ETV Bharat / entertainment

ದ್ವಾರಕೀಶ್ ಮೊದಲ​ ಪುಣ್ಯಸ್ಮರಣೆ: ಆರಂಭಿಕ ಜೀವನ, ಶಿಕ್ಷಣ, ಸಿನಿಮಾ - 'ಕರ್ನಾಟಕದ ಕುಳ್ಳ' ಖ್ಯಾತಿಯ ನಟನ ಸಿನಿಪಯಣ - DWARAKISH DEATH ANNIVERSARY

ಚಂದನವನದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ 2024ರ ಏಪ್ರಿಲ್​ 16ರಂದು ಕೊನೆಯುಸಿರೆಳೆದರು. ಇಂದು ಕರುನಾಡಿನಾದ್ಯಂತ 'ಕರ್ನಾಟಕದ ಕುಳ್ಳ' ಖ್ಯಾತಿಯ ನಟನ ಮೊದಲ ಪುಣ್ಯಸ್ಮರಣೆ ನಡೆಯುತ್ತಿದೆ.

Dwarakish 1st Death Anniversary
ದ್ವಾರಕೀಶ್ ಮೊದಲ​ ಪುಣ್ಯಸ್ಮರಣೆ (Photo: ETV Bharat)
author img

By ETV Bharat Entertainment Team

Published : April 16, 2025 at 10:33 AM IST

3 Min Read

'ಕರ್ನಾಟಕದ ಕುಳ್ಳ' ಎಂದೇ ಜನಪ್ರಿಯರಾಗಿದ್ದ ಚಂದನವನದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ 2024ರ ಏಪ್ರಿಲ್​ 16ರಂದು ಕೊನೆಯುಸಿರೆಳೆದರು. ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದ ಕನ್ನಡ ಚಿತ್ರರಂಗದ ದಿಗ್ಗಜ ತಮ್ಮ 81ರ ಹರೆಯದಲ್ಲಿ ನಿಧನರಾದರು. ಇಂದು ನಟನ ಮೊದಲ ಪುಣ್ಯಸ್ಮರಣೆ. ಡಾ.ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವಥ್ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯರ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ. ಮೊದಲ ಪುಣ್ಯಸ್ಮರಣೆ ಹಿನ್ನೆಲೆ, ಕರುನಾಡಿನಾದ್ಯಂತ ನಟನ ಸ್ಮರಣೆ ಮತ್ತು ಪುಣ್ಯಕಾರ್ಯಗಳು ಜರುಗುತ್ತಿವೆ.

ಆರಂಭಿಕ ಜೀವನ: 1942ರ ಆಗಸ್ಟ್ 19ರಂದು ಜನಿಸಿದ ದ್ವಾರಕೀಶ್ ಮೈಸೂರಿನ ಇಟ್ಟಿಗೆಗೂಡುನಲ್ಲಿ ಬೆಳೆದರು. ಶಾರದಾ ವಿಲಾಸದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಸಿಪಿಸಿ ಪಾಲಿಟೆಕ್ನಿಕ್‌ನಿಂದ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಶಿಕ್ಷಣ ಪೂರ್ಣಗೊಳಿಸಿದ ನಂತರ, ದ್ವಾರಕೀಶ್ ಮತ್ತು ಅವರ ಸಹೋದರ ಸೇರಿ ಮೈಸೂರಿನಲ್ಲಿ "ಭರತ್ ಆಟೋ ಸ್ಪೇರ್ಸ್" ಎಂಬ ಆಟೋಮೊಬೈಲ್ ಸ್ಪೇರ್​​ಪಾರ್ಟ್ಸ್ ಬ್ಯುಸಿನೆಸ್​​ ಪ್ರಾರಂಭಿಸಿದರು.

ನಟನೆಯತ್ತ ಒಲವು: ನಂತರದ ದಿನಗಳಲ್ಲಿ ನಟನೆಯತ್ತ ಆಕರ್ಷಿತರಾದರು. ಅವರ ಅಂಕಲ್​​, ಪ್ರಸಿದ್ಧ ನಿರ್ದೇಶಕ ಹುಣಸೂರ್ ಕೃಷ್ಣಮೂರ್ತಿ ಅವರಲ್ಲಿ ಅವಕಾಶ ಕೇಳುತ್ತಿದ್ದರು. 1963ರಲ್ಲಿ, ತಮ್ಮ ಬ್ಯುಸಿನೆಸ್​​ ಬಿಟ್ಟು, ಸಿನಿಮಾಗಳಲ್ಲಿ ನಟಿಸಲು ನಿರ್ಧರಿಸಿದರು.

