ETV Bharat / entertainment

ಜಾಲಿ ಮೂಡ್​ನಲ್ಲಿ ಸೈಕಲ್​ ತುಳಿದ ಹ್ಯಾಟ್ರಿಕ್​​ ಹೀರೋ: ಶಿವಣ್ಣ ಮೆಚ್ಚಿದ ನಟ ಯಾರು? ; ನಿಮ್ಮ ಊಹೆ ಸರಿ ಇದೆಯೇ ಚಕ್​ ಮಾಡಿ! - SHIVA RAJKUMAR

ಶಿವಣ್ಣ ಸದ್ಯ ತಮ್ಮ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಜಾಲಿ ಮೂಡ್‌ನಲ್ಲಿ ಸೈಕಲ್​ ತುಳಿದಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

Shiva Rajkumar
ನಟ ಶಿವರಾಜ್​ಕುಮಾರ್ (Photo: ETV Bharat)
author img

By ETV Bharat Entertainment Team

Published : April 18, 2025 at 1:02 PM IST

2 Min Read

ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್​ಕುಮಾರ್​, ರಿಯಲ್​ ಸ್ಟಾರ್ ಜನಪ್ರಿಯತೆಯ​ ಉಪೇಂದ್ರ ಹಾಗೂ ಚಂದನವನದ ಪ್ರತಿಭಾನ್ವಿತ ನಟ ​ರಾಜ್​ ಬಿ ಶೆಟ್ಟಿ ಅಭಿನಯದ '45' ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಇತ್ತೀಚೆಗಷ್ಟೇ ಟೀಸರ್​​ ಅನಾವರಣಗೊಂಡಿದೆ. ಆಗಸ್ಟ್​​ಗೆ ಸಿನಿಮಾ ಬಿಡುಗಡೆ ಆಗಲಿದ್ದು, ಚಿತ್ರತಂಡ ಈಗಲೇ ಪ್ರಚಾರ ಪ್ರಾರಂಭಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್​, ಚೆನ್ನೈ ಎಂದು ದೊಡ್ಡ ಪಟ್ಟಣಗಳಲ್ಲಿ ಚಿತ್ರತಂಡ ಪ್ರಮೋಷನ್​​​ ನಡೆಸುತ್ತಿದೆ. ಶಿವಣ್ಣ ಸೇರಿದಂತೆ ಚಿತ್ರತಂಡ ವಿಡಿಯೋಗಳು ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿದ್ದು, ಹ್ಯಾಟ್ರಿಕ್​​ ಹೀರೋ ಸೈಕಲ್​ ತುಳಿದಿರುವ ವಿಡಿಯೋ ವ್ಯಾಪಕವಾಗಿ ಗಮನ ಸೆಳೆದಿದೆ.

