ಸ್ಯಾಂಡಲ್ವುಡ್ನಲ್ಲೀಗ ಸ್ಟಾರ್ ನಟರಿಂದ ಹಿಡಿದು ಹೊಸ ಪ್ರತಿಭೆಗಳ ಸಿನಿಮಾಗಳ ಪರ್ವ ಶುರುವಾಗಿದೆ. ಈ ಸಾಲಿನಲ್ಲಿ ಸ್ಟೈಲಿಷ್ ಡೈರೆಕ್ಟರ್ ಎಂದೇ ಜನಪ್ರಿಯರಾಗಿರುವ ಇಂದ್ರಜಿತ್ ಲಂಕೇಶ್ ಅವರು 'ಗೌರಿ' ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮೇಕಿಂಗ್, ಹಾಡುಗಳಿಂದಲೇ ಸಖತ್ ಟಾಕ್ ಆಗುತ್ತಿರುವ ಗೌರಿ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ ಸಿಕ್ಕಿದೆ.
ಹೌದು, ಗೌರಿ ಚಿತ್ರದ ಟ್ರೇಲರ್ ಅನ್ನು ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ಅನಾವರಣಗೊಳಿಸಿದ್ದಾರೆ. ಕಳೆದ ದಿನ ಎಂ.ಜಿ ರಸ್ತೆಯ ಮಾಲ್ ಒಂದರಲ್ಲಿ ಈ ಟ್ರೇಲರ್ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ಸುದೀಪ್ ಜೊತೆಗೆ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ನಿರ್ಮಾಪಕ ಎಂ ರಮೇಶ್ ರೆಡ್ಡಿ ಉಪಸ್ಥಿತರಿದ್ದರು. ಈವೆಂಟ್ನಲ್ಲಿ ಸುದೀಪ್ ವ್ಯಕ್ತಿತ್ವದ ಬಗ್ಗೆ ಇಂದ್ರಜಿತ್ ಲಂಕೇಶ್ ಗುಣಗಾನ ಮಾಡಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೊಸಬರ ಸಿನಿಮಾಗಳಿಗೆ ಸಪೋರ್ಟ್: ಟ್ರೇಲರ್ ರಿಲೀಸ್ ಬಳಿಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಕಿಚ್ಚ ಸುದೀಪ್ ತಮ್ಮ ಬೆಳವಣಿಗೆ ಜೊತೆಗೆ ಹೊಸಬರ ಸಿನಿಮಾಗಳಿಗೆ ಸಪೋರ್ಟ್ ಮಾಡುವ ಒಳ್ಳೆ ಗುಣ ಹೊಂದಿದ್ದಾರೆ. ಅದಕ್ಕೆ ಸಾಕ್ಷಿ ನನ್ನ ಸಿನಿಮಾಗಳು. ನಾನು 'ತುಂಟಾಟ' ಸಿನಿಮಾ ಮಾಡುವ ಸಂದರ್ಭ 'ಹುಚ್ಚ' ಚಿತ್ರ 25 ವಾರಗಳನ್ನು ಪೂರೈಸಿ ಸುದೀಪ್ ಬಹಳ ಬ್ಯುಸಿಯಾಗಿದ್ದರು. ಅಂಥ ಸಂದರ್ಭವೂ ಸುದೀಪ್ ನನ್ನ ತುಂಟಾಟ ಚಿತ್ರದ ಹಾಡಿನಲ್ಲಿ ಅಭಿನಯಿಸಿದ್ದರು. ಸಿನಿಮಾ ಯಶ ಕಂಡಿತ್ತು. ಕೃತಘ್ಞತಾ ಭಾವದಿಂದ ಏನಾದರು ಮಾಡಬೇಕೆಂದು ಅನ್ನಿಸಿತ್ತು.
ಆಗ ಸುದೀಪ್ ಮಗಳು ಬಹಳ ಚಿಕ್ಕವರು. ಅವರಿಗೆ ನಾನು ಒಂದು ಡೈಮಂಡ್ ನೆಕ್ಲೇಸ್ ಕೊಡಲು ಹೋಗಿದ್ದೆ. ಆಗ ಸುದೀಪ್ ಅವರು ಅದನ್ನು ಬೇಡ ಎಂದು ಹೇಳಿದ್ದರು. ಇಲ್ಲ ನೀವು ಈ ಉಡುಗೊರೆ ಸ್ವೀಕರಿಸಬೇಕು ಎಂದು ತಿಳಿಸಿದಾಗ, ನನಗೆ ಬೈಗುಳವೂ ಸಿಕ್ಕಿತ್ತು. ಅಂಥಾ ಒಳ್ಳೆಯ ಗೆಳೆಯ ಅವರು.
