ETV Bharat / entertainment

'ನಾನು ಚೆನ್ನಾಗಿ ನಟಿಸಿದ್ರೆ ಮಾತ್ರ ಜನ ನನ್ನನ್ನು ಒಪ್ಪೋದು': ದೊಡ್ಮನೆ ಕುಡಿ ಯುವ ರಾಜ್​​ಕುಮಾರ್ - EKKA MOVIE PROMOTION

"ಈ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನನಗೆ ಸಿನಿಮಾ ಪ್ರೊಡ್ಯೂಸ್ ಮಾಡುತ್ತಾರೆಂದರೆ ನನಗೆ ಚಿಂತೆ ಇರೋದಿಲ್ಲ ಅಂತಾ ಏನಿಲ್ಲ. ಚೆನ್ನಾಗಿ ಅಭಿನಯಿಸಿದ್ರೆ ಮಾತ್ರ ಜನ ನನ್ನನ್ನು ಒಪ್ಪೋದು" ಎಂದು ಯುವ ರಾಜ್​​ಕುಮಾರ್ ಹೇಳಿದ್ದಾರೆ.

'Ekka' movie promotion event
'ಎಕ್ಕ' ಸಿನಿಮಾ ಪ್ರಚಾರ ಕಾರ್ಯಕ್ರಮ (Photo: ETV Bharat)
author img

By ETV Bharat Entertainment Team

Published : June 20, 2025 at 10:24 AM IST

2 Min Read

'ಎಕ್ಕ'. ಯುವ ರಾಜ್​​ಕುಮಾರ್ ಅಭಿನಯದ ಎರಡನೇ ಸಿನಿಮಾ. ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರದ ಪ್ರಚಾರ ಜೋರಾಗೇ ನಡೆಯುತ್ತಿದೆ. ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ಪಿಆರ್‌ಕೆ, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋಗಳು ಜಂಟಿಯಾಗಿ ಈ ಪ್ರಾಜೆಕ್ಟ್​ ನಿರ್ಮಿಸಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ನಿರೀಕ್ಷೆಗಳಿವೆ.

ನಾಯಕ ನಟ ಯುವ ರಾಜ್​ಕುಮಾರ್, ನಿರ್ದೇಶಕ ರೋಹಿತ್ ಪದಕಿ, ನಾಯಕಿಯರಾದ ಸಂಜನಾ ಆನಂದ್, ಸಂಪದ ಹಾಗೂ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್​ಕುಮಾರ್, ಜಯಣ್ಣ ಭೋಗೇಂದ್ರ, ಕಾರ್ತಿಕ್, ಯೋಗಿ ಜಿ.ರಾವ್, ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ಕ್ಯಾಮರಾಮ್ಯಾನ್ ಸತ್ಯ ಹೆಗ್ಡೆ ಸೇರಿ ಇಡೀ ತಂಡ ಮಾಧ್ಯಮದೆದುರು ಅನುಭವ ಹಂಚಿಕೊಂಡರು.

'ಎಕ್ಕ' ಸಿನಿಮಾ ಪ್ರಮೋಶನ್ ಈವೆಂಟ್​​ (Video: ETV Bharat)

ಎಕ್ಕ ಅಂದ್ರೇನು?: ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ''ಎಕ್ಕ ಅಂದ್ರೆ ಒಬ್ಬ ಕಿಂಗ್ ಅಂತಾ. ಪ್ರತಿಯೊಬ್ಬರ ಜೀವನದಲ್ಲಿ ಅವನೇ ಕಿಂಗ್. ಈ ಕಾರಣಕ್ಕೆ ಎಕ್ಕ ಟೈಟಲ್ ಇಟ್ಟಿದ್ದೇವೆ. ಇದೊಂದು ಫ್ಯಾಮಿಲಿ ಆ್ಯಂಡ್ ಕಮರ್ಷಿಯಲ್ ಸಿನಿಮಾ. ಚಿತ್ರದಲ್ಲಿ ಗಾರ್ಬೇಜ್ ಮಾಫಿಯಾ ಜೊತೆಗೆ ಫ್ಯಾಮಿಲಿ ಮೌಲ್ಯಗಳನ್ನು ಈ ಚಿತ್ರ ಒಳಗೊಂಡಿದೆ. 75 ದಿನಗಳಲ್ಲಿ ಶೂಟಿಂಗ್ ಮಾಡಿರೋದು ವಿಶೇಷ'' ಎಂದು ತಿಳಿಸಿದರು.

'ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಮಾತನ್ನು ಒಪ್ಪಲ್ಲ': 5 ನಿರ್ಮಾಪಕರಲ್ಲಿ ಒಬ್ಬರಾಗಿರುವ ಕಾರ್ತಿಕ್​​ ಮಾತನಾಡಿ, ''ಪಿಆರ್‌ಕೆ, ಜಯಣ್ಣ ಹಾಗೂ ನಮ್ಮ ಕೆಆರ್‌ಜಿ ಸ್ಟುಡಿಯೋ ಒಟ್ಟಿಗೆ ಸೇರಿ ಸಿನಿಮಾ ಮಾಡಿರೋದಕ್ಕೆ ಕಾರಣ ಒಳ್ಳೊಳ್ಳೆ ಐಡಿಯಾಗಳು. ಸಿನಿಮಾ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ನಾವು ಸೇರಿ ಒಟ್ಟಿಗೆ ನಿರ್ಮಾಣ ಮಾಡಿದೆವು. ಜನರು ಥಿಯೇಟರ್​ಗೆ ಬರುತ್ತಿಲ್ಲ ಎಂಬ ಮಾತನ್ನು ಒಪ್ಪಲು ಆಗೋಲ್ಲ. ಒಳ್ಳೆ ಕಟೆಂಟ್ ಚಿತ್ರಗಳನ್ನು ಕೊಟ್ಟಾಗ ಜನ ಚಿತ್ರಮಂದಿರಗಳಿಗೆ ಬರ್ತಾರೆ'' ಎಂದು ತಿಳಿಸಿದರು.

'ಚೆನ್ನಾಗಿ ಅಭಿನಯಿಸಿದ್ರೆ ಮಾತ್ರ ಜನ ನನ್ನನ್ನು ಒಪ್ಪೋದು': ನಾಯಕ ನಟ ಯುವ ರಾಜ್​​ಕುಮಾರ್ ಮಾತನಾಡಿ, ''ನಮ್ಮ ಬ್ಯಾಂಗಲ್‌ ಬಂಗಾರಿ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ನಾನು ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಪಿಆರ್​​ಕೆ, ಜಯಣ್ಣ ಹಾಗೂ ಕೆಆರ್​ಜಿ ಸ್ಟುಡಿಯೋ ಅಂತಹ ನಿರ್ಮಾಣ ಸಂಸ್ಥೆಗಳು ನನ್ನ ಫ್ಯಾಮಿಲಿಯಂತೆ. ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡೋದು ಖುಷಿ. ಆದ್ರೆ, ಈ ಮೂರು ನಿರ್ಮಾಣ ಸಂಸ್ಥೆಗಳು ನನಗೆ ಸಿನಿಮಾ ಪ್ರೊಡ್ಯೂಸ್ ಮಾಡುತ್ತಾರೆಂದರೆ ನನಗೆ ಚಿಂತೆ ಇರೋದಿಲ್ಲ ಅಂತಾ ಏನಿಲ್ಲ. ನಾನು ಕ್ಯಾಮರಾದೆದುರು ಚೆನ್ನಾಗಿ ಅಭಿನಯಿಸಿದ್ರೆ ಮಾತ್ರ ಜನ ನನ್ನನ್ನು ಒಪ್ಪೋದು'' ಎಂದು ತಿಳಿಸಿದರು.

ಇದನ್ನೂ ಓದಿ: 'ಥಗ್ ಲೈಫ್ ಬಿಡುಗಡೆ ಮಾಡದಂತೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಿ': ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಸದ್ಯ ಬ್ಯಾಂಗಲ್‌ ಬಂಗಾರಿ ಹಾಡು ಟ್ರೆಡಿಂಗ್​​ನಲ್ಲಿದ್ದು ಎಕ್ಕ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಹಾಡಿನಲ್ಲಿ ಯುವರಾಜ್​ಕುಮಾರ್‌ ಹಾಗೂ ಸಂಜನಾ ಆನಂದ್‌ ಮಸ್ತ್ ಹೆಜ್ಜೆ ಹಾಕಿದ್ದಾರೆ. ಇವರ ಜೊತೆಗೆ ಸಂಪದ, ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ, ಶ್ರುತಿ, ಬಿರಾದಾರ್ ಹೀಗೆ ದೊಡ್ಡ ತಾರಗಣ ಚಿತ್ರದಲ್ಲಿದೆ.

ಇದನ್ನೂ ಓದಿ: ಶಿವಣ್ಣನ ಸಿನಿಪಯಣಕ್ಕೆ 40ರ ಸಂಭ್ರಮ: ಹೊಸ ಸಿನಿಮಾ ಅನೌನ್ಸ್​, ಮತ್ತೆ ಒಂದಾದ 'ಟಗರು' ಜೋಡಿ

ಸತ್ಯ ಹೆಗ್ಡೆ ಕ್ಯಾಮರಾ ನಿಭಾಯಿಸಿದ್ದು, ಚರಣ್ 6 ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಾಗಾರ್ಜುನ್ ಶರ್ಮಾ ಬರೆದಿರುವ ಬ್ಯಾಂಗಲ್ ಬಂಗಾರಿಗೆ ಟಗರು ಸಿನಿಮಾ ಖ್ಯಾತಿಯ ಅಂತೋನಿ ದಾಸನ್ ಸಖತ್ ಜೋಷ್​ನಲ್ಲಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಜುಲೈ 18ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.