ಸೂಪರ್ ಹಿಟ್ 'ಲೂಸಿಫರ್' ಬಿಡುಗಡೆಯಾಗಿ 6 ವರ್ಷಗಳ ನಂತರ, ಸೀಕ್ವೆಲ್ 'ಎಲ್2: ಎಂಪುರಾನ್' ಕಳೆದ ದಿನ, ಮಾರ್ಚ್ 27ರಂದು ತೆರೆಗಪ್ಪಳಿಸಿದೆ. ಸೌತ್ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಸಾರಥ್ಯದ ಈ ಚಿತ್ರ, ಇಡೀ ಮಲಯಾಳಂ ಚಿತ್ರರಂಗದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಆಗಿ ಬಿಡುಗಡೆಯಾಯಿತು. ಆರಂಭಿಕವಾಗಿ ಚಿತ್ರ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ನಿರೀಕ್ಷಿಸಿದಂತೆ, ಎಂಪುರಾನ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮೇಕರ್ಸ್ ಹೇಳಿಕೊಂಡಂತೆ, ಮಲಯಾಳಂ ಚಿತ್ರರಂಗದಲ್ಲೇ ಈವರೆಗಿನ ಅತಿದೊಡ್ಡ ಓಪನಿಂಗ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ.
ಎಂಪುರಾನ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಎಲ್2: ಎಂಪುರಾನ್ ಭಾರತೀಯ ಮಾರುಕಟ್ಟೆಯಲ್ಲಿ, ಮೊದಲ ದಿನ 22 ಕೋಟಿ ರೂ. (net collection) ಕಲೆಕ್ಷನ್ ಮಾಡಿದೆ. ನಿರೀಕ್ಷೆಯಂತೆ, ಚಿತ್ರದ ಮಲಯಾಳಂ ಆವೃತ್ತಿ 19.45 ಕೋಟಿ ರೂಪಾಯಿಯೊಂದಿಗೆ ಗಳಿಕೆಗೆ ಹೆಚ್ಚಿನ ಕೊಡುಗೆ ನೀಡಿದೆ. ತೆಲುಗು ಆವೃತ್ತಿಯಿಂದ 1.2 ಕೋಟಿ ರೂಪಾಯಿ ಬಂದರೆ, ತಮಿಳು, ಕನ್ನಡ ಮತ್ತು ಹಿಂದಿ ಆವೃತ್ತಿಗಳು ಕ್ರಮವಾಗಿ ಸುಮಾರು 80 ಲಕ್ಷ ರೂ., 5 ಲಕ್ಷ ರೂ., ಮತ್ತು 50 ಲಕ್ಷ ರೂಪಾಯಿಯ ವ್ಯವಹಾರ ನಡೆಸಿದೆ.
#L2E #Empuraan is RUNNING SUCCESSFULLY in theaters! 🔥
— Ramesh Bala (@rameshlaus) March 28, 2025
Audiences are loving the MASS ENTERTAINER – Don’t miss out on this BLOCKBUSTER experience.@Mohanlal @PrithviOfficial #MuraliGopy @antonypbvr @aashirvadcine @GokulamGopalan @GokulamMovies pic.twitter.com/VVRmo7cbAU
ಮಲಯಾಳಂ ಇಂಡಸ್ಟ್ರಿಯ ಬಿಗ್ಗೆಸ್ಟ್ ಓಪನರ್: ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಎಂಪುರಾನ್ ಪಾತ್ರವಾಗಿದ್ದಲ್ಲದೇ, ನಟ ಮೋಹನ್ ಲಾಲ್ ಅವರ ಈವರೆಗಿನ ಬಿಗ್ಗೆಸ್ಟ್ ಓಪನಿಂಗ್ ಚಿತ್ರವೂ ಆಗಿದೆ. ಮರಕ್ಕರ್ ದಾಖಲೆಯನ್ನು ಪುಡಿಗಟ್ಟಿ, ಎಂಪುರಾನ್ ಈ ಮೈಲಿಗಲ್ಲನ್ನು ಸಾಧಿಸಿದೆ. ಈ ಹಿಂದೆ ಮರಕ್ಕರ್ ಚಿತ್ರವು ತನ್ನ ಮೊದಲ ದಿನದಂದು ವಿಶ್ವದಾದ್ಯಂತ 20 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು. ಆದ್ರೆ ಎಂಪುರಾನ್ ಚಿತ್ರದ ಫಸ್ಟ್ ಡೇ ಗ್ಲೋಬಲ್ ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಿನಿಪ್ರಿಯರಿಗೆ ಗುಡ್ ನ್ಯೂಸ್: 'ಕ್ರಿಶ್ 4' ಕನ್ಫರ್ಮ್; ಹೃತಿಕ್ ರೋಷನ್ ಸೂಪರ್ ಹೀರೋ ಮಾತ್ರವಲ್ಲ...
ಮೋಹನ್ ಲಾಲ್ ಜೊತೆಗೆ ಚಿತ್ರದಲ್ಲಿ ಟೋವಿನೋ ಥಾಮಸ್, ಮಂಜು ವಾರಿಯರ್, ಅಭಿಮನ್ಯು ಸಿಂಗ್, ಸೂರಜ್ ವೆಂಜರಮೂಡು, ಸಾನಿಯಾ ಅಯ್ಯಪ್ಪನ್ ಮತ್ತು ನಿರ್ದೇಶಕ ಪೃಥ್ವಿರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಳಿ ಗೋಪಿ ಕಥೆ ಬರೆದಿದ್ದು, ದೀಪಕ್ ದೇವ್ ಸಂಗೀತ ನೀಡಿದ್ದಾರೆ. ಸುಜಿತ್ ವಾಸುದೇವ್ ಅವರ ಕ್ಯಾಮರಾ ಕೈಚಳಕವಿದೆ. ಮೋಹನ್ ಲಾಲ್ ಅವರ ಆಶೀರ್ವಾದ್ ಸಿನಿಮಾಸ್, ಶ್ರೀ ಗೋಕುಲಂ ಮೂವೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಸೇರಿ ಈ ಸಿನಿಮಾವನ್ನು ನಿರ್ಮಿಸಿದೆ.
ಇದನ್ನೂ ಓದಿ: ಮೋಹನ್ಲಾಲ್ ನಟನೆಯ 'ಎಂಪುರಾನ್'ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ? ಬ್ಲಾಕ್ಬಸ್ಟರ್ ಆಗುತ್ತಾ?