ಅವರಿಗೀಗ ಏನಾದರೂ ಗಿಫ್ಟ್ ಕೊಡಬೇಕು ಅಂತಾ ಅನಿಸಿತು. ಅವರ ಬಳಿ ಎಲ್ಲವೂ ಇದೆ. ಹಾಗಾಗಿ ವಿದೇಶದಿಂದ ಗ್ರೀಕ್ ಓಕ್ಸ್ ಕಂಪನಿಯ ಕ್ರಿಕೆಟ್ ಬ್ಯಾಟ್ ತರಿಸಿದ್ದೇನೆ. ಕ್ರಿಕೆಟ್ ಅನ್ನೋದು ಶುರುವಾಗಿದ್ದು ಇಂಗ್ಲೆಂಡ್ನಲ್ಲಿ. ಹಾಗಾಗಿ ವಿದೇಶದಿಂದ ಈ ಉಡುಗೊರೆ ತರಿಸಿದ್ದೇನೆ. ಈ ಬ್ಯಾಟ್ನಲ್ಲಿ ಸುದೀಪ್ ಮುಂದಿನ ಕ್ರಿಕೆಟ್ ಮ್ಯಾಚ್ಗಳನ್ನು ಆಡಲಿ ಅನ್ನೋದು ನನ್ನ ಒಂದು ಆಸೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.
ಗೌರಿ - ಇದರಲ್ಲಿ ಎಲ್ಲವೂ ಇದೆ: 'ಗೌರಿ', ಕೇವಲ ಒಂದು ಆ್ಯಕ್ಷನ್ ಚಿತ್ರವಲ್ಲ, ಮ್ಯೂಸಿಕಲ್ ಸಿನಿಮಾ. ಇದರಲ್ಲಿ ಪ್ರೀತಿ ಇದೆ, ಎಮೋಷನ್ ಇದೆ, ಭರ್ಜರಿ ಆ್ಯಕ್ಷನ್ ಕೂಡಾ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಟ್ರೇಲರ್ ರಿಲೀಸ್ ಆಗಿದೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಸಮರ್ಜಿತ್ ಲಂಕೇಶ್ ಹೊಡೆದಿರುವ ಪಂಚಿಂಗ್ ಡೈಲಾಗ್ಸ್ ನೋಡುಗರ ಗಮನ ಸೆಳೆದಿದೆ. ಒಬ್ಬ ಹಳ್ಳಿ ಹುಡುಗ ತನ್ನ ಕನಸನ್ನು ಹೇಗೆ ನನಸು ಮಾಡಿಕೊಳ್ಳುತ್ತಾನೆ ಅನ್ನೋದರ ಸುತ್ತ ಕಥೆ ಸಾಗುತ್ತದೆ.
ಇದನ್ನೂ ಓದಿ: ದೇವರ ವಿಗ್ರಹದ ಬಳಿ ದರ್ಶನ್ ಫೋಟೋ ಇಟ್ಟು ಪೂಜೆ: ಬಳ್ಳಾರಿ ಅರ್ಚಕ ವಜಾ - Darshan Photo near Temple Idol
ಚಿತ್ರದಲ್ಲಿ 7 ಹಾಡುಗಳು ಇವೆ. 4 ಸಂಗೀತ ನಿರ್ದೇಶಕರು, 14 ಗಾಯಕರು, 5 ಗೀತರಚನೆಕಾರರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ಸಂಗೀತ ಸಂಯೋಜಿಸಿದರೆ, ಮ್ಯಾಥ್ಯೂಸ್ ಮನು ರೀ ರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಚಿಕ್ಕಬಳ್ಳಾಪುರ, ಗುಬ್ಬಿ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ್ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ , ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ, ಪ್ರಜ್ಞಾ ಮರಾಠೆ, ಸಮರ್ಜಿತ್ ಸೇರಿದಂತೆ ಮುಂತಾದವರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಇದನ್ನೂ ಓದಿ: 'ಅಪ್ಪು ಸರ್ ನನಗೆ ಧೈರ್ಯ ತುಂಬಿದ್ದರು': ಪುನೀತ್ ರಾಜ್ಕುಮಾರ್ ಸ್ಮರಿಸಿದ ಹರ್ಷಿಕಾ ಪೂಣಚ್ಚ - Harshika on Appu
ಸಮರ್ಜಿತ್ ಲಂಕೇಶ್ ಜೊತೆ ಸಾನ್ಯಾ ಅಯ್ಯರ್ ತೆರೆ ಹಂಚಿಕೊಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ಕಂಟೆಂಟ್ಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆದಂತೆ ತೋರಿದೆ. ಇವರ ಜೊತೆ ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್ ಮೈತ್ರೇಯಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮಾ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ಸದ್ಯ ಗೌರಿ ಸಿನಿಮಾ ಪ್ರಮೋಶನ್ನಲ್ಲಿ ಬ್ಯುಸಿಯಾಗಿದೆ. ಸ್ವಾತಂತ್ರ್ಯ ದಿನದಂದು 'ಗೌರಿ' ಪ್ರೇಕ್ಷಕರಿಗೆ ದರ್ಶನ ಕೊಡಲಿದೆ.