ನಟನಾ ವೃತ್ತಿಜೀವನ: 5 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ದ್ವಾರಕೀಶ್ ಬಹುಬೇಡಿಕೆ ನಟನಾಗಿ ಮುಂಚೂಣಿಯಲ್ಲಿದ್ದರು. ಜೊತೆಗೆ, ಕೆಲ ದಾಖಲೆ ಸೃಷ್ಟಿಸಿ ಹೋಗಿದ್ದಾರೆ. ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಮತ್ತು ವಿದೇಶದಲ್ಲಿ ರೆಕಾರ್ಡ್ ಮಾಡಲಾದ ಮೊದಲ ಕನ್ನಡ ಚಿತ್ರ, ಮ್ಯೂಸಿಕ್​ ಆಲ್ಬಮ್​​ನಲ್ಲಿ ದ್ವಾರಕೀಶ್​ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ವಿದೇಶದಲ್ಲಿ ತ್ರಿಭಾಷಾ ಚಲನಚಿತ್ರವನ್ನು ಚಿತ್ರೀಕರಿಸಿದ ದಕ್ಷಿಣದ ಮೊದಲ ಚಲನಚಿತ್ರ ನಿರ್ಮಾಣ ಸಂಸ್ಥೆಯೂ (ದ್ವಾರಕೀಶ್ ಚಿತ್ರ) ಇವರಿಗೆ ಸೇರಿದ್ದು.

ಕನ್ನಡದ ಜನಪ್ರಿಯ ನಟನಾಗಿ ಮಾತ್ರವಲ್ಲದೇ ನಿರ್ಮಾಪಕ, ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. 1969ರಲ್ಲಿ "ದ್ವಾರಕೀಶ್ ಚಿತ್ರ" ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ಕನ್ನಡ ಚಿತ್ರರಂಗದ ನಟಸಾರ್ವಭೌಮ ರಾಜ್‌ಕುಮಾರ್ ಅವರನ್ನು ನಾಯಕನನ್ನಾಗಿಟ್ಟುಕೊಂಡು ಮೊದಲ ಚಿತ್ರ ನಿರ್ಮಾಣ ಮಾಡಿದ್ದರು. "ಮೇಯರ್ ಮುತ್ತಣ್ಣ" ಬ್ಲಾಕ್​ಬಸ್ಟರ್ ಹಿಟ್ ಆಗಿತ್ತು. ನಂತರ ತಮ್ಮ ಬ್ಯಾನರ್ ಅಡಿ 47 ಚಲನಚಿತ್ರಗಳನ್ನು ನಿರ್ಮಿಸಿದರು. 1974-1986ರ ಅವಧಿಯಲ್ಲಿ ಚಂದನವನದ ಸೂಪರ್‌ ಸ್ಟಾರ್ ವಿಷ್ಣುವರ್ಧನ್ ಅವರೊಂದಿಗೆ 10-12 ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಬಹುತೇಕ ಹಿಟ್​ ಲಿಸ್ಟ್​ ಸೇರಿವೆ.

1964ರಲ್ಲಿ ಬಂದ 'ವೀರಸಂಕಲ್ಪ' ಮೂಲಕ ಚಿತ್ರರಂಗ ಪ್ರವೇಶಿಸಿ, 1969ರಲ್ಲಿ ಬಿಡುಗಡೆ ಆದ 'ಮೇಯರ್ ಮುತ್ತಣ್ಣ' ಚಿತ್ರದಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡರು. ನಂತರ, ಹಲವು ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಂಡರು. 1972ರಲ್ಲಿ 'ಕುಳ್ಳ ಏಜೆಂಟ್ 000' ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಮುಂದುವರೆದರು. ನಂತರ ಕಿಲಾಡಿ ಕಿಟ್ಟು, ಪೆದ್ದ ಗೆದ್ದ, ಪ್ರಚಂಡ ಕುಳ್ಳ, ಸಿಂಗಾಪುರದಲ್ಲಿ ರಾಜಾ ಕುಳ್ಳ ಹೀಗೆ ಹಲವು ಸಿನಿಮಾಗಳ ಮೂಲಕ ದ್ವಾರಕೀಶ್ ಯಶಸ್ವಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ, ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದೇ ಜನಪ್ರಿಯವಾಗಿತ್ತು.