ಸೈಕಲ್ ರೈಡಿಂಗ್​ ವಿಡಿಯೋ ವೈರಲ್: ಕಳೆದ ವರ್ಷಾಂತ್ಯ ಕ್ಯಾನ್ಸರ್​​ಗೆ ಒಳಗಾಗಿರುವ ವಿಷಯ ಬಹಿರಂಗಪಡಿಸಿದ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಶಿವರಾಜ್​ಕುಮಾರ್, ಡಿಸೆಂಬರ್​​​ನಲ್ಲಿ ಅಮೆರಿಕಕ್ಕೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಯಶಸ್ವಿ ಸರ್ಜರಿ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದ ತಾರೆಯೀಗ ಡಬಲ್​ ಎನರ್ಜಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್​ ಸಿನಿಮಾ ಶೂಟಿಂಗ್, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸೆಂಚುರಿ ಸ್ಟಾರ್ ಅವರ ಸೈಕಲ್ ರೈಡಿಂಗ್​ ವಿಡಿಯೋ ವೈರಲ್​​ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೆಂಚುರಿ ಸ್ಟಾರ್​ನ ಫೇವರಿಟ್​ ಸ್ಟಾರ್ಸ್ ಯಾರು? ಕಮಲ್ ಹಾಸನ್ ಹಾಗೂ ಅಮಿತಾಭ್​​ ಬಚ್ಚನ್ ನನಗೆ ಸ್ಪೂರ್ತಿ. ಹೀರೋ ಅಂತಾ ಬಂದರೆ, ಅವರು ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಅವರಂತೆ ಇರಬೇಕು ಎಂದು ನಾನು ಭಾವಿಸುತ್ತಿದ್ದೆ. ಅವರಿಬ್ಬರೂ ಕೂಡಾ ನನ್ನ ಮೆಚ್ಚಿನ ನಟರು. ಅವರು ನನ್ನಲ್ಲಿ ನಟಿಸಲು ಕೇಳಿದರೆ, ನಾನು ಸಹ ಅವರೊಂದಿಗೆ ನಟಿಸಬಹುದು ಎಂದು ಭಾವಿಸಿ ನಾನು ನಟಿಸಲು ಪ್ರಾರಂಭಿಸಿದೆ. ಕಮಲ್ ಹಾಸನ್ ಅವರು ಸಖತ್​ ಹ್ಯಾಂಡ್ಸಂ ಅಂತಾನೇ ಹೇಳಬಹುದು. ಹೆಣ್ಣಾಗಿ ಹುಟ್ಟಿದ್ದರೆ ನಾನು ಅವರನ್ನೇ ಮದುವೆಯಾಗುತ್ತಿದ್ದೆ. ಅವರು ಮನೆಗೆ ಬಂದಾಗ, ಹಗ್​​ ಮಾಡಲು ಅನುಮತಿ ಕೇಳಿ ಅಪ್ಪಿಕೊಂಡಿದ್ದೆ. ನನಗವರು ಬಹಳ ಇಷ್ಟ ಎಂದು ತಿಳಿಸಿದರು. ಇನ್ನೂ ಇದೇ ವೇಳೆ, ಅಮೆರಿಕದಲ್ಲಿ ಸರ್ಜರಿ ಆದ ಬಳಿಕ ಕಮಲ್ ಹಾಸನ್​​ ಅವರು ಆಗಾಗ್ಗೆ ಕರೆ ಮಾಡಿ ವಿಚಾರಿಸುತ್ತಿದ್ದರು ಎಂದು ಪ್ರಮೋಶನಲ್​ ಈವೆಂಟ್​ನಲ್ಲಿ ತಿಳಿಸಿದರು.

ಇದನ್ನೂ ಓದಿ: "ನಾನು ಹೆಣ್ಣಾಗಿ ಹುಟ್ಟಿದ್ದರೆ ಕಮಲ್ ಹಾಸನ್​​ರನ್ನು ಮದುವೆಯಾಗುತ್ತಿದ್ದೆ"; ಜೈಲರ್​ 2ರಲ್ಲಿ ಶಿವರಾಜ್​ಕುಮಾರ್

ಶಿವಣ್ಣ ಇತ್ತೀಚೆಗೆ ವೀಕ್ಷಿಸಿದ ಸಿನಿಮಾಗಳಾವುವು? ಇನ್ನೂ, ನಾನು ಪ್ರತಿ ಬಾರಿಯೂ ಯುವ ನಿರ್ದೇಶಕರೊಂದಿಗೆ ಬಹಳ ಧೈರ್ಯದಿಂದ ಕೆಲಸ ಮಾಡುತ್ತೇನೆ. ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ. ಆದಷ್ಟಯ ಸಿನಿಮಾಗಳನ್ನು ನಾನು ನೋಡುತ್ತೇನೆ. ಇತ್ತೀಚೆಗೆ 'ಸ್ವೀಟ್‌ಹಾರ್ಟ್', 'ಡ್ರ್ಯಾಗನ್' ಸಿನಿಮಾ ವೀಕ್ಷಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: 'ಟಾಕ್ಸಿಕ್'​​​​ ಸೆಟ್​​ ಫೋಟೋ ವೈರಲ್​​: ರಾಕಿಂಗ್​ ಸ್ಟಾರ್ ಯಶ್ ಜೊತೆ ಬಹುಭಾಷಾ ಪ್ರತಿಭೆ ಸುದೇವ್​ ನಾಯರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.