ಹೈದರಾಬಾದ್: ಸಿಂಗಾಪುರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಆಂಧ್ರ ಪ್ರದೇಶ ಡಿಸಿಎಂ ಖ್ಯಾತ ನಟ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಪುತ್ರನನ್ನು ಸಿಂಗಾಪುರದಿಂದ ಪವನ್ ಕಲ್ಯಾಣ್ ದಂಪತಿ ಹೈದರಾಬಾದ್ಗೆ ಇಂದು ಕರೆತಂದರು.
ಸಿಂಗಾಪುರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ಗೆ ಸಮೀಪದ ರಿವರ್ ವ್ಯಾಲಿ ರಸ್ತೆಯಲ್ಲಿರುವ ಟೊಮ್ಯಾಟೋ ಕುಕ್ಕಿಂಗ್ ಸ್ಕೂಲ್ನ ಕಟ್ಟಡದಲ್ಲಿ ಏಪ್ರಿಲ್ 8ರಂದು ಅಗ್ನಿ ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ ಮಾರ್ಕ್ ಶಂಕರ್ ಸೇರಿ 15 ಮಕ್ಕಳು ಸೇರಿ 20 ಜನರು ಗಾಯಗೊಂಡಿದ್ದರು.
Following the unfortunate fire incident at my son Mark Shankar’s summer camp in Singapore, I have been overwhelmed by the outpouring of prayers, concern, and support from all-over the world.
— Pawan Kalyan (@PawanKalyan) April 13, 2025
I wholeheartedly thank leaders from various political parties, @JanaSenaParty leaders,…
ಮಾರ್ಕ್ ಶಂಕರ್ಗೆ ಕಾಲು ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿದ್ದಲ್ಲದೇ ಹೊಗೆಯಿಂದಲೂ ಅಸ್ವಸ್ಥನಾಗಿದ್ದ. ಪರಿಣಾಮ, ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು, ಪವನ್ ಕಲ್ಯಾಣ ಅವರು ಹೈದರಾಬಾದ್ಗೆ ಆಗಮಿಸಿದ್ದಾರೆ.
ದುರಂತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಕಲ್ಯಾಣ್ ಅವರಿಗೆ ದೂರವಾಣಿ ಕರೆ ಮಾಡಿ, ಧೈರ್ಯ ನೀಡಿದ್ದರು. ಜೊತೆಗೆ, ಸಿಂಗಾಪುರದಲ್ಲಿನ ಭಾರತೀಯ ಹೈಕಮಿನಷರ್ ಅವರಿಗೆ ಕರೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದರು. ಇದರಿಂದಾಗಿ ಅಲ್ಲಿನ ಭಾರತೀಯ ರಾಯಭಾರಿಯು ನೇರವಾಗಿ ಮಾರ್ಕ್ ಶಂಕರ್ ಅವರ ಚಿಕಿತ್ಸೆ ಮೇಲೆ ನಿಗಾವಹಿಸಿತ್ತು.
ತಿರುಪತಿಯಲ್ಲಿ ವಿಶೇಷ ಪೂಜೆ: ಮಾರ್ಕ್ ಶಂಕರ್ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜೋನೊವಾ ಅವರು ಸೋಮವಾರ ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
I extend my deepest gratitude to you, Hon'ble Prime Minister Shri @narendramodi ji, and @PMOIndia for the prompt and supportive response during the tragic fire incident at my son Mark Shankar’s summer camp in Singapore. The assistance provided through the Singapore authorities,…
— Pawan Kalyan (@PawanKalyan) April 13, 2025
ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪವನ್ ಕಲ್ಯಾಣ್: ಸಿಂಗಾಪುರದಿಂದ ಆಗಮನದ ಬಳಿಕ ಎಕ್ಸ್ನಲ್ಲಿ ಪವನ್ ಕಲ್ಯಾಣ್ ಪೋಸ್ಟ್ ಮಾಡಿದ್ದಾರೆ. 'ಮಾರ್ಕ್ ಶಂಕರ್ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ನನ್ನ ಪುತ್ರನಿಗಾಗಿ ಪ್ರಾರ್ಥಿಸಿದ ಎಲ್ಲ ನಾಯಕರು, ಚಿತ್ರರಂಗದ ಸ್ನೇಹಿತರು, ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ವಿಶೇಷವಾಗಿ ಪ್ರಧಾನಿ ಮೋದಿ ಅವರಿಗೆ ಪವನ್ ಕಲ್ಯಾಣ್ ಧನ್ಯವಾದ ತಿಳಿಸಿದ್ದಾರೆ. 'ಕಠಿಣ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು. ಉತ್ತರಆಂಧ್ರದ ಆದಿವಾಸಿ ಪ್ರದೇಶದಲ್ಲಿ ಆಯೋಜಿಸಿದ್ದ ಆದಿವಾಸಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದ ವೇಳೆ ಸಿಂಗಾಪುರದಲ್ಲಿ ಅಗ್ನಿ ದುರಂತ ನಡೆದಿದೆ. ಈ ವೇಳೆ ನನ್ನ ಪುತ್ರ ಮತ್ತು ಇತರೆ ಮಕ್ಕಳ ರಕ್ಷಣೆಗೆ ನೀವು ಕೈಗೊಂಡ ಸಕಾಲಿಕ ಕ್ರಮ ನನ್ನ ಕುಟುಂಬಕ್ಕೆ ಅಪಾರ ಶಕ್ತಿ ಮತ್ತು ಸಮಾಧಾನ ತಂದಿದೆ' ಎಂದು ಪ್ರಧಾನಿ ಅವರಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಅಗ್ನಿ ಅವಘಡ: ಪವನ್ ಕಲ್ಯಾಣ್ ಪುತ್ರ ಸೇರಿ ಮಕ್ಕಳನ್ನು ರಕ್ಷಿಸಿದ ಭಾರತೀಯ ಕಾರ್ಮಿಕರನ್ನು ಸನ್ಮಾನಿಸಿದ ಸಿಂಗಾಪುರ ಸರ್ಕಾರ
ಇದನ್ನೂ ಓದಿ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪುತ್ರನ ಆರೋಗ್ಯದಲ್ಲಿ ಚೇತರಿಕೆ: ಅಗ್ನಿ ಅವಘಡದ ಬಳಿಕ ಮಾಹಿತಿ ಹಂಚಿಕೊಂಡ ಚಿರಂಜೀವಿ