'ಮೇಯರ್ ಮುತ್ತಣ್ಣ'ನೊಂದಿಗೆ 'ದ್ವಾರಕೀಶ್ ಚಿತ್ರ' ಸಂಸ್ಥೆಯ ಪಯಣ ಪ್ರಾರಂಭವಾಯಿತು. ಇದಾದ ನಂತರ ಭಾಗ್ಯವಂತರು, ಕಿಟ್ಟು ಪುಟ್ಟು, ಪ್ರೀತಿ ಮಾಡು ತಮಾಷೆ ನೋಡು, ಗುರು ಶಿಷ್ಯರು, ಪೆದ್ದ ಗೆದ್ದ, ನ್ಯಾಯ ಎಲ್ಲಿದೆ, ರಾವಣ ರಾಜ್ಯ, ನೀ ಬರೆದ ಕಾದಂಬರಿ, ಡ್ಯಾನ್ಸ್​ ರಾಜ ಡ್ಯಾನ್ಸ್, ಜೈ ಕರ್ನಾಟಕ, ಶೃತಿ, ಆಪ್ತಮಿತ್ರ, ವಿಷ್ಣುವರ್ಧನ, ಚಾರುಲತಾ, ಆಟಗಾರ, ಚೌಕ, ಅಮ್ಮ ಐ ಲವ್ ಯೂ ಹೀಗೆ ಹಲವು ಚಿತ್ರಗಳು ಮೂಡಿಬಂದಿವೆ.

ಇದನ್ನೂ ಓದಿ: 300 ಪ್ರಪೋಸಲ್​​​​​​ ಒಪ್ಪದ ಸನ್ನಿಧಿಯೀಗ 'ಅಗ್ನಿಸಾಕ್ಷಿ'ಯಲ್ಲಿ ನವಪಯಣಕ್ಕೆ ರೆಡಿ: ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋಗಳಿಲ್ಲಿವೆ

'ದ್ವಾರಕೀಶ್ ಚಿತ್ರ' ಚಲನಚಿತ್ರ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಣಗೊಂಡ 'ಆಪ್ತಮಿತ್ರ' (adapted from Manachitratazh) ಕರ್ನಾಟಕದಾದ್ಯಂತ 1 ವರ್ಷಕ್ಕೂ ಹೆಚ್ಚು ಕಾಲ ದಾಖಲೆಯ ಪ್ರದರ್ಶನ ಕಂಡಿದೆ. ಇದು ಹಿಂದಿಯಲ್ಲಿ ಭೂಲ್ ಭುಲಯ್ಯಾ ಮತ್ತು ತೆಲುಗು ಮತ್ತು ತಮಿಳಿನಲ್ಲಿ ಚಂದ್ರಮುಖಿಯಾಗಿ ಮರುನಿರ್ಮಾಣಗೊಂಡಿದೆ. ಈ ಎರಡೂ ಚಿತ್ರಗಳು ಸಹ ಬ್ಲಾಕ್‌ಬಸ್ಟರ್‌ಗಳಾದವು.

ಇದನ್ನೂ ಓದಿ: ಬಾಲಿವುಡ್​ ನೆಲದಲ್ಲಿ ಸ್ಯಾಂಡಲ್​​​ವುಡ್​ ಘಟಾನುಘಟಿಗಳು: ಮುಂಬೈ ತಲುಪಿದ ಶಿವಣ್ಣ, ಉಪ್ಪಿ, ಅರ್ಜುನ್​ ಜನ್ಯ

'ದ್ವಾರಕೀಶ್ ಚಿತ್ರ' ನಿರ್ಮಾಣದ 50ನೇ ಚಿತ್ರ 'ಚೌಕ' 5 ಸಂಗೀತ ನಿರ್ದೇಶಕರು, 5 ಛಾಯಾಗ್ರಾಹಕರು, 5 ಸಂಭಾಷಣೆ ಬರಹಗಾರರು, 5 ಕಲಾ ನಿರ್ದೇಶಕರು ಮತ್ತು 5 ಗೀತರಚನೆಕಾರರನ್ನು ಒಗ್ಗೂಡಿಸಿ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿತು. ಒಂದೇ ಚಿತ್ರದಲ್ಲಿ ಅತಿ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.