ಬೆಂಗಳೂರಿನ ರಾಜಾಜಿನಗರನಲ್ಲಿ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ('Junior Toes International Preschool') ಶುಭಾರಂಭಗೊಂಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಈ ಶಿಕ್ಷಣದ ಕನಸಿಗೆ ಜನಪ್ರಿಯ ನಿರೂಪಕಿ ಅನುಶ್ರೀ ಹಾಗೂ ಶಾಸಕ ಗೋಪಾಲಯ್ಯ ಸಾಥ್ ಕೊಟ್ಟರು.
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ರಾಜಾಜಿನಗರ ಬ್ರ್ಯಾಂಚ್ ಉದ್ಘಾಟನಾ ಕಾರ್ಯಕ್ರಮಕ್ಕೆ ಗೋಪಾಲಯ್ಯ ಹಾಗೂ ಅನುಶ್ರೀ ವಿಶೇಷ ಅತಿಥಿಯಾಗಿ ಆಗಮಿಸಿ, ಅಶ್ವಿನಿ ಅವರ ಶೈಕ್ಷಣಿಕ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು.

ಉದ್ಘಾಟನೆ ಬಳಿಕ ಮಾತನಾಡಿದ ಅನುಶ್ರೀ, ''ಜೂನಿಯರ್ ಟೋಸ್ ಅಪ್ಪು ಸರ್ ಹಾಗೂ ಅಶ್ವಿನಿ ಮೇಡಂ ಅವರ ಅತಿ ದೊಡ್ಡ ಕನಸು. ಅಪ್ಪು ಸರ್ಗೆ ಕ್ವಾಲಿಟಿ ಎಜುಕೇಶನ್ ಕೊಡಬೇಕೆಂದು ಬಹಳ ಇಷ್ಟವಿತ್ತು. ಅಪ್ಪು ಸರ್ ಕಿರಿ ವಯಸ್ಸಿನಲ್ಲಿಯೇ ಅತಿ ದೊಡ್ಡ ಯಶಸ್ಸು ಕಂಡ ಪ್ರತಿಭೆ. ಆ ಪ್ರತಿಭೆ ಅನ್ನೋದು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಕಂಡುಹಿಡಿದು, ಅದಕ್ಕೊಂದು ಮಾರ್ಗ ಕಂಡುಹಿಡಿದು, ವೇದಿಕೆ ಕಲ್ಪಿಸಿಕೊಡಲು ಜೂನಿಯರ್ ಟೋಸ್ ಎಂಬ ಹೊಸದೊಂದು ಸಂಸ್ಥೆ ಶುರುವಾಗಿದೆ. ರಾಜಾಜಿನಗರನಲ್ಲಿ ಉದ್ಘಾಟನೆಗೊಂಡಿರುವುದು 12ನೇ ಬ್ರ್ಯಾಂಚ್. ಕಿರಣ್ ಹಾಗೂ ದೀಪ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ನನ್ನ ಕಡೆಯಿಂದ ಅವರಿಗೆ ಬೆಸ್ಟ್ ವಿಷಸ್. ಪೋಸ್ಟರ್‌ನಲ್ಲಿ ನಮ್ಮ ಬಾಸ್ ಅಪ್ಪು ಸರ್ ಇದ್ದಾರೆ. ಅವರು ಎಲ್ಲಿ ಇರುತ್ತಾರೋ ಅಲ್ಲಿ ಪವರ್ ಇರುತ್ತದೆ. ಇಲ್ಲಿ ಬಂದು ಕಲಿಯುವ ಮಗು ಅಪ್ಪು ಸರ್ ಅವರ ಗುಣಗಳ ಜೊತೆಗೆ ಒಳ್ಳೆ ವಿದ್ಯೆ ಕಲಿತು ದೊಡ್ಡ ಹೆಸರು ಮಾಡಲಿ'' ಎಂದು ಹಾರೈಸಿದರು.
Looking for a preschool that sparks curiosity, builds confidence and nurtures creativity? 🎒 ✨
— Ashwini Puneeth Rajkumar (@Ashwini_PRK) May 3, 2025
Junior Toes is where the BIG dreams begin!
