ETV Bharat / entertainment

ಸುಪ್ರೀಂ ಕೋರ್ಟ್​ನಲ್ಲಿ 'ಲಾಪತಾ ಲೇಡೀಸ್' ಸಿನಿಮಾ ಸ್ಪೆಷಲ್​ ಸ್ಕ್ರೀನಿಂಗ್ - Laapata Ladies

author img

By ANI

Published : Aug 9, 2024, 10:05 PM IST

ಕಿರಣ್ ರಾವ್ ನಿರ್ದೇಶನ ಮತ್ತು ಅಮೀರ್ ಖಾನ್ ಪ್ರೊಡಕ್ಷನ್ಸ್​ನಲ್ಲಿ ಮೂಡಿಬಂದ 'ಲಾಪತಾ ಲೇಡೀಸ್' ಚಿತ್ರವನ್ನು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರದರ್ಶಿಸಲಾಯಿತು.

AAMIR KHAN  KIRAN RAO  SUPREME COURT CJI  SPECIAL SCREENING
ಸುಪ್ರೀಂ ಕೋರ್ಟ್​ನಲ್ಲಿ 'ಲಾಪತಾ ಲೇಡೀಸ್' ಸಿನಿಮಾ ಸ್ಪೆಷಲ್​ ಸ್ಕ್ರೀನಿಂಗ್ (ETV Bharat)

ನವದೆಹಲಿ: ಅಮೀರ್ ಖಾನ್ ನಿರ್ಮಾಣದ 'ಲಾಪತಾ ಲೇಡೀಸ್' ಸಿನಿಮಾ ಚಿತ್ರಮಂದಿರಗಳು ಮತ್ತು OTT ಎರಡರಲ್ಲೂ ಮನಗೆದ್ದಿದೆ. ಇದೀಗ ಸುಪ್ರೀಂ ಕೋರ್ಟ್‌ನಲ್ಲೂ ವಿಶೇಷ ಸ್ಕ್ರೀನಿಂಗ್ ಮಾಡಲಾಗಿದೆ. ಇಂದು ಅಮೀರ್ ಖಾನ್ ಮತ್ತು ನಿರ್ದೇಶಕಿ ಕಿರಣ್ ರಾವ್ ಸುಪ್ರೀಂ ಕೋರ್ಟ್​ಗೆ ಆಗಮಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಅಮೀರ್ ಖಾನ್ ಮತ್ತು ಕಿರಣ್ ರಾವ್‌ ಅವರನ್ನು ಸ್ವಾಗತಿಸಿದರು.

"ಲಾಪತಾ ಲೇಡೀಸ್ ಸಿನಿಮಾವನ್ನು ಸುಪ್ರೀಂ ಕೋರ್ಟ್‌ನಲ್ಲಿ ತೋರಿಸುತ್ತಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ. ಈ ಅಪರೂಪದ ಗೌರವಕ್ಕಾಗಿ ನಾನು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ತುಂಬಾ ಆಭಾರಿ" ಎಂದರು.

ಲಾಪತಾ ಲೇಡೀಸ್ ಸಿನಿಮಾ ಬಿಪ್ಲಬ್ ಗೋಸ್ವಾಮಿ ಅವರ ಪ್ರಶಸ್ತಿ ವಿಜೇತ ಕಥೆ ಆಧರಿಸಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಹಾಗು ದಿವ್ಯಾನಿದಿ ಶರ್ಮಾ ಬರೆದಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​​​ ಒಗ್ಗಟ್ಟು ಪ್ರದರ್ಶನಕ್ಕೆ ಕಲಾವಿದರ ಸಂಘದಲ್ಲಿ ಹೋಮ ಹವನ: ಯಾರೆಲ್ಲಾ ಭಾಗಿಯಾಗಲಿದ್ದಾರೆ? - Kannada Film Artists Association

ETV Bharat Logo

Copyright © 2024 Ushodaya Enterprises Pvt. Ltd., All Rights Reserved.