ETV Bharat / entertainment

'ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ': ಮಿಸ್ ಇಂಡಿಯಾ ನಂದಿನಿ ಗುಪ್ತಾ - NANDINI GUPTA INTERVIEW

ಮಿಸ್ ವರ್ಲ್ಡ್ ಸ್ಪರ್ಧೆಗೆ ಹೈದರಾಬಾದ್ ಸಜ್ಜಾಗಿದ್ದು, 120 ದೇಶಗಳ ಸುಂದರಿಯರು ಮುತ್ತಿನ ನಗರಿಗೆ ಆಗಮಿಸಲಿದ್ದಾರೆ. ಭಾರತವನ್ನು ಪ್ರತಿನಿಧಿಸಲಿರುವ ನಂದಿನಿ ಗುಪ್ತಾ ಅವರ ವಿಶೇಷ ಸಂದರ್ಶನ ಇಲ್ಲಿದೆ.

Miss India Nandini Gupta
ಮಿಸ್ ಇಂಡಿಯಾ ನಂದಿನಿ ಗುಪ್ತಾ (Photo: ETV Bharat)
author img

By ETV Bharat Entertainment Team

Published : April 26, 2025 at 5:19 PM IST

2 Min Read

'2025 ಮಿಸ್ ವರ್ಲ್ಡ್ ಸ್ಪರ್ಧೆ' ಮೇ 7 ರಿಂದ ಮೇ 31ರ ವರೆಗೆ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ. 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023' ನಂದಿನಿ ಗುಪ್ತಾ (Nandini Gupta) ಭಾರತವನ್ನು ಪ್ರತಿನಿಧಿಸಲಿದ್ದು, ಅವರ ವಿಶೇಷ ಸಂದರ್ಶನ ಇಲ್ಲಿದೆ.

ವಿಶ್ವ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ತೆಲಂಗಾಣ ರಾಜ್ಯ ಇದೇ ಮೊದಲ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ಸೌಂದರ್ಯ ಸ್ಪರ್ಧೆಯಲ್ಲಿ ಒಟ್ಟು 120 ದೇಶಗಳು ಸ್ಪರ್ಧಿಸುತ್ತಿದ್ದು, ರಾಜಸ್ಥಾನದ ಕಚ್ ಪ್ರದೇಶದ ನಂದಿನಿ ಗುಪ್ತಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2023ರ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಗೊಂಡಿರುವ ನಂದಿನಿ 2025ರ ವಿಶ್ವ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಅವರ ವಿಶೇಷ ಸಂದರ್ಶನ ಇಲ್ಲಿದೆ.

ರಾಜಸ್ಥಾನದ ಕಚ್ ಪ್ರದೇಶದವರಾದ ನಂದಿನಿ ಗುಪ್ತಾ, ಮುಂಬೈ ಫ್ಯಾಷನ್ ಜಗತ್ತಿನಲ್ಲಿ ತಮಗಾಗಿ ವಿಶೇಷ ಸ್ಥಾನ ಗಳಿಸಿದ್ದಾರೆ. ತಮ್ಮ ಪ್ರಯಾಣದಲ್ಲಿ ಎದುರಿಸಿದ ಅಡೆತಡೆಗಳು ಮತ್ತು ಅನುಭವಗಳನ್ನು ಹಂಚಿಕೊಂಡರು. ಮೊದಲು ಎಲ್ಲರಿಗೂ ತೆಲುಗಿನಲ್ಲಿ ಶುಭಾಶಯ ಕೋರುವ ಮೂಲಕ ಮಾತು ಶುರು ಮಾಡಿದರು.

