವಿಶ್ವಾದ್ಯಂತ ತಲಪಬೇಕು. ನನಗೆ ಈ ಹಾಡು ಕೇಳಿದ ಮೇಲೆ ಸಿನಿಮಾ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಗಿದೆ. ಯಾವಾಗ ಈ ಚಿತ್ರ ನೋಡುತ್ತೇನೋ ಅನಿಸುತ್ತಿದೆ. ನಿರ್ಮಾಪಕ ರಮೇಶ್ ರೆಡ್ಡಿ‌ ನಮ್ಮ ಕುಟುಂಬವಿದ್ದಂತೆ. ಈಗಾಗಲೇ ಕನ್ನಡ ವರ್ಷನ್ ಡಬ್ಬಿಂಗ್ ಮಾಡಿದ್ದೇನೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಅರ್ಜುನ್ ಜನ್ಯ ಅವರು ಬಹಳ ಚೆನ್ನಾಗಿ ನಿರ್ದೇಶನದ ಹೊಣೆಯನ್ನು ನಿಭಾಯಿಸಿದ್ದಾರೆ. ನನಗೆ ಶಿವ ಅಂತಾ ಹೆಸರಿಟ್ಟಿದ್ದು ನಮ್ಮ ತಂದೆ ತಾಯಿ. ನಾನು 9 ವರ್ಷಗಳ ಬಳಿಕ ಹುಟ್ಟಿದ್ದು. ಅವರ ಮಗ ಅಂತಾ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನನ್ನ ಮೂಲ ಹೆಸರು ನಾಗರಾಜ ಶಿವಪುಟ್ಟಸ್ವಾಮಿ.‌ ಹೀಗಾಗಿ, ಶಿವ ಎಂಬ ಹೆಸರು ನನ್ನ‌ ಅಪ್ಪ ಅಮ್ಮನ ಆಶೀರ್ವಾದ'' ಎಂದು ತಿಳಿಸಿದರು.

ಇದನ್ನೂ ಓದಿ: ಪ್ರತಿಷ್ಠಿತ 'ಬೂಕರ್' ಪ್ರಶಸ್ತಿ ಗೆದ್ದ ಬಾನು ಮುಷ್ತಾಕ್‌ ಬಗ್ಗೆ ಶಿವಣ್ಣ, ಸುಧಾಮೂರ್ತಿ ಪ್ರಶಂಸೆ

ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಂಡಿದ್ದು, ಪಡ್ಡೆಹುಲಿ, 100 ಹಾಗೂ ಗಾಳಿಪಟ 2 ಸಿನಿಮಾಗಳನ್ನು ನಿರ್ಮಾಣ ಮಾಡಿರೋ ಉಮಾ ರಮೇಶ್​​ ರೆಡ್ಡಿ ಬಿಗ್​ ಬಜೆಟ್​ನಲ್ಲಿ ನಿರ್ಮಿಸಿದ್ದಾರೆ. ಸಂಗೀತ ಲೋಕದಲ್ಲಿ ಖ್ಯಾತರಾದ ಅರ್ಜುನ್​ ಜನ್ಯ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಗೀತದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಅಭಿಮಾನಿಗಳಲ್ಲಿ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.