Admissions Open for 2025-2026
ಜೂನಿಯರ್ ಟೋಸ್ - ಇಲ್ಲಿ ದೊಡ್ಡ ಕನಸುಗಳು ಆರಂಭವಾಗುತ್ತವೆ. 🌟
Little learners today, future leaders tomorrow!
Visit:… pic.twitter.com/DLfPnEUfYt
ಪುನೀತ್ ರಾಜ್ಕುಮಾರ್ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದರು. 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್' ಮೂಲಕ ಅಶ್ವಿನಿ ಪುನೀತ್ ರಾಜ್ಕುಮಾರ್ ಆ ಕನಸು ನನಸು ಮಾಡಿದ್ದಾರೆ. ಈ ಹಿಂದೆ ಮಾತನಾಡಿದ್ದ ಅಶ್ವಿನಿ, ನಾನು ಹಾಗೂ ಅಪ್ಪು ಅವರು ಕಳೆದ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರ ಪ್ರವೇಶಿಸುವ ಕನಸು ಕಂಡಿದ್ದೆವು. ಈ ಯೋಜನೆ ನಮ್ಮ ಕನಸನ್ನು ನನಸಾಗಿಸುತ್ತಿದೆ. ಪ್ರತೀ ಮಗುವಿನ ಸಾಮರ್ಥ್ಯ ಪೋಷಿಸುವ ಶಾಲೆಗಳನ್ನು ರಚಿಸುವುದು, ಶಿಕ್ಷಣ ಸಾಮರ್ಥ್ಯ ಮಾತ್ರವಲ್ಲದೇ ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದು ನಮ್ಮ ಉದ್ದೇಶವೆಂದು ತಿಳಿಸಿದ್ದರು.

ಇದನ್ನೂ ಓದಿ: ಮೊನ್ನೆ ಸೀರೆ-ಸಿಂಧೂರ, ನಿನ್ನೆ ಮಾರ್ಡನ್ ಡ್ರೆಸ್ನಲ್ಲಿ ಭಗವದ್ಗೀತೆಯ ಶ್ಲೋಕ: ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ
ಅಶ್ವಿನಿ ಅವರ ಜೊತೆ ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್, ಖ್ಯಾತ ಶಿಕ್ಷಣ ತಜ್ಞೆ ಸುನಿತಾ ಗೌಡ ಮತ್ತು ಶೃತಿ ಕಿರಣ್ ಕೈಜೋಡಿಸಿ ಈ ಶಾಲೆ ಶುರು ಮಾಡಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ 1 ಕೇಂದ್ರವಿದೆ. ಡಾ.ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಜೂನ್‌ನಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ: 'ದಯವಿಟ್ಟು ವದಂತಿ ಹರಡಬೇಡಿ': ವಿಘ್ನಗಳ ಬೆನ್ನಲ್ಲೇ ಕಾಂತಾರ ರಿಲೀಸ್ ಡೇಟ್ ಮುಂದೂಡಿಕೆ?; ರಿಷಬ್ ಶೆಟ್ಟಿ ಸ್ಪಷ್ಟನೆ ಏನು?
ಈ ಕಲಿಕಾ ಕೇಂದ್ರ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ನವೀನ ಪಠ್ಯಕ್ರಮಗಳನ್ನು ಹೊಂದಿರಲಿದೆ. ಈ ಕೇಂದ್ರಗಳು ಕೇವಲ ಶಾಲೆಗಳಷ್ಟೇ ಅಲ್ಲ, ಅವು ಮಕ್ಕಳಿಗೆ ಸೃಜನಶೀಲವಾಗಿ ಚಿಂತಿಸಲು, ಆತ್ಮವಿಶ್ವಾಸದಿಂದ ನಡೆದುಕೊಳ್ಳಲು ಮತ್ತು ನಾಯಕತ್ವಕ್ಕೆ ಪ್ರೇರಣೆ ನೀಡುವ ಸ್ಥಳಗಳಾಗಿ ರೂಪುಗೊಳ್ಳುತ್ತಿವೆ.