ನಂದಿನಿ ಗುಪ್ತಾ, ರಾಜಸ್ಥಾನದ ಕೃಷಿಕ ಕುಟುಂಬದಿಂದ ಬಂದವರು. 'ನಾವು ಎಲ್ಲಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ, ಎಲ್ಲಿಗೆ ಹೋಗುತ್ತೇವೆ ಎಂಬುದು ಮುಖ್ಯ' ಎಂದು ತಿಳಿಸಿದರು. ನಿಜವಾದ ಸೌಂದರ್ಯ ಆಂತರಿಕ ಸೌಂದರ್ಯದಲ್ಲಿದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. ನನ್ನ ಮನೆಯಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಸದ್ಯ ಈ ಹಂತದಲ್ಲೀದ್ದೇನೆ ಎಂದು ವಿವರಿಸಿದರು.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಮಿಸ್ ವರ್ಲ್ಡ್ 2025: ಚಾರ್ಮಿನಾರ್​​​ನಲ್ಲಿ ಭಾರತದ ಸುಂದರಿ ನಂದಿನಿ ಗುಪ್ತಾ ಶಾಪಿಂಗ್

ನಾನು ರೈತ ಕುಟುಂಬದಿಂದ ಫ್ಯಾಷನ್ ಜಗತ್ತಿಗೆ ಬಂದವಳು. ಹತ್ತನೇ ವಯಸ್ಸಿನಲ್ಲಿ ಐಶ್ವರ್ಯಾ ರೈ ಅವರಿಂದ ಸ್ಫೂರ್ತಿ ಪಡೆದೆ. ನನ್ನ ಕನಸುಗಳನ್ನು ನನಸಾಗಿಸುವಲ್ಲಿ ನಾನು ಯಶಸ್ವಿಯಾದೆ. ಕೃಷಿಕ ಕುಟುಂಬದಿಂದ ಬಂದು ಫ್ಯಾಷನ್ ಜಗತ್ತಿನಲ್ಲಿ ಬೆಳೆದ ರೀತಿ ಹೆಮ್ಮೆಯ ವಿಷಯ. ನಾನು ಎಲ್ಲಿಂದ ಬಂದಿದ್ದೇನೆ ಎಂಬುದು ಮುಖ್ಯವಲ್ಲ, ನಾನು ಎಲ್ಲಿಗೆ ಹೋಗುತ್ತೇನೆ ಎಂಬುದು ಮುಖ್ಯ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳಾನೇ ಮುಖ್ಯ. ನನಗೆ ಸೀರೆ ತುಂಬಾನೇ ಇಷ್ಟ. ಚಾರ್ಮಿನಾರ್ ಪ್ರದೇಶ ನನ್ನ ಮೇಲೆ ತುಂಬಾನೆ ಪ್ರಭಾವ ಬೀರಿದೆ. ಹೈದರಾಬಾದ್ ಆತಿಥ್ಯಕ್ಕೆ ಸಮಾನಾರ್ಥ ಎನ್ನಬಹುದು - ನಂದಿನಿ ಗುಪ್ತಾ.

ಭಾರತದ ವಿಶ್ವ ಸುಂದರಿಯರು:

  • ರೀಟಾ ಫರಿಯಾ (1966).
  • ಐಶ್ವರ್ಯಾ ರೈ ಬಚ್ಚನ್ (1994).
  • ಡಯಾನಾ ಹೇಡನ್ (1997).
  • ಯುಕ್ತಾ ಮುಖಿ (1999).
  • ಪ್ರಿಯಾಂಕಾ ಚೋಪ್ರಾ (2000).
  • ಮಾನುಷಿ ಚಿಲ್ಲರ್ (2017).

ಇದನ್ನೂ ಓದಿ: 'ಮುಂದಿನ ಪ್ರವಾಸ ಕಾಶ್ಮೀರಕ್ಕೇನೇ ಕೈಗೊಳ್ಳಿ, ಕಾಶ್ಮೀರ ನಮ್ಮದು, ನಮ್ಮದಾಗೇ ಇರುತ್ತದೆ': ಸುನೀಲ್ ಶೆಟ್ಟಿ

ಈ ಸಾಲಿನ ಬಹುನಿರೀಕ್ಷಿತ ವಿಶ್ವ ಸೌಂದರ್ಯ ಸ್ಪರ್ಧೆ ಮೇ 7 ರಿಂದ ಮೇ 31ರ ವರೆಗೆ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.