ಮೆಗಾಸ್ಟಾರ್ ಮೋಹನ್ ಲಾಲ್ ಮುಖ್ಯಭೂಮಿಕೆಯ ಆ್ಯಕ್ಷನ್ ಸಿನಿಮಾ 'ಎಲ್2: ಎಂಪುರಾನ್' ಆನ್‌ಲೈನ್ ಟಿಕೆಟ್ ಪ್ಲ್ಯಾಟ್‌ಫಾರ್ಮ್ ಬುಕ್‌ಮೈಶೋನಲ್ಲಿ 1 ಮಿಲಿಯನ್ ಅಡ್ವಾನ್ಸ್ ಟಿಕೆಟ್ಸ್ ಮಾರಾಟ ಮಾಡಿದ ಮೊದಲ ಚಿತ್ರವಾಗಿ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಮಭವಾಗಿದ್ದು, ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಭರ್ಜರಿಯಾಗಿ ನಡೆದಿದೆ. ನಾಳೆ ತೆರೆಗಪ್ಪಳಿಸಲಿರುವ ಚಿತ್ರ ಈಗಾಗಲೇ ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ. ಮಲಯಾಳಂ ಸಿನಿಮಾ ಇತಿಹಾಸದಲ್ಲೇ ಬಿಗ್ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ.ಈ ಚಿತ್ರ ತನ್ನ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡೋದು ಬಹುತೇಕ ಪಕ್ಕಾ ಆಗಿದೆ.
ಅಡ್ವಾನ್ಸ್ ಬುಕಿಂಗ್ ಅಂಕಿ-ಅಂಶಗಳು: ಎಲ್2: ಎಂಪುರಾನ್ ಚಿತ್ರದ ಅಡ್ವಾನ್ಸ್ ಟಿಕೆಟ್ ಮಾರಾಟ ಮಾರ್ಚ್ 21ರಂದು ಪ್ರಾರಂಭವಾಯಿತು. ವ್ಯವಹಾರ ಅದ್ಭುತವಾಗಿ ಸಾಗಿದೆ. ಮೊದಲ ದಿನವೇ ಬುಕ್‌ಮೈಶೋ ಮೂಲಕ ಚಿತ್ರವು 6,28,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಚಿತ್ರದ ಅಡ್ವಾನ್ಸ್ ಟಿಕೆಟ್ ಮಾರಾಟ ಮುಂದುವರೆದಿದ್ದು, 2ನೇ ದಿನದಂದು 1,63,000 ಟಿಕೆಟ್ಸ್, 3ನೇ ದಿನದಂದು 1,10,000 ಟಿಕೆಟ್ಸ್ ಮಾರಾಟವಾಗಿವೆ.
ಕೇರಳದಲ್ಲೇ ಹೆಚ್ಚು ಟಿಕೆಟ್ ಮಾರಾಟ: ಈ ವ್ಯವಹಾರದಲ್ಲಿ ಸುಮಾರು ಶೇ.70-80ರಷ್ಟು ಕೊಡುಗೆ ಮೋಹನ್ ಲಾಲ್ ಅವರ ತವರು ರಾಜ್ಯವಾದ ಕೇರಳದಿಂದಲೇ ಬಂದಿದ್ದು, ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂಬುದನ್ನು ಸಾಬೀತುಪಡಿಸಿದೆ. ಎಂಪುರಾನ್ ಮೊದಲ ದಿನದಂದು ಭಾರತದಾದ್ಯಂತ ಸುಮಾರು 15 ಕೋಟಿ ರೂಪಾಯಿಯ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ 10 ಕೋಟಿ ರೂ. ಕೇರಳದಿಂದ ಬಂದಿದೆ.
ಈ ಚಿತ್ರ ಈಗಾಗಲೇ ಮಾಲಿವುಡ್ಗೆ ಸಂಬಂಧಿಸಿದಂತೆ ಎಲ್ಲಾ ಪ್ರೀ-ಸೇಲ್ಸ್ ಮತ್ತು ಮೊದಲ ದಿನದ ದಾಖಲೆಗಳನ್ನು ಮೀರಿಸಿದೆ. ಎಂಪುರಾನ್ ವಿಶ್ವದಾದ್ಯಂತ ತನ್ನ ಮೊದಲ ದಿನದಂದೇ 50 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ಹಾದಿಯಲ್ಲಿದೆ. ತನ್ನ ಆರಂಭಿಕ ವಾರಾಂತ್ಯದಲ್ಲಿ 100 ಕೋಟಿ ರೂ.ಗಳನ್ನು ದಾಟಬಹುದು ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ.
