ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ 'ನಿದ್ರಾದೇವಿ Next Door' ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ. ನಟ ದುನಿಯಾ ವಿಜಯ್ ಕುಮಾರ್ ಸ್ಲೀಪ್ಲೆಸ್ ಆಂಥೆಮ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರ ಸುರಾಗ್ ಸಾಗರ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.
ದುನಿಯಾ ವಿಜಯ್ ಕುಮಾರ್ ಮಾತನಾಡಿ, ಹಾಡು ಬಹಳ ಚೆನ್ನಾಗಿದೆ. ಹೀರೋ ಕೂಡಾ ಮುದ್ದಾಗಿ ಕಾಣಿಸುತ್ತಾರೆ. ಹೀರೋಯಿನ್ ಸಹ ಚೆನ್ನಾಗಿ ಕಾಣಿಸುತ್ತಾರೆ. ಪ್ರವೀರ್ ಡ್ಯಾನ್ಸ್ ಎನರ್ಜಿ ನೋಡಿ ಖುಷಿಯಾಯ್ತು. ಲಿರಿಕ್ಸ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲೆಂದು ಶುಭ ಹಾರೈಸಿದರು.
ನಟ ಪ್ರವೀರ್ ಶೆಟ್ಟಿ ಮಾತನಾಡಿ, ಈ ದಿನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಹಿಂದೆ ತುಂಬಾ ಜನರು ಕಷ್ಟಪಟ್ಟಿದ್ದಾರೆ. ಡೈರೆಕ್ಟರ್, ಅವರ ಪತ್ನಿ, ನಕುಲ್, ಗುಬ್ಬಿ ಎಲ್ಲರೂ ಒಟ್ಟಿಗೆ ಸೇರಿ ಹಾಡು ಮಾಡಿದ್ದಾರೆ. ತಾರಕ್ ಮಾಸ್ಟರ್ ತುಂಬಾ ಚೆನ್ನಾಗಿ ಕೊರಿಯೋಗ್ರಫಿ ಮಾಡಿದ್ದಾರೆ ಎಂದು ತಿಳಿಸಿದರು.
ನಿರ್ಮಾಪಕ ಜಯರಾಮ್ ಮಾತನಾಡಿ, ನಾನು ಬಹಳ ಲಕ್ಕಿ. ಸಿನಿಮಾ ಮಾಡುವುದು, ಅದನ್ನು ಸಪೋರ್ಟ್ ಮಾಡುವುದು ಒಂದು ಕಡೆಯಾದರೆ, ಸಿನಿಮಾ ಪೂರ್ಣಗೊಂಡ ಬಳಿಕ ನಿಜವಾದ ಜರ್ನಿ ಶುರುವಾಗುತ್ತದೆ. ನಾನೀಗ ಆ ಜರ್ನಿ ನೋಡುತ್ತಿದ್ದೇನೆ. ಇದನ್ನು ಜನರಿಗೆ ತಲುಪಿಸುವುದು ಕಷ್ಟ ಅನ್ನುವುದೀಗ ಅರಿವಾಗುತ್ತಿದೆ. ಪ್ರತೀ ಹೆಜ್ಜೆಯಲ್ಲಿಯೂ ದೊಡ್ಡ ದೊಡ್ಡ ಹೀರೋಗಳು ಸಾಥ್ ಕೊಟ್ಟಿದ್ದಾರೆ. ಹೊಸ ಪ್ರೊಡಕ್ಷನ್ ಹೌಸ್ ಆದರೂ ಬಹಳ ಸಪೋರ್ಟ್ ಸಿಕ್ಕಿದೆ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ಇಡೀ ಸ್ಟಾರ್ ಕಾಸ್ಟ್ ಅದ್ಭುತವಾಗಿ ನಟಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು

ನಿರ್ದೇಶಕ ಸುರಾಗ್ ಸಾಗರ್ ಮಾತನಾಡಿ, ಕಷ್ಟಪಟ್ಟು ಮಾಡಿದ ಹಾಡನ್ನು ದೊಡ್ಡ ಪರದೆ ಮೇಲೆ ನೋಡಲು ಖುಷಿಯಾಯ್ತು. ದುನಿಯಾ ವಿಜಯ್ ಸರ್ ಸಾಂಗ್ ರಿಲೀಸ್ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಮ್ಮ ವಿಷನ್ಗೆ ಸಪೋರ್ಟ್ ಕೊಟ್ಟಿರುವುದು ನಮ್ಮ ಪ್ರೊಡ್ಯೂಸರ್. ಈ ಸಾಂಗ್ನಲ್ಲಿ ಪ್ರವೀರ್ ತುಂಬಾ ಕಷ್ಟಪಟ್ಟು ಡ್ಯಾನ್ ಮಾಡಿದ್ದಾರೆ. ಕಾಲು ಕ್ರ್ಯಾಂಪ್ ಆಗಿದ್ದರೂ ಕೂಡಾ 16 ಗಂಟೆ ಬ್ಯಾಕ್ ಟು ಬ್ಯಾಕ್ ಡ್ಯಾನ್ ಮಾಡಿದ್ದಾರೆ ಎಂದರು.
