ETV Bharat / entertainment

ರಾಮ್ ಚರಣ್, ಶಿವಣ್ಣ ನಟನೆಯ ಚಿತ್ರದ ಶೀರ್ಷಿಕೆ - ಫಸ್ಟ್ ಲುಕ್ ರಿಲೀಸ್​ ಡೇಟ್, ಟೈಮ್​ ರಿವೀಲ್​ - RC 16

ಆರ್​ಆರ್​ಆರ್​ ಸ್ಟಾರ್ ರಾಮ್​ ಚರಣ್​​​ ಜೊತೆ ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್ ಸ್ಕ್ರೀನ್​ ಶೇರ್ ಮಾಡಿರುವ ಚಿತ್ರದ ಶೀರ್ಷಿಕೆ ಮತ್ತು ಮೊದಲ ನೋಟ ಅನಾವರಣಕ್ಕೆ ದಿನ ಮತ್ತು ಸಮಯ ನಿಗದಿಯಾಗಿದೆ.

RC 16 updates
ಆರ್‌ಸಿ 16 ಅಪ್ಡೇಟ್ (Photo: Film Poster)
author img

By ETV Bharat Entertainment Team

Published : March 26, 2025 at 7:41 PM IST

1 Min Read

'ಆರ್‌ಸಿ16' ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ತಾತ್ಕಾಲಿಕ ಶೀರ್ಷಿಕೆಯ ಸಿನಿಮಾದಲ್ಲಿ ಆರ್​ಆರ್​ಆರ್​ ಸ್ಟಾರ್ ರಾಮ್​ ಚರಣ್​​​ ಜೊತೆ ಕರುನಾಡ ಚಕ್ರವರ್ತಿ ಶಿವರಾಜ್​​ಕುಮಾರ್ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಅದರಂತೆ, ಇಂದು ಚಿತ್ರತಂಡ ಅಭಿಮಾನಿಗಳಿಗೊಂದು ಗುಡ್​ ನ್ಯೂಸ್ ಕೊಟ್ಟಿದೆ. ಹೌದು, ದಕ್ಷಿಣ ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಮುಖ್ಯಭೂಮಿಕೆಯ ಮುಂಬರುವ ಚಿತ್ರ 'ಆರ್‌ಸಿ 16'ರ ಅಫೀಶಿಯಲ್​ ಟೈಟಲ್​ ಮತ್ತು ಫಸ್ಟ್ ಲುಕ್ ರಿಲೀಸ್​ ಡೇಟ್ ಅನೌನ್ಸ್ ಮಾಡಿದ್ದಾರೆ.

ಮಾರ್ಚ್ 27 ನಟ ರಾಮ್​ ಚರಣ್​ ಅವರ ಜನ್ಮದಿನ. 40ನೇ ವಸಂತಕ್ಕೆ ಕಾಲಿಡಲಿರುವ ರಾಮ್​ ಚರಣ್​​, ತಮ್ಮ ಮುಂದಿನ ಸಿನಿಮಾದ ಶೀರ್ಷಿಕೆ ಬಹಿರಂಗಪಡಿಸಲಿದ್ದಾರೆ. ಜೊತೆಗೆ ಫಸ್ಟ್​ ಲುಕ್​ ಕೂಡಾ ಅನಾವರಣಗೊಳ್ಳಲಿದೆ. ಆರ್​ಸಿ16 ಶೀರ್ಷಿಕೆ ಮತ್ತು ಮೊದಲ ನೋಟ ನಾಳೆ ಬೆಳಗ್ಗೆ 9.09ಕ್ಕೆ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: 'ಕಲಾವಿದರು ಮಿತಿಯಲ್ಲಿರಬೇಕು, ಮತ್ತು ಜನರು?: ಶೋಗೆ ಲೇಟಾಗಿ ಬಂದು ಕಣ್ಣೀರಿಟ್ಟ ನೇಹಾ ಕಕ್ಕರ್ ಸಮರ್ಥಿಸಿಕೊಂಡ ಸಹೋದರ

ಮಾರ್ಚ್​​ 5ರಂದು ಆರ್​ಸಿ16 ತಂಡ ವಿಡಿಯೋ ಒಂದನ್ನು ಅನಾವರಣಗೊಳಿಸುವ ಮೂಲಕ ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಅವರು ತಮ್ಮ ತಂಡ ಸೇರಿದ್ದಾರೆಂದು ಅಧಿಕತವಾಗಿ ಘೋಷಿಸಿದರು. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರ ವಹಿಸುತ್ತಿದ್ದು, ಇತ್ತೀಚೆಗಷ್ಟೇ ಲುಕ್ ಟೆಸ್ಟ್‌ಗೆ ಒಳಗಾಗಿದ್ದರು. ಲುಕ್ ಟೆಸ್ಟ್‌ ವಿಡಿಯೋ ಬಿಡುಗಡೆ ಮಾಡಿದ ಚಿತ್ರತಂಡ ಶಿವರಾಜ್​​ಕುಮಾರ್​ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದರು. ಅದರಂತೆ, ಶಿವರಾಜ್​ಕುಮಾರ್​ ಕಳೆದ ಶುಕ್ರವಾರ ಹೈದರಾಬಾದ್​ ತಲುಪಿದ್ದಾರೆ. ಪತ್ನಿ ಗೀತಾ ಅವರು ಕೂಡಾ ನಟನಿಗೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: 'ಎಂಪುರಾನ್' ದಾಖಲೆ​​​​: 1 ಮಿಲಿಯನ್ ಅಡ್ವಾನ್ಸ್ ಟಿಕೆಟ್ಸ್​ ಮಾರಾಟ ಮಾಡಿದ ಮೊದಲ ಮಲಯಾಳಂ ಸಿನಿಮಾ

ಕಳೆದ ಶುಕ್ರವಾರ,​ ಹೈದರಾಬಾದ್​​ ತಲುಪಿದ ಶಿವರಾಜ್​ಕುಮಾರ್​ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನೂ, ಭಾನುವಾರದಂದು ಶಿವರಾಜ್​ಕುಮಾರ್​ ದಂಪತಿ ಪೆದ್ದಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವ ಫೋಟೋ ವಿಡಿಯೋಗಳು ಆನ್​ಲೈನ್​ನಲ್ಲಿ ವೈರಲ್​ ಆಗಿವೆ.​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.