ETV Bharat / entertainment

ಕ್ರಿಕೆಟಿಗ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ ಮನೆ'ಲಕ್ಷ್ಮೀ'ಗೆ ಅರ್ಥಪೂರ್ಣ ಹೆಸರು: ಮಗಳ ಹೆಸರು ರಿವೀಲ್​, ಏನಿದರ ಅರ್ಥ? - KL RAHUL ATHIYA SHETTY BABY

ಭಾರತೀಯ​​ ತಂಡದ ಸ್ಟಾರ್​ ಕ್ರಿಕೆಟರ್, ಕನ್ನಡಿಗ ಕೆ.ಎಲ್.ರಾಹುಲ್​ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ವಿಶೇಷ ದಿನದಂದು ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

KL Rahul, Athiya Shetty
ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ (Photo: IANS)
author img

By ETV Bharat Entertainment Team

Published : April 18, 2025 at 3:41 PM IST

2 Min Read

ಭಾರತೀಯ​​ ತಂಡದ ಸ್ಟಾರ್​ ಕ್ರಿಕೆಟರ್,​ ಕನ್ನಡಿಗ ಕೆ.ಎಲ್.ರಾಹುಲ್​ ಇಂದು 33ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಸ್ಟಾರ್ ಬ್ಯಾಟರ್​ಗೆ ಕುಟುಂಬಸ್ಥರು, ಆತ್ಮೀಯರು, ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳು ಶುಭಾಶಯಗಳ ಮಳೆ ಹರಿಸಿದ್ದಾರೆ. ಈ ವಿಶೇಷ ದಿನದಂದು ಕ್ರಿಕೆಟಿಗ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಇತ್ತೀಚೆಗಷ್ಟೇ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಇಂದು ತಮ್ಮ ಮುದ್ದು ಮಗಳ ಮೊದಲ ನೋಟವನ್ನು ಒದಗಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡಿದ್ದಾರೆ. ಸುಂದರ ಕುಟುಂಬದ ಫೋಟೋ ಜೊತೆಗೆ, ಮಗಳ ಹೆಸರು ಮತ್ತು ಅರ್ಥವನ್ನೂ ತಿಳಿಸಿದ್ದಾರೆ.

ಮಗಳ ಹೆಸರೇನು?: ಏಪ್ರಿಲ್ 18. ಕೆ.ಎಲ್.ರಾಹುಲ್ 33ನೇ ಹುಟ್ಟುಹಬ್ಬ. ಮಗಳು ಮತ್ತು ಪತ್ನಿಯೊಂದಿಗೆ ಸುಂದರ ಫೋಟೋ ಅವರು ಶೇರ್ ಮಾಡಿದ್ದಾರೆ. ಫೋಟೋ ಬಹಳ ಮುದ್ದಾಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗಳಿಗೆ 'ಇವಾರಾ' ಎಂದು ಹೆಸರಿಡಲಾಗಿದೆ. ತಮ್ಮ ವಿಶೇಷ ದಿನದಂದು ಮಗಳ ಹೆಸರು ಬಹಿರಂಗಪಡಿಸಿ ಅಭಿಮಾನಿಗಳಲ್ಲಿ ಖುಷಿ ತರಿಸಿದ್ದಾರೆ. ಈ ಹೆಸರಿನ ಅರ್ಥ ''ದೇವರ ಉಡುಗೊರೆ'' ಎಂದು.

