'ಹಿಟ್ 3'. ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಟಾಕ್ ಆಗುತ್ತಿರುವ ಸಿನಿಮಾ. ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ನಾನಿ ಔಟ್ ಅಂಡ್ ಔಟ್ ಆ್ಯಕ್ಷನ್ ಜೊತೆಗೆ ಥ್ರಿಲ್ಲರ್ ಕಥಾಹಂದರದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ನ್ಯಾಚುಲರ್ ಸ್ಟಾರ್ ಜೊತೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ತೆರೆಹಂಚಿಕೊಂಡಿದ್ದು, ಸಿನಿಮಾ ಸುತ್ತಲಿನ ಕುತುಹಲ, ನಿರೀಕ್ಷೆ ಬಹಳ ದೊಡ್ಡ ಮಟ್ಟದಲ್ಲೇ ಇದೆ.
ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ: ಬಹುನಿರೀಕ್ಷಿತ ಚಿತ್ರ ಮೇ 1ರಂದು ಪ್ಯಾನ್ ಇಂಡಿಯಾದ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ನಾನಿ ಕ್ರೂರ ಸರಣಿ ಕೊಲೆಗಾರರನ್ನು ಬೇಟೆಯಾಡೋ ಅರ್ಜುನ್ ಸರ್ಕಾರ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಗ್ಸ್, ಟ್ರೇಲರ್ನಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಹಿಟ್ 3 ತಂಡ ಪ್ರಮೋಷನ್ಗಾಗಿ ಇಂದು ಬೆಂಗಳೂರಿಗೆ ಭೇಟಿ ಕೊಟ್ಟಿದೆ.
ಬೆಂಗಳೂರಿನಲ್ಲಿ ಪಾಸಿಟಿವ್ ವೈಬ್ಸ್: ನಟ ನಾನಿ ಮಾತನಾಡಿ, ಬೆಂಗಳೂರಿಗೆ ಬಂದಾಗ ಒಂದು ಪಾಸಿಟಿವ್ ವೈಬ್ಸ್ ಕ್ರಿಯೇಟ್ ಆಗುತ್ತೆ. ಇಲ್ಲಿ ನನ್ನ ಸ್ನೇಹಿತರು ಬಹಳ ಮಂದಿ ಇದ್ದಾರೆ. ಅದರಲ್ಲೂ ಸುದೀಪ್ ಅಣ್ಣ ಹಾಗೂ ಶಿವಣ್ಣ ತೋರಿಸೋ ಪ್ರೀತಿ ನನ್ನನ್ನು ಬೆಂಗಳೂರಿಗೆ ಬರುವ ಹಾಗೇ ಮಾಡುತ್ತದೆ. ಅಷ್ಟೇ ಅಲ್ಲ, ಕಳೆದ ಕೆಲ ವರ್ಷಗಳಿಂದ ನನ್ನ ಸಿನಿಮಾಗಳು ಸಕ್ಸಸ್ ಆಗೋ ಜೊತೆಗೆ ಬಾಕ್ಸ್ ಆಫೀಸ್ನಲ್ಲಿಯೂ ಉತ್ತಮ ಗಳಿಕೆ ಮಾಡುತ್ತಿವೆ. ಅದು ನನ್ನ ಅದೃಷ್ಟ. ಈ ಬಾರಿ ಮತ್ತಷ್ಟು ವಿಶೇಷ ಎನ್ನಬಹುದು. ಏಕಂದ್ರೆ ನನ್ನ ಈ ಸಿನಿಮಾದಲ್ಲಿ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ತುಂಬಾನೇ ಖುಷಿಯ ವಿಚಾರ ಎಂದು ತಿಳಿಸಿದರು.
ಪ್ರೇಕ್ಷಕರಿಗೆ ಹಿಡಿಸಲಿದೆಯೆಂದು ನಂಬಿದ್ದೇನೆ: ಹೆಚ್ಚಾಗಿ ನನ್ನನ್ನು ಫ್ಯಾಮಿಲಿ ಹೀರೋ ಅಂತಾರೆ. ಆದ್ರೆ ಇದೇ ಮೊದಲ ಬಾರಿಗೆ ಕೋಲ್ಡ್ ಬ್ಲಡ್ ಶೇಡ್ ಇರುವ ಪಾತ್ರ ನಿರ್ವಹಿಸಿದ್ದೇನೆ. ನಮ್ಮ ಈ ಚಿತ್ರ ಆ್ಯಕ್ಷನ್ ಜೊತೆಗೆ ನೋಡುಗರಿಗೆ ಸಖತ್ ಥ್ರಿಲ್ ಕೊಡಲಿದೆ. ಪ್ರೇಕ್ಷಕರಿಗೆ ಹಿಡಿಸಲಿದೆಯೆಂದು ನಂಬಿದ್ದೇನೆ ಅಂತಾ ನಾನಿ ವಿಶ್ವಾಸ ವ್ಯಕ್ತಪಡಿಸಿದರು.