ಸ್ಲಿಪ್ ಲೆಸ್ ಆಂಥೆಮ್ ಸಾಂಗ್ನಲ್ಲಿ ಪ್ರವೀರ್ ಶೆಟ್ಟಿ ಸಖತ್ ಸ್ಟೆಪ್ ಹಾಕಿದ್ದಾರೆ. ನಿದ್ದೆ ಬಾರದ ವ್ಯಕ್ತಿಯ ಪಾಡನ್ನು ವಿವರಿಸುವ ಹಾಡಿಗೆ ಗುಬ್ಬಿ ಮತ್ತು ಸೈಫ್ ಖಾನ್ ಸಾಹಿತ್ಯ ಬರೆದಿದ್ದಾರೆ. ರ‍್ಯಾಪ್ ಶೈಲಿಯಲ್ಲಿ ಮೂಡಿಬಂದಿರುವ ಗೀತೆಗೆ ನಕುಲ್ ಅಭಯಂಕರ್ ಟ್ಯೂನ್ ಹಾಕಿದ್ದಾರೆ.

ಇದನ್ನೂ ಓದಿ: ಮುದ್ದಿನ ಮಡದಿಯೆದುರು ತಲೆಬಾಗಿ, ಸಿಹಿ ತಿನ್ನಿಸಿದ ಶಿವರಾಜ್ಕುಮಾರ್: ವಿವಾಹ ವಾರ್ಷಿಕೋತ್ಸವದ ವಿಡಿಯೋ ನೋಡಿ
ಪ್ರವೀರ್ ಶೆಟ್ಟಿಗೆ ರಿಷಿಕಾ ನಾಯಕ್ ಜೋಡಿಯಾಗಿ ಸಾಥ್ ಕೊಟ್ಟಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯಾ ಗೌಡ, ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ. ಸುರಾಗ್ ಅವರಿಗೆ ಅವರ ಪತ್ನಿ ಸಹನಾ ಸಹ ನಿರ್ದೇಶಕರಾಗಿ ಈ ಹಾಡಿಗೆ ಸಾಥ್ ಕೊಟ್ಟಿದ್ದಾರೆ. ಭರತ್ ಪರಶುರಾಮ್ ಸ್ಲಿಪ್ ಲೆಸ್ ಆಂಥೆಮ್ ಹಾಡಿಗೆ ಕ್ಯಾಮರಾ ಹಿಡಿದಿದ್ದಾರೆ.
ಇದನ್ನೂ ಓದಿ: 'ಪ್ರತೀ ಮೌನಕ್ಕೊಂದು ಕಥೆಯಿದೆ': ರಂಗಾಯಣ ರಘು ಮುಖ್ಯಭೂಮಿಕೆಯ 'ಅಜ್ಞಾತವಾಸಿ' ಶೀಘ್ರದಲ್ಲೇ ಒಟಿಟಿಗೆ
ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ತಮ್ಮ ಸುರಮ್ ಮೂವೀಸ್ ಬ್ಯಾನರ್ನಡಿಯಲ್ಲಿ ನಿರ್ಮಿಸಿದ್ದು, ಈ ಹಿಂದೆ ಇದೇ ಸಂಸ್ಥೆಯಲ್ಲಿ ರೇವ್ ಪಾರ್ಟಿ ಮತ್ತು ಎಂಗೇಜ್ಮೆಂಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ..