ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ 'ದಾಯ್ರಾ' (Daayra) ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಲು ಸಜ್ಜಾಗಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಮತ್ತು ಜಂಗ್ಲೀ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಅಡಿ ನಿರ್ಮಿಸಲಾಗುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಇಂದು ವಿಷು ಹಬ್ಬದ ಶುಭ ಸಂದರ್ಭದಲ್ಲಿ, ದಕ್ಷಿಣ ಚಿತ್ರರಂಗದ ಖ್ಯಾತ ನಟ ಅಭಿಮಾನಿಗಳಿಗೆ ಅಧಿಕೃತ ಮಾಹಿತಿ ಒದಗಿಸಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ, ಈ ಕೊಲಾಬರೇಷನ್ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಲಿವುಡ್ ಸೂಪರ್ ಸ್ಟಾರ್, ನಿರ್ದೇಶಕಿ ಮೇಘನಾ ಗುಲ್ಜಾರ್ ಮತ್ತು ಸಹನಟಿ ಕರೀನಾ ಕಪೂರ್ ಖಾನ್ ಅವರೊಂದಿಗಿನ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋವೊಂದರಲ್ಲಿ, ಮೂವರು ಚರ್ಚೆಯಲ್ಲಿ ಮುಳುಗಿರುವಂತೆ ಬಹುಶಃ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿರುವಂತೆ ತೋರಿದೆ. ಮತ್ತೊಂದು ಫೋಟೋದಲ್ಲಿ, ಮೂವರು ಕ್ಯಾಮರಾ ಕಂಡು ನಗುಮೊಗದಲ್ಲಿ ಪೋಸ್ ನೀಡಿದ್ದಾರೆ. ಇದರ ಜೊತೆಗೆ, "ಕೆಲ ಕಥೆಗಳು ನೀವು ಕೇಳಿದ ಕ್ಷಣದಿಂದಲೇ ನಿಮ್ಮೊಂದಿಗಿರುತ್ತವೆ. ನನಗೆ 'ದಾಯ್ರಾ' ವಿಷಯದಲ್ಲಿ ಅದೇ ಆಗಿದೆ. ನಿರ್ದೇಶಕಿ ಮೇಘನಾ ಗುಲ್ಜಾರ್, ಅದ್ಭುತ ನಟಿ ಕರೀನಾ ಕಪೂರ್ ಖಾನ್ ಮತ್ತು ಜಂಗ್ಲೀ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ನಿಮಗೆಲ್ಲರಿಗೂ ವಿಷು ಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.
Some stories stay with you from the moment you hear them.
— Prithviraj Sukumaran (@PrithviOfficial) April 14, 2025
DAAYRA is that for me.
Excited to work with @meghnagulzar, the incredible #KareenaKapoorKhan and @JungleePictures! Wish you all a very happy Vishu! 🙂#Daayra@vineetjaintimes #AmritaPandey #YashKeswani #SimaAgarwal… pic.twitter.com/vSHXSVh8vC
ಕರೀನಾ ಕಪೂರ್ ಖಾನ್, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡು, "ನಾನು ಯಾವಾಗಲೂ ನಿರ್ದೇಶಕರ ನಟಿ ಎಂದು ಹೇಳುತ್ತೇನೆ. ಈ ಬಾರಿ ನಮ್ಮಲ್ಲಿರುವ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಮೇಘನಾ ಗುಲ್ಜಾರ್ ಮತ್ತು ಅವರ ಕೆಲಸಗಳಿಂದಾಗಿ ನಾನು ಹೆಚ್ಚು ಮೆಚ್ಚುವ ಅದ್ಭುತ ನಟ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಕೆಲಸ ಮಾಡಲು ನನಗೆ ಹೆಚ್ಚು ಕಾಯಲು ಸಾಧ್ಯವಿಲ್ಲ. ನನ್ನ ಡ್ರೀಮ್ ಟೀಮ್ 'ದಾಯ್ರಾ', ಲೆಟ್ಸ್ ಡು ದಿಸ್'' ಎಂದು ಬರೆದುಕೊಂಡಿದ್ದಾರೆ.