ಹಿಟ್ 3 ನನಗೆ ತುಂಬಾನೇ ಸ್ಪೆಷಲ್-ಶ್ರೀನಿಧಿ: ಬಳಿಕ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಮಾತನಾಡಿ, ಈ ಸಿನಿಮಾ ತುಂಬಾನೇ ಸ್ಪೆಷಲ್. 2 ವರ್ಷಗಳಿಂದ ನಾನು ಸಿನಿಮಾ ಮಾಡಿರಲಿಲ್ಲ. ಆದ್ರೀಗ ನಾನಿ ಜೊತೆ ನಟಿಸಿದ್ದು, ನನ್ನ ಮೊದಲ ತೆಲುಗು ಸಿನಿಮಾ. ನನಗಿದು ಬಹಳ ಖುಷಿ ಕೊಟ್ಟಿದೆ. ಹಿಟ್ 1 ಹಾಗೂ ಹಿಟ್ 2 ಸಿನಿಮಾ ನೋಡಿಲ್ಲ ಅಂದ್ರೂ, ನೀವು ಹಿಟ್ 2 ಚಿತ್ರದಲ್ಲಿ ನಾನಿ ಬರೋ ಸೀನ್ ನೋಡಿದ್ರೆ ಸಾಕು ಅದು ನಿಮಗೆ ಹಿಟ್ 3 ಸಿನಿಮಾ ನೋಡುವಂತೆ ಮಾಡುತ್ತದೆಯೆಂದು ತಿಳಿಸಿದರು.
ಇದನ್ನೂ ಓದಿ: ಕೆಜಿಎಫ್ ಡೈರೆಕ್ಟರ್ ನೀಲ್ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್: ಜೂ.ಎನ್ಟಿಆರ್ ಬರ್ತ್ಡೇಗೆ ಗ್ಲಿಂಪ್ಸ್ ಗಿಫ್ಟ್
ಸುದೀಪ್ ಸ್ನೇಹ: ನಟ ಸುದೀಪ್ ಜೊತೆಗಿನ ಸ್ನೇಹದ ಬಗ್ಗೆಯೂ ಹಂಚಿಕೊಂಡರು. ನಾನು ಬೆಂಗಳೂರಿಗೆ ಬಂದಾಗಲೆಲ್ಲಾ ಸುದೀಪ್ ಅಣ್ಣನನ್ನು ಭೇಟಿ ಮಾಡುತ್ತೇನೆ. ಅದೇ ರೀತಿ ನಿನ್ನೆ ಕೂಡಾ ನಾನು ಸುದೀಪ್ ಅಣ್ಣನನ್ನು ಅವರ ಮನೆಯಲ್ಲಿ ಭೇಟಿಯಾದೆ. ನಮಗೆಲ್ಲರಿಗೂ ತಿಳಿದಿರುವಂತೆ ಸುದೀಪ್ ಅಣ್ಣ ಸಖತ್ತಾಗೆ ಅಡುಗೆ ಮಾಡುತ್ತಾರೆ. ಒಂದು ದಿನ ಚಿಕನ್ ಪಕೋಡ ಇಷ್ಟ ಅಂತಾ ಹೇಳಿದ್ದೆ. ಆ ಬಳಿಕ ಅವರ ಮನೆಗೆ ಹೋದಾಗಲೆಲ್ಲಾ 3 ಪ್ಲೇಟ್ ಚಿಕನ್ ಪಕೋಡ ರೆಡಿ ಇರುತ್ತದೆ. ಅಷ್ಟೇ ಅಲ್ಲ, ಅವರು ಹೈದರಾಬಾದ್ಗೆ ಬಂದಾಗ ನಮ್ಮ ಮನೆಯಲ್ಲೂ ಚಿಕನ್ ಪಕೋಡ ಮಾಡಿ ಕೊಡ್ತಾರೆ. ಮುಂದಿನ ಸಿನಿಮಾಗೆ ಡಯಟ್ ಮಾಡುತ್ತಿದ್ದೀನಂದ್ರೂ ಕೇಳೋದಿಲ್ಲ. ಏನೂ ಆಗೋಲ್ಲ, ತಿನ್ನು ಅಂತಾರೆ. ಆ ಮಟ್ಟಿಗೆ ಇಷ್ಟಪಟ್ಟು ಊಟ ರೆಡಿ ಮಾಡಿ ಬಡಿಸುತ್ತಾರೆ ಅಂದ್ರು ನಾನಿ. ಇದೇ ವೇಳೆ ಸುದೀಪ್ ಮಗಳು ಸಾನ್ವಿ ನಮ್ಮ ಹಿಟ್ 2 ಚಿತ್ರದಲ್ಲಿ ಒಂದು ಸಣ್ಣ ಧ್ವನಿ ಕೊಟ್ಟಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ದುನಿಯಾ ವಿಜಯ್ ಸ್ಕ್ರೀನ್ ಶೇರ್: ಪುರಿ ಜಗನ್ನಾಥ್ ಆ್ಯಕ್ಷನ್ ಕಟ್
ಹಿಟ್ 3 ಚಿತ್ರವನ್ನು ಶೈಲೇಶ್ ಕೊಲನು ನಿರ್ದೇಶಿಸಿದ್ದು, ನಾನಿ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ನಾನಿಗೆ ಸ್ವೀಟ್ ಮೃದಲಾ ಆಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ಇವರ ಜೊತೆ ರಾವ್ ರಮೇಶ್ ಮತ್ತು ಮಗಂತಿ ಶ್ರೀನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೇ 1, ಗುರುವಾರದಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಆಗಲಿದೆ.