'ಆಸ್ಕರ್' ಪ್ರಶಸ್ತಿಗಳನ್ನು ಚಲನಚಿತ್ರೋದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತದ ಕಲಾವಿದರು, ತಂತ್ರಜ್ಞರು ಸೇರಿ ಸಿನಿಮಾದ ಪ್ರತೀ ವಿಭಾಗದಲ್ಲೂ ಕೆಲಸ ಮಾಡೋ ಪ್ರತಿಭಾನ್ವಿತರು ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯಾದರೂ ಆಸ್ಕರ್ ಪ್ರಶಸ್ತಿ ಗೆಲ್ಲಲು ಹಾತೊರೆಯುತ್ತಾರೆ. ಇದೀಗ ಈ ವಿಶ್ವಪ್ರತಿಷ್ಠಿತ ಪ್ರಶಸ್ತಿಗಳಿಗೆ ಹೊಸ ವರ್ಗವನ್ನು ಸೇರಿಸಲಾಗಿದೆ.
ಬೆಸ್ಟ್ ಸ್ಟಂಟ್ ಡಿಸೈನ್: ಅಕಾಡೆಮಿ 'ಬೆಸ್ಟ್ ಸ್ಟಂಟ್ ಡಿಸೈನ್' ಕ್ಯಾಟಗರಿಯಲ್ಲಿ ಪ್ರಶಸ್ತಿಗಳನ್ನು ನೀಡುವುದಾಗಿ ಅಧಿಕೃತವಾಗಿ ಘೋಷಿಸಿದೆ. 100ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವರ್ಗವನ್ನು ಅಧಿಕೃತಗೊಳಿಸಲಾಗುವುದು ಎಂದು ಮಾಹಿತಿ ನೀಡಿದೆ.
Stunts have always been part of the magic of movies. Now, they’re part of the Oscars.
— The Academy (@TheAcademy) April 10, 2025
The Academy has created a new annual award for Achievement in Stunt Design—beginning with the 100th Oscars in 2028, honoring films released in 2027. pic.twitter.com/lpHen9Qk9l
ಈ ಬಗ್ಗೆ ಅಕಾಡೆಮಿ ಪ್ರತಿಕ್ರಿಯೆ ನೀಡಿದೆ. ಈ ವಿಭಾಗದಲ್ಲಿ ಪ್ರತಿಭಾನ್ವಿತ ತಂತ್ರಜ್ಞರನ್ನು ಸೇರಿಸಿಕೊಳ್ಳುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ. 'ಸ್ಟಂಟ್ ವಿನ್ಯಾಸ' ಆರಂಭದಿಂದಲೂ ಚಲನಚಿತ್ರ ನಿರ್ಮಾಣದ ಪ್ರಮುಖ ಭಾಗವಾಗಿದೆ. ಈ ವಿಭಾಗದಲ್ಲಿ ಸೃಜನಶೀಲ ಕಲಾವಿದರನ್ನು ನವೀನ ರೀತಿಯಲ್ಲಿ ಗೌರವಿಸಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದೆ. 2027ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ 2028ರಲ್ಲಿ ಅಂದರೆ 100ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಈ ವಿಭಾಗವನ್ನು ಸೇರಿಸಲಾಗುವುದು. ಈ ಬಗ್ಗೆ ಚಿತ್ರರಂಗದ ಗಣ್ಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 'ಒಳ್ಳೆಯ ನಿರ್ಧಾರ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋಸ್ಟರ್ನಲ್ಲಿ ಆರ್‌ಆರ್‌ಆರ್ ಸಿನಿಮಾ ಸೀನ್: ಆಸ್ಕರ್ ತನ್ನ ಹೊಸ ವರ್ಗವನ್ನು ಘೋಷಿಸುವ ಪೋಸ್ಟ್ ಶೇರ್ ಮಾಡಿದೆ. ಪೋಸ್ಟರ್ನಲ್ಲಿ 3 ಸಿನಿಮಾಗಳ ಫೋಟೋಗಳಿವೆ. ಅವುಗಳಲ್ಲಿ ಒಂದು 'ಆರ್‌ಆರ್‌ಆರ್' ಚಿತ್ರದ ಫೋಟೋ. ಸೆಂಟರ್ನಲ್ಲೇ ಇಂಡಿಯನ್ ಸಿನಿಮಾದ ಸೀನ್ ಹಾಕಲಾಗಿದೆ. ಸೂಪರ್ ಸ್ಟಾರ್ ರಾಮ್ ಚರಣ್ ಹುಲಿಯೊಂದಿಗೆ ಹೋರಾಡುವ ದೃಶ್ಯದ ಒಂದು ಶಾಟ್ ಅನ್ನು ಆಸ್ಕರ್ ಬಳಸಿದೆ. ಮೂರು ಚಲನಚಿತ್ರ ಪೋಸ್ಟರ್‌ಗಳೊಂದಿಗೆ ಆಸ್ಕರ್ 'ಸ್ಟಂಟ್ ಡಿಸೈನ್' ಕ್ಯಾಟಗರಿ ಪರಿಚಯಿಸಿದೆ. 'ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್', 'ಆರ್‌ಆರ್‌ಆರ್' ಮತ್ತು 'ಮಿಷನ್ ಇಂಪಾಸಿಬಲ್' ಚಿತ್ರಗಳ ಸಾಹಸಗಳ ಫೋಟೋಗಳೊಂದಿಗೆ ಅನೌನ್ಸ್ಮೆಂಟ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.
At last!!
— rajamouli ss (@ssrajamouli) April 11, 2025
After a 100 year wait !!!
Ecstatic for the new Oscars stunt design category for the films releasing in 2027! Huge thanks to David Leitch, Chris O’Hara, and the stunt community for making this historic recognition possible, and to @TheAcademy, CEO Bill Kramer, and… https://t.co/QWrUjuYU2I
ರಾಜಮೌಳಿ ಪ್ರತಿಕ್ರಿಯೆ: ಅಕಾಡೆಮಿ ಅನೌನ್ಸ್ಮೆಂಟ್ ಅನ್ನು ರೀಪೋಸ್ಟ್ ಮಾಡಿದ ಚಿತ್ರದ ನಿರ್ದೇಶಕರು, ''ಕೊನೆಗೂ! 100 ವರ್ಷಗಳ ಕಾಯುವಿಕೆಯ ನಂತರ! 2027ರಲ್ಲಿ ಬಿಡುಗಡೆಯಾಗಲಿರುವ ಚಲನಚಿತ್ರಗಳಿಗೆ ಹೊಸ ಆಸ್ಕರ್ ಸ್ಟಂಟ್ ವಿನ್ಯಾಸ ವಿಭಾಗ ಪರಿಚಯಿಸಿದ್ದಕ್ಕೆ ಭಾವಪರವಶ! ಈ ಐತಿಹಾಸಿಕ ಮನ್ನಣೆಯನ್ನು ಸಾಧ್ಯವಾಗಿಸಿದ್ದಕ್ಕಾಗಿ ಡೇವಿಡ್ ಲೀಚ್, ಕ್ರಿಸ್ ಒ'ಹರಾ ಮತ್ತು ಸ್ಟಂಟ್ ಸಮುದಾಯಕ್ಕೆ ಮತ್ತು ಸ್ಟಂಟ್ ಶಕ್ತಿಯನ್ನು ಗೌರವಿಸಿದ್ದಕ್ಕಾಗಿ ಅಕಾಡೆಮಿ ಸಿಇಒ ಬಿಲ್ ಕ್ರಾಮರ್ ಮತ್ತು ಅಧ್ಯಕ್ಷರಾದ ಜಾನೆಟ್ ಯಾಂಗ್ ಅವರಿಗೆ ಅಪಾರ ಧನ್ಯವಾದಗಳು. ಘೋಷಣೆಯಲ್ಲಿ ಆರ್‌ಆರ್‌ಆರ್ ಸಿನಿಮಾದ ಆ್ಯಕ್ಷನ್ ದೃಶ್ಯವನ್ನು ಕಂಡು ರೋಮಾಂಚನವಾಯಿತು'' ಎಂದು ತಿಳಿಸಿದರು.
ಇದನ್ನೂ ಓದಿ: ಅಜಿತ್ ಕುಮಾರ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಕಲೆಕ್ಷನ್ ಹೇಗಿದೆ? ಕೊನೆ ಸಿನಿಮಾಗಳಿಗಿಂತ ಉತ್ತಮ ಪ್ರದರ್ಶನ
ಹೊಸ ಆಸ್ಕರ್ ವಿಭಾಗವನ್ನು ಘೋಷಿಸುವ ಪ್ರಕ್ರಿಯೆಯಲ್ಲಿ ತಮ್ಮ ತೆಲುಗು ಚಿತ್ರದ ಪೋಸ್ಟರ್ ಬಳಸಿದ್ದಕ್ಕೆ ಟಾಲಿವುಡ್ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ ಇದು ಭಾರತೀಯ ಚಿತ್ರರಂಗಕ್ಕೆ ಸಂದ ಗೌರವ ಎಂದು ಕಾಮೆಂಟ್‌ಗಳು ಹರಿದು ಬರುತ್ತಿವೆ. ಭಾರತದ ಅತ್ಯಂತ ಜನಪ್ರಿಯ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದ ಆರ್‌ಆರ್‌ಆರ್ 2022ರಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ವಿಶ್ವಾದ್ಯಂತ 1,200+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಷ್ಟೇ ಅಲ್ಲದೇ, 'ನಾಟು ನಾಟು' ಹಾಡು 2023ರಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: ವಿಕ್ಕಿ, ರಶ್ಮಿಕಾ ನಟನೆಯ 'ಛಾವಾ' ಒಟಿಟಿಗೆ ಎಂಟ್ರಿ: ಮನೆಯಲ್ಲೇ ಕುಳಿತು ನೋಡಿ ಛತ್ರಪತಿ ಸಂಭಾಜಿ ಮಹಾರಾಜರ ಕಥೆ