ನಮ್ಮ ಸರ್ವಸ್ವ: ನಟಿ ಮತ್ತು ಕ್ರಿಕೆಟಿಗ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ, ''ನಮ್ಮ ಹೆಣ್ಣು ಮಗು, ನಮ್ಮ ಸರ್ವಸ್ವ. ಇವಾರಾ (Evaarah) - ದೇವರ ಉಡುಗೊರೆ'' ಎಂದು ಬರೆದುಕೊಂಡಿದ್ದಾರೆ. ಇದೊಂದು ಅರ್ಥಪೂರ್ಣ ಹೆಸರೆಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ದಂಪತಿಯ ಮಗಳ ಮೊದಲ ನೋಟಕ್ಕೆ ಅನೇಕ ತಾರೆಯರು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸಮಂತಾ ರುತ್ ಪ್ರಭು, ಅನುಷ್ಕಾ ಶರ್ಮಾ, ವಾಣಿ ಕಪೂರ್, ಅರ್ಜುನ್ ಕಪೂರ್, ಸಾನಿಯಾ ಮಿರ್ಜಾ, ಇಶಾ ಗುಪ್ತಾ, ಅಕ್ಷರ್ ಪಟೇಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರ್ಟ್ ಎಮೋಜಿಗಳೊಂದಿಗೆ ಮಗುವಿನ ಮೇಲೆ ಪ್ರೀತಿಯ ಮಳೆಗೈದಿದ್ದಾರೆ. ಜೊತೆಗೆ, ಇಬ್ಬರ ಅಭಿಮಾನಿಗಳು ಕೂಡಾ ಕಾಮೆಂಟ್ ಸೆಕ್ಷನ್​​ನಲ್ಲಿ ಪ್ರೀತಿ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ. ಸ್ಟಾರ್ ಫ್ಯಾಮಿಲಿಯ ಫೋಟೋ ಆನ್​ಲೈನ್​​ನಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಜಾಲಿ ಮೂಡ್​ನಲ್ಲಿ ಸೈಕಲ್​ ತುಳಿದ ಹ್ಯಾಟ್ರಿಕ್​​ ಹೀರೋ: ಶಿವಣ್ಣ ಮೆಚ್ಚಿದ ನಟ ಯಾರು? ; ನಿಮ್ಮ ಊಹೆ ಸರಿ ಇದೆಯೇ ಚಕ್​ ಮಾಡಿ!

ಕಳೆದ ತಿಂಗಳು ಮಾರ್ಚ್​​ 24ರಂದು ಸ್ಟಾರ್ ಕಪಲ್​​ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡರು. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಮುದ್ದು ಮಗಳ ಆಗಮನದ ಬಗ್ಗೆ ಮುದ್ದಾದ ಪೋಸ್ಟ್​ ಒಂದನ್ನು ಶೇರ್ ಮಾಡಿ, ಅಧಿಕೃತವಾಗಿ ಮಾಹಿತಿ ಒದಗಿಸಿದ್ದರು. ಕೊಳದಲ್ಲಿ ಎರಡು ಹಂಸಗಳ ಚಿತ್ರವಿರುವ ಪೋಸ್ಟರ್​ ಪೋಸ್ಟ್​ ಮಾಡಿ, ಅಫೀಶಿಯಲ್ ಅನೌನ್ಸ್​​ಮೆಂಟ್ ಮಾಡಿದ್ದರು.

ಇದನ್ನೂ ಓದಿ: 'ಟಾಕ್ಸಿಕ್'​​​​ ಸೆಟ್​​ ಫೋಟೋ ವೈರಲ್​​: ರಾಕಿಂಗ್​ ಸ್ಟಾರ್ ಯಶ್ ಜೊತೆ ಬಹುಭಾಷಾ ಪ್ರತಿಭೆ ಸುದೇವ್​ ನಾಯರ್

2 ವರ್ಷಗಳಿಂದ ಪ್ರೀತಿಯಲ್ಲಿದ್ದ ಅಥಿಯಾ ರಾಹುಲ್ 2023ರ ಜನವರಿಯಲ್ಲಿ ಹಸೆಮಣೆ ಏರಿದರು. ಅಥಿಯಾ ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿದ್ದಾರೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ನಟ, ಅಥಿಯಾ ಶೆಟ್ಟಿ ಅವರ ತಂದೆ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ಜರುಗಿತ್ತು. ಕಳೆದ ವರ್ಷ ನವೆಂಬರ್​ನಲ್ಲಿ ತಾವು ಪೋಷಕರಾಗುತ್ತಿರುವ ಸಿಹಿಸುದ್ದಿ ಹಂಚಿಕೊಂಡಿದ್ದರು. ನಮ್ಮ ಸುಂದರ ಆಶೀರ್ವಾದ 2025ಕ್ಕೆ ಆಗಮಿಸುತ್ತಿದೆ ಎಂದು ಬರೆದುಕೊಂಡಿದ್ದರು. ಇದೀಗ ಮಗಳ ಹೆಸರನ್ನು ರಿವೀಲ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.