Best wishes to the entire cast and crew of #Empuraan for a historic victory! Hope it crosses boundaries across the world and makes the entire Malayalam industry proud. Rooting for you, Dear Lal and Prithvi 😊 pic.twitter.com/ipPJ7SNO67
— Mammootty (@mammukka) March 26, 2025
ಗ್ಲೋಬಲ್ ಪ್ರೀ ಸೇಲ್ಸ್: ವಿಶ್ಲೇಷಕರ ಪ್ರಕಾರ, ಚಿತ್ರದ ಮೊದಲ ವಾರಾಂತ್ಯದ ಗ್ಲೋಬಲ್ ಪ್ರೀ ಸೇಲ್ಸ್ ಈಗಾಗಲೇ 60 ಕೋಟಿ ರೂಪಾಯಿಗಳನ್ನು ಮೀರಿದೆ. ವಾರಾಂತ್ಯ ವಿದೇಶಗಳಲ್ಲಿ 70 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಲನಚಿತ್ರಗಳ ಲಿಸ್ಟ್ನಲ್ಲಿ ಎಂಪುರಾನ್ ಸ್ಥಾನ ಪಡೆಯಲಿದೆ.
ಇದನ್ನೂ ಓದಿ: 'ಕಲಾವಿದರು ಮಿತಿಯಲ್ಲಿರಬೇಕು, ಮತ್ತು ಜನರು?: ಶೋಗೆ ಲೇಟಾಗಿ ಬಂದು ಕಣ್ಣೀರಿಟ್ಟ ನೇಹಾ ಕಕ್ಕರ್ ಸಮರ್ಥಿಸಿಕೊಂಡ ಸಹೋದರ
ಪ್ರಮುಖ ನಗರಗಳಲ್ಲಿನ ಟಿಕೆಟ್ ಬೆಲೆ ಗಮನಿಸೋದಾದರೆ, ಕೊಚ್ಚಿಯಲ್ಲಿ ಸಾಮಾನ್ಯ ಮಲ್ಟಿಪ್ಲೆಕ್ಸ್ ಟಿಕೆಟ್‌ನ ಬೆಲೆ 200 ರಿಂದ 400 ರೂ.ಗಳವರೆಗೆ ಇದೆ. ಪ್ರೀಮಿಯಂ ರೆಕ್ಲೈನರ್ ಟಿಕೆಟ್ ದರ 800 ರೂ.ಗಳವರೆಗೆ ಇದೆ. ಅಲ್ಟ್ರಾ ಪ್ರೀಮಿಯಂ ಸ್ಕ್ರೀನ್ ಆಗಿರುವ PVR LUXEನಲ್ಲಿ 1,400 ರೂಪಾಯಿ ಟಿಕೆಟ್‌ಗಳಿದ್ದರೆ, IMAX 2Dನಲ್ಲಿ 800 ರಿಂದ 1,000 ರೂ.ಗಳ ಟಿಕೆಟ್‌ಗಳು ಮಾರಾಟವಾಗಿವೆ.
ಇದನ್ನೂ ಓದಿ: 'ಸಿಕಂದರ್' ಅಡ್ವಾನ್ಸ್ ಬುಕಿಂಗ್: 6 ಕೋಟಿಗೂ ಹೆಚ್ಚಿನ ವ್ಯವಹಾರ, ಭಾನುವಾರ ಸಿನಿಮಾ ಬಿಡುಗಡೆ
ಮತ್ತೊಂದೆಡೆ, ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆಗಳು 100 ರಿಂದ 250 ರೂ.ಗಳವರೆಗೆ ಇದೆ. ಬೆಂಗಳೂರು ಮತ್ತು ದೆಹಲಿ-ಎನ್‌ಸಿಆರ್‌ನ ನಗರಗಳಲ್ಲಿ ಮಲಯಾಳಂ ಆವೃತ್ತಿಯ ಬೆಲೆ 500 ರೂ.ಗಿಂತ ಹೆಚ್ಚಿದ್ದು, ಚೆನ್ನೈ, ಹೈದರಾಬಾದ್ ಮತ್ತು ಮುಂಬೈನಲ್ಲಿ ಬೆಲೆಗಳು ಮಧ್ಯಮವಾಗಿವೆ.