ಹಲವು ದಿನಗಳ ಊಹಾಪೋಹಗಳ ನಂತರ ಈ ಅಫೀಶಿಯಲ್ ಅನೌನ್ಸ್ಮೆಂಟ್ ಆಗಿದೆ. ದಾಯ್ರಾ 2024ರಲ್ಲಿ ಬಹಿರಂಗವಾಯಿತು. ಆದ್ರೆ ಅಂದಿನಿಂದ ಅಪ್ಡೇಟ್ಸ್ ಅಷ್ಟಾಗಿ ಇರಲಿಲ್ಲ. ಈ ತಿಂಗಳ ಆರಂಭದಲ್ಲಿ, ಏಪ್ರಿಲ್ 7 ರಂದು, ಕರೀನಾ ಕಪೂರ್ ಖಾನ್ ಅವರೊಂದಿಗಿನ ಭೇಟಿ ನಂತರ ಪೃಥ್ವಿರಾಜ್ ಮುಂಬೈನಲ್ಲಿ ಕಾಣಿಸಿಕೊಂಡರು. ಈ ಇಬ್ಬರೂ ಒಟ್ಟಿಗೆ ಒಂದೇ ಸ್ಥಳದಿಂದ ನಿರ್ಗಮಿಸುವಾಗ ಪಾಪರಾಜಿಗಳ ಕ್ಯಾಮರಾಗಳಲ್ಲಿ ಸೆರೆಯಾದರು. ಇದು ಜೋಡಿಯ ಕೊಲಾಬರೇಷನ್ ಬಗ್ಗೆ ಉತ್ಸಾಹ ಹೆಚ್ಚಿಸಿತ್ತು. ಅಂದು ಸಂಜೆ, ಪೃಥ್ವಿರಾಜ್ ತಮ್ಮ ಪತ್ನಿಯೊಂದಿಗೆ ಮ್ಯಾಡಾಕ್ ಫಿಲ್ಮ್ಸ್ನ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಬ್ಯಾಂಕ್ ಜನಾರ್ಧನ್ ನಿಧನಕ್ಕೆ ಹೆಚ್‌ಡಿಕೆ, ಬೊಮ್ಮಾಯಿ, ಉಪೇಂದ್ರ ಸೇರಿ ಗಣ್ಯರ ಸಂತಾಪ
ಈ ಪ್ರಾಜೆಕ್ಟ್ ಆರಂಭದಿಂದಲೂ ಹಲವು ಬದಲಾವಣೆಗಳನ್ನು ಕಂಡಿದೆ. ನಟರಾದ ಸಿದ್ಧಾರ್ಥ್ ಮಲ್ಹೋತ್ರಾ, ಆಯುಷ್ಮಾನ್ ಖುರಾನಾ ಈ ಹಿಂದೆ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎಂದಾಗಿತ್ತು. ಆದ್ರೆ ಶೆಡ್ಯೂಲ್ ಸರಿಹೊಂದದ ಕಾರಣ ಸಿನಿಮಾದಿಂದ ಹಿಂದೆ ಸರಿದರು ಎಂದು ವರದಿಯಾಗಿದೆ.
ಇದನ್ನೂ ಓದಿ: 'ಮನೆಗೆ ನುಗ್ಗಿ ಕೊಲ್ಲುತ್ತೇವೆ, ಬಾಂಬ್ ಇಟ್ಟು ಕಾರನ್ನು ಸ್ಫೋಟಿಸುತ್ತೇವೆ': ಸಲ್ಮಾನ್ ಖಾನ್ಗೆ ಮತ್ತೊಮ್ಮೆ ಜೀವ ಬೆದರಿಕೆ
ರಾಣಿ ಮುಖರ್ಜಿ ಜೊತೆ 'ಐಯ್ಯ' (2012) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪೃಥ್ವಿರಾಜ್, ನಂತರ ಔರಂಗಜೇಬ್ (2013) ಮತ್ತು ನಾಮ್ ಶಬಾನಾ (2017) ಚಿತ್ರಗಳಲ್ಲಿ ಕಾಣಿಸಿಕೊಂಡರು. 'ದಾಯ್ರಾ' ಚಿತ್ರದೊಂದಿಗೆ, ಮೇಘನಾ ಗುಲ್ಜಾರ್ ಮತ್ತು ಕರೀನಾ ಕಪೂರ್ ಖಾನ್ ಅವರೊಂದಿಗೆ ಕೆಲಸ ಮಾಡುವ ಮೂಲಕ ಬಾಲಿವುಡ್‌ಗೆ ಮರಳುತ್ತಿದ್ದಾರೆ.